*ಝಿಯಾರತ್ತ್ ಕೇಂದ್ರ*
*👉🏻5⃣3⃣*
------------------------
*#ತಾತ್ತೂರ್_ಶುಹದಾಗಳು*
*#ಮಾವೂರ್, #ಕೂಳಿಮಾಡ್ #ಕಲ್ಲಿಕೋಟೆ.*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕎🕎🕎🕎🕎🕎🕎🕎🕎
ಕಲ್ಲಿಕೋಟೆ ಜಿಲ್ಲೆಯ ಕೂಳಿಮಾಡ್ ಮಾರ್ಗವಾಗಿ ಚಾಲಿಯಾರ್ ನದಿಯ ತೀರದಲ್ಲಿ ತಾತ್ತೂರ್ ಎಂಬ ಸಣ್ಣ ಗ್ರಾಮವಿದೆ.
ಶತಮಾನಗಳಷ್ಟು ಹಳೆಯ ತಾತ್ತೂರ್ ಮಸೀದಿ ಮತ್ತು ಶುಹದಾಗಳ ಮಕ್ಬರಗಳು ಇಲ್ಲಿನ ಪ್ರಕೃತಿ ರಮಣೀಯವಾದ ಹಸಿರು ಹಾಸಿದ ಗುಡ್ಡೆಯ ಮೇಲೆ ನೆಲೆಗೊಳ್ಳುತ್ತದೆ.
ಹಿಂದಿನ ಕಾಲದಲ್ಲಿ ಅರಿಕೊಡ್, ವಾಯಕಾಡ್ ಹಾಗೂ ಮುಕ್ಕಂ ಪ್ರದೇಶಗಳಿಂದ ವಿಶ್ವಾಸಿಗಳ ಮಯ್ಯಿತ್ತ್ ಕೊಂಡು ಬರುತ್ತಿರುವುದು 400 ವರ್ಷಗಳ ಪುರಾತನವಾದ ಇಲ್ಲಿನ ಮಸೀದಿಗಾಗಿತ್ತು.
ಧರ್ಮ ವಿರುದ್ಧ ಅತಿಯಾದ ವಿದ್ವೇಷ, ಕೆಲವರ ಅವಿವೇಕದಿಂದ ಹಾಗೂ ಏಕಪಕ್ಷೀಯವಾದ ಆಕ್ರಮಣದಲ್ಲಿ ಹುತಾತ್ಮರಾದವರಾಗಿದ್ದಾರೆ ತಾತ್ತೂರ್ ಶುಹದಾಗಳು.
ಅತಿಕ್ರಮಿಸಿ ಹತ್ತಿ ಮಸೀದಿಯನ್ನು ಹೊಡೆದುರಳಿಸಲು ಬಂದವರನ್ನು ತಡೆದಿರುದರಿಂದಾಗಿದೆ ಸಂಘರ್ಷದಲ್ಲಿ ಸಮಾಪ್ತಿಗೊಂಡಿರುವುದು.
ತಾತ್ತೂರ್ ಹುತಾತ್ಮಗಳ ಕುರಿತು ಹೇಳಲಾಗುತ್ತಿರುವ ಚರಿತ್ರೆ ಹೀಗಿದೆ.
ಮೊಹರಂ 22ರಂದು
ತಾತ್ತೂರ್ ಮಸೀದಿಯಲ್ಲಿ ಮೊಳಗುತ್ತಿರುವ ಆಝಾನ್' ಅಲ್ಲಿನ "ಕೊಲೊತ್ತ್ ಕೊವಿಲಕಂ ತಂಬುರಾಟ್ಟಿ" ಎಂಬ ರಾಣಿಗೆ ನಿರಸ ಉಂಟು ಮಾಡಿತು. ಇದರಿಂದ್ದ ರೋಷ ರಾಜನು ಆತನ ಸಂಘ ಪರಿವಾರವು ಜುಮಾ ನಡೆಯುತ್ತಿರುವ ಮಸೀದಿಯನ್ನು ಬಿಟ್ಟು ಕೊಡಬೇಕೆಂದು ಆವಶ್ಯಪಟ್ಟರು. ಆದರೆ ಮುಸ್ಲಿಮರು ಅದಕ್ಕೆ ಒಪ್ಪಲಿಲ್ಲ.
ಅಂಗಾಡಿಕಡವ್ ಎಂಬ ಸ್ಥಳದ ಹತ್ತಿರವಿರುವ ಕ್ಷೇತ್ರ ಪರಿಸರದಲ್ಲಿ ಒಂದು ಮೀನು ದೋಣಿಯನ್ನು ಯಾರೋ ನಿಲ್ಲಿಸಿದರು. (ಮೀನು ಇಷ್ಟವಿಲ್ಲದ ಕೆಲವು ಅಮುಸ್ಲಿಮರಿಗೆ ಕ್ಷೇತ್ರದ ಪರಿಸರದಲ್ಲಿ ಮೀನಿನ ದೋಣಿ ನಿಲ್ಲಿಸಿರುವುದು ಅವರ ಪ್ರಕೋಪಕ್ಕೆ ಕಾರಣವಾಯಿತು ಎಂದು ಹೇಳಾಲಾಗುತ್ತದೆ.) ಇದನ್ನು ಕೆಲವರು ಪ್ರಶ್ನಿಸಲು ತಲುಪಿರುವುದು ಈ ಮಸೀದಿಗಾಗಿತ್ತು.
ಮಸೀದಿಗೆ ಹಂದಿ ಮಾಂಸವನ್ನು ಎಸೆದು ಮಸೀದಿಯನ್ನು ಅಶುದ್ಧಿ ಮಾಡಿ ದ್ವಂಸ ಮಾಡಲು ಪ್ರಯತ್ನಿಸುವಾಗ ಮುಸ್ಲಿಮರು ಶತ್ರು ಪಡೆಯನ್ನು ಎದುರಿಸಿ ಹೋರಾಡಿ ಅವರನ್ನು ಸೋಲಿಸಿದರು.
ನಂತರ ನಿರಂತರವಾಗಿ ನಡೆದ ಸಂಘರ್ಷದಲ್ಲಿ 22 ಮುಸ್ಲಿಮರು ಶಹೀದಾದರು.
ಮುಸ್ಲಿಂ ಪಕ್ಷದಲ್ಲಿ ಕುರಿಕಲ್ ಶಹೀದ್ (ರ), ಕೊನ್ನೊಲತ್ತ್ ಹಸನ್ ಕೊಯ (ರ), ಮಂಗಟನ್ ಮಾಹಿನ್ ಮೊಹ್ತಿನ್ (ರ) ಎಂಬ ಮೂವರಾಗಿದ್ದರು ನೇತೃತ್ವ ವಹಿಸಿರುವುದು.
ತಾತ್ತೂರ್ ಶುಹದಾಗಳ ಮಕ್ಬರ ಸಂದರ್ಶಿಸಿದ ಹಲವರಿಗೆ ಮಾರಕವಾದ ರೋಗಗಳಿಗೆ ಶಮನ ಲಭಿಸಿರುದಾಗಿ ಅನುಭವಸ್ಥರು ಹೇಳುತ್ತಾರೆ.
1986ರಲ್ಲಿ ಮಸ್ಜಿದ್ ನವೀಕರಣ ಕೆಲಸ ನಡೆಯುತ್ತಿರುವಾಗ ಓರ್ವ ಶಹೀದ್'ರ ಖಬರ್ ಕಫನ್ ಬಟ್ಟೆ ಸಹಿತ ಕಂಡಿರುವುದಾಗಿ ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಈ ಶುಹದಾಗಳ ಝಿಯಾರತ್ತ್ ಮಾಡಲು ಹಲವಾರು ಸತ್ಯವಿಶ್ವಾಸಿಗಳು ಈಗಲೂ ಮಖ್ಬರ ಸಂದರ್ಶಿಸುತ್ತಿದ್ದಾರೆ..
ದಾರಿ: ಕಲ್ಲಿಕೋಟೆಯಿಂದ ಮಾವೂರ್-ಕೂಳಿಮಾಡ್ ಮಾರ್ಗದಲ್ಲಿ ತಾತ್ತೂರ್ P.H.E.D. ಜುಮಾ ಮಸ್ಜಿದ್ ಪರಿಸರದಲ್ಲಿ ತಾತ್ತೂರ್ ಶುಹದಾ ಮಖಾಂ ನೆಲೆಗೊಳ್ಳುವುದು.
✍ ಗಫೂರ್ ಬಾಯಾರ್
🌿🌿🌿🌿🌿🌿🌿🌿🌿
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)


No comments:
Post a Comment