*ಅಹ್ಲು ಸ್ಸುನ್ನ - 7*
*@ ಅಬೂ ರಾಝೀ*
➖➖➖➖➖➖➖➖
*ವಹಾಬಿಸಂ ಬೆಳವಣಿಗೆಯ ಹಿಂದೆ ಪಾಶ್ಚಾತ್ಯ ಶಕ್ತಿಗಳು - ಸೌದಿ ರಾಜಕುಮಾರ*
2018, ಮಾರ್ಚ್ 22. ವಾಷಿಂಗ್ಟನ್ ಪೋಸ್ಟ್ ಗೆ ಯುವ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರವರು ನೀಡಿದ ಸಂದರ್ಶನ ಸಲಫಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು.
Gulf times ಹೊರತಂದ ಈ ಸಂದರ್ಶನ ಸಲಫಿಗಳ ನಿಜಬಣ್ಣವನ್ನು ಬಹಿರಂಗಗೊಳಿಸಿತು.
ಪಾಶ್ಚಿಮಾತ್ಯ ಶಕ್ತಿಗಳ ಕುಮ್ಮಕ್ಕಿನಿಂದಲೇ ಸಲಫಿಸಂ ಜಗತ್ತಿನಾದ್ಯಂತ ಪ್ರಸಾರವಾಯಿತೆಂದು ಯುವ ರಾಜಕುಮಾರ ಬಹಿರಂಗ ಪಡಿಸಿದರು.
https://www.rt.com/news/422563-saudi-wahhabism-western-countries/
*ಗಲ್ಫ್ ರಾಷ್ಟ್ರಗಳಲ್ಲಿ ಐಸಿಸ್ ನಡೆಸಿದ ಭಯಾನಕ ಭಯೋತ್ಪಾದನೆ ಹಾಗೂ ಅದರ ಹಿಂದೆಯಿದ್ದ ವಹಾಬಿ ಐಡಿಯೋಲಜಿಯ ಬಗ್ಗೆ ಪಾಶ್ಚಾತ್ಯರು ಚರ್ಚಿಸುತ್ತಿರುವಾಗಲೇ ಕೇವಲ ಸೌದಿ ಅರೇಬಿಯಾದಲ್ಲಿ ಮಾತ್ರ ಸೀಮಿತವಾಗಬೇಕಾಗಿದ್ದ ವಹಾಬಿಸಂ ಜಗತ್ತಿನಾದ್ಯಂತ ಪ್ರಚಾರವಾಗಲು ಪಾಶ್ಚಾತ್ಯ ದೇಶಗಳು ಕಾರಣವೆಂದು ಅವರು ಬಹಿರಂಗ ಪಡಿಸಿದರು*.
ಒಂದನೇ ಮಹಾಯುದ್ಧದ ಸಂದರ್ಭ. ಜಗತ್ತಿನ ಬಲಾಢ್ಯ ಶಕ್ತಿಯಾಗಿದ್ದ ಸೋವಿಯತ್ ಯೂನಿಯನ್ ಗೆ ಸಡ್ಡು ಹೊಡೆಯಲು ಅಮೇರಿಕ - ಬ್ರಿಟನ್ ಒಕ್ಕೂಟ ತೀರ್ಮಾನಿಸಿತು. ಅದಕ್ಕಾಗಿ ಅವರು ಕಂಡು ಕೊಂಡ ಕುತಂತ್ರವೇ ವಹಾಬಿಸಂ ಪ್ರಚಾರ.
ಈ ಯೋಜನೆಯ ಪ್ರಕಾರ ಸೌದಿ ಪಾಠ ಶಾಲೆಯಿಂದ ಹೊರಬಂದ ಉಸಾಮ ಬಿನ್ ಲಾಡೆನ್ ರಶ್ಯದ ಜೊತೆ ಹೋರಾಡಲು ಅಫಘಾನಿಸ್ತಾನಕ್ಕೆ ಹೊರಟರು. ಅಲ್ಲಿ ತಾಲಿಬಾನ್ ರಚಿಸಲಾಯಿತು. ಅವರಿಗೆ ಬೇಕಾದ ಶಕ್ತಿ, ಆಯುಧ, ತರಭೇತಿ ಎಲ್ಲವನ್ನೂ ನೀಡಿದ್ದು ಇದೇ ಅಮೇರಿಕಾ.
ಸೋವಿಯತ್ ಯೂನಿಯನ್ ಹೊಡೆದು ನುಚ್ಚು ನೂರಾದ ನಂತರ ಈ ಭಯೋತ್ಪಾದನೆ ಕೊನೆಗೊಳ್ಳಲಿಲ್ಲ.
ತಾನು ಕಕ್ಕಿದ್ದನ್ನೆ ಪಾಶ್ಚಾತ್ಯಾರು ತಿಂದರು. ಹುಟ್ಟಿಸಿದವರನ್ನು, ಸಾಕಿದವರನ್ನು ಕೊಲ್ಲಲು ಈ ಭಯೋತ್ಪಾದಕರು ಹಿಂದೆ - ಮುಂದೆ ನೋಡಲಿಲ್ಲ.. ಸಾಕಿದ ಗಿಣಿಯೇ ಹದ್ದಾಗಿ ಕುಕ್ಕಿದ ಪರಿಸ್ಥಿತಿ.
ಪಾಶ್ಚಾತ್ಯರ ಹಣ ಪಡೆದು ಬೆಳೆದ ವಹಾಬಿಸಂಗೆ ತೌಹೀದ್ ಎಂಬುದು ಕೇವಲ ಅಧಿಕಾರಕ್ಕಾಗಿ ನಡೆಸಿದ ನಾಟಕ.
ತೌಹೀದ್ ಹೆಸರಲ್ಲಿ ನಡೆಸಿದ ಹೋರಾಟ, ದೌರ್ಜನ್ಯ, ಕ್ರೌರ್ಯ, ಭೀಕರತೆ, ರಕ್ತಪಾತಗಳೆಲ್ಲವೂ ಅವರ ನಿಗೂಢ ಉದ್ದೇಶವನ್ನು ಬಯಲಿಗೆಳೆದಿದೆ.
*ಒಂದು ಕಾಲದಲ್ಲಿ ಕೇರಳದಲ್ಲಿ ಇವರು ತೌಹೀದ್ ಹೆಸರಲ್ಲಿ ಕಾರ್ಯಚರಿಸಿದಾಗ ಒಂದು ವಿಭಾಗ ಜನರು ಇವರನ್ನು ನಂಬಿದರು. ಆದರೆ ಒಂದು ಹಂತಕ್ಕೆ ಸಲಫಿಗಳು ಬೆಳೆದು ನಿಂತಾಗ ಇವರು ನಡೆಸಿದ ಅಧಿಕಾರ ದಾಹ, ಭ್ರಷ್ಟತೆ, ವಂಚನೆ, ದಗಲ್ಬಾಜಿ ಇಡೀ ಕೇರಳ ನಾಚಿ ತಲೆ ತಗ್ಗಿಸಿತು. ದಮ್ಮಾಜಿ, ಐಸಿಸ್ ಜೊತೆ ಕೆಲವು ಸಲಫಿಗಳ ಸಂಬಂಧದಿಂದ ಸಲಫಿ ಮುಖಂಡರೇ ತಾವು ಸಲಫಿ ಎಂದು ಕರೆಯಲು ಹಿಂಜರಿದರು*.
ನಿಜ ಹೇಳಬೇಕಾದರೆ ಒಬ್ಬ ಸಲಫಿಯ ಜೊತೆ ಮಾತನಾಡಿ. ಆತ ಮೊದ - ಮೊದಲು ಹದೀಸ್ ಳಹೀಫ್ ಎನ್ನುತ್ತಾನೆ. ನಂತರ ನಿಷೇಧಿಸುತ್ತಾನೆ. ಇಮಾಮರನ್ನು ತಿರಸ್ಕರಿಸುತ್ತಾನೆ. ಸ್ವಹಾಬಿಗಳನ್ನು ವಿಮರ್ಶಿಸುತ್ತಾನೆ. ಕಿತಾಬ್‌ಗಳ ಬಗ್ಗೆ ಮಾತನಾಡುವುದೇ ಆತನಿಗೆ ಅಲರ್ಜಿ.
ಇವರ ತೌಹೀದ್ ಕೇವಲ ಮಣ್ಣಾಂಗಟ್ಟಿ
No comments:
Post a Comment