*ಅಹ್ಲು ಸ್ಸುನ್ನ - 5*
*@ ಅಬೂ ರಾಝೀ*
➖➖➖➖➖➖➖➖
*ಸಲಫಿಗಳ ಅಧಿಕಾರ ದಾಹಕ್ಕೆ ಫೆಲೆಸ್ತೀನ್ ಬಲಿಯಾಯಿತು*
ಸೌದಿ ಅರೇಬಿಯಾದಲ್ಲಿ ವಹಾಬಿಗಳು ನಡೆಸಿದ ರಕ್ಕಸ ತಾಂಡವ, ಕ್ರೌರ್ಯ, ಹಿಂಸೆ ಜಾಗತಿಕ ಮುಸಲ್ಮಾನರ ನಿದ್ದೆಗೆಡಿಸಿತು. ಮುಸ್ಲಿಂ ಸಮುದಾಯದ ಸಂಕಟವನ್ನು ಅರಿತ ಈಜಿಪ್ಟ್ ,ತನ್ನ ಹೊಣೆಗಾರಿಕೆ ನೆರವೇರಿಸಲು ಮುಂದೆ ಬಂತು.
ಇದರ ಪರಿಣಾಮ.ಹಿ. 1226 ರಲ್ಲಿ ವಹಾಬಿಗಳಿಂದ ಪವಿತ್ರ ಮಕ್ಕಾವನ್ನು ರಕ್ಷಿಸಲು ಈಜಿಪ್ತ್ ಆಡಳಿತಾಧಿಕಾರಿ ಮುಹಮ್ಮದ್ ಬಾಷ ಪ್ರಯತ್ನಿಸಿದರು. ಮೊದಲ ಪ್ರಯತ್ನ ಯಶಸ್ಸು ಕಾಣಲಿಲ್ಲ. ಪುನಃ 2 ನೇ ಬಾರಿ ಪ್ರಯತ್ನಿಸಿದರು. ಈ ಬಾರಿ ನಜ್‌ದ್ (ರಿಯಾದ್) ಕೇಂದ್ರವಾಗಿಟ್ಟುಕೊಂಡು ಹೋರಾಟ ನಡೆಸಿದರು. ಈ ಹೋರಾಟದಲ್ಲಿ ವಹಾಬಿಗಳು ಸೋತು ಸುಣ್ಣವಾಗಿ ಓಡಿ ಹೋದರು. ವಹಾಬಿಗಳ ಅಹಂಕಾರ ಹುಟ್ಟಡಗಿಸಲು ಅವರ ಮೇಲೆ ತೆರಿಗೆ ಹಾಕಲಾಯಿತು.
ಮುಂದೆ ಮಕ್ಕಾ, ಮದೀನಾ, ಜಿದ್ದಾ, ತ್ವಾಯಿಫ್‌ಗಳನ್ನು ಮುಸ್ಲಿಂ ಸೇನೆ ವಹಾಬಿಗಳಿಂದ ರಕ್ಷಿಸಿತು.
*ಸಹೂದ್ ಮರಣ* ದರ್‌ಇಯ್ಯಾದ ಆಡಳಿತಾಧಿಕಾರಿ ಇಬ್ನು ಅಬ್ದುಲ್ ವಹಾಬ್‌ನ ಮಿತ್ರನಾಗಿದ್ದ ಮುಹಮ್ಮದ್ ಸಹೂದ್ 1229 ಜಮಾದಿಲ್ ಅವ್ವಲ್‌ನಲ್ಲಿ ಮರಣ ಹೊಂದುತ್ತಾರೆ. ನಂತರ ದರ್‌ಇಯ್ಯಾದ ಆಡಳಿತ ಅವರ ಮಗ ಅಬ್ದುಲ್ಲಾ ಸಹೂದ್ ವಹಿಸುತ್ತಾರೆ. ದರ್‌ಇಯ್ಯಾದಲ್ಲಿರುವ ವಹಾಬಿ ಆಡಳಿತವನ್ನು ಕೊನೆಗಾಣಿಸಲು, ಈಜಿಪ್ತ್ ಆಡಳಿತಾಧಿಕಾರಿ ತನ್ನ ಮಗ ಇಬ್ರಾಹೀಂ ಭಾಷಾನನ್ನು ಸೈನ್ಯದೊಂದಿಗೆ ರಿಯಾದ್‌ಗೆ ಕಳುಹಿಸುತ್ತಾರೆ. ಹಿ. 1232 ನಲ್ಲಿ ಇಬ್ರಾಹೀಂ ಬಾಷಾ ಹಾಗೂ ಅಬ್ದುಲ್ಲಾ ಸಹೂದ್ ನಡುವೆ ನಡೆದ ಭೀಕರ ಹೋರಾಟದಲ್ಲಿ ಇಬ್ರಾಹೀಂ ಬಾಷಾ ವಿಜಯಗೊಳ್ಳುತ್ತಾರೆ.
ಈ ಸೋಲಿನ ಅವಮಾನದಿಂದ ವಹಾಬಿಗಳು ತಮ್ಮ ಕೇಂದ್ರವನ್ನು ದರ್‌ಇಯ್ಯಾದಿಂದ ರಿಯಾದ್‌ಗೆ ಬದಲಾಯಿಸುತ್ತಾರೆ.
ಉಸ್ಮಾನಿಯಾ ಖಿಲಾಫತ್ ಆಡಳಿತದಲ್ಲಿ ಕೊರತೆಗಳಿದ್ದರೂ ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಮುಸ್ಲಿಂ ಸಮುದಾಯಕ್ಕೆ ನೇತೃತ್ವ ನೀಡಲು ಖಿಲಾಫತ್‌ಗೆ ಸಾಧ್ಯವಾಗಿತ್ತು. ಈ ಆಡಳಿತದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹೊರಗಿನ ಶಕ್ತಿಗಳು ನುಸುಳಲು ಸಾಧ್ಯವಾಗುತ್ತಿರಲಿಲ್ಲ.
ಇದು ಬ್ರಿಟಿಷರಿಗೆ ದೊಡ್ಡ ತಲೆನೋವಾಗಿತ್ತು.
ಬ್ರಿಟಿಷರ ವಸಾಹತುಶಾಹಿ, ಧರ್ಮ ಪ್ರಚಾರ, ಅಧಿಕಾರದಾಹಕ್ಕೆ ತಡೆಯಾಗಿ ನಿಂತದ್ದು ಉಸ್ಮಾನಿಯಾ ಖಿಲಾಫತ್. ಈ ಖಿಲಾಫತ್ ನ ನಾಶಕ್ಕೆ ಬ್ರಿಟಿಷರು ಮಾಡಿದ ಕುತಂತ್ರದ ಫಲವಾಗಿತ್ತು ವಹಾಬಿಸಂನ ಬೆಳವಣಿಗೆ.
( ಸೋವಿಯತ್ ರಷ್ಯಾವನ್ನು ಸೋಲಿಸಲು ಅಮೇರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನನ್ನು ಬೆಂಬಲಿಸಿದಂತೆ )
*ಒಂದನೇ ಮಹಾ ಯುದ್ದದಲ್ಲಿ ಉಸ್ಮಾನಿಯಾ ಖಿಲಾಫತ್ ವಿರುದ್ಧ ಸಹಕರಿಸಿದರೆ , ವಹಾಬಿ ರಾಷ್ಟ್ರದ ರಚನೆಗೆ ಸಹಕಾರ ನೀಡುವುದಾಗಿ ಬ್ರಿಟಿಷರು ಮತ್ತು ವಹಾಬಿಗಳ ಮಧ್ಯೆ ಒಪ್ಪಂದ ನಡೆಯಿತು*
1915 ರಲ್ಲಿ ವಹಾಬಿ ರಾಷ್ಟ್ರ ಸ್ಥಾಪನೆಗೆ ಅಬ್ದುಲ್ ಅಝೀಝ್ ಬಿನ್ ಸಹೂದ್ ಮತ್ತು ಬ್ರಿಟನ್‌ನ ರಾಜಕೀಯ ಪ್ರತಿನಿಧಿ ಸರ್‌ಪೇರ್ಸಿ ಕೋಕ್ಸ್ ನಡುವೆ ಒಪ್ಪಂದ ನಡೆಯಿತು. ಬ್ರಿಟಿಷ್ ಮೇಧಾವಿ ಫಿಲ್‌ಬರ್‌ರನ್ನು ಸಲಹೆಗಾರನ್ನಾಗಿ ನೇಮಿಸಲಾಯಿತು.
(The Middle east a history sidnley Nuttetion Fisher P575)
*ಇಸ್ಮಾಮೀ ಖಿಲಾಫತ್‌ನ ವಿರುದ್ಧ ಬ್ರಿಟಿಷ್ ಸಮರ ಸಾರಿದಾಗ ಜಾಗತಿಕ ಮುಸ್ಲಿಮರು ಬ್ರಿಟನ್‌ನ ವಿರುದ್ಧ ನಿಂತರು. ಭಾರತದಲ್ಲೂ ಕೂಡಾ ಬ್ರಿಟಿಷರ ವಿರುದ್ಧ ಖಿಲಾಫತ್ ಚಳವಳಿ ಹುಟ್ಟು ಹಾಕಲಾಯಿತು. ಹಿಂದು - ಮುಸ್ಲಿಮರು ಒಗ್ಗೂಡಿ ಈ ಚಳವಳಿಯನ್ನು ಬೆಂಬಲಿಸಿದರು*
*ಆದರೆ ಒಂದನೇ ಜಾಗತಿಕ ಮಹಾ ಯುದ್ಧದಲ್ಲಿ ಉಸ್ಮಾನಿಯ ಖಿಲಾಫತ್‌ನ ವಿರುದ್ಧ ಬ್ರಿಟಿಷರಿಗೆ ಪರೋಕ್ಷ ಸಹಾಯ ಮಾಡುತ್ತಾ, ಅವರ ವಿಜಯಗೊಂಡಾಗ ಸಂತಸ ವ್ಯಕ್ತಪಡಿಸಿದ ಏಕೈಕ ಮುಸ್ಲಿಂ ಗುಂಪು ವಹ್ಹಾಬಿಸಂ*
ಈ ಯುದ್ಧದಲ್ಲಿ ಉಸ್ಮಾನಿಯಾ ಖಿಲಾಫತ್ ಸೋತಾಗ ಬ್ರಿಟನ್, ಅಮೇರಿಕಾ, ಫ್ರಾನ್ಸ್, ರಶ್ಯಾಗಳು ಮುಸ್ಲಿಂ ಜಗತ್ತನ್ನು ತುಂಡು ತುಂಡಾಗಿ ವಿಭಜಿಸಿದವು. ಫೆಲೆಸ್ತೀನ್ ಸೇರಿದಂತೆ ಅನೇಕ ಅರಬ್ ಭೂ ಪ್ರದೇಶಗಳು ಬ್ರಿಟನ್‌ನ ಪಾಲಾದವು. ಮುಸ್ಲಿಂ ರಾಷ್ಟ್ರಗಳು ಶಾಶ್ವತವಾಗಿ ಪರಸ್ಪರ ಕಚ್ಚಾಡುವಂತೆ ಮಾಡಲು ಬ್ರಿಟನ್ ಹಾಕಿದ ನಿಗೂಢ ಕಾರ್ಯಾಚರಣೆಯ ಫಲವೇ ಇಸ್ರೇಲ್ ಸ್ಥಾಪನೆ.
ಬ್ರಿಟನ್ ವಿದೇಶ ಕಾರ್ಯ ಸೆಕ್ರೆಟರಿ ಬಾಲ್ಟರ್ ಈ ಯೋಜನೆಯ ಸೂತ್ರಧಾರ. ಇದಕ್ಕೆ ಬಾಲ್ಟರ್ ಡಿಕ್ಲೇರೇಶನ್ ಎಂದು ಹೆಸರು.
1919 - 1945 ರ ನಡುವೆ ಸುಮಾರು 5 ಲಕ್ಷ ಯಹೂದಿಗಳನ್ನು ಫೆಲೆಸ್ತೀನ್‌ಗೆ ತಂದು ಹಾಕಿ ಮುಸ್ಲಿಮರ ಹೃದಯವನ್ನೇ ಭೇಧಿಸಿಲಾಯಿತು. ದುಃಖಕರ ಸಂಗತಿಯೇನೆಂದರೆ ಮುಸ್ಲಿಂ ಸಮುದಾಯ ನೋವಿನಿಂದ ನರಳುತ್ತಿದ್ದಾಗ ವಹಾಬಿಗಳು ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು. ವಹ್ಹಾಬಿಗಳ ಈ ಉಪಕಾರಕ್ಕೆ ಪ್ರತಿಫಲವಾಗಿ 1935 ರಲ್ಲಿ ಅಬ್ದುಲ್ ಅಝೀಝ್ ಬಿನ್ ಸಹೂದ್‌ರಿಗೆ ನೈಟ್ ಪದವಿ ನೀಡಿ ಬ್ರಿಟನ್ ಗೌರವಿಸಿತು.
*ಕ್ರಿ.ಶ. 1192 ರಲ್ಲಿ ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬಿಯವರು ವಶಪಡಿಸಿದ ಬೈತುಲ್ ಮುಖದ್ದಸ್ ಪಟ್ಟಣ 1917 ರವರೆಗೆ ಇಸ್ಲಾಮಿಕ್ ಖಿಲಾಫತ್‌ನ ಅಧೀನದಲ್ಲಿತ್ತು. ಈ ಪ್ರದೇಶವನ್ನು ಸಾಮ್ರಾಜ್ಯತ್ವ ಶಕ್ತಿಗಳು ವಶಪಡಿಸಲು ಹಾಗೂ ಪ್ಯಾಲೆಸ್ತೀನ್ ಜನತೆಯನ್ನು ತನ್ನದೇ ಜನ್ಮಭೂಮಿಯಲ್ಲಿ ನಿರಾಶ್ರಿತರನ್ನಾಗಿ ಜೀವಿಸಲು ಕಾರಣವಾದದ್ದು ಖಿಲಾಫತ್‌ನ ಪತನ.. ಅದಕ್ಕೆ ನೇತೃತ್ವ ನೀಡಿದ್ದು ಬ್ರಿಟನ್. ಆ ಬ್ರಿಟನ್‌ಗೆ ಪರೋಕ್ಷ ಸಹಾಯ ಮಾಡಿದ್ದು ಇದೇ ವಹಾಬಿಗಳು.*
ಇದರ ಅಳಿದುಳಿದ ಗುರುತುಗಳು ಇಂದು ಕೂಡ ಕಾಣಬಹುದು. ಮುಸ್ಲಿಮರಲ್ಲಿ ಛಿದ್ರತೆ, ಭಿನ್ನತೆ, ವಿಭಜನೆ, ಸಂಘರ್ಷ ಸೃಷ್ಟಿಸಿದ ಕುಖ್ಯಾತಿ ವಹಾಬಿಸಂಗಿದೆ.
ಮಕ್ಕಾದ ಮುಪ್ತಿಯಾಗಿದ್ದ, ಹರಂ ಶರೀಫ್‌ನ ಅಧಿಕೃತ ಚರಿತ್ರೆಗಾರರಾದ ಅಹ್ಮದ್ ಝೈನಿ ದಹ್‌ಲಾನ್ ತನ್ನ ಫಿತ್ನ್‌ತುಲ್ ವಹ್ಹಾಬಿಯಾ ಮತ್ತು Advice for the Whabi ಗ್ರಂಥದಲ್ಲಿ ಈ ರಕ್ತಸಿಕ್ತ ಅಧ್ಯಾಯ ಕಾಣಬಹುದು.
No comments:
Post a Comment