Thursday, January 4, 2018

ನೈಪುಣ್ಯ ಸಂಸ್ಥೆಯ ಕಠಿಣ ತೀರ್ಮಾಣ ನೈಚೋರಿನೊಂದಿಗೆ  ಲಘೂಕರಿಸಲಾಯಿತು!!!
ಸಂಸ್ಥೆಯ ಆಧರ್ಶವನ್ನು ಗಾಳಿಗೆ ತೂರಿದವರ ಕಾಲಡಿಗೆ ಹೋಗಿ ಸಂಧರ್ಶಿಸಿದ ಕಾರಣ ಅವರಿಗೆ ಅಲ್ಪ ಖೇದವುಂಟಾಯಿತು....
ಇನ್ನೊಂದು ನೂತನವಾದೀ ಸಮ್ಮೇಳನ ನಡೆಯುವ ತನಕ ಇಂತಹಾ ಘಟನೆಗಳು ಮರುಕಳಿಸಲ್ಲ ಎಂದು ಆ ಐದು ಮಂದಿಯಲ್ಲೂ ಮಾತು ಕೊಟ್ಟು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲಾಯಿತು.... ಹಾಗೇ ಹಸಿರೇ ಉಸಿರೆಂಬ ರಾಜಕೀಯ ಪಾರ್ಟಿಗೆ ಇವರ ಸಂಸ್ಥೆಯ ಬಲವೂ ನೂತನವಾದಿಗಳೊಂದಿಗೆ ಕೈ ಜೋಡಿಸುವ ಮೂಲಕ ಅವರ ಬೆಂಬಲವನ್ನೂ ಹಸಿರುಸಿರು ಪಾರ್ಟಿ ತಮ್ಮದನ್ನಾಗಿಸಿ ಕೊಂಡಿತು.... ಒಟ್ಟಾರೆ ಚುಟುಕಾಗಿ ಹೇಳಿದರೆ ಹಸಿರು ಮೂಸದಿದ್ದರೆ ಇವರಿಗೂ ಇವರನ್ನು ಓಲೈಸದಿದ್ದರೆ ಹಸಿರು ಪಕ್ಷಕ್ಕೂ ಅಲ್ಲಿ ನೆಲೆಯಿಲ್ಲ ಅಷ್ಟೇ....

02 *ಪಾಣಕ್ಕಾಡ್ ಕೊಡಪ್ಪನಕ್ಕಲ್ ತರವಾಡಿನಲ್ಲಿ ಬಿರಿಯಾನಿ ಧಮ್ಮ್ ಪರಿಮಳ ಮೂಗಿಗೆ ಬಡಿದದ್ದೇ ತಡ, ಗುಡುಗು, ಮಿಂಚು ಬಾಂಬ್ ಎಲ್ಲವೂ ಮಳೆಯಲ್ಲಿ ಒದ್ದೆಯಾದ ಬೀಡಿ ಪಟಾಕಿಯಂತೆ ಟುಸ್ಸಾಯಿತು!.... ಪಾಪ.... ಅವರನ್ನು ಹೇಳಿ ಫಲವಿಲ್ಲ ಅವರಿಗೆ ಅಷ್ಟೇ ಸಾದ್ಯ. ಸ್ವಂತ ಕಾಲಲ್ಲಿ ನಿಲ್ಲುವ ತಾಕತ್ತು ಅವರಿಗಿಲ್ಲ... ಈಗಲೂ ಮೇಲೇ ಏರಬೇಕಾದರೆ ಲೀಗ್ ಏಣಿಯೇ ಬೇಕು... ಪಾಪ... ಹಾಗಾಗಿಯೇ ಸಮಸ್ತ ಎಂಬ ಮಹಾ ಪ್ರಸ್ಥಾನವನ್ನು ಯಾರದೇ ಹಂಗಿಲ್ಲದೆ,ಸುನ್ನತ್ ಜಮಾತ್ ಯಾವುದೇ ಪುಡಾರಿಯ ಮುಂದೆಯೂ ಸಧೈರ್ಯವಾಗಿ ಹೇಳಲು 89 ರಲ್ಲಿ ಅವಕಾಶ ಮಾಡಿ ಕೊಟ್ಟ ತಾಜುಲ್ ಉಲಮಾರ ಧೀರ್ಘದ್ರಷ್ಠಿ ಅವರ ಕರಾಮತ್ ಅಲ್ಲದೆ ಮತ್ತಿನ್ನೇನು?*

03 *ಉಳ್ಳಾಲದ ಖಾಝಿ ಕೂರ ತಂಙಳ್ ರನ್ನು ಅನುಸರಿಸುವವರು ಸೋಮವಾರ ಹೊಸ ವರ್ಷವನ್ನು ಆಚರಣೆ ಮಾಡುವುದಿಲ್ಲ ಎಂದು ತಾನೇ.*

*ಹೌದು, ಇಸವಿ ಪ್ರಕಾರದ ಹೊಸ ವರ್ಷ ಆಚರಣೆ ಇಸ್ಲಾಮಿಕವಲ್ಲ. ಅದು ನಸ್ರಾನಿಗಳ ಆಚರಣೆ.*

*ಕೂರ ತಂಙಳ್ ರನ್ನು ಅನುಸರಿಸುವವರು ಅಪ್ಪಟ ಸುನ್ನೀ ಮುಸ್ಲಿಮರಾಗಿರುವ ಕಾರಣ ಅವರಿಗೆ ಸೋಮವಾರ ಹೊಸ ವರ್ಷ ಅಲ್ಲ.*

*ನಸ್ರಾನಿಗಳು ಮತ್ತು ನಸ್ರಾನಿಗಳನ್ನು ಅನುಸರಿಸುವವರು ಮಾತ್ರ ಸೋಮವಾರ ಹೊಸ ವರ್ಷ ಆಚರಣೆ ಮಾಡುತ್ತಾರೆ..*

*ಕೂರ ತಂಙಳ್ ಅನುಸರಿಸುವವರು ಸೋಮವಾರ ವನ್ನು ಹೊಸ ವರ್ಷವಾಗಿ ಆಚರಿಸುವುದಿಲ್ಲ ಎಂದು ನೀವು ತೆರೆದು ಹೇಳಿದ್ದಕ್ಕೆ ಧನ್ಯವಾದ 💐💐💐*

No comments:

Post a Comment