*ಅಹ್ಲು ಸ್ಸುನ್ನ - 3*
*@ ಅಬೂ ರಾಝೀ*
➖➖➖➖➖➖➖➖
*ಸಲಫಿ ನಾಯಕನ ಜೊತೆ ಗೂಢಚಾರ ಸೇರಿ ಇಸ್ಲಾಮನ್ನು ವಿಕೃತಗೊಳಿಸಿದ*
ಕ್ರಿ.ಶ. 1299 ರ ನಂತರ ಜಾಗತಿಕ ಮುಸಲ್ಮಾನರ ನೇತೃತ್ವ ಉಸ್ಮಾನಿಯಾ ಖಿಲಾಫತ್‌ನ ಕೈಯಲ್ಲಿತ್ತು.
(ಅಟ್ಟೋಮನ್ ಅಂಪೆಯರ್)
ಏನೆಲ್ಲಾ ನ್ಯೂನತೆಗಳು, ಕೊರತೆಗಳಿದ್ದರೂ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಒಗ್ಗೂಡಿಸಿದ ಖ್ಯಾತಿ ಈ ಖಿಲಾಫತ್‌ಗಿದೆ. ಜಗತ್ತಿನ ಮುಸ್ಲಿಮರನ್ನು ಒಂದು ನೇತೃತ್ವದ ಕೆಳಗೆ ಒಗ್ಗೂಡಿಸುವಲ್ಲಿ ಈ ಖಿಲಾಫತ್‌ನ ಪಾತ್ರ ಮಹತ್ವದ್ದು. ಸಿಂಪಲ್ಲಾಗಿ ಹೇಳಬೇಕೆಂದರೆ ಇಂದಿನ ಅಮೇರಿಕದಂತೆ ಈ ಖಿಲಾಫತ್ ಅಂದು ಬಲಿಷ್ಟವಾಗಿತ್ತು..
ಇದುವೇ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಲು ಕಾರಣ. ಜಗತ್ತಿನ ಸಣ್ಣ ಪುಟ್ಟ ರಾಷ್ಟ್ರಗಳನ್ನು ಕುತಂತ್ರಗಳ ಮೂಲಕ ತನ್ನ ಬಲೆಗೆ ಹಾಕುತ್ತಿದ್ದ ಬ್ರಿಟಿಷರಿಗೆ, ದೊಡ್ಡ ತಡೆಗೋಡೆಯಾಗಿ ನಿಂತದ್ದು ಉಸ್ಮಾನಿಯಾ ಖಿಲಾಫತ್, ವಸಾಹತುಶಾಯಿಯ ವಿಸ್ತರಣೆ, ಕ್ರೈಸ್ತ ಧರ್ಮದ ಪ್ರಚಾರ ಈ ಎರಡನ್ನು ಒಂದೇ ಸಮನೆ ಮಾಡುತ್ತಿದ್ದ ಬ್ರಿಟಿಷರಿಗೆ ಉಸ್ಮಾನಿಯಾ ಖಿಲಾಫತ್ ನುಂಗಲಾರದ ತುತ್ತಾಗಿತ್ತು.
*ನೇರವಾಗಿ ಯುದ್ಧ ಮಾಡಿ ಗೆಲ್ಲುವುದು ಅಸಾಧ್ಯ .ತಂತ್ರ ಕುತಂತ್ರಗಳ ಮೂಲಕವೇ ಮುಸ್ಲಿಮರನ್ನು ಬಲಿ ಪಡೆಯಬೇಕು. ಒಂದೇ ಏಟಿಗೆ ಅನೇಕ ಕಾರ್ಯಗಳು ನಢಯಬೇಕು.. ಉಸ್ಮಾನಿಯಾ ಖಿಲಾಫತ್ ಹರಿದು ಹಂಚಾಗಬೇಕು. ಮುಸ್ಲಿಮರು ಛಿನ್ನ ಭಿನ್ನರಾಗಬೇಕು. ಪರಸ್ಪರ ಕಚ್ಚಾಡುತ್ತಿರಬೇಕು. ಧಾರ್ಮಿಕವಾಗಿ ಅವರು ಹಿಂದೆ ಸರಿಯಬೇಕು. ಪಾಶ್ಚಾತ್ಯ ಶೈಲಿಗಳನ್ನು ಅನುಸರಿಸಬೇಕು*.
*ಇದಕ್ಕಾಗಿ ಅವರು ನಡೆಸಿದ ಅನೇಕ ಕುತಂತ್ರಗಳಲ್ಲಿ ಒಂದಾಗಿತ್ತು ವಹಾಬಿಸಂ*.
ಸಂಶಯವಿದ್ದವರು ಮುಂದೆ ಓದಿ.
ವಹ್ಹಾಬಿಸಂನ ಸ್ಥಾಪಕ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಕ್ರಿ.ಶ. 1724ರಲ್ಲಿ ಬಸ್ವರಕ್ಕೆ ಭೇಟಿ ನೀಡಿದಾಗ ಅಲ್ಲಿ ಬ್ರಿಟಿಷ್ ಗೂಢಾಚಾರ ಹಂಫರ್‌ನ ಪರಿಚಯವಾಗುತ್ತದೆ. ಮಾತುಕತೆ ನಡೆಯುತ್ತದೆ.. ಪರಿಚಯ ಗೆಳೆತನವಾಗಿ ಮಾರ್ಪಡುತ್ತದೆ.
ಮುಸ್ಲಿಮರೆಡೆಯಲ್ಲಿ ಗುಂಪುಗಾರಿಕೆ, ಛಿದ್ರತೆ ಸೃಷ್ಟಿಸಲು ಬ್ರಿಟಿಷ್ ಸರಕಾರ ಹಂಫರ್ ಎಂಬ ಗೂಢಚಾರನನ್ನು ಮುಸ್ಲಿಂ ರಾಷ್ಟ್ರದೊಳಗೆ ಕಳಿಸಿತ್ತು. ಇಬ್ನು ಅಬ್ದುಲ್ ವಹಾಬ್‌ನ ಮಹತ್ವಕಾಂಕ್ಷೆ, ಅಧಿಕಾರ ಸ್ನಾನಮೋಹ, ಹಾಗೂ ಇಸ್ಲಾಮಿನ ಪರಂಪರೆಯ ಬಗ್ಗೆ ಆತನಿಗಿರುವ ಜಿಗುಪ್ಸೆಯನ್ನು ಅರಿತ ಹಂಫರ್, ತನ್ನ ಕಾರ್ಯ ಯೋಜನೆಗೆ ಆತನನ್ನು ಚೆನ್ನಾಗಿ ಉಪಯೋಗಿಸಿದ.
*ವಹಾಬ್‌ನ ಉದ್ದೇಶ ಮುಸ್ಲಿಮರನ್ನು ಇಸ್ಲಾಮಿನ ನೈಜ ಪರಂಪರೆಯಿಂದ ಬೇರ್ಪಡಿಸಿ ಹೊಸ ವಿಚಾರಧಾರೆಯಲ್ಲಿ ಒಗ್ಗೂಡಿಸುವುದು*.
*ಹಂಫರ್‌ನ ಉದ್ದೇಶ ಕೂಡ ಮುಸ್ಲಿಮರು ಇಸ್ಲಾಮೀ ಶೈಲಿಯಿಂದ ದೂರ ಮಾಡಿ ಪಾಶ್ಚಾತ್ಯ ಶೈಲಿಯಲ್ಲಿ ಜೀವಿಸುವಂತೆ ಮಾಡುವುದು*.
ಇದನ್ನು ಕಟ್ಟುಕಥೆಯೆಂದು ಹೇಳುವವರು ಈ ಕೆಳಗಿನ ಗ್ರಂಥವನ್ನು ಒಮ್ಮೆ ಅಧ್ಯಯನ ಮಾಡಬೇಕು.
( ಮುದ್ದಕ್ಕಿರಾತುಲ್ ಮಿಸ್ಟರ್ ಹಂಫರ್, ಅಲ್‌ಜಾಸೂಸುಲ್ ಬ್ರಿಸ್ವಾನೀ ಫೀ ಬಿಲಾದಿಲ್ ಇಸ್ಲಾಮಿಯ್ಯ )
( Colonization idea Mr. Homphrys Memories,
The English spy in Islamic Countries )
1737 ರಲ್ಲಿ ರಾಷ್ಟ್ರೀಯ ಸ್ವರೂಪ ಸ್ವೀಕರಿಸಿದ ವಹಾಬಿಸಂ, ಉಸ್ಮಾನಿಯಾ ಖಿಲಾಫತ್‌ನ ವಿರುದ್ಧ ಬಂಡಾಯವೆದ್ದಿತು . ತೌಹೀದ್‌ನ ಹೆಸರಲ್ಲಿ ಇಸ್ಲಾಮೀ ಖಿಲಾಫತ್‌ನ ವಿರುದ್ಧ ಜನರನ್ನು ಪ್ರಚೋದಿಸುವುದು, ಗಲಭೆ ಸೃಷ್ಟಿಸುವುದು ವಹಾಬಿಸಂನ ಕುತಂತ್ರವಾಗಿತ್ತು.
( ಇಂದು ಕೂಡ ಸಲಫಿಗಳು ತೌಹೀದ್‌ನ ಹೆಸರಲ್ಲಿಯೇ ಸರ್ವ ಫಿತ್ನಗಳನ್ನು ನಡೆಸುತ್ತಾರೆ ) ಬ್ರಿಟಿಷರು ವಹಾಬಿಗಳಿಗೆ ಪರೋಕ್ಷ ಬೆಂಬಲ ನೀಡಿದರು. 1760ರಲ್ಲಿ ಬ್ರಿಟಿಷರ ಬೆಂಬಲದೊಂದಿಗೆ ಇಬ್ನು ಅಬ್ದುಲ್ ವಹಾಬ್ ಮತ್ತು ಇಬ್ನು ಸಹೂದ್ ಒಟ್ಟು ಸೇರಿ ಪ್ರತ್ಯೇಕ ವಹಾಬಿ ರಾಷ್ಟ್ರದ ಘೋಷಣೆ ಮಾಡಿದರು. ಇವರಿಗೆ ಸಲಹೆ, ಸೂಚನೆ, ಸಂರಕ್ಷಣೆ ನೀಡಲು ಬ್ರಿಟಿಷ್ ಈಸ್ಟ್ ಕಂಪೆನಿ ಮುಂದೆ ಬಂತು. ಈ ಸಹಾಯದ ಪರಿಣಾಮ ತುರ್ಕೀ ಖಿಲಾಫತ್ ವಿರುದ್ಧ ವಿವಿಧೆಡೆ ಸಂಘರ್ಷ ಸೃಷ್ಟಿಯಾಯಿತು. ವಿರೋಧಿಗಳನ್ನು ಕೊಲ್ಲುವುದು, ಪೀಡಿಸುವುದು, ದರೋಡೆ ಮಾಡುವುದು, ಮಕ್ಕಳ ಕತ್ತು ಸೀಳುವ ಕ್ರೌರ್ಯ ವನ್ನು ಪ್ರದರ್ಶಿಸಿದರು.
( ಮುಂದುವರಿಯುವುದು )
.
No comments:
Post a Comment