*بِسْمِ اللّٰهِ الرَّحْمَانِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 4⃣
📚📚📚📚📚📚📚📚📚
*ಹದೀಸ್ ಸಂರಕ್ಷಣೆಗೆ ಪ್ರಮುಖವಾಗಿ ಕಂಠಪಾಠ ಮಾಡಿಕೊಳ್ಳುವ ಕ್ರಮವನ್ನು ಆಶ್ರಯಿಸಲಾಗಿತ್ತು . ಅರಬಿಗಳ ಸ್ಮರಣ ಶಕ್ತಿ ಅದ್ವಿತೀಯವಾಗಿತ್ತು . ಅವರು ಸಾವಿರಾರು ಅರಬಿ ಕವಿತೆಗಳನ್ನು ಕಂಠಪಾಠಮಾಡಿಕೊಂಡಿದ್ದರು .ಬರೆದಿಟ್ಟ ಹದೀಸ್ಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಹಾಗೂ ಸಂದೇಹ ನಿವಾರಣೆಗಾಗಿ ಅವರು ಕಂಠಪಾಠ ಮಾಡಿಟ್ಟ ಹದೀಸ್ ಗಳನ್ನೇ ಅವಲಂಬಿಸುತ್ತಿದ್ದರು . ವಿಭಿನ್ನ ವೈಶಿಷ್ಟ್ಯತೆಗಳ ಆಧಾರದಲ್ಲಿ ಹದೀಸ್ ಸಂಗ್ರಹ ಮತ್ತು ಸಂರಕ್ಷಣೆಯನ್ನು 5 ಹಂತಗಳಾಗಿ ವಿಂಗಡಿಸಬಹುದು*. 👇
📒 *ಮೊದಲ ಹಂತ: ಪ್ರವಾದಿ (ಸ)ರವರ ಕಾಲ ಹದೀಸ್ ಸಂಗ್ರಹದ ಮೊದಲ ಹಂತವಾಗಿತ್ತು . ಎಲ್ಲಾ ಸ್ವಹಾಬಿಗಳು ಸಮಾನ ಪ್ರಮಾಣದಲ್ಲಿ ಹದೀಸ್ ಸಂಗ್ರಹದಲ್ಲಿ ಪಾಲ್ಗೊಂಡಿರಲಿಲ್ಲ. ಅವರಿಗೆ ಲಭಿಸಿದ ಅವಕಾಶದ ಕೊರತೆಯೇ ಇದಕ್ಕೆ ಕಾರಣವೆಂದು ಹೇಳಬಹುದಾಗಿದೆ . ಪ್ರತಿಯೊಬ್ಬರಿಗೂ ಅವರವರ ಜೀವನ ನಿರ್ವಹಣೆಗಾಗಿ ಸಮಯವನ್ನು ವ್ಯಯಿಸಬೇಕಾಗಿತ್ತು .ಮಾತ್ರವಲ್ಲದೆ ಹಲವರಿಗೆ ಶತ್ರುಗಳಿಂದ ಮುಸ್ಲಿಮರನ್ನು ಸಂರಕ್ಷಿಸುವ ಹೊಣೆಯೂ ಇತ್ತು . ಧಾರ್ಮಿಕ ಶಿಕ್ಷಣವನ್ನು ಕಲಿಯುವ ಉದ್ದೇಶದಿಂದ ಮಸೀದಿಯಲ್ಲೇ ವಾಸ್ತವ್ಯ ಹೂಡಿದ್ದ ಅಸ್ಹಾಬು ಸುಫ್ಫ್ ಎಂಬ ವಿಭಾಗ ಇಂತಹ ಜ್ಞಾನ ಶಾಖೆಯಲ್ಲಿ ಕ್ರಿಯಾಶೀಲರಾಗಿದ್ದರು* .
ಮುಂದುವರಿಯುವುದು...
📚📚📚📚📚📚📚📚📚📚
No comments:
Post a Comment