*ಅಹ್ಲು ಸ್ಸುನ್ನ - 6*
*@ ಅಬೂ ರಾಝೀ*
➖➖➖➖➖➖➖➖
*ವಹಾಬಿಸಂ ಪ್ರಚಾರ ಮಾಡಲು ಬಂದ ಅಫ್ಘಾನಿ , ಪಾಶ್ಚಾತ್ಯ ರ ಕೈಗೊಂಬೆಯಾಗಿದ್ದ.*
ಅರಬ್ ಜಗತ್ತಿನ ಹೊರಗೆ ವಹಾಬಿಸಂಗೆ ನೇತೃತ್ವ ನೀಡಿದ್ದು ಮೂರು ಮಂದಿ.
ಜಮಾಲುದ್ದೀನ್ ಅಫ್ಫಾನಿ ( 1838 - 1898 ) ಮುಹಮ್ಮದ್ ಅಬ್ದು ( 1849 - 1905 ) ರಶೀದ್ ರಿಳಾ( 1865 - 1935 ).
ಇಬ್ನು ಅಬ್ದುಲ್ ವಹಾಬ್‌ನ ಆಶಯಗಳನ್ನು ಅದೇ ರೀತಿ ಸ್ವೀಕರಿಸುವ ಬದಲು, ಅದನ್ನು ಮಾದರಿಯಾಗಿಟ್ಟು ಮತ್ತಷ್ಟು ಬದಲಾವಣೆ, ನವ, ಉಗ್ರ ಸಿದ್ಧಾಂತವನ್ನು ರೂಪಿಸಲು ಈ ಮೂವರು ಪ್ರಯತ್ನಿಸಿದರು. ವಹಾಬಿಗಳು ಬಹಿರಂಗವಾಗಿ ಹೇಳಲು ಹಿಂಜರಿದ ಅನೇಕ ಕಾರ್ಯಗಳನ್ನು ಇವರು ಬಹಿರಂಗವಾಗಿಯೇ ಹೇಳತೊಡಗಿದರು. ಇದರಿಂದ ವಹಾಬಿಸಂ ಮತ್ತೊಂದು ರೂಪ ಪಡೆಯಿತು.
ನಜ್‌ದ್ ಶೈಖ್‌ನ ಸಿದ್ಧಾಂತವನ್ನು ಅದೇ ರೀತಿ ಅಂಗೀಕರಿಸುವವರನ್ನು ಗಲ್ಫ್ ಸಲಫಿಗಳೆಂದು. ಹೊಸ ಬದಲಾವಣೆ ಸ್ವೀಕರಿಸಿದವರನ್ನು ಇಸ್ಲಾಹಿಗಳೆಂದು ಕರೆಯಲಾಯಿತು.
*ದುಃಖಕರ ಸಂಗತಿಯೆಂದರೆ ಇಬ್ನು ಅಬ್ದುಲ್ ವಹಾಬ್‌ರನ್ನು ಬ್ರಿಟಿಷ್ ಗೂಢಚಾರ ವಶೀಕರಿಸಿದಂತೆ*,
*ಈ ತ್ರಿಮೂರ್ತಿಗಳನ್ನು ಯಹೂದಿ ಗೂಢಚಾರ ಸಂಘವು ವಶೀಕರಿಸಿತು.*
*ವಹಾಬಿಸಂಗೆ ಹೊಸರೂಪ, ಹೊಸ ಶೈಲಿ ನೀಡಿದ ಈ ಮೂವರು ಯಹೂದಿ ಭೀಕರ ಸಂಘಟನೆ ಮಸೋನಿಸಂನ ಸದಸ್ಯರಾಗಿಯೂ, ಅದರ ಪ್ರಚಾರಕ್ಕಾಗಿಯೂ ಕಾರ್ಯಚರಿಸಿದ್ದು ಮಾತ್ರ ಚಾರಿತ್ರಿಕ ಸತ್ಯ*.
ಅ್ಯಂಡರ್ ಸೋವ್ (ಗ್ರಾಂಡ್ ಮಾಸ್ಟರ್)ರ ನೇತೃತ್ವದಲ್ಲಿ 1717 ರಂದು ಲಂಡನ್‌ನಲ್ಲಿ ಮಸೋನಿಸಂ (Free Mason Movement) ಎಂಬ ಜಾಗತಿಕ ಸಂಘಟನೆ ಅಸ್ಥಿತ್ವಕ್ಕೆ ಬಂತು. ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು ಹಾಗೂ ಆಡಳಿತಾಧಿಕಾರಿಗಳ ಮೇಲೆ ಪ್ರಭಾವ ಬೀರಲು, ಹಾಗೂ ತಮ್ಮ ಸಿದ್ಧಾಂತವನ್ನು ಅವರ ಮೂಲಕ ಪ್ರಚಾರ ಪಡಿಸಲು ಯಹೂದಿಗಳು ರಹಸ್ಯವಾಗಿ ರಚಿಸಿದ ಅಂತರಾಷ್ಟ್ರೀಯ ಸಂಘಟನೆ ಮಸೋನಿಸಂ.
ಬ್ರಿಟನ್‌ನ ಮಸೋನಿಸಂನ್ನು ಎನ್‌ಸೈಕ್ಲೊಪೀಡಿಯಾ ಪರಿಚಯ ಪಡಿಸಿದ್ದು ಹೀಗೆ
The Largest world wide seer eat Society
ಈ ಸಂಘಟನೆಯ ಮುಸ್ಲಿಂ ಮುಖಗಳಾಗಿದ್ದರು ಅಫ್ಫಾನಿ, ಅಬ್ದು ಮತ್ತು ರಿಳಾ. ಮುಸ್ಲಿಮರೆಡೆಯಲ್ಲಿ ಯಹೂದಿ ಆಶಯ, ಅಜೆಂಡವನ್ನು ಜಾರಿಗೊಳಿಸಿದ ಕುಖ್ಯಾತಿ ಈ ಮೂವರಿಗಿದೆ.
ಮೊಸೋನಿಸಂನ ಜ್ಞಾನಕೋಶ ಹೇಳುವುದು ನೋಡಿ *ಬೈರೂತ್‌ನ ಮುಗೋನಿಸ್ಟ್ ನಾಯಕ ರಿಳಾ ಅಬ್ದುರ್ರಶೀದ್, ಈಜಿಪ್ತ್‌ನ ಮುಸೋನಿಸ್ಟ್ ನಾಯಕ ಜಮಾಲುದ್ದೀನ್ ಅಫ್ವಾನಿಯಾಗಿದ್ದರು. ಅಲ್ಲಿ ಮಸೋನಿಸಂ ಸದಸ್ಯರಲ್ಲಿ ಹೆಚ್ಚಿನವರು ಅಘ್ವಾನಿಯ್ಯ ಬೆಂಬಲಿಗರು ಮತ್ತು, ಶಿಷ್ಯರಾಗಿದ್ದರು. ಆಡಳಿತ ರಂಗದ ಪ್ರಮುಖರು ಅದರಲ್ಲಿದ್ದರು. ನಂತರ ಅದಕ್ಕೆ ನೇತೃತ್ವ ನೀಡಿದ್ದು ಉಸ್ತಾದ್ ಮುಹಮ್ಮದ್ ಅಬ್ದು. ಅವರ ಉನ್ನತ ಮುಸೋವಿಸ್ಟ್ ಲೀಡರಾಗಿದ್ದರು. (ದಾಇರತ್ತುಲ್ ಮುಆರಿಫೀನ್ ಮಾಸೂನಿಯ್ಯ 197)*
*ಸುಲಭವಾಗಿ ಹೇಳಬೇಕಾದರೆ ಇಂಡ್ಯಾದ ಸಂಘಪರಿವಾರದ ಮುಸ್ಲಿಂ ಮುಖವಾಗಿ MRM ಇದ್ದಂತೆ, ಮಸೋನಿಸಂನ ಮುಸ್ಲಿಂ ಮುಖವಾಗಿ ಅಫ್ಫಾನ್, ರಿಳಾ, ಅಬ್ದು ಕಾರ್ಯಚರಿಸಿದರು*.
ಸಲಫಿ ಮುಖಂಡ ,ಸಲಫಿ ಉಲಮಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ M I ಮುಹಮ್ಮದಾಲಿ ಸುಲ್ಲಮೀ ಬರೆದ ಗಲ್ಫ್ ಸಲಫಿಸಂ - ಮುಜಾಹಿದ್ ಪ್ರಸ್ಥಾನಂ ಎಂಬ ಕೃತಿಯಲ್ಲಿ ಕುತೂಹಲಕಾರಿ ಮಾಹಿತಿಗಳಿವೆ.
*ಐರೋಪ್ಯ ಶಕ್ತಿಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಮುಸ್ಲಿಮರ ಮೇಲೆ ಹೇರಳು ನಿರಂತರ ಪ್ರಯತ್ನಿಸುತ್ತಿದ್ದವು.ಆದರೆ ಅದು ಸಾಧ್ಯವಾಗಿಲ್ಲ.ಉಲಮಾಗಳ ಶಕ್ತಿಶಾಲಿ ನೇತೃತ್ವ ಇದಕ್ಕೆ ಅಡ್ಡಿಯಾಗಿತ್ತು.ಇದನ್ನು ಮನಗಂಡ ಪಾಶ್ಚಾತ್ಯ ಶಕ್ತಿಗಳು ಮುಸ್ಲಿಂ ಮುಖಂಡರನ್ನೇ ಇದಕ್ಕಾಗಿ ಉಪಯೋಗಿಸಲು ನಿರ್ಧರಿಸಿತು.ಆಗ ಅವರಿಗೆ ಸಿಕ್ಕಿದ ಮುಖಂಡನೇ ಜಮಾಲುದ್ದೀನ್ ಅಫ್ಘಾನಿ*.
ಐರೋಪ್ಯ ಶಕ್ತಿಗಳ ನೀಚ ಅಜೆಂಡವನ್ನು ಜಾರಿಗೊಳಿಸಲು ಅವರ ಕೈಗೊಂಬೆಯಾಗಿ ವರ್ತಿಸಿದ ಅಫ್ಘಾನಿ ,ಅದಕ್ಕಾಗಿ ಖುರ್‌ಆನ್, ಹದೀಸ್‌ಗಳ ದುರ್ವ್ಯಾಖ್ಯಾನ ಮಾಡಿದರು.ಇಮಾಮ್‌ಗಳನ್ನು ತಿರಸ್ಕರಿಸಿದರು. ಸ್ವಹಾಬಿಗಳ ಬಗ್ಗೆ ಗೊಂದಲ ಮೂಡಿಸಿದರು.ಸಂಶೋಧನೆಯ ನೆಪದಲ್ಲಿ ಇಸ್ಲಾಮಿನ ನೈಜ ಪಥವನ್ನು ಬದಲಾಯಿಸಿದರು.ಸುಂದರ ಸಂಪ್ರದಾಯವನ್ನು ತಳ್ಳಿ ಹಾಕಿದರು.ಹೊಸ ಇಸ್ಲಾಮನ್ನು ಪರಿಚಯಿಸಿದರು.
ಇದರಿಂದ ಈ ಸಮಾಜ ಅನುಭವಿಸಿದ ನಷ್ಟ ಹೇಳತೀರದು.ಅಂದಿನ ದುರಂತದ ಫಲ ಇಂದೂ ಅನುಭವಿಸುತ್ತಿದೆ.
ಆದ್ದರಿಂದಲೇ ಗಲ್ಫ್ ಸಲಫಿಸಂಗೂ ಇತರೆಡೆಯಲ್ಲಿರುವ ಸಲಫಿಗಳಿಗೂ ಅನೇಕ ವ್ಯತ್ಯಾಸಗಳಿವೆ. ಉದಾಹರಣೆ ಕೇರಳ ಸಲಫಿಗಳನ್ನೇ ನೋಡಿರಿ. ಅವರ ಹದೀಸ್ ನಿಷೇಧದ ಪರಿಣಾಮವಾಗಿ ಇಸ್ಲಾಮನ್ನೇ ಅವಹೇಳನ ಮಾಡುವ ಮುಸ್ಲಿಂ ಸಂಘಗಳು ಕೇರಳದಲ್ಲಿ ಹುಟ್ಟಿಕೊಂಡವು. ಚೇಗನ್ನೂರಿಸಂ (ಅಹ್ಮದಿಯ ಜಮಾಅತ್) ನಾಸಿಕ ವಾದ (ಜಾಮಿದಾ ಟೀಚರ್) ಖಾದಿಯಾನಿಗಳು. ಇದರಲ್ಲಿರುವ ಹೆಚ್ಚಿನವರು ಒಂದಲ್ಲ ಒಂದು ಕಾಲದ ಸಲಫಿ ಸಿದ್ಧಾಂತದ ಪ್ರಚಾರಕರಾಗಿದ್ದರು. ಇಷ್ಟು ಮಾತ್ರವಲ್ಲ ಹದೀಸ್ ನಿಷೇಧದ ಫಲವಾಗಿ ಕೇರಳದಲ್ಲಿ ಸಲಫಿಗಳೇ 8 - 10 ಗ್ರೂಪ್‌ಗಳಾಗಿ ವಿಭಜಿಸಿದ್ದಾರೆ.
ಇನ್ನೊಂದು ಘಟನೆ ನೋಡಿ.
ಸೋವಿಯತ್ ರಷ್ಯಾದ ವಿರುದ್ಧ ಅಫಘಾನ್ ಮುಸ್ಲಿಮರು ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ ಇತ್ತ ಅಮೇರಿಕವು ತನ್ನ ರಾಜಕೀಯ ಉದ್ದೇಶಕ್ಕಾಗಿ ವಹಾಬಿಗಳನ್ನು ಬಳಸಿಕೊಂಡಿತು . ಸೌದಿ ವಹಾಬಿ ಪಾಠ ಶಾಲೆಯಿಂದ ಹೊರಬಂದ ಉಸಾಮ ಬಿನ್ ಲಾಡೆನ್ ನೇರವಾಗಿ ಅಫಘಾನ್‌ಗೆ ಹೋದದ್ದು, ಅಲ್ಲಿ ತಾಳಿಬಾನ್ ಸ್ಥಾಪಿಸಿದ್ದು. ಇದೇ ಹಿನ್ನಲೆಯಲ್ಲಿ. ವಹಾಬಿಸಂನ ಹೊಸ ರೂಪವಾಗಿತ್ತು ತಾಳಿಬಾನ್.
ಶಾಂತಿ, ಸಹೋದರತೆ, ಸಾಮರಸ್ಯದಿಂದ ಜೀವಿಸುತ್ತಿದ್ದ ಹಾಗೂ ಇಸ್ಲಾಮಿನ ಸುಂದರ ಮುಖವಾದ ಸೂಫಿಸಂನ್ನು ಟೀಕಿಸುತ್ತಾ, ಔಲಿಯಾಗಳನ್ನು ವಿಮರ್ಶಿಸುತ್ತಾ, ಮಖ್‌ಬರಗಳನ್ನು ಧ್ವಂಸಗೊಳಿಸುತ್ತಾ, ಇಸ್ಲಾಮಿನ ಪರಂಪರೆ ಬಿಂಬಿಸುವ ಸ್ಮಾರಕಗಳ ಮೇಲೆ ಕರಸೇವೆ ಮಾಡುತ್ತಾ ತಾಳಿಬಾನ್‌ನ ರಥಯಾತ್ರೆ ಆರಂಭವಾಯಿತು. ತಾಲಿಬಾನಿನ ಅಂದಿನ ದಮನ ಕಾರ್ಯಚರಣೆಗೆ ಅಮೇರಿಕ ಪರೋಕ್ಷ ಬೆಂಬಲ ನೀಡಿತು.
ತಾಲಿಬಾನ್, ಅಲ್‌ಖಾಯಿದಾ, ಐಸಿಸ್, ಲಷ್ಕರ್‌ಗಳೆಲ್ಲ ತಮ್ಮ ಸಿದ್ಧಾಂತವನ್ನು ರಚಿಸಿದ್ದು ವಹಾಬಿಸಂನಿಂದ. ಪರಂಪರಾಗತ ಇಸ್ಲಾಮೀ ಆದರ್ಶವನ್ನು ಧಿಕ್ಕರಿಸಿ ನವ ಚಿಂತನೆಯ ಮೂಲಕ ಉಗ್ರವಾದಿತ್ವವನ್ನು ಪಸರಿಸಿದ್ದು ವಹಾಬಿಸಂನ ಸಾಧನೆ. ಭೀಕರ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರಲು ಕೇರಳದಿಂದ ಹೋದದ್ದು ಸಲಫಿ ಕಾರ್ಯಕರ್ತರು. ವಹಾಬಿಸಂ ಮತ್ತು ಐಸಿಸ್‌ನ ಕಾರ್ಯಶೈಲಿಗಳು ಒಂದೇ ಆಗಿತ್ತು.
ಸಲಫಿಸಂ - ವಹಾಬಿಸಂ ಅಪಾಯದ ಬಗ್ಗೆ ಮುಸ್ಲಿಮರು ಜಾಗೃತರಾಗದಿದ್ದರೆ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ
No comments:
Post a Comment