*ಝಿಯಾರತ್ತ್ ಕೇಂದ್ರ*
*👉🏻5⃣2⃣*
------------------------
*ಶಹೀದ್ ಸಯ್ಯಿದ್ ಖಾಜಾ ಹುಸೈನ್ ಮದನಿ (ಖ:ಸಿ) ಮಞ್ಞಕುಳಂ, ಮಖಾಂ ಪಾಲಕ್ಕಾಡ್.*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🍄🍄🍄🍄🍄🍄🍄🍄🍄
ಶಹೀದೆ ಹಿಂದ್ ಟಿಪ್ಪು ಸುಲ್ತಾನ್ (ರ) ರವರ ಕಾಲದಲ್ಲಿ ಅರೇಬಿಯಾದಿಂದ ಕೇರಳಕ್ಕೆ ತಲುಪಿದ ಮಹಾತ್ಮರಾಗಿದ್ದಾರೆ ಮಞ್ಞಕುಳಂ ಮಖಾಂಮಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹುಸೈನ್ ಮದನಿ (ಖ:ಸಿ)ರವರು.
ಮುತ್ತು ನಬಿ ﷺ ರವರ ಝಿಯಾರತ್ತ್ ಮಾಡಿದ ಬಳಿಕವಾಗಿದೆ ಮಹಾನರು ಕೇರಳಕ್ಕೆ ಹೊರಟಿರುವುದೆಂದು ಚರಿತ್ರೆ ಹೇಳುತ್ತದೆ.
ಪಾಲಕ್ಕಾಡ್ ಪಟ್ಟಣದ ಹೃದಯಭಾಗದಲ್ಲಿ ನೆಲೆಗೊಳ್ಳುವ ಮಞ್ಞಕುಳಂ ಮಖಾಂ ದ್ವಂಸ ಮಾಡಲು ಹಲವು ಸಲ ಪ್ರಯತ್ನ ನಡೆದಿದೆಯಾದರೂ ಅದು ವಿಫಲವಾಗಿರುದಲ್ಲದೆ ಅದಕ್ಕೆ ನೇತೃತ್ವ ಕೊಟ್ಟವರು ಅದಕ್ಕೆ ತಕ್ಕ ಫಲ ಅನುಭವಿರುತ್ತಾರೆ.
8 ಜನರಿಗೆ ನಿಲ್ಲಲು ಸಾಧ್ಯವಾಗುವ, ನಾಲ್ಕು ಸಾಲು ವಿಶಾಲವಿರುವ ಅಲ್ಲಿಯ ಪುರಾತನ ಮಸ್ಜಿದ್'ದಾಗಿತ್ತು ಖ್ವಾಜಾ ಹುಸೈನ್ ತಂಗಳ್ (ಖ:ಸಿ) ರವರು ಇಬಾದತ್ತ್'ನಲ್ಲಿ ಕಳೆದಿರುವುದೆಂದು ಹೇಳಲಾಗುತ್ತದೆ.
ಪ್ರಸಿದ್ದವಾದ ಪಾಲಕ್ಕಾಡ್ ಸಮರದಲ್ಲಿ ಟಿಪ್ಪು ಸುಲ್ತಾನ್ (ರ) ರವರ ಸೈನ್ಯದೊಂದಿಗೆ ಸೇರಿ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಮಹಾನಾಗಿದ್ದಾರೆ. ಹುಸೈನ್ ಮದನಿ (ಖ:ಸಿ) ರವರು.
ಯುದ್ಧದ ನಂತರ ಅಲ್ಲಿನ ಕೆರೆ ಹಳದಿ ಬಣ್ಣಕ್ಕೆ ಬದಲಾಗಿತ್ತು. ( ಕೆರೆಗೆ ಮಹಾನರ ರಕ್ತ ಚಿಮ್ಮಿದರಿಂದ ಹಳದಿ ಬಣ್ಣಕ್ಕೆ ಬದಲಾಗಿರುವುದೆಂದು ಹೇಳಲಾಗುತ್ತದೆ.) (ಮಞ್ಞಕುಳಂ = ಹಳದಿ ಕೊಳ) ಈ ಕಾರಣದಿಂದಾಗಿದೆ ಕೊಳಕ್ಕೂ ಮಖಾಮಿರುವ ಪ್ರದೇಶಕ್ಕೆ ಮಞ್ಞಕುಳಂ ಎಂಬ ಹೆಸರು ಬಂದಿರುವುದೆಂದು ಚರಿತ್ರೆ.
ಇದರ ಹತ್ತಿರ ಟಿಪ್ಪು ಸುಲ್ತಾನರ (ರ) ಕೋಟೆ ಇದೆ ಇದೊಂದು ಪ್ರವಾಸಿ ತಾಣವಾಗಿದೆ.
ಧೀರ ದೇಶಾಭಿಮಾನಿಯೂ, ಸೂಫಿವರ್ಯರು, ಧೀರ ನೇತಾರರು, ಎಂಬಿತ್ಯಾದಿ ವಿಶೇಷತೆಗಳಿಗೆ ಅರ್ಹರಾದ ಮಹಾನರು ಹಲವಾರು ಪವಾಡಗಳ ಒಡೆಯರಾಗಿದ್ದಾರೆ.
ಕಳ್ಳ ಸತ್ಯ ಹಾಕಿದವರಿಗೆ ಮಾನಸಿಕ ರೋಗ ಹಿಡಿದಿರುವುದು, ಮಖಾಮಿಗೆ ನೀರು ತಡೆದವನ ಮನೆಗೆ ಬೆಂಕಿ ತಗಲಿರುವುದು, ದಾರಿದ್ರ್ಯದಿಂದ ಮುಕ್ತಿ ಹೊಂದಲು ನಿಷ್ಕಳಂಕ ಮನಸ್ಸಿನೊಂದಿಗೆ ಮಖಾಮಿನಲ್ಲಿ ನಿರಂತರ ಅಲ್ಲಾಹನಲ್ಲಿ ಪ್ರಾರ್ಥಿಸಿದವರಿಗೆ ಜೀವಿತಾಂತ್ಯದ ವರೆಗೆ ಧಾರಾಳ ಸಂಪತ್ತು ಲಭಿಸಿರುವುದು, ಮಾರವ್ಯಾದಿಗಳು ಗುಣಮುಖವಾಗಿರುವುದು. ಮಹಾನವರ ಪವಾಡಗಳಲ್ಲಿ ಕೆಲವೊಂದು ಮಾತ್ರ.
ಮೌಲಿದ್ ಗ್ರಂಥಗಳಲ್ಲಿ ಹಳೆಯ ಕಾಲದಲ್ಲಿ ಮಞ್ಞಕುಳಂ ಮಾಲೆ ಪ್ರಸಿದ್ದವೂ, ನಮ್ಮ ಹಿಂದಿನ ತಲೆಮಾರುಗಳ ಎಲ್ಲಾ ಉದ್ದೇಶ ಸಫಲತೆಗೂ, ರೋಗ ಶಮನಕ್ಕೂ, ಆತ್ಮ ವಿಶುದ್ಧಿಗೂ ಮಞ್ಞಕುಳಂ ಮಾಲೆ ಓದುತ್ತಿದ್ದರು. 156 ಸಾಲುಗಳು ಇರುವ ಈ ಮಾಲೆ ಹಳೆಯ ಕಾಲದವರಿಗೆ ಆತ್ಮೀಯ ಔಷಧಿಯಾಗಿತ್ತು.
ಇಂದು ಕೂಡಾ ಸಾವಿರಾರು ಜನರಿಗೆ ಆಶ್ವಾಸನೆಯ ನೆಲೆಯಾಗಿ ಮಹಾನರು ಶಾಂತಿಯಾಗಿ ಟಿಪ್ಪು ಸುಲ್ತಾನವರ (ರ) ರವರ ರಂಗ ಭೂಮಿಯಲ್ಲಿ ಚಿರ ನಿದ್ರೆಯಲ್ಲಿದ್ದಾರೆ.
ಮಹಾನರ ಬರ್ಕತ್ತ್'ನಿಂದ ಕಾರುಣ್ಯನಾದ ಅಲ್ಲಾಹನು ನಮಗೂ ನಮ್ಮ ಕುಟುಂಬದವರನ್ನೂ ಇಹಲೋಕ ವಿಜಯಿಗಳಲ್ಲಿ ಸೇರಿಸಲಿ ಆಮೀನ್.
ದಾರಿ: ಪಾಲಕ್ಕಾಡ್ ಪಟ್ಟಣದಿಂದ 4 ಕಿ.ಮೀ ದೂರ ಇದೆ ಮಖಾಂ.
✍ಗಫೂರ್ ಬಾಯಾರ್
♻♻♻♻♻♻♻♻♻
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment