*ಝಿಯಾರತ್ತ್ ಕೇಂದ್ರ*
*➡5⃣5⃣*
------------------------
*ಪೂಕಟ್ಟೂರ್ ಶುಹದಾಗಳು*
*ಮಲಪ್ಪುರಂ*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
ಭಾರತದ ಸ್ವಾತಂತ್ರ್ಯ ಹೇೂರಾಟದಲ್ಲಿ ಕೇರಳದ ಮಲಬಾರ್ ಪ್ರಾಂತ್ಯದ ಮುಸ್ಲಿಮರ ಹೇೂರಾಟ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷಗಳಿಂದ ಬರೆದಿಡುವಂಥಾದ್ದು ಅದರಲ್ಲಿ ಬ್ರಿಟಿಷರ ವಿರುದ್ಧ ಕೇರಳದಲ್ಲಿ ನಡೆದ ಅಸಂಖ್ಯ ಹೋರಾಟಗಳಲ್ಲಿ ಪೂಕೊಟ್ಟೂರ್ ಗಲಭೆ ಅವಿಸ್ಮರಣೀಯವಾದುದು.
1921 ಆಗಸ್ಟ್ 26 ರಂದು ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಮತ್ತು ಸುತ್ತಮುತ್ತಲ ಪ್ರದೇಶಗಳ ಮಾಪ್ಪಿಳ ಮಕ್ಕಳ ಈಮಾನಿನ ಆತ್ಮಸ್ಥೈರ್ಯದಿಂದ ಕೂಡಿದ ಹೋರಾಟವು ಬ್ರಿಟೀಷರ ಸಾಮ್ರಾಜ್ಯಶಾಹಿಯ ವಿರುದ್ಧದ ಪ್ರಭಲ ಪ್ರತಿರೇೂಧವಾಗಿತ್ತು.
ಅಂದಿನ ಕಾಲದಲ್ಲಿ ಅಲ್ಲಿನ ರಾಜ "ಆರಂ ಮುರ ಚಿನ್ನುಣ್ಣಿ ತಂಬುರಾನ್'ನ ಸೇವಕನಾಗಿದ್ದ ಕಳತ್ತಿಂಗಳ್ ಮುಹಮ್ಮದ್ ಎಂಬವರನ್ನು ಜಮೀನ್ದಾರರ ವಿರುದ್ಧ ಮತ್ತು ಬ್ರಿಟಿಷರ ವಿರುದ್ಧದ ಹೇೂರಾಟದಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದಿಂದ ಸೇವಕನನ್ನು ಕೆಲಸದಿಂದ ವಜಾಗೊಳಿಸಿದರು.
ನಂತರ ಕೊವಿಲಕತ್ತ್ ಎಂಬ ಅರಮನೆಯಿಂದ ಪಿಸ್ತೂಲು ಕಳವು ಮಾಡಿದ್ದಾನೆ ಎಂದು ಸುಳ್ಳು ಕೇಸು ದಾಖಲಿಸಿ ಕಳತ್ತಿಂಗಲ್ ಮುಹಮ್ಮದ್'ರನ್ನು ಬಂಧಿಸಿದಾಗ ಧಂಗೆಯೆದ್ದ ಮುಸ್ಲಿಮರ ಪ್ರತಿರೇೂಧ ಬ್ರಿಟಿಷರ ಊಹೆಗೂ ನಿಲುಕದಂತಹದ್ದಾಗಿತ್ತು.
1921ರ ಆಗಸ್ಟ್ 1ಕ್ಕೆ ಮುಹಮ್ಮದರನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಾಗ ಠಾಣೆಯ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಪರಿಸ್ಥಿತಿ ವಿಕೇೂಪಕ್ಕೆ ತಿರುಗುವ ಸಾಧ್ಯತೆ ಇರುವುದನ್ನರಿತ ಪೊಲೀಸರು ಕ್ಷಮೆ ಯಾಚಿಸಿದರು.
ಆದರೆ ಮುಸ್ಲಿಮರ ಈ ಪ್ರಭಲ ಪ್ರತಿರೇೂಧವು ಬ್ರಿಟೀಷರಿಗೊಂದು ಅವಮಾನದಂತೆ ಕಂಡಿತು. ಆ ಕಾರಣದಿಂದಾಗಿ ಅವರು ಏರನಾಡ್'ನಲ್ಲಿರುವ ಮಾಪ್ಪಿಳ್ಳರಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದರು.
ಆ ದ್ವೇಷವು ತದನಂತರ
ಅಲಿ ಮುಸ್ಲಿಯಾರ್ (ಖ:ಸಿ)ರಂತಹ ಮುಸ್ಲಿಮ್ ನಾಯಕರ ವಿರುದ್ಧ ತಿರುಗಿ, ಆಗಸ್ಟ್ 19ಕ್ಕೆ ಬ್ರಿಟಿಷ್ ಸೈನಿಕರು ತಿರೂರಂಗಾಡಿ ಮಸೀದಿಯನ್ನು ಕೆಡವಲು ಮುಂದಾದರು.
ಇದನ್ನರಿತ ಮುಸ್ಲಿಮರು ಮಸೀದಿಯ ಮುಂದೆ ಜಮಾಯಿಸಿ ಮಸೀದಿ ಕೆಡವದಂತೆ ಪ್ರತಿರೇೂಧವೊಡ್ಡಿದಾಗ ಬ್ರಿಟೀಷರು ಗೇೂಲಿಬಾರ್ ನಡೆಸಿದರು ಈ ಗೇೂಲಿಬಾರ್'ನಲ್ಲಿ ಹಲವು ಮುಸ್ಲಿಮರು ಹುತ್ಮಾತರಾದರು.
ನಂತರದ ಒಂದು ವಾರದಲ್ಲಿ ಅಲ್ಲಲ್ಲಿ ಗಲಭೆಗಳು ಭುಗಿಲೆದ್ದಿತು.
ಬ್ರಿಟಿಷರು ತಿರೂರಂಗಾಡಿಯ ಪರಾಜಯದ ಕೋಪವನ್ನು ಪುಕೊಟ್ಟೂರ್ ನಾಗರಿಕರ ಮೇಲೆ ತಿರುಗಿಸಿ ಅಲ್ಲಲ್ಲಿ ಗಲಭೆಗಳನ್ನು ಸೃಷ್ಟಿಸುವ ಮೂಲಕ ತಮ್ಮ ಹಗೆಯನ್ನು ತೀರಿಸಿಕೊಳ್ಳಲು ಕುತಂತ್ರ ಹೆಣೆದರು.
ಬ್ರಿಟೀಷರ ಈ ಕುತಂತ್ರದ ವಿರುದ್ಧ ವಡಕೆ ವಿಟ್ಟಿಲ್ ಮಮ್ಮಿ (ಖ:ಸಿ)ಯವರ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧ ಹೇೂರಾಟದಲ್ಲಿ ಬ್ರಿಟೀಷರು ಗುಂಡಿಕ್ಕಿದಾಗ 258 ಮುಸ್ಲಿಮರು ಶಾಹಿದಾದರು.
ಪೂಕೊಟ್ಟೂರ್ ರಸ್ತೆಯ ಪಶ್ಚಿಮ ಭಾಗದ 4 ಸ್ಥಳಗಳಲ್ಲಿ ಅಂದು ರಾತ್ರಿಯೇ ಆ ಶುಹದಾಗಳ ಜನಾಝವನ್ನು ದಫನ್ ಮಾಡಲಾಯಿತು.
ದಾರಿ: ಪೂಕೊಟ್ಟೂರಿನ ಪಿಲಾಕಲಿಲ್ ಎಂಬ ಸ್ಥಳದಲ್ಲಿ ಆ ಧೀರ ಶುಹದಾಗಳು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment