Tuesday, March 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣0⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಆ ಮಕ್ಕಳೂ ಸಹ ನಿರ್ದಯೆಯಿಂದ ಕ್ರೂರವಾಗಿ ಕೊಲ್ಲಲ್ಪಟ್ಟಿದ್ದಾರೆಂದು ಆ ಯಾತ್ರಾ ತಂಡದ ನಾಯಕ ಹೇಳುತ್ತಿದ್ದಂತೆ..

ಡೇರೆಯೊಳಗೆ ಹೇೂದ ಸಯ್ಯದುನಾ ಹುಸೈನ್ (ರ)ರವರು... ⬇

ತಮ್ಮ ಸಹಧರ್ಮಿಣಿ *ಶಹ್ರುಬಾನು (ರ)* ರವರ ಮಡಿಲಲ್ಲಿ ಮಲಗಿದ್ದ ಒಂದೂವರೆ ವರ್ಷ ಪ್ರಾಯದ *ಅಲಿ ಅಸ್ಗರ್ (ರ)* ಎಂಬ ಹೆಸರಿನ ತಮ್ಮ ಮಗುವನ್ನು ಎತ್ತಿಕೊಂಡು ಬಂದು ಆ ವ್ಯಾಪಾರಿ ತಂಡದ ನಾಯಕನಿಗೆ ತೇೂರಿಸುತ್ತಾ ಹೇಳಿದರು...

ಸಹೋದರಾ..
ಈ ಮಗುವನ್ನು ನೋಡಿದೀರಾ..? ಇದು ನನ್ನ ಮಗು ಕೂಫಗಾರರು ತಲೆ ಕಡಿದ ಆ ಮುಗ್ಧ ಮಕ್ಕಳಿಲ್ಲವೇ ಮುಹಮ್ಮದ್ ಹಾಗು ಇಬ್ರಾಹಿಂ (ರಲಿಯಲ್ಲಾಹು ಅನ್ಹುಮಾ) ಅವರು ಕೂಡ ನನ್ನ ಮಕ್ಕಳಂತೆಯೇ ತಾನೇ? ಆ ಮಕ್ಕಳನ್ನು ಅಷ್ಟು ಕ್ರೂರವಾಗಿ ಕೊಂದವರನ್ನು ಬಿಟ್ಟು ನಾನು ಮಕ್ಕಾಕ್ಕೆ ಹಿಂದಿರುಗಿ ಹೇಡಿಯಂತೆ ಅಡಗಿ ಬದುಕಲೇ...!?

ಇಲ್ಲ ಸಹೋದರಾ..
ಇಲ್ಲ. ಸೇೂಲೇೂ ಗೆಲುವೇೂ..!
ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಾರೆ. ವಿಷಯವನ್ನೆಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು ಎಂದರು.

ನಂತರ ಡೇರೆಯೊಳ ಹೊಕ್ಕು ಗದ್ಗದಿತರಾದ *ಹುಸೈನ್ (ರ)ರವರು* ಹೇಳಿದರು. ಎಲ್ಲರೂ ಹೊರಡಿ ಇನ್ನು ವಿಶ್ರಮಿಸಲು ಸಮಯವಿಲ್ಲ..! ಯಝೀದನ ದುರಹಂಕಾರಕ್ಕೆ ಪ್ರತಿಕಾರ ತೀರಿಸುವ ಸಮಯ ಸನ್ನಿಹಿತವಾಗಿದೆ. ಎಲ್ಲರೂ ಬೇಗ ಹೊರಡಿ ಎಂದರು.

ಹಾಗೆ ಅಲ್ಲಿಂದ ಹೊರಟ ಆ ಯಾತ್ರಾ ಸಂಘವು.. ಮುಂದೆ ಸಾಗುತ್ತಿತ್ತು.

*ಅಂದು ಮುಹರ್ರಂ ಎರಡು. (ಹಿಜರಿ 61) ಸಂಜೆಯಾಗುತ್ತಿದ್ದಂತೆ ಇರಾಕಿನ ಯೂಪ್ರಟಿಸ್ ನದಿ ತೀರಕ್ಕೆ ತಲುಪಿದರು.*

ಹಾಗೆ ಯೂಪ್ರಟಿಸ್ ನದಿ ದಂಡೆಗೆ ತಲುಪುತ್ತಿದ್ದಂತೆ *ಹುಸೈನ್(ರ) ರವರ* ಒಂಟೆ ಮಂಡಿಯೂರಿ ಕುಳಿತು ಕೊಂಡಿತು.

(ಸಾಧಾರಣವಾಗಿ ಯಜಮಾನರಿಂದ ಸೂಚನೆ ಬರದಿದ್ದರೆ ಒಂಟೆಗಳು ಹಾಗೆ ಮಂಡಿಯೂರಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಯಜಮಾನರಿಂದ ಸೂಚನೆ ಬರುವ ತನಕ ಎಷ್ಟು ರಾತ್ರಿಯಾದರೂ ನಡೆಯುತ್ತಲೇ ಇರುವುದು ಒಂಟೆಗಳ ಸ್ವಭಾವ. ಅಷ್ಟೇ ಅಲ್ಲ, ಒಂಟೆಯಲ್ಲಿ ಇನ್ನೂ ಹಲವಾರು ವೈಶಿಷ್ಟ್ಯತೆಗಳಿದ್ದು ಸೃಷ್ಟಿಕರ್ತನಾದ ಅಲ್ಲಾಹನು ಒಂಟೆಗೆ ನೀಡಿರುವ ವಿಶೇಷತೆಗಳ ಬಗ್ಗೆ ಕುರ್'ಆನಿನಲ್ಲೇ ಸೂಚಿಸಿದ್ದಾನೆ.)

ವಿಶ್ರಮಿಸಲು ತಕ್ಕನಾದ ಸ್ಥಳವೂ ಅದಾಗಿರಲಿಲ್ಲವಾದ್ದರಿಂದ
*ಹುಸೈನ್ (ರ)ರವರ* ತಮ್ಮ ಒಂಟೆಯನ್ನು ಎಬ್ಬಿಸಲು ಪ್ರಯತ್ನಿಸಿದರು. ಕಾರಣ ಮೊದಲ ನೇೂಟಕ್ಕೇ ಭಯ ಮೂಡಿಸುವಂತಹ ಸ್ಥಳವಾಗಿತ್ತು ಅದು.

ಆದರೆ *ಹುಸೈನ್ (ರ)* ಎಬ್ಬಿಸಲು ಎಷ್ಟು ಪ್ರಯತ್ನಿಸಿದರೂ ಒಂಟೆ ಮಾತ್ರ ಅಲ್ಲಾಡಲಿಲ್ಲ. ಕೊನೆಗೆ ಚಾಟಿಯಿಂದ ಮೆತ್ತಗೆ ಒಂದೇಟು ಬಾರಿಸಿದರು. ಹೊಡೆತ ಬಿದ್ದಾಗ ಒಂಟೆ ಎದ್ದು ನಿಂತಿತಾದರೂ ಅಲ್ಲಿಂದ  ಮುಂದೆ ಕದಲದೆ ಮತ್ತೆ ಅಲ್ಲೇ ಕುಳಿತು ಕೊಂಡಿತು.

ಸೂಚನೆ ಸಿಗದೆ ಎಂದೂ ಎಲ್ಲೂ ಹೀಗೆ ಮಂಡಿಯೂರದ ಒಂಟೆ ಇಂದು ಇಲ್ಲೇಕೆ ಹೀಗೆ ವರ್ತಸುತ್ತಿದೆ? ಇದರಲ್ಲಿ ತಮಗೇನಾದರೂ ಸೂಚನೆಯಿರಬಹುದೇ ಎಂದು ತುಸು ಹೊತ್ತು ಆಲೇೂಚಿಸಿದ *ಹುಸೈನ್ (ರ)* ಏನೇೂ ನೆನಪಾದರಂತೆ....

ತಕ್ಷಣ ಒಂಟೆಯ ಮೇಲಿದ್ದ ಬಟ್ಟೆಯ ಗಂಟೊಂದನ್ನು ಬಿಚ್ಚಿ ಅದರಲ್ಲಿದ್ದ ಚಿಕ್ಕ ಥೈಲಿಯೊಂದನ್ನು ಹೊರ ತೆಗೆದು ಕೆಳಗಿಳಿದು ಆ ಥೈಲಿಯನ್ನು ಬಿಚ್ಚಿ ನೇೂಡಿದರು. ಅದರಲ್ಲಿ ಅಲ್ಪ ಮಣ್ಣಿತ್ತು.

*{ಆ ಮಣ್ಣನ್ನು ಮುಕರ್ರಬುಲ್ ಅಮ್ಲಾಕ್ ಮಲಕ್ ಜಿಬ್'ರೀಲ್ (ಅ)ರು ಮುಹಮ್ಮದ್ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರಿಗೂ, ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಅದನ್ನು ಅಲಿ ಬಿನ್ ಅಬೀತ್ವಾಲಿಬ್ (ರ)ರಿಗೂ, ಅಲಿ (ರ)ರವರು ಅದನ್ನು ಹಸನ್ (ರ)ರಿಗೂ, ಹಸನ್ (ರ) ಅದನ್ನು ಹುಸೈನ್(ರ)ರಿಗೂ ಕೊಟ್ಟು ಎಚ್ಚರಿಕೆಯಿಂದ ಭದ್ರವಾಗಿಟ್ಟುಕೊಳ್ಳಲು ಸೂಚಿಸುವುದರೊಂದಿಗೆ ಈ ಮಣ್ಣು ಈ ಲೇೂಕದ ಯಾವ ಸ್ಥಳದ ಮಣ್ಣಿಗೆ ಸರಿ ಹೊಂದುವುದೇೂ ಅಲ್ಲಿ ರಸೂಲ್ ಕರೀಮ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಕುಟುಂಬದ ಸದಸ್ಯರು ಹತರಾಗಲಿರುವರು. ಎಂದು ಸೃಷ್ಟಿಕರ್ತನಾದ ಅಲ್ಲಾಹನಿಂದ ಬಂದ ವಹ್ಯ್ (ರಹಸ್ಯ ಸಂದೇಶ) ಮೂಲಕ ತಿಳಿಸಿದ್ದರು}*

ಹುಸೈನ್ (ರ)ರವರು ತಮ್ಮ ಥೈಲಿಯಲ್ಲಿದ್ದ ಮಣ್ಣನ್ನು ಮತ್ತು ಆ ಸ್ಥಳದ ಮಣ್ಣನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು....

*ಸುಬುಹಾನಲ್ಲಾಹ್....*
 *ಹುಸೈನ್ (ರ)ರವರ ಕೈಲಿದ್ದ ಆ ಮಣ್ಣಿಗೂ ಮತ್ತು ಆ ಸ್ಥಳದ ಮಣ್ಣಿಗೂ ವ್ಯತ್ಯಾಸವೇ ಇರಲಿಲ್ಲ. ಅಲ್ಲಿಂದಲೇ ಸ್ವಲ್ಪ ಮಣ್ಣನ್ನು ತೆಗೆದು ಆ ಥೈಲಿಯಲ್ಲಿಟ್ಟಂತಿತ್ತು.*

ಹುಸೈನ್ (ರ)ರವರು ತಕ್ಷಣ ತಮ್ಮ ಯಾತ್ರಾ ತಂಡದಲ್ಲಿದ್ದ ಇಬ್ನು ಅಬ್ಬಾಸ್ (ರ)ರವರನ್ನು ಕರೆದು ಅವರ ಕೈಗೆ ಆ ಮಣ್ಣನ್ನು ಕೊಡುತ್ತಾ ಕೇಳಿದರು.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment