✳ *ವಹ್ಹಾಬಿಝಮನ್ನು ಅದರ ಆಶಯ ಸಮೇತ ವಿರೇೂದಿಸಿ ಹಿಮ್ಮೆಟ್ಟಿಸಿದ, ಇಂದು ಜೀವಿಸಿರುವ ಹಾಗೂ ಇತ್ತೀಚೆಗೆ ವಫಾತ್ತ್ ಆಗಿರುವ ವಿಶ್ವ ವಿಖ್ಯಾತರಾದ ಕೆಲ ಇಸ್ಲಾಮಿಕ್ ವಿದ್ವಾಂಸರು* ✳
**********************
✍ ಗಫೂರ್ ಬಾಯಾರ್
🔖🔖🔖🔖🔖🔖🔖🔖🔖
0⃣1⃣ *ಅಲಿ ಜುಮುಅ ಮುಹಮ್ಮದ್ ಅಬ್ದುಲ್ ವಹಾಬ್:*
1952ರ ಮಾರ್ಚ್ 03ಕ್ಕೆ ಜನನ:
2003 ಸೆಪ್ಟಂಬರ್ 28 ರಿಂದ ಈಜಿಪ್ಟಿನ ಗ್ರ್ಯಾಂಡ್ ಮುಫ್ತಿಯಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ 50 ಮುಸ್ಲಿಮರಲ್ಲಿ ಒಬ್ಬರಾಗಿ 2010ರಲ್ಲಿ ಆಯ್ಕೆಯಾದರು.
50ಕ್ಕಿಂತ ಹೆಚ್ಚು ಗ್ರಂಥಗಳನ್ನು ರಚಿಸಿದ ಇವರು
ಭಯೋತ್ಪಾದನೆಗೂ, ತೀವ್ರವಾದಕ್ಕೂ ವಿರುದ್ದವಾಗಿ ಕಠಿಣ ನಿಲುವು ತಾಳಿದವರಾಗಿದ್ದಾರೆ.
"ಇಖ್'ವಾನುಲ್ ಮುಸ್ಲಿಮೂನ್" (ಭಾರತದಲ್ಲಿ ಜಮಾತೆ ಇಸ್ಲಾಮೀ ಎಂದು ಅರಿಯಲ್ಪಡುವ) ಎಂಬ ಅಲ್ಲಿಯ ಉಗ್ರಗಾಮೀ ಸಂಘಟನೆಯು ಈಜಿಪ್ಟಿನಲ್ಲಿ ಅಧಿಕಾರಕ್ಕೇರುವ ಸಲುವಾಗಿ ಮಾತ್ರ ಉಪಯೋಗಿಸುವ ಒಂದು ನಾಮವಾಗಿದೆ.
ಅದು ಧರ್ಮ ಅಲ್ಲವೆಂದೂ ಇಸ್ಲಾಮಿನ ರಾಜಕೀಯ ನೀತಿ ಮಾತ್ರ ಎತ್ತಿ ತೋರಿಸುವ ಇಖ್'ವಾನ್'ನ ನಿಲುವು ಅಪಾಯಕಾರಿ ಎಂದೂ ಸಾರಿ ಹೇಳುತ್ತಿದ್ದರು.
ಫಿಖ್ಹ್'ನಲ್ಲಿ ಶಾಫಿಈ ಹಾಗೂ ಅಖೀದ'ದಲ್ಲಿ ಅಶ್ಅರಿಯ್ಯ ಮದ್'ಹಬ್ ಆಗಿದ್ದರು.
0⃣2⃣ *Dr: ಮುಹಮ್ಮದ್ ಸಈದ್ ಬೂತ್ವಿ (ನ:ಮ)*
1927ರಲ್ಲಿ ಕುರ್ದಿ ವಂಶಜರಾಗಿ ತುರ್ಕಿಯ ಬೌತ್ವಾನ್ ದ್ವೀಪನಲ್ಲಿ ಜನಿಸಿದರು. 2004ರಲ್ಲಿ ಅಂತಾರಾಷ್ಟ್ರೀಯ ಇಸ್ಲಾಮಿಕ್ ವ್ಯಕ್ತಿತ್ವಕ್ಕೆ ಇರುವ ದುಬೈ ಇಂಟೆರ್ನ್ಯಾಷನಲ್ ಖುರ್ಆನ್ ಅವಾರ್ಡ್ ವಿಜೇತರಾಗಿದ್ದಾರೆ.
ಕರ್ಮಧಾರೆ ಶಾಫಿಈ' ಮದ್'ಹಬ್ ಹಾಗೂ ವಿಶ್ವಾಸಧಾರೆ ಅಶ್ಅರಿಯ್ಯ ಮದ್'ಹಬ್ ಆಗಿದ್ದರು.
"ಅಲ್ಲಾ ಮದ್ಹಬಿಯ್ಯ ಅಕ್ಬರು ಬಿದಅತ್ತಿಲ್ ತುಹದ್ದಿದು ಶರೀಅತ್ತಲ್ ಇಸ್ಲಾಮಿಯ್ಯಾ" ( ಮದ್ಹಬ್ ನಿರಾಕರಣೆ ಇಸ್ಲಾಮಿಕ್ ಶರೀಅತ್ತನ್ನು ಹಣಿಯುವ ಅತೀ ದೊಡ್ಡ ನೂತನವಾದ) ಅಸ್ಸಲಫಿಯ್ಯ ಮರ್ಹಲತ್ತುಲ್ ಸಮನಿಯ್ಯ ವ ಲೈಸತ್ತ್ ಮದ್ಹಬಲ್ ಇಸ್ಲಾಮಿ ಮುಂತಾದ 60ರಷ್ಟು ಗ್ರಂಥಗಳನ್ನು ಬರೆದಿದ್ದಾರೆ.
ಸಿರಿಯಾದ ರಾಜಧಾನಿಯಾದ ಡಮಸ್ಕಸ್'ನ ವಿಶ್ವ ವಿದ್ಯಾಲಯದ ಕುಲ್ಲಿಯತ್ತು ಶರೀಅತ್ತ್'ನಲ್ಲಿ ಅಖೀದ ಮೇಧಾವಿಯಾದ ಬೂತ್ವಿ (ನ:ಮ)ಯವರು, ಅಲ್ಲಿರುವ ಇಖ್'ವಾನಿಗಳ ಮತ್ತು ಕ್ರಾಂತಿಕಾರಿಗಳ ಶತ್ರುವಾದರು.
ಇವರನ್ನು ಇತ್ತೀಚಿಗೆ ಅಂದರೆ 2017ರಲ್ಲಿ ಮಸೀದಿಯಲ್ಲಿ ಖುರ್ಆನ್ ಉಪನ್ಯಾಸ ನೀಡುತ್ತಿದ್ದಾಗ ವಹ್ಹಾಬಿ ಆಶಯದ IS ಭಯೋತ್ಪಾದಕರು ಕೊಂದರು. ಇನ್ನಾಲಿಲ್ಲಾಹ್..
0⃣3⃣ *ಶೈಖ್ ಯೂಸುಫ್ ಹಾಶಿಂ ರಿಫಾಈ ಕುವೈಟ್.*
ಕುವೈಟ್'ನ ಪ್ರಮುಖ ವಿದ್ವಾಂಸರ ಕುಟುಂಬದಲ್ಲಿ 1932ರಲ್ಲಿ ಜನ್ಮ ತಾಳಿದರು.
ಕುವೈಟ್ ಮಂತ್ರಿಮಂಡಲದಲ್ಲಿ ವಿವಿಧ ಖಾತೆಗಳನ್ನು ವಹಿಸಿದ್ದರು.
"ತಸವ್ವುಫು ಮತ್ತು ಸೂಫಿಸಂ ಅನ್ನು ಖುರ್ಆನ್ ಹಾಗೂ ಸುನ್ನತ್ತಿನ ಆಧಾರದಲ್ಲಿ, ಶೈಖ್ ಅಹ್ಮದ್ ರಿಫಾಈ (ರ) ರವರ ಚರಿತ್ರೆ, ಅಹ್ಲುಸುನ್ನದ ಸ್ಥಂಭ. ಮೊದಲಾದ ಗ್ರಂಥಗಳನ್ನು ರಚನೆ ಮಾಡಿದರು.
0⃣4⃣ *ಉಮರ್ ಹಫಿದ್, ಯಮನ್*
1967ರ ಮೇ 27ಕ್ಕೆ ಯಮನಿನ ಹಳರ್ ಮೌತ್ತ್'ನ ಹತ್ತಿರವಿರುವ ತರಿಮಿಲ್ ಜನ್ಮಗೊಂಡರು.
ಇವರು ಧಾರ್ಮಿಕ ರಂಗದಲ್ಲಿ ಕಾರ್ಯಾಚಿಸುತ್ತಿರುವ ಸಯ್ಯಿದ್ ಮನೆತನದವರಾಗಿದ್ದಾರೆ.
ಇವರನ್ನು "ಅಲ್ ಹಬೀಬ್" ಎಂದಾಗಿದೆ ಕರೆಯಲ್ಪಡುವುದು.
ತರಿಮಿನ "ದಾರುಲ್ ಮುಸ್ತ್ವಫಾ" ಎಂಬ ಸಂಸ್ಥೆಯ ಸ್ಥಾಪಕರು.
ಕರ್ಮಧಾರೆಯಲ್ಲಿ ಶಾಫಿಈ, ವಿಶ್ವಾಸಧಾರೆಯಲ್ಲಿ ಅಶ್ಅರಿಯ್ಯ ಮಧ್ಹಬ್ ಅನುಸರಿಸುವವರಾಗಿದ್ದಾರೆ.
ಹಲವಾರು ಗ್ರಂಥಗಳನ್ನು ರಚಿಸಿದ ಅವರು ಕೇರಳ, ಮರ್ಕಝ್'ಗೂ ಭೇಟಿ ನೀಡಿದ್ದಾರೆ.
0⃣5⃣ *ಹಬೀಬ್ ಅಲಿ ಜಿಫ್ರಿ, ಯಮನ್*
ವಿಧ್ವಾಂಸರಾದ ಹಬೀಬ್ ಅಲಿ ಜಿಫ್ರಿ ತಂಙಳರು ನಬಿ ﷺ ರವರ ಕುಟುಂಬ ಪರಂಪರೆಯಲ್ಲಿ 1972 ಎಪ್ರಿಲ್'ನಲ್ಲಿ ಸೌದಿಯ ಜಿದ್ದದಲ್ಲಿ ಜನಿಸಿದರು.
ಬಾ ಅಲವಿ ಸೂಫಿ ಸರಣಿಯ ಪ್ರಚಾರಕರಾದ ಇವರು ಹಿಜಾಸ್, ಯಮನ್, ಈಜಿಪ್ಟ್, ಸಿರಿಯ, ಮೊರೊಕ್ಕೊ, ಭಾರತ, ಮೊದಲಾದ ರಾಷ್ಟ್ರಗಳ 300ರಷ್ಟು ವಿದ್ವಾಂಸರುಗಳ ಶಿಷ್ಯತ್ವ ಮತ್ತು ಇಜಾಸಿಯ್ಯತ್ತುಗಳನ್ನು ಸ್ವೀಕರಿಸಿದ್ದಾರೆ.
ಇವರು ಅಬುಧಾಬಿಯ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಗೆ ನೇತೃತ್ವ ನೀಡುತ್ತಿರುವ "ತ್ವಾಬ ಫೌಂಡೇಶನ್"ನ ಸಂಸ್ಥಾಪಕರು. ಯಮನ್ ತರಿಮಿನಲ್ಲಿರುವ "ದಾರುಲ್ ಮುಸ್ತ್ವಫ" ಬೋರ್ಡ್ ಸದಸ್ಯರೂ ಆಗಿದ್ದಾರೆ.
2009ರಲ್ಲಿ ಜಾರ್ಜ್'ಟೌನ್ ಯೂನಿವರ್ಸಿಟಿ ನಡೆಸಿದ ವಿಶ್ವದ 500 ಮುಸ್ಲಿಂ ಪ್ರಮುಖರ ಸರ್ವೆಯಲ್ಲಿ 37ನೇ ಸ್ಥಾನದಲ್ಲಿದ್ದರು.
ಅಹ್ಲುಸುನ್ನದ ಪ್ರಚಾರಕ್ಕಾಗಿ ಆಧುನಿಕ ವ್ಯವಸ್ಥೆಗಳನ್ನು, ಟೆಲಿವಿಷನ್ ಕಾರ್ಯಕ್ರಮಗಳು ಅಲಿ ಜಿಫ್ರಿಯವರ ನಾಯಕತ್ವದಲ್ಲಿ ನಡೆಯುತ್ತದೆ.
ಫಿಖ್ಹ್'ನಲ್ಲಿ ಶಾಫಿಈ ಮಧ್ಹಬ್, ವಿಶ್ವಾಸದಲ್ಲಿ ಅಝ್ಹರಿ ಮಧ್ಹಬ್ ಅನುಸರಿಸುವವರಾಗಿದ್ದಾರೆ.
0⃣6⃣ *ಶೈಖ್ ಅಬ್ದುಲ್ಲಾ ಬಿನ್ ಬಯ್ಯಾ.*
1935ರಲ್ಲಿ ಮೌರಿತಾನಿಯ ಎಂಬ ದೇಶದ ಪ್ರಮುಖ ವಿದ್ವಾಂಸ ಕುಟುಂಬವೊಂದರಲ್ಲಿ ಜನಿಸಿದರು.
ಸೌದಿಯ ಕಿಂಗ್ ಅಬ್ದುಲ್ ಅಝೀಝ್ ಯೂನಿವರ್ಸಿಟಿ ಅಧ್ಯಾಪಕರಾಗಿದ್ದ ಬಿನ್ ಬಯ್ಯಾ, ಜಿದ್ದಾದಲ್ಲಿ ವಾಸವಾಗಿದ್ದರು.
ಫಿಖ್ಹ್'ನಲ್ಲಿ ಮಾಲಿಕಿ ಮದ್ಸ್'ಹಬ್'ಅನ್ನೂ ಅಖೀದಾದಲ್ಲಿ ಅಶ್ಹರಿಯ್ಯಯ ಮದ್ಸ್'ಹಬ್'ಅನ್ನೂ ಸ್ವೀಕರಿಸಿದವರಾಗಿದ್ದಾರೆ.
ಮೌರಿತ್ತಾನಿಯನ್ ಸಂಸತ್ತಿನಲ್ಲಿ ಇವರು ವಿದ್ಯಾಭ್ಯಾಸ ಮತ್ತು ಕಾನೂನು ಮಂತ್ರಿಯಾಗಿದ್ದರು.
0⃣7⃣ *ಅಹ್ಮದ್ ಮುಹಮ್ಮದ್ ಅಹ್ಮದ್ ತ್ವಯ್ಯಿಬ್*
1946 ಜನವರಿ 6ಕ್ಕೆ ಇವರ ಜನನ.
2010 ಮಾರ್ಚ್ 19ಕ್ಕೆ 43ನೇ ಶೈಖುಲ್ ಅಝ್ಹರಾಗಿ ನೇಮಕಗೊಂಡರು.
ಹುಸ್ನಿ ಮುಬಾರಕ್'ನ ವಿರುದ್ಧ ಈಜಿಪ್ಟ್'ನಲ್ಲಿ ನಡೆದ ಕ್ರಾಂತಿಯಲ್ಲೂ ನಂತರ ನಡೆದ ರಾಜಕೀಯ ಬದಲಾವಣೆಯಲ್ಲೂ ಇವರ ನಿಲುವುಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿತು.
ಇವರೂ ಸಹ ಫಿಖ್ಹ್'ನಲ್ಲಿ ಮಾಲಿಕಿಯೂ, ಅಖಿದದಲ್ಲಿ ಅಶ್ಅರಿಯಾ ಮದ್ಹಬ್ ಅನುಸರಿಸಿದವರಾಗಿದ್ದಾರೆ.
0⃣8⃣ *ಅಬ್ದುಲ್ಲಾ ಫದ್'ಅಬ್:*
ಮಕ್ಕಾದ ಅಶ್ಅರಿಯ್ಯ ಹಾಗೂ ಶಾಫಿಈ ವಿದ್ವಾಂಸರೂ, ಪಿತಾಮಹಾನರೂ, ಹಸನ್ ಫದ್'ಅಬ್ (ಖ:ಸಿ) ಎಂಬವರು 1892ರಲ್ಲಿ ಹರಮಿನಲ್ಲಿ ಶಾಫಿಈ ಮದ್ಹಬ್'ನ ಇಮಾಮರಾಗಿದ್ದರು.
1921ರಲ್ಲಿ ಮಹಾನರು ತಮ್ಮ ಮನೆಯಲ್ಲಿ ದರ್ಸ್ ಪ್ರಾರಂಭಿಸಿ, 1979ರ ತನಕ ಅಂದರೆ ತಮ್ಮ ಮರಣದವರೆಗೂ ಆ ದರ್ಸ್ ಅನ್ನು ಮುನ್ನಡೆಸುತ್ತಿದ್ದರು.
ಹಸನ್ ಫದ್'ಅಖ್ (ಖ:ಸಿ) ರವರ ಮರಣಾನಂತರ ಆ ದರ್ಸಿನ ಉಸ್ತುವಾರಿ ವಹಿಸಿಕೊಂಡ
ಪುತ್ರ ಮುಹಮ್ಮದ್ ಫದ್'ಅಖ್'ವರು, 2001ರ ತನಕ ನಡೆಸಿದರು. ಈಗ ಮುಹಮ್ಮದ್ ಫದ್'ಅಖ್'ರವರ ಮಗನಾದ ಅಬ್ದುಲ್ಲಾ ಫರ್'ಆಖ್'ನವರು ಆ ಜ್ಞಾನ ವೇದಿಕೆಗೆ ನೇತೃತ್ವ ನೀಡುತ್ತಿದ್ದಾರೆ.
0⃣9⃣ *ಅಖ್ತರ್ ರಝಾ ಖಾನ್ ಬರೇಲ್ವಿ:*
ಅಹ್ಮದ್ ರಝಾ ಖಾನ್ (ರ)ರವರ ಪುತ್ರರಾದ ಹಾಮಿದ್ ರಝಾ ಖಾನ್ (ರ) ಅವರ ಪೌತ್ರರಾಗಿ 1943 ನವೆಂಬರ್ 23ಕ್ಕೆ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಜನಿಸಿದರು.
ಜೋರ್ಡನ್'ನ ರಾಯಲ್ ಇಸ್ಲಾಮಿಕ್ ಸೊಸೈಟಿ ನಡೆಸಿದ ಸರ್ವೆಯ ಪ್ರಕಾರ ವಿಶ್ವಾದ್ಯಂತ ಪರ್ಯಟನೆ ನಡೆಸಿ ಇಸ್ಲಾಮಿನ ಬೆಳವಣಿಕೆಗೆ ಪಾತ್ರವಹಿಸಿದ ಮುಸ್ಲಿಂ ನಾಯಕರಲ್ಲಿ ಅಖ್ತರ್ ರಝಾ ಖಾನ್'ರವರು 26ನೇ ಸ್ಥಾನದಲ್ಲಿದ್ದರು.
1963-1966 ರ ಕಾಲದಲ್ಲಿ ಜಾಮಿಉಲ್ ಅಝ್ಹರ್'ನಿಂದ ಕಲಿತು ಹೊರಬಂದ ಮಹಾನವರಿಗೆ ಜಗತ್ತಿನ ನಾನಾ ಭಾಗಗಳಲ್ಲಿ ಶಿಷ್ಯ ವೃಂದಗಳು ಇದ್ದಾರೆ...
1⃣0⃣ *ಶೈಖ್ ಅಬೂಬಕ್ಕರ್ ಅಹ್ಮದ್*
1939 ಮಾರ್ಚ್ 22ಕ್ಕೆ ಕಲ್ಲಿಕೋಟೆ ಜಿಲ್ಲೆಯ ಕಾಂತಪುರಂದಲ್ಲಿ ಜನಿಸಿದರು.
ಇವರು ಭಾರತದ ಸುನ್ನೀ ಮುಸ್ಲಿಂ ಸಮುದಾಯದ ಓರ್ವ ಪ್ರಮುಖ ನಾಯಕರಾಗಿದ್ದಾರೆ.
ಕಲ್ಲಿಕೋಟೆ ಜಿಲ್ಲೆಯ ಕಾರಂದೂರ್'ನಲ್ಲಿ ನೆಲೆಗೊಳ್ಳುವ ಮರ್ಕಝ್ ಎಂಬ ವಿದ್ಯಾಭ್ಯಾಸ ಸಂಸ್ಥೆಯ ಸ್ಥಾಪಕರೂ, ಚಾನ್ಸಲರ್ ಕೂಡಾ ಆಗಿದ್ದಾರೆ.
ಸುನ್ನೀ ಜಮ್'ಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯೂ,
ಆಲ್ ಇಂಡಿಯಾ ಸುನ್ನೀ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೂ, ಇಸ್ಲಾಮಿಕ್ ವಿದ್ಯಾಭ್ಯಾಸ ಬೋರ್ಡ್ ಆಫ್ ಇಂಡಿಯಾದ ಅಧ್ಯಕ್ಷರೂ, ಮುಸ್ಲಿಂ ಜಮಾಅತ್ತ್' ಸಂಘಟನೆಯ ಅಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರ್ಮಧಾರೆದಲ್ಲಿ ಶಾಫಿಈ ಮದ್ಹಬ್, ವಿಶ್ವಾಸಧಾರೆಯಲ್ಲಿ ಅಶ್'ಅರಿ ಮದ್ಹಬ್ ಪಾಲಿಸುವವರಾಗಿದ್ದಾರೆ.
ಉಸ್ತಾದರಿಗೆ ಬಿರುದಾರಿಗಳಾದ ಹನ್ನೆರಡು ಸಾವಿರ ಶಿಷ್ಯಂದಿರುಗಳ ವೃಂದವಿದೆ.
ದೇಶ ವಿದೇಶಗಳಲ್ಲಿರುವ ಅವರ ಸ್ಥಾಪನೆಗಳಲ್ಲಿ ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ...
*ಸರ್ವಶಕ್ತನಾದ ಅಲ್ಲಾಹನು ಇಂದು ಜೀವಿಸಿರುವ ಎಲ್ಲಾ ಸುನ್ನೀ ಪಂಡಿತರಿಗೂ ಆಫಿಯತಿನೊಂದಿಗೆ ದೀರ್ಘಾಯುಷ್ಯ ಕರುಣಿಸಲಿ ಹಾಗು ವಫಾತ್ತ್ ಆದವರ ಬರ್ಝಕಿ ಜೀವನ ಸುಖಕರವಾಗಲಿ ಆಮೀನ್...*
https://www.facebook.com/IslamicwayKannadapage/

No comments:
Post a Comment