Saturday, January 6, 2018

ಪುತ್ತೂರು SYS ಮತ್ತು ದ‌ಅವಾ ವಿಂಗ್ ಪುತ್ತೂರು ವತಿಯಿಂದ ಕರ್ನಾಟಕ ಯಾತ್ರೆಯನ್ನು ನೆನಪಿಸುವಂತಹ ಆಕರ್ಷನೀಯ,ಹಾಗೂ ನೂರಾರು ಶುಭ್ರ ವಸ್ತ್ರಧಾರಿಗಳಾದ ಎಸ್ಸೆಸ್ಸೆಫ್ ಕಾರ್ಯಕರ್ತರ ಮನಮೋಹಕ ಪಥಸಂಚಲನ ವಿವಿಧ ಕೇಂದ್ರಗಳಲ್ಲಿ ನಡೆಯುವಾಗ ಸುಮಾರು
*3 ಸಾವಿರ ಕರಪತ್ರ ಗಳನ್ನು* ಹಂಚಲಾಯಿತು!
ಅದರ ಸಂಕ್ಷಿಪ್ತ👇


*ನಿಮಗನಿಸಬಹುದು ಯಾಕಾಗಿ ಈ ಪ್ರಚಾರ!? ಅದೂ ಇನ್ನೊಂದು ರಾಜ್ಯವಾದ ಕೇರಳದಲ್ಲಿರುವ 'ಮರ್ಕಝ್' ಎಂಬ ಸಂಸ್ಥೆಯ ಬಗ್ಗೆ ನಮ್ಮ ಊರಲ್ಲಿ ಯಾಕೆ ಈ ರೀತಿಯ ಅಬ್ಬರದ ಪ್ರಚಾರ? ಮನುಷ್ಯ ಸಹಜವಾದ ಸಂಶಯ ನಿಮಗೆ ಮೂಡಿದ್ದೇ ಆದಲ್ಲಿ ಅದು ನಿಮ್ಮ ತಪ್ಪಲ್ಲ. ಆದರೆ  ನಿಮ್ಮ ಸಂಶಯಗಳನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನಾದರೂ ನಾವು ಮಾಡಿಲ್ಲ ಅಂದ್ರೆ ಅದು ನಮ್ಮ ತಪ್ಪು. ಹಾಗಾಗಿ ಹ್ರಸ್ವ ಅವಲೋಕನ ಇಲ್ಲಿ ನೀಡುತ್ತಿದ್ದೇವೆ....👉*

*👉ಹುಟ್ಟು ಚಿಂತನೆ*
'ಕನಸು ಕಾಣಿರಿ' ಎಂದು ಸದಾ ಹೇಳುತ್ತಲಿದ್ದ ಎಪಿಜೆ ಅಬ್ದುಲ್ ಕಲಾಂರವರ ರಾಜ್ಯ ತಮಿಳು ನಾಡಿನಲ್ಲಿ ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಎಂಬ ವಿದ್ಯಾರ್ಥಿ ಕಲಿಯುತ್ತಿರುವಾಗಲೇ ಕನಸು ಕಾಣಲು ಆರಂಭಿಸಿದ್ದರು!
'ತನ್ನ ರಾಜ್ಯದಲ್ಲಿಯೂ ಸಮನ್ವಯ ಶಿಕ್ಷಣ ನೀಡುವ ಮಹಾ ವಿದ್ಯಾಲಯವೊಂದನ್ನು ತೆರೆಯಬೇಕು'
ಆದರೆ ಕನಸನ್ನು ನನಸು ಮಾಡುವ ಮಾತುಕತೆ ನಡೆದದ್ದು ಮಾತ್ರ ಇತ್ತ ಮಂಗಳೂರಿನಲ್ಲಿ!
ಅಂದ್ರೆ 1954 ರಲ್ಲಿ ರೂಪೀಕ್ರತಗೊಂಡ SYS ಒಕ್ಕೂಟಕ್ಕೆ ದಾರ್ಶನಿಕ ವಿದ್ವಾಂಸ,ಇ ಕೆ ಹಸನ್ ಮುಸ್ಲಿಯಾರ್ ಮತ್ತು ಪಾದರಸ ಚುರುಕಿನ ಮಹಾ ವ್ಯಕ್ತಿತ್ವ ಕಾಂತಪುರಂ ಉಸ್ತಾದ್ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳಾಗಿ ಸಂಘಟನೆಯನ್ನು ಅತೀ ಶೀಘ್ರವಾಗಿ ಮುನ್ನೆಡಸುತ್ತಿರುವ ಭಾಗವಾಗಿ ಮಂಗಳೂರು ಪ್ರಯಾಣ ನಡೆಸಿ ಹಿಂತಿರುಗುವಾಗ ಸಹಚರರೊಂದಿಗೆ ತನ್ನ ಕನಸಿನ ಕೂಸಾದ 'ವ್ಯವಸ್ಥಿತ ಮಹಾ ವಿದ್ಯಾಕೇಂದ್ರದ' ಕುರಿತು ಪ್ರಸ್ತಾಪ ಇಟ್ಟರು.
ಮುಸ್ಲಿಂ ಸಮಾಜದ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಮತ್ತು ಇ ಕೆ ಹಸನ್ ಮುಸ್ಲಿಯಾರ್ ಜತೆಗಿದ್ದರು.ಈ ಇಬ್ಬರು ನಾಯಕರಿಗೂ ಇಂತಹದ್ದೊಂದು ಆಶಯ ತುಂಬಾ ಹಿಡಿಸಿತು.ಪ್ರಯಾಣದುದ್ದಕ್ಕೂ ಈ ಕುರಿತು ತೀವ್ರ ಚಿಂತನೆ ನಡೆಯಿತಲ್ಲದೆ ಮುಂದಿನ
ಎಸ್ ವೈ ಎಸ್ ಸಭೆಯ ಮುಖ್ಯ ಅಜೆಂಡಾ ಕೂಡ ಇದಾಯಿತು.ಸೇರಿದವರೆಲ್ಲರ ಮನದಲ್ಲಿಯೂ ಇಂತಹದೊಂದು ಕನಸು ಬಿರಿಯತೊಡಗಿತು.
ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಎಂಬ
ವಿಧ್ಯಾರ್ಥಿಯ ಕನಸು ಹುಟ್ಟು ಪಡೆಯುತ್ತದೆಯೆಂಬುದು ಬಹುತೇಕ ಖಾತರಿಯಾಯಿತು.

*ಅನುಗ್ರಹೀತರಿಂದ ಶಿಲಾನ್ಯಾಸ*

ಅಂದು ಮಕ್ಕಾ ಹರಂ ಮಸೀದಿಯಲ್ಲಿ ದರ್ಸ್ ನಡೆಸುತ್ತಿದ್ದ ಒಬ್ಬ ಮಹಾ ವಿದ್ವಾಂಸರೊಬ್ಬರಿದ್ದರು.ಹೆಸರು *ಅಸ್ಸಯ್ಯದ್ ಅಲವೀ ಮಾಲಿಕೀ.*
ಇವರು ಎಂತಹ ಮಹಾನೆರೆಂದರೆ ಪುಣ್ಯ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅನುಮತಿ ನೀಡಿದರೆ ಮಾತ್ರ ಮಕ್ಕಾ ಬಿಟ್ಟು ಹೊರನಾಡಿಗೆ ಯಾತ್ರೆ ಹೋಗುವರು.ಹಾಗಾಗಿಯೇ ಅದೆಷ್ಟೋ ಬಾರಿ ಎಪಿ ಉಸ್ತಾದ್ ಇವರನ್ನು ಕೇರಳಕ್ಕೆ ಆಹ್ವಾನಿಸಿದ್ದುಂಟು.ಆಗೆಲ್ಲಾ ಅನುಮತಿ ಸಿಗಲಿಲ್ಲ ಎಂದೇ ಹೇಳುತ್ತಿದ್ದರು.
ಕೊನೆಗೆ ಆ ಶುಭ ಸುದ್ದಿಯೂ ಸಿಕ್ಕಿತು.
*"ಭಾರತಕ್ಕೆ ಹೋಗಲು ಹಬೀಬ್ ಅನುಮತಿ ನೀಡಿದ್ದಾರೆ"*
ಎಪಿ ಉಸ್ತಾದರ ಸಹಿತ ಸುನ್ನೀ ಸಮೂಹಕ್ಕೆ ಸಂತೋಷದ ನಿಮಿಷಗಳು....
ಆದರೆ ಅಲ್ಲೊಂದು ಹೊಸ ಸಮಸ್ಯೆ ಉದ್ಬವವಾಯಿತು.ಮುಂಬೈ ತಲುಪಿದ ಅಲವಿ ಮಾಲಿಕಿ ತಂಙಳ್ ರವರನ್ನು ಕೇರಳಕ್ಕೆ ಕರೆತರಲು ಟಿಕೆಟ್ ಲಭ್ಯವಿಲ್ಲ!
ಮುಂಬೈಯಿಂದಲೇ ಮರಳಿ ಮಕ್ಕಾಗೆ ಹೋಗಬೇಕಾದ ಸ್ಥಿತಿ ಸಂಜಾತವಾಯಿತು.
ಕೈಗೆ ಬಂದ ತುತ್ತು ಬಾಯಿಗಿಲ್ಲಂಬಂತಾಯಿತು!
ವಿಷಯ ತಿಳಿದು ಎಪಿ ಉಸ್ತಾದ್ ಸಹಿತ ನಾಯಕರಿಗೆಲ್ಲರಿಗೂ ಅತ್ಯಂತ ಬೇಸರವಾಯಿತು.
ಹೇಗಾದರೂ ಮಾಡಿ ಪುಣ್ಯ ಪುರುಷನನ್ನು ಕೇರಳಕ್ಕೆ ತಂದು ಪಾವನ ಸ್ಪರ್ಶದಿಂದ ಸಮುದಾಯದ ಮಹಾ ವಿದ್ಯಾಲಯಕ್ಕೆ ಶಿಲಾನ್ಯಾಸ ಗೆಯ್ಯಿಸಲೇ ಬೇಕೆಂಬ ಅದಮ್ಯ ಹಂಬಲದಿಂದ ಎಪಿ ಉಸ್ತಾದ್ ಕಾರ್ಯಪ್ರವರ್ತರಾದರು.ಎಲ್ಲಾ ಬಾಗಿಲುಗಳನ್ನು ಬಡಿದರು ಫಲ ಶೂನ್ಯವಾಗಿತ್ತು.
ಕೊನೆಗೆ ತನ್ನ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಅಸ್ಸಯ್ಯದ್ ಅವೇಲತ್ ಅಬ್ದುಲ್ ಖಾದರ್ ತಂಙಳ್ ರವರ ಬಳಿ ‌ಹೋಗಿ ಅಹವಾಲು ಹೇಳಿದಾಗ ತಂಙಳ್ ರವರು ಹೇಳಿದರು;
*"ನಮಗೆ ಮುಂಬೈಗೆ ಹೋಗೋಣ.ಮಾಲಿಕಿಯವರನ್ನು ಮುಖತಃ ಕಂಡು ಕರೆದುಕೊಂಡು ಬರೋಣ"*
ಅವೇಲತ್ ತಂಙಳ್ ರವರ ಮಾತು ಕೇಳಿ ಕಾಂತಪುರಂ ಉಸ್ತಾದ್ ಗೆ ಆಶ್ಚರ್ಯ!
"ಅವರಿಬ್ಬರಿಗೆ ಟಿಕೆಟ್ ಸಿಗದಿರುವಾಗ ನಾವು ಸೇರಿ ನಾಲ್ವರಿಗೆ ಹೇಗೆ ಸಿಗುತ್ತದೆ? ನಾಲ್ವರೂ ಕೂಡಾ ಅಲ್ಲಿ ಹೋಗಿ ಬಾಕಿಯಾದರೆ ಇಲ್ಲಿ SYS ಸಮ್ಮೇಳನ ಮತ್ತು ಶಿಲಾನ್ಯಾಸ ಯಾರು ನಡೆಸುವುದು..?"

ಸಯ್ಯಿದರು ಒಂದಿಷ್ಟು ಅಳುಕದೆ,ಅಂಜದೆ ಅಲ್ಲಾಹನಲ್ಲಿ ಭಾರವರ್ಪಿಸಿ ಧೈರ್ಯವಾಗಿಯೇ,
"ಹಾಗೇನು ಆಗದು,ಎಲ್ಲರಿಗೂ ಟಿಕೆಟ್ ಸಿಗುತ್ತದೆ" ಗಂಭೀರವಾಗಿಯೇ ಹೇಳಿದರು.
ಮರ್ಹೂಮ್ ಬೀರಾನ್ ಕುಟ್ಟಿ ಹಾಜಿಯವರ ಕಾರಿನಲ್ಲಿ ಬೆಂಗಳೂರು ಹೋಗಿ ಅಲ್ಲಿಂದ ಮುಂಬಯಿಯ ಹೋಟೆಲ್ ತಾಜ್ಮಹಲ್ ನಲ್ಲಿ ತಂಗಿದ್ದ ಸಯ್ಯದ್ ಮಾಲಿಕಿಯವರನ್ನು ಕಂಡು ಕೇರಳಕ್ಕಿರುವ ಪ್ರಯಾಣದ ವ್ಯವಸ್ಥೆ ರೆಡಿಯಾಗುತ್ತಿದೆಯೆಂದು ಭರವಸೆ ಕೊಟ್ಟರು.
ಎಪಿ ಉಸ್ತಾದರ ಮನಸ್ಸು ಮಾತ್ರ ದುಖಿಸುತ್ತಿತ್ತು.
ಟಿಕೆಟ್ ಸಿಗಬಹುದೇ ಎಂಬ ಆತಂಕ.
ವಿಮಾನ ನಿಲ್ದಾಣದಲ್ಲಿ ವಿಚಾರಣೆ ಮಾಡಿದಾಗ ಒಂದು ಶುಭ ಸುದ್ದಿ ಸಿಕ್ಕಿತು.
ಫ್ಯಾಮಿಲಿಯೊಂದರ ಟಿಕೆಟ್ ಕ್ಯಾನ್ಸಲ್ ಆಗಿದೆ.ಆದರೆ ಟಿಕೆಟ್ ಮಂಗಳೂರು ತನಕ ಮಾತ್ರ!
ಮತ್ತೆ ತಿರುಗಿ ನೋಡಲಿಲ್ಲ ನಾಲ್ಕು ಟಿಕೆಟ್ ಬುಕ್ ಮಾಡಿ ಮಂಗಳೂರು ತನಕ ಬಂದು ಅಲ್ಲಿಂದ ಕಾರಿನಲ್ಲಿ ಕ್ಯಾಲಿಕೆಟ್ ಗೆ ಕರೆತರಲಾಯಿತು.
ಅಹ್ದಲ್ ತಂಙಳ್ ರವರ ಎದೆಗಾರಿಕೆಯಿಂದಾಗಿ ಕನಸು ನನಸಾಯಿತು.ಎಪಿ ಉಸ್ತಾದ್ ದೀರ್ಘ ನಿಟ್ಟುಸಿರು ಬಿಟ್ಟರು.
*1978 ಎಪ್ರಿಲ್ 18 ಆದಿತ್ಯವಾರ ಮಹಾನರಾದ ಸಂಶುಲ್ ಉಲಮಾ ಇ ಕೆ ಉಸ್ತಾದ್, ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್, ತಾಜುಲ್ ಉಲಮಾ ಉಳ್ಳಾಲ ತಂಙಳ್, ಅವೇಲತ್ ತಂಙಳ್ ಸೇರಿದಂತೆ ಹಲವಾರು ಮಹಾತ್ಮರ ಸನ್ನಿಧಿಯಲ್ಲಿ 'ಮರ್ಕಝ್' ಎಂಬ ಶೈಕ್ಷಣಿಕ ಮಹಾವಿದ್ಯಾಲಯಕ್ಕೆ ಸಯ್ಯದ್ ಅಲವೀ ತಂಙಳ್ ಶಿಲಾನ್ಯಾಸಗೈದರು.*

ಪ್ರತಿಯೊಂದು ಯೋಜನೆಗಳ ಯಶಸ್ಸಿನ ಹಿಂದೆ ಆರ್ಥಿಕ ವ್ಯವಸ್ಥೆಯೂ ಪ್ರಮುಖ ಅಂಶವಾಗಿರುತ್ತದೆ.ಇದೀಗ ಕನಸು ಹುಟ್ಟು ಪಡೆದಿದೆ.ಅನಾಥ,ನಿರ್ಗತಿಕ, ಹಾಗೂ ಸಮಾಜದಲ್ಲಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರೆ ಸಣ್ಣ ವಿಚಾರವಲ್ಲ.
ಇಂದು ನೀವು ಮಹಾನರಾದ ಎಪಿ ಉಸ್ತಾದ್, ದಾನಿಗಳು ನೀಡಿದ ಕಾರಿನಲ್ಲಿ ಸಂಚರಿಸುತ್ತಿರುವುದು ಕಾಣಬಹುದು.ಆದರೆ ಬರೀ ಶೂನ್ಯದಿಂದ ಮರ್ಕಝನ್ನು ಪ್ರಾರಂಭಿಸಿ,ಅದನ್ನು ಜಗತ್ತಿನ ಶ್ರೇಷ್ಠ ವೈಜ್ಞಾನಿಕ ವಿದ್ಯಾಲಯವಾಗಿ ಪರಿವರ್ತಿಸಿದ‌ ಆ ಜನನಾಯಕ ಹರಕೆ ಡಬ್ಬಿಯೊಂದಿಗೆ ನಾಡು ಸುತ್ತುತ್ತಿದ್ದರು!
ಬಸ್ಸು ರಿಕ್ಷಾಗಳಲ್ಲಿ ಓಡಾಡುತ್ತಿದ್ದರು.ಕೆಲವೊಮ್ಮೆ ಕಿಲೋಮೀಟರ್ ತನಕ ಬರಿಗಾಲಲ್ಲೇ ನಡೆದು ಹೋಗುತ್ತಿದ್ದರು.ಎಲ್ಲವೂ ಮರ್ಕಝ್ ನ ಬೆಳವಣಿಗಾಗಿ.
ತಾನು ಕಂಡ ಕನಸಿನ ಸಾಕ್ಷಾತ್ಕಾರಕ್ಕಾಗಿ....

ಇಸವಿ 1978. ಇದೀಗ 25 ಅನಾಥ ವಿದ್ಯಾರ್ಥಿಗಳೊಂದಿಗೆ ಮರ್ಕಝ್ ಎಂಬ ಕನಸಿಗೆ ಚಾಲನೆ ದೊರಕಿದೆ.

*ಎಪಿ ಉಸ್ತಾದ್ ಹೊಸತನದ ಹರಿಕಾರ*

ವಿಶೇಷವೇನೆಂದರೆ ಯಾವುದೇ ಮಾದರಿ ಇಲ್ಲದೆ ಶಿಕ್ಷಣ ಕ್ರಾಂತಿಯ ದಿಟ್ಟದೆಯ ಪ್ರಥಮ
ಹೆಜ್ಜೆಯಾಗಿತ್ತು ಯತೀಂ ಖಾನ.
ನಂತರದ್ದು ಇತಿಹಾಸ.
ಕಾರಂದೂರಿನ ಪಡಯಾಳಿ ಪರಂಬಿನಲ್ಲಿ ಅನಾಥಾಲಯವೊಂದನ್ನು ಆರಂಭಿಸುವುದರೊಂದಿಗೆ ಮರ್ಕಝ್
ಜಾಗತಿಕ ಮುಸಲ್ಮಾನರ ವೈಜ್ಞಾನಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ನಾಲ್ಕು ದಶಕಗಳ ಯಶೋಗಾಥೆ ಹಾಡುತ್ತಾ ಮರ್ಕಝ್ ವಿಶ್ವ ಭೂಪಟಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಮುಖ ಮುದ್ರೆಯಾಗಿ ತಲೆ ಎತ್ತಿ ನಿಂತಿದೆ.
ರಾಜ್ಯದ,ರಾಷ್ಟ್ರದ ಗಡಿಮೀರಿ,ಕಡಲಾಚೆಗಿನವರೆಯ ಗಡಿದಾಟಿ,ಜಗತ್ತಿನಾದ್ಯಂತ ಮರ್ಕಝಿನ ಸಾರ್ಥಕ ಸಾದನೆಗಳನ್ನು ವಿಸ್ತರಿಸುವಲ್ಲಿ ಮರ್ಕಝ್ ಶಿಲ್ಪಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅನುಭವಿಸಿದ ತ್ಯಾಗೋಜ್ವಲ ನೆನಪುಳನ್ನು ಪೂರ್ಣವಾಗಿ ಅಕ್ಷರ ರೂಪಕ್ಕಿಳಿಸಲು ಸಾದ್ಯವಿಲ್ಲ.
ಇದೀಗ ಮರ್ಕಝ್
ಏಷ್ಯಾದಲ್ಲೇ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಮುಚ್ಚಯವಾಗಿ ಪ್ರಸಿದ್ಧಿ ಹೊಂದಿದ್ದು,ನಾಲ್ಕು ದಶಕಗಳಿಂದ ಬಡ ಶೋಷಿತ,ಮರ್ಧಿತ‌ ಅನಾಥ,ನಿರ್ಗತಿಕರ ಪೋಷಣೆಯ ಹೊಣೆ ಹೊತ್ತು ಅವರನ್ನು ನಾಡಿಗೆ ಸಮರ್ಪಿಸುತ್ತಾ ಇದೆ.

👉ಇಂದು ಕರ್ನಾಟಕ ಕೇರಳದಾದ್ಯಂತ ಸಮನ್ವಯ ಶಿಕ್ಷಣ ಕೇಂದ್ರಗಳು ತಲೆ ಎತ್ತಿ ನಿಂತಿದ್ದರೆ ಅವುಗಳಿಗೆಲ್ಲಾ ಮಾದರಿ ಮರ್ಕಝ್ ಆಗಿತ್ತು.ದಾರಿ ತೋರಿಸಿದ್ದು ಮರ್ಕಝ್ ಆಗಿತ್ತು.
👉ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ವಂತವಾಗಿ ಸಂಸ್ಥೆ ಆರಂಭಿಸಿ ಮಾದರಿ ತೋರಿಸಿದ್ದು ಮರ್ಕಝ್ ಆಗಿದೆ.
ನಮ್ಮ ಪುತ್ತೂರು ಭಾಗದಲ್ಲಿ ಮರ್ಕಝ್ ಮೊತ್ತ ಮೊದಲ ಬಾರಿಗೆ Womens ಕಾಲೇಜು ತೆರೆದು ಇಪ್ಪತ್ತು ವರ್ಷವಾಗುತ್ತಾ ಬಂತು. ಅದನ್ನು ಮಾದರಿಯಾಗಿಸಿ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಿಳಾ ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿ ಮುಂದುವರೆಯುತ್ತಿದೆ.
👉ಸುನ್ನೀಸಂ ಮಾತ್ರ ಸತ್ಯವೆಂದು ನಂಬಿ ಎದೆಯುಬ್ಬಿಸಿ ಸಧೈರ್ಯವಾಗಿ ಮುನ್ನೆಡೆಯುವಂತೆ ಪ್ರಚೋದನೆ ನೀಡಿದ್ದು ಮರ್ಕಝ್ ಆಗಿತ್ತು.
👉ವ್ರತ್ತಿಪರರನ್ನು ಇಂಗ್ಲಿಷ್ ಭಾಷೆ, ವ್ಯಕ್ತಿತ್ವ ವಿಕಸನ ಮತ್ತು ನಿರ್ವಹಣೆ ಕೌಶಲ್ಯದಲ್ಲಿ ಸಮರ್ಥರನ್ನಾಗಿಸುವ IHRAM(Institution of Human Resource Activation & Management)
ಕೋರ್ಸ್ ನ ಅದ್ವಿತೀಯ ಮಾದರಿ ಮರ್ಕಝ್ ನಿಂದ ಆರಂಭವಾಗಿತ್ತು.
👉ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಬಳಸುವ ತ್ಯಾಜ್ಯ ನೀರನ್ನು ಸಂಸ್ಕರಣೆಗೊಳಿಸಿ ಕ್ರಷಿಗೆ ಬಳಸುವ ಜಲ ಸಂಸ್ಕರಣಾ ಕೇಂದ್ರ ತೆರೆದು ಮಾದರಿಯಾಯಿತು.
👉ಒಂದೇ ಕ್ಯಾಂಪಸಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವೆರಡನ್ನು ನೀಡಿ ಮರ್ಕಝ್ ಮಾದರಿಯಾದಾಗ ಅದೊಂದು ದೊಡ್ಡ ಚಳುವಳಿಯಾಗಿ ಮಾರ್ಪಟ್ಟಿತು.
ಧಾರ್ಮಿಕ ಪದವಿಯೊಂದಿಗೆ ಯುನಿವರ್ಸಿಟಿಯ ಪದವಿಗಳನ್ನು ಪಡೆಯಲು,ಮುಂಡಾಸುಧಾರಿ ಮುಸ್ಲಿಯಾರ್ ಆಗಿಯೇ ನ್ಯಾಯಾಲಯದಲ್ಲಿ ವಾದಿಸಬಲ್ಲ ವಕೀಲನಾಗಲು ,ಮುಳ್ಳೂರುಕೆರೆ ಉಸ್ತಾದರಂತಹ ಸಖಾಫಿಗಳು ನ್ಯಾಯಮೂರ್ತಿಗಳಾಗಲು ಸಾಧ್ಯವಾಗಿರುವುದು ಮರ್ಕಝ್ ನ ಹಿರಿಮೆ ಅಲ್ಲದೆ ಮತ್ತಿನ್ನೇನು?
👉ಉಗ್ರವಾದದ ನೆಲೆ ಬೀಡಾಗಿ ಗುಂಡಿಸ ಶಬ್ಧದೊಂದಿಗೆ ಕಾಲ ಕಳೆಯುತ್ತಿದ್ದ ಕಾಶ್ಮೀರಿ ಕಂದಮ್ಮಗಳನ್ನು ಮರ್ಕಝ್ ಕ್ಯಾಂಪಸ್ ಗೆ ಕರೆತಂದು ಅವರಿಗೆ ಸೌಜನ್ಯ ಶಿಕ್ಷಣ ಹಾಗೂ ಸಕಲ ಸವಲತ್ತುಗಳನ್ನು 'ಕಾಶ್ಮೀರಿ ಭವನ' ದೊಳಗೆ ನೀಡಿ ಧರ್ಮ ಮತ್ತು ದೇಶದ ಪಾಠ ಕಲಿಸಿಕೊಟ್ಟು ಮಾದರಿಯಾದರು
👉10 ವರ್ಷಕ್ಕಿಂತ ಕೆಳಗಿನ ಅನಾಥ ಮಕ್ಕಳನ್ನು ಅವರವರ ತಾಯಿಯ ಮಡಲಲ್ಲಿ ಪೋಷಿಸಲು ಬೇಕಾದ ಸವಲತ್ತು ನೀಡಿ Orphan Home Care ಎಂಬ ವಿನೂತನ ಯೋಜನೆಗೆ ಕೈ ಹಾಕಿ ಯಶಸ್ವೀ ಮಾದರಿ ತೋರಿಸಿತು.
👉ದೇಶದ ಹೊರಗಿನ ಯೂನಿವರ್ಸಿಟಿಗಳ ಜೊತೆ ಸಂಭಂಧ ಬೆಳೆಸಿ ತತ್ಸಮಾನ ಪದವಿ ಮರ್ಕಝ್ ನಿಂದಲೇ ನೀಡುವಂತಹ ವಿಶೇಷ ಪದ್ದತಿಯನ್ನು ತೋರಿಸಿಕೊಟ್ಟು ಮಾದರಿಯಾಯಿತು.
👉ವೈದಕೀಯ ರಂಗದಲ್ಲಿ ಅತೀ ನೂತನ ಚೈತನ್ಯದೊಂದಿಗೆ ಮುಸ್ಲಿಂ ವೈದ್ಯಪದ್ದತಿ ಯೂನಾನಿ ಮೆಡಿಕಲ್ ಕಾಲೇಜು ಅರಂಭಿಸಿ ಮರ್ಕಝ್ ಕ್ರಾಂತಿ ಮಾಡಿತು.
👉ಮರ್ಕಝ್ ನ ಚಟುವಟಿಕೆಗಳು ಕೇವಲ ಕ್ಯಾಂಪಸ್ ಗೆ ಮಾತ್ರ ಸೀಮಿತವಲ್ಲ.ಅಗತ್ಯಕ್ಕೆ ತಕ್ಕಂತೆ ಬಾವಿ ತೋಡಿಸುವ ಮುಲಕ ಕುಡಿಯುವ ನೀರಿನ ಯೋಜನೆ,ನಿರ್ವಸಿತರಿಗೆ ವಸತಿ,ಬಡಹೆಣ್ಣು ಮಕ್ಕಳ ವಿವಾಹ ಯೋಜನೆ,ವೈದಕೀಯ ಸೇವೆ,ಹೀಗೆ ಶಿಕ್ಷಣ ದೊಂದಿಗೆ ಜನಪರ ಸಾಂತ್ವನ ಸೇವೆಗಳನ್ನು ಕೈಗೆತ್ತಿಕೊಂಡು ಮರ್ಕಝ್ ಮತ್ತು ಎಪಿ ಉಸ್ತಾದ್ ಸರ್ವರಿಗೂ ಮಾದರಿಯಾಗಿದ್ದಾರೆ.
👉ಮರ್ಕಝ್ ಕಾರುಣ್ಯ ಸೆವೆಗಳಲ್ಲಿ ಅಧ್ಬುತ ದಾಖಲೆ ಸ್ರಷ್ಟಿಸಿದೆ.
👉ದೇಶದ 13 ರಾಜ್ಯಗಳಲ್ಲಿರುವ 90ಲಕ್ಷ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
👉 2013ರ ಲೆಕ್ಕಾಚಾರ ಪ್ರಕಾರ ಸಾಂತ್ವನ ಚಟುವಟಿಕೆಗಳಿಗಾಗಿ ಮರ್ಕಝ್ ಖರ್ಚು ಮಾಡಿದ್ದು ಬರೋಬ್ಬರಿ *63.67 ಕೋಟಿ ರೂಪಾಯಿ!*
👉 *388 ಶುಧ್ಧ ಜಲಬಾವಿಗಳು*
(2017ರ ಹೊತ್ತಿಗೆ500ರ ಗಡಿ ದಾಟಿರಬಹುದು)
ಪ:ಬಂಗಾಳ್ -268,ಕರ್ನಾಟಕ54,ಅಸ್ಸಾಂ18,ದೆಹಲಿ12 ಇತರೆಡೆ36

👉 *282 ಪ್ರಾಥಮಿಕ ಕೇಂದ್ರಗಳು*
{ಪ:ಬಂಗಾಳ್-112 ಕರ್ನಾಟಕ-63 ಗುಜರಾತ್25 ಅಸ್ಸಾಂ-17 ಕಾಶ್ಮೀ-ರ13 ಉಳಿದೆಡೆ-52
👉 *32 ಉದ್ಯೋಗ ನಿಲಯ*
ಕರ್ನಾಟಕ13,ಪಶ್ಚಿಮ ಬಂಗಾಳ-9 ಕಾಶ್ಮೀರ-3 ಚೆನ್ನೈ-3 ಉಳಿದೆಡೆ -4
👉 *ಕಾಶ್ಮೀರದಲ್ಲಿ 15 ಹೈಸ್ಕೂಲುಗಳು*
👉 *ಗುಜರಾತಿನಲ್ಲಿ 3 ಹೈಸ್ಕೂಲ್*
👉 *50 ಸಾವಿರ ಜನರಿಗೆ ಶುಧ್ಧಜಲ ಲಭ್ಯ.*
👉 *ಒಂದು ಲಕ್ಷ ಜನರಿಗೆ ವಿಧ್ಯಾಭ್ಯಾಸ ವ್ಯವಸ್ಥೆ*
👉 *100 ಕ್ಕೂ ಮಿಕ್ಕ ನೌಕರಿ ಸಂಸ್ಥೆಗಳು*
👉 *10 ಲಕ್ಷ ಜನರಿಗೆ ಆಹಾರ ದಾನ*
👉 *36.39 ಕೋಟಿಗಳಲ್ಲಿ18 ಹಾಸ್ಪಿಟಲ್ ಗಳು ಮತ್ತು 2 ಕಾಲೇಜುಗಳು*
👉 *22.49 ಕೋಟಿಗಳಲ್ಲಿ 307 ಪ್ರಾಥಮಿಕ ವಿದ್ಯಾನಿಲಯಗಳು*
👉 *1.54 ಕೋಟಿಗಳಲ್ಲಿ 388 ಶುಧ್ಧ ಜಲ ನೀರಿನ ವ್ಯವಸ್ಥೆ.*
👉 *1.65 ಕೋಟಿ ಖರ್ಚು ಮಾಡಿ 1.10ಲಕ್ಷ ಆಹಾರ ಕಿಟ್ ವಿತರಣೆ*
👉 *2.6೦ ಕೋಟಿ ಖರ್ಚಿನಲ್ಲಿ82 ಉದ್ಯೋಗ ಸಂಸ್ಥೆ ಗಳು 4 ಮೆಡಿಕಲ್ ಡಿಸ್ಪೆನ್ಸರಿಗಳು*

*ಉತ್ತರ ಭಾರತಕ್ಕೆ ಹೆಚ್ಚಿನ ಸೇವೆಗಳು ಒದಗಿವೆ*
👉 *32 -ವ್ರತ್ತಿಪರ ಸೇವೆಗಳು*

*ರಾಜ್ಯಗಳಿಗೆ ಎಷ್ಟೆಷ್ಟು......❓❓*👇
👉 *ಜಮ್ಮು ಕಾಶ್ಮೀರ 26.76ಕೋಟಿ*
👉 *ಪಶ್ಚಿಮ ಬಂಗಾಳ 13.28 ಕೋಟಿ*
👉 *ಗುಜರಾತ್ ಗೆ 12.02ಕೋಟಿ*
👉 *ಕರ್ನಾಟಕಕ್ಕೆ 5.8 ಕೋಟಿ*
👉 *ಉತ್ತರಪ್ರದೇಶಕ್ಕೆ 1.47 ಕೋಟಿ*
👉  *ಅಸ್ಸಾಂ ಗೆ 40 ಕೋಟಿ*
👉 *ಉಳಿದ 7 ರಾಜ್ಯಗಳಿಗೆ 3.40 ಕೋಟಿ*
(ಇದಿಷ್ಟು 2013ರ ತನಕದ ಲೆಕ್ಕ 2018 ಹೊತ್ತಿಗೆ ಅದು ದುಪ್ಪಟ್ಟು ಆಗಿಬಹುದು ಸಂದೇಹವಿಲ್ಲ.)

*ಮರ್ಕಝ್ ಶಿಕ್ಷಣ ಸಮುಚ್ಚಯ ಒಂದೇ ನೋಟದಲ್ಲಿ👇*
👉 *ತುರ್ಕಿಯ್ಯಾ ಯತೀಂ ಖಾನ*
👉 *ಶರೀ‌ಅತ್ ಕಾಲೇಜು*
👉 *ಹಿಫ್ಳುಳ್ ಕುರ್ಆನ್ ಕಾಲೇಜು*
👉 *ಖಲ್ಫಾನ್ ಇಸ್ಲಾಮಿಕ್ ಸೆಂಟರ್ ಕೋಯಿಲಾಂಡಿ*
👉 *ಆರ್ಟ್ಸ್ ಕಾಲೇಜು ಕಾರಂದೂರು*
👉 *ನರ್ಸಿಂಗ್ ಕಾಲೇಜು ಕ‌ಊಕ‌ಅ*
👉 *ಮರ್ಕಝ್ ಗರ್ಲ್ಸ್ ಓರ್ಪನೇಜ್*
👉 *ಫಾತಿಮಾ ಹಯರ್ ಸೆಕಂಡರಿ ಸ್ಕೂಲ್ ಕುಂಬಾರ*
👉 *ಅಲ್ ಫಾರೂಖಿಯ್ಯಾ ಹೈಸ್ಕೂಲ್ ಕಾರಂದೂರು*
👉 *ಮರ್ಕಝ್ ಹೈಸ್ಕೂಲ್ ಕಾರಂದೂರು*
👉 *ಮರ್ಕಝ್ ಗರ್ಲ್ ಹೈಸ್ಕೂಲ್*
👉 *ಮರ್ಕಝ್ ಹ್ಯಾಂಡಿಕ್ರಾಪ್ಟ್*
👉 *ಮರ್ಕಝ್ ITI*
👉 *ಬನಾತ್ ಹೋಸ್ಟೆಲ್ RECJ*
👉 *ಬೋರ್ಡಿಂಗ್ ಮದರಸ*
👉 *ಮರ್ಕಝ್ ಸೀನಿಯರ್ ಸೆಕೆಂಡರಿ ಸ್ಕೂಲ್*
👉 *ಕಾಶ್ಮೀರೀ ಹೋಂ*
👉 *ಮರ್ಕಝ್ ಗ್ಲೋಬಲ್ ವಿಲೇಜ್ ಪೂನೂರು*
👉 *ಮರ್ಕಝ್ ಕಾಲೇಜ್ ಆಫ್ ಆರ್ಟ್ಸ್ & ಸಯನ್ಸ್ ಹಯರ್ ಸ್ಟಡೀಸ್*
👉 *ಮರ್ಕಝ್ ಇಂಟರ್ನ್ಯಾಷನಲ್ ಸ್ಕೂಲ್*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಕೊಯಿಲಾಂಡಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಕೈತಪ್ಪೋಯಿಲ್*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಬಾಲುಶ್ಶೇರಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಕೋಳಪ್ಪುರಂ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಐಕರಪ್ಪಡಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಅಕ್ಕಿಕಾವು*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಪಿಲಾಶ್ಶೇರಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಪೂನೂರು*
👉 *ಅಲ್ ಸಹರ್ ಕಿಡ್ಸ್ ಗಾರ್ಡನ್ ಪೂನೂರು*
👉 *ಮರ್ಕಝ್ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್ ದೇಶಸೇವ ಸ್ಕೂಲ್*
👉 *ಆಲಿಮಾ ಕೋರ್ಸ್ ಬನಾತ್*
👉 *ಮರ್ಕಝ್ ವಿಮನ್ಸ್ ಕಾಲೇಜು ವಯನಾಡ್*
👉 *ಮರ್ಕಝ್ ಡಿಸ್ಪೆನ್ಸರಿ*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ಮೈಸೂರು*
👉 *ಮರ್ಕಝ್ ಪಬ್ಲಿಕ್ ಸ್ಕೂಲ್ ದೆಹಲಿ*
👉 *ಮರ್ಕಝ್ ದ‌ಅವಾ ಕಾಲೇಜು ಬೆಂಗಳೂರು*
👉 *ಹೋಂ ಕೇರ್*
👉 *ಮರ್ಕಝ್ ಗರ್ಲ್ಸ್ ಓರ್ಪನೇಜ್ ಫಿಲಿಬಿತ್ ಯು ಪಿ*
👉 *ಇಹ್ರಾಂ(ಮ್ಯಾನಜಿಂಗ್ ಇನ್ಸಿಟ್ಯೂಟ್)*
👉 *ಪೂನೂರು ಹಾಸ್ಪಿಟಲ್*
👉  *ಇಸ್ಲಾಮಿಕ್ ರಿಸರ್ಚ್ ಸೆಂಟರ್*
👉  *ಮರ್ಕಝ್ ಲೈಬ್ರರಿ*
👉  *ಮರ್ಕಝ್ ಕಮರ್ಷಿಯಲ್ ಕಾಂಪ್ಲೆಕ್ಸ್*
👉 *ಮೂರು ಸಾವಿರಕ್ಕಿಂತಲೂ ಮೇಲೆ ಮಸೀದಿಗಳು*
ಇತ್ಯಾದಿ....... ಇತ್ಯಾದಿ.......!!

*ಸಂಘಟನಾ ಸೆಟ್ಟಪ್ಪ್*

👉 *SYS (ಸುನ್ನೀ ಯುವ ಜನ ಸಂಘ)*
ಇದರ ಜಿಲ್ಲಾ ಸಮಿತಿಯ ಅಧೀನದಲ್ಲಿ 4 ಝೋನಲ್ ಗಳಿವೆ.
ಪ್ರತಿಯೊಂದು ಝೋನಲ್ ಅಧೀನದಲ್ಲಿ 8ಕ್ಕಿಂತಲೂ ಅಧಿಕ ಸೆಂಟರ್ ಗಳಿರುತ್ತದೆ.
ಆಯಾ ಸೆಂಟರ್ ಅಧೀನದಲ್ಲಿ10-12 ರಕ್ಕಿಂತಲೂ ಬ್ರಾಂಚ್ ಗಳಿರುತ್ತದೆ.
ರಾಜ್ಯ ಮಟ್ಟದ ಸಮಿತಿ ಸಹಿತ ಎಲ್ಲರನ್ನು ನಿಯಂತ್ರಿಸಲು ಸುಪ್ರೀಂ ಕೌನ್ಸಿಲ್ ಇರುತ್ತದೆ.
👉 *SSF (ಸುನ್ನೀ ಸ್ಟುಡೆಂಟ್ ಫೆಡರೇಷನ್)*
ಜಿಲ್ಲಾ ಅಧೀನದಲ್ಲಿ 10 ಡಿವಿಷನ್ ಗಳಿವೆ.ಪ್ರತಿಯೊಂದು ಡಿವಿಷನ್ ಅಧೀನದಲ್ಲಿ  8-10ರ ಷ್ಟು ಸೆಕ್ಟರ್ ಗಳಿರುತ್ತದೆ.ಪ್ರತಿಯೊಂದು ಸೆಕ್ಟರ್ ಅಧೀನದಲ್ಲಿ ಯೂನಿಟ್ ಗಳಿರುತ್ತವೆ.
*ಉದಾಹರಣೆಗೆ: ಪುತ್ತೂರು ಡಿವಿಷನ್ ಅಧೀನಧಲ್ಲೇ 6ಸೆಕ್ಟರ್ ಗಳಿದ್ದು ಅದರ ಮೇಲ್ನೋಟದಲ್ಲಿ 48 ಯೂನಿಟ್ ಕಾರ್ಯಚರಿಸುತ್ತಿದೆ.*
👉 ಮದರಸ ವಿದ್ಯಾರ್ಥಿಗಳಿಗಾಗಿ SBS (ಸುನ್ನೀ ಬಾಲ ಸಂಘ)
ಅದರ ನಿಯಂತ್ರಣ ರೇಂಜ್ ಮಟ್ಟದ ಸಮಿತಿಯ ಅಧೀನದಲ್ಲಿ ಇರುತ್ತದೆ.
👉 ಮದರಸ ಆಧ್ಯಾಪಕರಿಗಾಗಿ SJM ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸಮಿತಿ ಅದರ ಮೇಲೆ ಘಟಕದಲ್ಲಿ SMA ಸುನ್ನೀ ಮೇನಜ್ಮೆಂಟ್ ಅಸೋಶಿಯೇಷನ್ ಕಾರ್ಯಚರಿಸುತ್ತಿದೆ.
👉 ಜಿಲ್ಲಾ ಅಧೀನದಲ್ಲಿರುವ ಎಲ್ಲಾ ಸುನ್ನೀ ಸಂಘಟನೆಗಳನ್ನು ನಿಯಂತ್ರಿಸಲು ಆಯಾ ಜಿಲ್ಲೆಯ ಲ್ಲಿ SJU ಸುನ್ನೀ ಜಂಇಯ್ಯತುಲ್ ಉಲಮಾ ಇದೆ.
ತಾಲೂಕು ಮಟ್ಟದಲ್ಲಿಯೂ SJU ಅಸ್ತಿತ್ವದಲ್ಲಿದೆ.
ಇದರ ಎಲ್ಲಾ ನಿಯಂತ್ರಣ ರಾಜ್ಯ ಜಂಇಯ್ಯತುಲ್ ಉಲಮಾ ಕೈಯಲ್ಲಿಗಿದೆ.
ಭಾರತದ ಹೊರ ರಾಷ್ಟ್ರಗಳಲ್ಲಿ KCF (ಕರ್ನಾಟಕ ಕಲ್ಚರಲ್ ಫೋರಮ್) ಎಂಬ ಹೆಸರಿನಿಂದ GCC ರಾಷ್ಟ್ರಗಳು ಹಾಗೂ ಮಲೇಷ್ಯಾ ಮತ್ತು ಲಂಡನ್ ಸಹಿತ ಯೂರೋಪಿಯನ್ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿದೆ.

*ಮರ್ಕಝ್ ಶಿಲ್ಪಿ*
👉 *ಎ.ಪಿ* ಈ ಧ್ವಯಕ್ಷರ ಇಂದು ಅಹ್ಲುಸ್ಸುನ್ನಃದ *ISI*  ಮಾರ್ಕ್.!
ಪರಂಪರಾಗತ ಆಚಾರವಿಚಾರಗಳಲ್ಲಿ ಅಚಲವಾಗಿ ನಿಂತುಕೊಂಡೇ ಆಧುನಿಕ ಜಗತ್ತಿಗೆ ಸಕಾಲಿಕ ನಾಯಕತ್ವ ನೀಡಿದ *ಖಾಯಿದುಝ್ಝಮಾನ್!*

👉ಉಲಮಾಗಳು ತಮ್ಮ ಕರ್ಮವ್ಯಾಪ್ತಿಯನ್ನಃ ಮಸೀದಿಯೊಳಗಗ ಸೀಮಿತ ಗೊಳಿಸದೆ,ಸಮುದಾಯ ಸಮುಧ್ಧಾರಕರಾಗಿ ಮೆರೆಯುವ ವಿಶಾಲವಾದ ಕ್ಷೇತ್ರಕ್ಕೆ ಹಂದರ ಒದಗಿಸಿಕೊಟ್ಟು,ವಿದ್ವಾಂಸರ ನಡುವೆ ರಾಜಫ್ರೌಢಿಯ ಹೆಜ್ಜೆ ಹಾಕಿದ್ದರಿಂದಲೇ ಉಸ್ತಾದರು *ಸುಲ್ತಾನುಲ್ ಉಲಮಾ* ಎಂಬ ಗೌರವಕ್ಕೆ ಪಾತ್ರರಾದರು.
👉 ಅದ್ಬುತ ಸಂಘ
ನೈಪುಣ್ಯದಿಂದ  ವಿಶಾಲ ಧರ್ಮಭೋಧನೆಯಿಂದ ಸಮರ್ಥ ನಾಯಕತ್ವದಿಂದ ವಿಶ್ವಾಂಗೀಕ್ರತ ವಿದ್ವತ್ತಿನಿಂದ ವಿದ್ವಾಂಸರ ನಡುವೆ ಚಂದ್ರ ಪ್ರಭ ಬೀರಿದ *ಖಮರುಲ್ ಉಲಮಾ*

 👉 *ಆಲಂಙಾ ಪೋಯಿಲ್ (AP)* ಅಬೂಬಕರ್ ಮುಸ್ಲಿಯಾರ್ ಎಂಬ ಅನಾಥ ಹುಡುಗ ಅನಾಥರ ಪರಿಪಾಲಕನಾಗಿ ಪರಂಪರೆಯ ಪರಿಶುಧ್ಧಿಗೆ ಆಧುನಿಕತೆಯ ಆಲಂಕಾರವನ್ನು ಕೊಟ್ಟು ಸಮನ್ವಯ ಶಿಕ್ಷಣದ ನವನೂತನ ಕ್ರಾಂತಿ ಮೊಳಗಿಸುತ್ತಾ, ಶತಮಾನದ ಸಾಧಕನಾಗಿ ಬೆಳೆದು ಬಂದ ಕಥೆ ನಿಜಕ್ಕೂ ರೋಚಕ!
ಅಲ್ಲಾಹು ಉಸ್ತಾದರಿಗೆ ಧೀರ್ಘಾಯುಷ್ಯ ಪೂರ್ಣ ಆಫಿಯತ್ ನೀಡಿ ಅನುಗ್ರಹಿಸಲಿ ಆಮೀನ್.

ಕ್ರಪೆ: *ಮರ್ಕಝ್ ಸುವನೀರ್*
2013

No comments:

Post a Comment