Sunday, September 20, 2020

ಅಹ್ಲು ಸ್ಸುನ್ನ = 04

*ಅಹ್ಲು ಸ್ಸುನ್ನ - 4*.
                   @ ಅಬೂ ರಾಝೀ
➖➖➖➖➖➖➖➖
*ಸಲಫಿಗಳ ರಕ್ತ ರಂಜಿತ ಇತಿಹಾಸ*

ಒಂದೆಡೆ ಆಡಳಿತದ ಬೆಂಬಲ, ಇನ್ನೊಂದೆಡೆ ಗೂಢಚಾರ ಹಂಫರ್‌ನ ಸಹಕಾರದಿಂದ ಇಬ್ನು ಅಬ್ದುಲ್ ವಹಾಬ್ ಮೊದಲು ತನ್ನ ಊರ ಸುತ್ತಮುತ್ತ ವಹಾಬಿ ಆಶಯ ಪ್ರಚಾರ ಆರಂಭಿಸಿದ. ತನ್ನ ಮಿತ್ರರು, ಬಂಧುಗಳನ್ನು ಒಗ್ಗೂಡಿಸಿ ಒಂದು ತಂಡ ರಚಿಸಿದ. ನೆರೆಹೊರೆಯ ಪ್ರದೇಶಗಳಿಗೆ ನುಗ್ಗಿ ತನ್ನ ಕೊಳಕು ಆಶಯ ಪ್ರಚಾರ ಮಾಡುವುದು ಆತನ ತಂತ್ರವಾಗಿತ್ತು. ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿರುವವರನ್ನು ಹೊಡೆಯುವುದು, ಬಡಿಯುವುದು, ಕೊಲ್ಲುವುದು. ಮಾತ್ರವಲ್ಲ ಅವರ ಸ್ವತ್ತುಗಳನ್ನು ಲಪಟಾಯಿಸುವ ಹೀನ ಕೆಲಸ ಮಾಡತೊಡಗಿದರು. . ಸ್ವತ್ತಿನ ಆಸೆಯಿಂದ ಅವನ ವಹಾಬಿ ಅನುಯಾಯಿಗಳು ಮತ್ತಷ್ಟು ಕ್ರೂರಿಗಳಾದರು. ಆತನ ಬಂಧುಗಳು ದಿಢೀರ್ ಶ್ರೀಮಂತರಾದರು. 

*ಸಂಪತ್ತಿನ ಆಸೆ ಹಾಗೂ ಭಯದಿಂದ ಜನರನ್ನು ತನ್ನ ಸಂಘಟನೆಗೆ ಸೇರಿಸಿದ. ವಹಾಬಿಸಂನ ಪ್ರಚಾರ ಎಷ್ಟು ಭೀಕರವಾಗಿತ್ತೆಂದರೆ ತನ್ನ ಆಶಯ ಒಪ್ಪದ ವಿದ್ವಾಂಸರನ್ನು ಕೊಲ್ಲುತ್ತಿದ್ದ, ಮಹಿಳೆಯರನ್ನು ಮಾನಭಂಗಗೊಳಿಸಿದ, ಇಸ್ಲಾಮಿನ ಸ್ಮಾರಕಗಳನ್ನು ನಾಶಮಾಡಿದ. ಮಹಾತ್ಮರ ಮಖ್‌ಬರಗಳನ್ನು ಧ್ವಂಸ ಮಾಡಿದ. ಗ್ರಂಥಾಲಯಗಳನ್ನು ಭಸ್ಮ ಮಾಡಿದ. ಪರಂಪರಾಗತ ಇಸ್ಲಾಮಿನ ಚಿಹ್ನೆ, ಸ್ಮಾರಕ, ಗುರುತುಗಳನ್ನು ಆತ ಸಹಿಸುತ್ತಿರಲಿಲ್ಲ. ವಹಾಬಿಗಳ ಅಂದಿನ ಕಾರ್ಯಚರಣೆಯೂ ಇಸ್ಲಾಮಿಕ್ ಇತಿಹಾಸದಲ್ಲಿ ಭಯಾನಕ ದಿನಗಳಾಗಿತ್ತು.* (ತಾರೀಖುಲ್ ಮಮ್‌ಲಕತುಲ್ ಅರಬಿಯ್ಯ ಇಸ್ಲಾಮಿಯ್ಯ)
( ಒಂಥರ ಈಗಿನ ಉಗ್ರ ಹಿಂದುತ್ವವಾದಿಗಳಂತೆ. ಗೋವಿನ ಹೆಸರಲ್ಲಿ, ರಾಮನ ಹೆಸರಲ್ಲಿ ನಿರಪರಾಧಿ ಬಡಜನರನ್ನು ಯಾವ ರೀತಿ ಮರ್ದಿಸಲಾಗಿತ್ತೋ ಅದಕ್ಕಿಂತಲೂ ಭೀಕರವಾಗಿತ್ತು ಸಲಫಿಗಳ ಇತಿಹಾಸ )  

*ಸಲಫಿಗಳ ಮಕ್ಕಾ ಆಕ್ರಮಣ* :
ಹಿಜರಿ  1215 ರಲ್ಲಿ ಮಕ್ಕಾದ ಮೇಲೆ ವಹಾಬಿಗಳು ಭೀಕರ ಆಕ್ರಮಣ ಮಾಡಿದರು. ಈ ಆಕ್ರಮಣದಲ್ಲಿ ಅನೇಕ ಜನ ಸಾಮಾನ್ಯರು ಕೊಲ್ಲಲ್ಪಟ್ಟರು. ಹಿ. 1217 ರಲ್ಲಿ ತ್ವಾಯಿಫ್ ಆಕ್ರಮಣ ಮಾಡಲು ಸಿದ್ಧತೆ ನಡೆಸಿದರು. ಆದರೆ ಆ ವರ್ಷ ಹಜ್‌ನ ಜನ ಬಾಹುಲ್ಯದಿಂದ ಆಕ್ರಮಣ ಮಾಡಲು ಸಾಧ್ಯವಾಗಲಿಲ್ಲ. ಹಜ್ ಮುಗಿದು ಜನರು ಚದುರಿದ ನಂತರ ತ್ವಾಯಿಫ್ ಆಕ್ರಮಿಸಿ ವಶಪಡಿಸಿದರು. ಪುನಃ ಮಕ್ಕಾದತ್ತ ವಹ್ಹಾಬಿ ಸೇನೆಯು ಚಲಿಸಿತು. 14 ದಿವಸ ಅವರು ಮಕ್ಕಾದಲ್ಲಿ ರೌದ್ರವ ತಾಂಡವಾಡಿದರು. ತಮ್ಮ ಸಿದ್ಧಾಂತವನ್ನು ಬಲಪ್ರಯೋಗದಿಂದ ಹೇರಿದರು. ನಂತರ ಜಿದ್ದಾದತ್ತ ಹೊರಟು ಅಲ್ಲಿ 7 ದಿವಸ ಕಾರ್ಯಚರಣೆ ನಡೆಸಿದರು.. ಕೊನೆಗೆ ಮರಳಿ ರಿಯಾದ್‌ನತ್ತ ಹೊರಟರು..

*ಮದೀನಾ ಆಕ್ರಮ*: 
ಎರಡು ತಿಂಗಳ ನಂತರ ರಬೀವುಲ್ ಅವ್ವಲ್‌ನಲ್ಲಿ ಪುನಃ ಮಕ್ಕಾದತ್ತ ಹೊರಟರು. ಆದರೆ ಈ ಬಾರಿ ಜಿದ್ದಾ ಮತ್ತು ಮಕ್ಕಾದ ಗವರ್ನರ್‌ಗಳಾದ ಶರೀಫ್ ಭಾಷಾ, ಶರೀಫ್ ಗೀಲಾಗಿ ಇಬ್ಬರೂ ಸೇರಿ ವಹ್ಹಾಬಿಗಳನ್ನು ಮಕ್ಕಾದಿಂದ ಓಡಿಸಿದರು. ದಿಕ್ಕೆಟ್ಟ ವಹಾಬಿಗಳು ಮದೀನಾದತ್ತ ಚಲಿಸಿದರು. ಮದೀನಾದಲ್ಲಿರುವ ಅನೇಕ ಗೋತ್ರದ ಜನರೊಂದಿಗೆ ರಹಸ್ಯ ಒಪ್ಪಂದ ಮಾಡಿದರು. ಅಧಿಕಾರ, ಹಣ, ಮಹಿಳೆಯರ ಆಸೆ ತೋರಿಸಿ ಅನೇಕ ಗೋತ್ರ ಮುಖಂಡರನ್ನು ಬಲೆಗೆ ಹಾಕಿದರು . ಮದೀನಾದಿಂದ ಮಕ್ಕಾಕ್ಕೆ ಬರುವ ಆಹಾರ ಸಾಮಾಗ್ರಿಗಳನ್ನು ತಡೆದರು. ಗತ್ಯಂತರವಿಲ್ಲದೆ ಮಕ್ಕಾ ಗವರ್ನರ್ ವಹಾಬಿಗಳ ಜೊತೆ ಒಪ್ಪಂದವೇರ್ಪಡಿಸಿದ. ಇದರ ಪ್ರಕಾರ ವಹಾಬಿ ಆಶಯ ಪ್ರಚಾರಕ್ಕೆ ಮಕ್ಕಾದಲ್ಲಿ ಪೂರ್ಣ ಸ್ವಾತಂತ್ರ್ಯ ಸಿಕ್ಕಿತು. ಹೀಗೆ ಮಕ್ಕಾ ,ಮದೀನಾ ವಹಾಬಿಗಳ ಕೈಗೆ ಬಂದಾಗ ಚರಿತ್ರೆಯಲ್ಲಿ ಕಂಡರಿಯದ ಧ್ವಂಸಗಳು, ಕ್ರೌರ್ಯಗಳು ನಡೆದವು . ಇತಿಹಾಸದಲ್ಲಿ ಕಂಡು, ಕೇಳದ ರಕ್ತ ತಾಂಡವ ಮಾಡಿದ ಕುಖ್ಯಾತಿ ವಹ್ಹಾಬಿಗಳಿಗೆ ಸಲ್ಲುತ್ತದೆ*. 

*ಕರ್ಬಲ ಆಕ್ರಮಣ*
ಹಿ. 1216 ರಲ್ಲಿ ವಹಾಬಿ ಸೇನೆ ಕರ್ಬಲ ಆಕ್ರಮಿಸಿತು. ಈ ಆಕ್ರಮಣದ ಕುರಿತು ಕೇರಳ ವಹಾಬಿ ಮುಖಂಡ ಇ.ಕೆ. ಮೌಲವಿ ಅಲ್ ಇತ್ತಿಹಾದ್ ಪತ್ರಿಕೆಯಲ್ಲಿ ಬರೆಯುತ್ತಾರೆ. *1801 ಏಪ್ರಿಲ್ 30 ರಂದು ಸಾವಿರಾರು ವಹಾಬಿಗಳು ಕರ್ಬಲಾವನ್ನು ಆಕ್ರಮಿಸಿದರು. ತಮ್ಮನ್ನು ವಿರೋಧಿಸುವ ನಗರ ವಾಸಿಗಳನ್ನು ಕೊಂದು ಹಾಕಿದರು. ಹುಸೈನ್(ರ)ರವರ ಮುಖಾಂನ್ನು ಧ್ವಂಸ ಮಾಡಿದರು. ಅಲ್ಲಿ ಅರಬೇತರ ಸಂದರ್ಶಕರು ನೀಡಿದ ಸ್ವರ್ಣಗಳ ರಾಶಿಯೇ ಇತ್ತು. ಅದೆಲ್ಲವನ್ನು ಲೂಟಿ ಮಾಡಿದರು. ಅಲ್ಲಿ ಸಿಕ್ಕಿದ ಬೆಳೆಬಾಳುವ ಎಲ್ಲಾ ವಸ್ತುಗಳನ್ನು ವಹಾಬಿ ಸೇನೆ ದೋಚಿತು*. 
( 1956 ಸೆಪ್ಟೆಂಬರ್ 2, ಸಂಚಿಕೆ 7 )

ಸಲಫಿಗಳ ರಕ್ತ ರಂಜಿತ ಇತಿಹಾಸದ ಬಗ್ಗೆ ಖ್ಯಾತ ಇತಿಹಾಸಕಾರ  ಝೈನಿ ದಹ್ಲನ್ ( ರ ) ರು ಉಲ್ಲೇಖಿಸುವುದು
ಹೀಗೆ:
ಮಸೀದಿಗಳು ಹಾಗೂ ಸಜ್ಜನರಿಗೆ ಸಂಭಂಧಿಸಿದ ಚಾರಿತ್ರಿಕ ಕುರುಹುಗಳನ್ನು  ವಹಾಬಿಗಳು ನಾಶ ಮಾಡಿದರು.ಮೊದಲನೆಯದಾಗಿ ಮಕ್ಕಾದ ಜನ್ನಾತುಲ್ ಮುಅಲ್ಲಾ”ದಲ್ಲಿದ್ಧ ಹಲವಾರು ಖುಬ್ಭಗಳನ್ನು ಹೊಡೆದುರುಳಿಸಿದರು. ನಂತರ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ,,ಅಬೂಬಕ್ಕರ್ ಸಿದ್ಧೀಖ್ ( ರ ), ಅಲೀ ( ರ ) 
ಹಾಗೂ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಥಮ ಪತ್ನಿ ಖತೀಜಾ ( ರ ) ಜನ್ಮ ಸ್ಥಳಗಳನ್ನು ಧ್ವಂಸ ಮಾಡಿದರು. ಮಹಾತ್ಮರುಗಳ ವಸ್ತುಗಳನ್ನು,ಅವರ ಚಿಹ್ನೆಗಳನ್ನು ಹುಡುಕಿ, ಹುಡುಕಿ ನಾಶ ಪಡಿಸಿದರು

*ವಹಾಬಿಗಳಲ್ಲಿ ಒಂದು ತಂಡವು  ಇಂತಹ ದುಷ್ಕತ್ಯಗಳನ್ನು ನಡೆಸುವಾಗ ಮತ್ತೊಂದು ತಂಡವು ಮಹಾತ್ಮರನ್ನು ವ್ಯಂಗ್ಯಮಾಡುತ್ತಾ, ಅಪಹಾಸ್ಯ ಮಾಡುತ್ತಾ ಸಾಗುತ್ತಿತ್ತು.* (ಖುಲಾಸತುಲ್ ಕಲಾಮ್) _

*ಹಿರಾ ಗುಹೆ ಧ್ವಂಸ*
ಶೈಖ್ ಶಿಹಾಬುದ್ಧೀನ್ ಅಹ್ಮದ್ ಅಸ್ ಜಾಈ ಬರೆಯುತ್ತಾರೆ:
*ಮಸ್ಜಿದುಲ್ ಅಬೀ ಖುಬೈಸ್,ದಾರುಲ್ ಖೈಝರಾನ್ ಹಾಗೂ ಹಿರಾ ಗುಹೆಯನ್ನು ವಹಾಬಿಗಳು ಹೊಡೆದುರುಳಿಸಿದರು* *ಅದ್ಯಾವುದೂ ಖಬ್ರ್ ನ ಮೇಲೆ ನಿರ್ಮಿಸಲ್ಟಟ್ಟದಲ್ಲ.  ಅದೊಂದು ಚರಿತ್ರಾ ಸ್ಮಾರಕವಾಗಿತ್ತು. ವಿಶೇಷತಃ ಹಿರಾ ಗುಹೆ ಪ್ರವಾದಿತ್ವ ಲಭಿಸುವುದಕ್ಕಿಂತ ಮೊದಲು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಬಾದತ್ ಮಾಡುತ್ತಿದ್ದರು.  ಮುತ್ತಬಿಉ ಸ್ಸುನ್ನು ಇಬ್ನು ಉಮರ್ ( ರ) ರವರಂತಹ  ಸ್ವಹಾಬಿಗಳು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುಣ್ಯ ಪಾದ ಸ್ಪರ್ಶವಾದ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಇಬಾದತ್ ನಿರ್ವಹಿಸುತ್ತಿದ್ದರು ಎಂದು ಸ್ವತಃ ಇಬ್ನು ತೈಮಿಯ್ಯಾ ರೇ ತನ್ನ “ಅಸ್ವಿರಾತುಲ್ ಮುಸ್ತಖಿಮ್” ಎಂಬ ಗ್ರಂಥದಲ್ಲಿ, ಇಮಾಂ ಅಹ್ಮದು ಬಿನ್ ಹಂಬಲ್ ( ರ ) ರಿಂದ  ಉದ್ಧರಿಸಿದ್ದಾರೆ. ಮಖ್‌ಬರ ಮಾತ್ರವಲ್ಲ ಇಸ್ಲಾಮಿನ ಸ್ಮಾರಕಗಳನ್ನು ನಾಶ ಮಾಡಿದ್ದನು ನೋಡುವಾಗ ಸಲಫಿಗಳಿಗೆ ಇಸ್ಲಾಮಿನ ಪರಂಪರೆಯೊಂದಿಗೆ ಎಷ್ಟೊಂದು ವಿರೋಧವಿತ್ತು ಎಂದು ತಿಳಿಯಬಹುದು.*

ತಾಹಿಫ್ ದುರಂತವನ್ನು ಚರಿತ್ರಗಾರರಾದ ಝೈನಿ ದಹ್ಲನ್ ಅದನ್ನು ಹೀಗೆ ವಿವರಿಸುತ್ತಾರೆ:
ವಹಾಬಿಗಳು ತ್ವಾಹಿಫ್ ಪ್ರವೇಶಿಸಿ ವೃದ್ಧರನ್ನೂ , ಯುವಕರನ್ನೂ ನೇತಾರರನ್ನೂ ಹಾಗೂ ಜನ ಸಾಮಾನ್ಯರನ್ನೂ ಕೊಲೆ ಗೈದರು. ತಾಯಿಯ ಎದೆಯ ಮೇಲಿದ್ದ ಎಳೆಯ ಕಂದಮ್ಮಗಳ ಕತ್ತು ಕೊಯ್ದರು. ಮನೆಗಳ ಮೇಲೆ ದಾಳಿ ಮಾಡಿ ಒಳಗೆ ಬೆದರಿ ಕೂತಿದ್ದ ಜನರನ್ನು ಮನೆಯಿಂದ ಹೊರಗಟ್ಟಿ ಕೊಂದರು. ದರ್ಸ್ ನಲ್ಲಿ ಕಲಿಯುತ್ತಿದ್ದಂತಹ ವಿಧ್ಯಾರ್ಥಿಗಳನ್ನು ಬಿಡಲಿಲ್ಲ. ನಮಾಜಿನಲ್ಲಿ, ರುಕೂಅ ನಲ್ಲೂ ಸುಜೂದ್ ನಲ್ಲೂ ಏರ್ಪಟ್ಟವರನ್ನೂ ಕೂಡಾ ಬಿಡದೇ ಕೊಂದರು .ತ್ವಾಹಿಫ್ ನ ಮುಸಲ್ಮಾನರಿಂದ ದಬ್ಬಾಲಿಕೆಯ ಮೂಲಕ ಗಿಟ್ಟಿಸಿ ಕೊಂಡ ಸೊತ್ತುಗಳನ್ನು “ಗನೀಮತ್”ಅಂಶಿಸುವಂತೆ ಐದರಲ್ಲೊಂದು ನೇತಾರನಿಗೂ, ಬಾಕಿ ಅನುಯಾಯಿಗಳಿಗೂ ಎಂಬ ಕ್ರಮದಲ್ಲಿ ಪಡೆದು ಕೊಂಡರು.” 

ಈ ವಿಷಯವನ್ನು ಬಾಗ್ದಾದ್ ಗಾರನಾದ ಸಯ್ಯಿದ್ ಇಬ್ರಾಹಿಮ್ ರ‍್ರಿಫಾಈ ಹೀಗೆ ವಿವರಿಸುತ್ತಾರೆ:

*ವಹಾಬಿಗಳ ಆಕ್ರಮಣ ಜಾಗತಿಕ ಮುಸ್ಲಿಮರನ್ನು ದಿಗ್ಭ್ರಮೆ ಗೊಳಿಸಿತ್ತು. ತ್ವಾಹಿಫ್ ವಶಪಡಿಸಿಕೊಂಡು ಅನೇಕರನ್ನು ಕೊಂದರು. ಅದರಲ್ಲಿ ಹಲವಾರು ವಿದ್ವಾಂಸರು ವಧಿಸಲ್ಪಟ್ಟರು. ಸಯ್ಯಿದ್ ಅಬ್ದುಲ್ಲಾಹಿ ಸ್ವಾವಿ (ಮಕ್ಕಾದ ಶಾಫಿಈ ಮುಫ್ತಿ), ಶೈಖ್ ಅಬ್ದುಲ್ಲಾ ಅಬ್ದುಲ್ ಖೈರ್ (ಮಕ್ಕಾದ ಖಾಝಿ), ಶೈಖ್ ಸುಲೈಮಾನ್ ಮುರಾದಿ (ತ್ವಾಹಿಫ್ ಖಾಝಿ) ಎಂಬತ್ತು ವಯಸ್ಸಿನ ಸೂಫಿವರ್ಯ ಯೂಸೂಫ್ ಸ್ವಾವೀ, ಶೈಖ್ ಹಸನು ಶೈಬಿ, ಶೈಖ್ ಜಅïಫರು ಶೈಬಿ ಮುಂತಾದವರು ವಹ್ಹಾಬಿಗಳ ಆಕ್ರಮಗಳಿಗೆ ಬಳಿಯಾಗಿದ್ದಾರೆ*. 
(ರಿಸಾಲತ್ತು ಔರಖೀಲ್ ಬಾಗ್ದಾದೀಯ್ಯ)
( ಮುಂದುವರಿಯುವುದು )

No comments:

Post a Comment