*بِسْمِ اللّٰهِ الرَّحْمَانِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*...... 3⃣
📚📚📚📚📚📚📚📚
*ಅಬೂ ಹುರೈರಾ(ರ) ಉಲ್ಲೇಖಿಸಿದ ಒಂದು ಹದೀಸ್ ನಲ್ಲಿ ಹೀಗಿದೆ* :
*ಅನ್ಸಾರಿಯಾದ ವ್ಯಕ್ತಿಯೋರ್ವರು ಮರೆವಿನ ಕಾರಣ ಹದೀಸ್ ಗಳನ್ನು ನೆನಪಿಡಲು ಸಾಧ್ಯವಾಗದಿರುವ ಕುರಿತು ಪ್ರವಾದಿ(ಸ)ರೊಂದಿಗೆ ನಿವೇದಿಸಿಕೊಂಡಾಗ ಅವರು ಹೇಳಿದರು, ನೀವು ಬಲಗೈಯನ್ನು ಉಪಯೋಗಿಸಿರಿ(ಅಂದರೆ ಲೇಖನಿ ಮೂಲಕ ಬರೆದಿಟ್ಟುಕೊಳ್ಳಿ) . ಹದೀಸ್ ಗಳನ್ನು ಬರೆದಿಡುತ್ತಿದ್ದ ಅಬ್ದುಲ್ಲಾಹಿಬ್ನು ಅಮ್ರ್ ರವರ ಕುರಿತು ಪ್ರವಾದಿ(ಸ)ರೊಂದಿಗೆ ಹೇಳಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು, ' ಬರೆದಿಟ್ಟುಕೊಳ್ಳಿರಿ , ನಾನು ಸತ್ಯವನ್ನಲ್ಲದೆ ಬೇರೇನನ್ನು ನುಡಿಯುವುದಿಲ್ಲ '. ಅಬೂ ಹುರೈರಾ(ರ) ಹೇಳುತ್ತಾರೆ: "ಅಬ್ದುಲ್ಲಾಹಿಬಿನ್ ಅಮ್ರ್ ಅವರನ್ನು ಹೊರತುಪಡಿಸಿ ಸ್ವಹಾಬಿಗಳಲ್ಲಿ ನನ್ನಂತೆ ಯಾರೂ ಹದೀಸ್ ಗಳನ್ನು ಸಂರಕ್ಷಿಸಿರಲಿಲ್ಲ . ಕಾರಣವೆಂದರೆ ಅಮ್ರ್ ಅವುಗಳನ್ನು ಬರೆದಿಡುತ್ತಿದ್ದರು*" .
*ಅಬೂಬಕ್ಕರ್(ರ) ಮತ್ತು ಅಲೀ(ರ) ರವರೂ ಕೂಡಾ ಹದೀಸ್ ಗಳನ್ನು ಬರೆದಿಡುತ್ತಿದ್ದರೆಂದು ಗ್ರಂಥಗಳಲ್ಲಿ ನೋಡಬಹುದಾಗಿದೆ . ಮಕ್ಕಾ ವಿಜಯದ ವರ್ಷದಲ್ಲಿ ಪ್ರವಾದಿ(ಸ)ರವರು ಒಂದು ಭಾಷಣ ಮಾಡಿದಾಗ ಯಮನ್ ನ ಪ್ರಜೆಯೊಬ್ಬರು ಆ ಮಾತುಗಳನ್ನು ಬರೆದು ಕೊಡಬೇಕೆಂದು ವಿನಂತಿಸಿದಾಗ ಪ್ರವಾದಿ(ಸ) ರವರು ಅದರ ಏರ್ಪಾಡು ಮಾಡಿದರು . ಇದರಿಂದ ಪ್ರವಾದಿ(ಸ)ರವರ ಕಾಲದಲ್ಲಿಯೇ ಸಂರಕ್ಷಣೆಗಾಗಿ ಬರಹವನ್ನು ಒಂದು ಉಪಾದಿಯಾಗಿ ಸ್ವೀಕರಿಸಲಾಗಿತ್ತೆಂದು ವ್ಯಕ್ತವಿದೆ . ಆದರೂ ಪ್ರವಾದಿ(ಸ)ರವರ ಕಾಲದಲ್ಲಿ ಹದೀಸನ್ನು ಬರೆದಿಡುವ ಸಂಪ್ರದಾಯ ವ್ಯಾಪಕವಾಗಿರಲಿಲ್ಲ . ಹದೀಸ್ ಗಳನ್ನು ಬರೆದಿಡುವುದು ಪ್ರವಾದಿ(ಸ)ರವರಿಗೆ ಅಪ್ರಿಯವಾಗಿತ್ತೆಂದು ಸೂಚಿಸುವ ಒಂದು ಹದೀಸ್ ಅಬೂ ಹುರೈರಾ(ರ)ರವರಿಂದ ಉಲ್ಲೇಖಿತವಿದೆ . ಹದೀಸ್ ಮತ್ತು ಖರ್ ಆನ್ ಪರಸ್ಪರ ಮಿಶ್ರಣವಾಗಬಾರದೆನ್ನುವ ಭಯವೇ ಇದಕ್ಕೆ ಕಾರಣವಾಗಿತ್ತು . ಅನಂತರ ಪ್ರವಾದಿ(ಸ)ರವರೇ ಹದೀಸ್ ಗಳನ್ನು ಬರೆದಿಡುವಂತೆ ಆದೇಶಿಸಿದ್ದರು*.
📚📚📚📚📚📚📚📚
No comments:
Post a Comment