Tuesday, March 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣9⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಆದರೆ.... ⬇

*ಫಾತಿಮತ್ ಝಹ್ರಾ (ರ) ಎಂಬ ಆ ಮಗು, ಇಲ್ಲ ಅಪ್ಪ, ಅಮ್ಮನನ್ನು ಬಿಟ್ಟು ನಾನಿಲ್ಲಿ ಇರಲಾರೆ. ನಾನು ಕೂಡ ನಿಮ್ಮೊಂದಿಗೆ ಬರುತ್ತೇನೆ ಎಂದು ಹಠ ಹಿಡಿಯಿತು.* 

ಎಷ್ಟು ತಿಳಿ ಹೇಳಿದರೂ ಮಗು ಹಟ ಬಿಡಲಿಲ್ಲವಾದಾಗ ಸಯ್ಯಿದತುನಾ ಫಾತಿಮತ್ ಝಹ್ರಾ (ರ)ರವರಿಗಷ್ಟೇ ಅಲ್ಲ ಹುಸೈನ್ (ರ)ರವರ ಇಪ್ಪತ್ತೆರಡು ವರ್ಷದ ಪುತ್ರ *ಸಯ್ಯದುನಾ ಝೈನುಲ್ ಆಬಿದೀನ್ (ರ) ರಿಗೂ* ಜ್ವರ ಬಾಧಿಸಿತ್ತು. ಅಸೌಖ್ಯದಿಂದಿರುವ ಮಕ್ಕಳನ್ನೂ ಕರೆದೊಯ್ಯಬೇಕೆಂಬುದು ಅಲ್ಲಾಹನ ವಿಧಿಯಾಗಿರಬಹುದೆಂದು ಭಾವಿಸಿ ಅನಾರೇೂಗ್ಯ ಪೀಡಿತರಾದ ಮಕ್ಕಳನ್ನೂ ತಮ್ಮೊಂದಿಗೆ ಕರೆದೊಯ್ಯಲು ತೀರ್ಮಾನಿಸಿದರು.

ಜೊತೆಗೆ ಅಹ್ಲ್'ಬೈತಿನ ಕರುಳ ಕುಡಿಯಾದ ಸಯ್ಯದುನಾ ಹುಸೈನ್ (ರ)ರವರ ಕಷ್ಟ ಸುಖ ನೇೂವು ನಲಿವುಗಳನ್ನೂ ಸಮವಾಗಿ ಹಂಚಿಕೊಂಡು ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ ಸಹಧರ್ಮಿಣಿಯಾದ ಮಹದಿ *ಸಯ್ಯಿದತುನಾ ಬೀವಿ ಶಹ್ರು ಬಾನು (ರ)* ಮತ್ತು ಹುಸೈನ್ (ರ)ರವರ ಸಹೋದರಿಯಾದ ಮಹದಿ *ಸಯ್ಯಿದತುನಾ ಝೈನಬಾ ಬೀವಿ (ರ)* ಹಾಗೂ ಸಯ್ಯದುನಾ ಇಬ್ನು ಅಬ್ಬಾಸ್ (ರ) ಸೇರಿದಂತೆ ಒಟ್ಟು ಎಪ್ಪತ್ತೆರಡು ಜನರನ್ನೊಳಗೊಂಡ ಆ ಸಂಘವು ಯಾತ್ರೆ ಹೊರಟಿತು.

ಹಾಗೆ ಸಯ್ಯದುನಾ ಹುಸೈನ್ (ರ)ರವರ ನೇತೃತ್ವದ ಆ ಯಾತ್ರಾ ಸಂಘವು ಮೊದಲಿಗೆ ನೇರವಾಗಿ ಕಅಬಾಲಯಕ್ಕೆ ಹೇೂಗಿ..

*ಯಾ ಅಲ್ಲಾಹನೇ...* *ಪರಿಶುದ್ಧ ಇಸ್ಲಾಮಿನ ಪ್ರತಿನಿಧಿಯಾಗಿ ನೀತಿಯಿಂದ ಆಡಳಿತ ನಡೆಸಬೇಕಾಗಿದ್ದ ಖಲೀಫನಿಂದು ಈ ಸಮುದಾಯವನ್ನು ಅವಸಾನದಂಚಿಗೆ ಕೊಂಡೊಯ್ಯುತ್ತಿರುವುದರಿಂದ ಜನತೆ ನನ್ನ ನೆರವು ಕೇಳುತ್ತಿದ್ದಾರೆ.*

ನನಗಾದರೇೂ ಸಂಕಟವನ್ನು ಹೇಳಿಕೊಳ್ಳಲು ನೀನಲ್ಲದೆ ಮತ್ತೊಂದು ಅಭಯ ಕೇಂದ್ರವಿಲ್ಲವಲ್ಲ ನಾಥಾ... ನಿನ್ನ ಕಲ್ಪನೆಯೇನಿದೆಯೇೂ ಅದು ನಡೆಯದೆ ಇರಲಾರದೆಂದು ನಾನು ಬಲ್ಲೆ. ಹಾಗಾಗಿ ನಾನು ಕುಟುಂಬದೊಂದಿಗೆ ಕೂಫದ ಜನತೆಯ ನೆರವಿಗಾಗಿ ಹೇೂಗುತ್ತಿದ್ದೇನೆ. ಅನುಗ್ರಹಿಸು ನಾಥಾ ಎನ್ನುತ್ತಾ....

ಸರ್ವ ಚರಾಚರಗಳ ಸೃಷ್ಟಿಕರ್ತನಾದ ಅಲ್ಲಾಹನ ಸಂದೇಶವಾಹಕರೂ, ಅವನ ಹಬೀಬರೂ, ಅಂಬಿಯಾಗಳ ನೇತಾರರೂ, ಸಯ್ಯದುನಾ ಹುಸೈನ್ (ರ)ರವರ ಪಿತಾಮಹರೂ, ವಿಶ್ವಾಸಿ ಹೃದಯಗಳ ಉಜ್ವಲ ತಾರೆಯೂ ಆದ *ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ* ರು ಚಿರವಿಶ್ರಾಂತಿ ಪಡೆಯುತ್ತಿರುವ ಮದೀನಾದತ್ತ ಮುಖ ಮಾಡಿ...

ಪ್ರಿಯ ಪಿತಾಮಹಾನರೇ...
 *ಕೂಫದ ಜನತೆಯು ಯಝೀದನ ದುರಾಡಳಿತದಿಂದ ಬೇಸತ್ತು ನನ್ನ ನೆರವು ಅಪೇಕ್ಷಿಸಿದ್ದಾರೆ. ಹಾಗಾಗಿ ಅವರ ಅಪೇಕ್ಷೆಯ ಮೇರೆಗೆ ಕುಟುಂಬದೊಂದಿಗೆ ನಾನು ಕೂಫದತ್ತ ತೆರಳುತ್ತಿದ್ದೇನೆ. ಅಲ್ಲಾಹನ ರಸೂಲರೂ ನಮ್ಮೆಲ್ಲರ ಮುದ್ದಿನ ಕಣ್ಮಣಿಯೂ ಆದ ತಾವು ಅಲ್ಲಿಗೆ ತೆರಳಲು ನನಗೆ ಅನುಮತಿ ನೀಡಬೇಕು. ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತರು.*

ನಂತರ ಆ ಸಂಘವು ಕಅಬಾಲಯದಿಂದ ಹೊರಟು ಮರುಭೂಮಿಯಲ್ಲಿ ಸಂಚರಿಸುತ್ತಾ ಕೂಫದತ್ತ ಪ್ರಯಾಣ ಬೆಳೆಸಿತು.

ಮಕ್ಕಾದಿಂದ ಬಹು ದೂರ ಸಾಗಿದಾಗ ದಾರಿ ಮದ್ಯೆ ವಿಶ್ರಮಿಸಲೆಂದು ಡೇರೆ (ಟೆಂಟ್) ಹಾಕಿ ವಿಶ್ರಮಿಸುತ್ತಿರುವಾಗ ಕೂಫದ ಕಡೆಯಿಂದ ಒಂದು ವ್ಯಾಪಾರಿ ತಂಡವು ಮಕ್ಕಾದತ್ತ ಬರುತ್ತಿತ್ತು. ಹುಸೈನ್ (ರ)ರವರ ತಂಡವನ್ನು ಸಮೀಪಿಸಿದಾಗ ಆ ತಂಡದ ನಾಯಕ *ಹುಸೈನ್ (ರ) ರವರನ್ನು* ಕಂಡು ಅವರ ಹತ್ತಿರ ಹೇೂಗಿ ಕೇಳಿದ.. 

*ಯಾ.. ಹುಸೈನ್ (ರ)ರವರೇ... ತಾವೆತ್ತ ಯಾತ್ರೆ ಹೊರಟಿದ್ದೀರಿ.?*

ನಾವು ಕೂಫಕ್ಕೆ ಎನ್ನುತ್ತಾ, ಕೂಫಾದ ಜನತೆ ಮತ್ತು ಮುಸ್ಲಿಂ (ರ) ರವರು ಪತ್ರ ಬರೆದಿದ್ದ ವಿಷಯ ತಿಳಿಸಿದರು.

ಕೂಫದಲ್ಲಿ ನಡೆದ ಘಟನೆಗಳೆಲ್ಲವನ್ನೂ ಹುಸೈನ್ (ರ)ರವರಿಗೆ ವಿವರಿಸಿದ ಆ ತಂಡದ ನಾಯಕ ಹೇಳಿದರು...

*ಪ್ರಿಯ ಹುಸೈನ್ (ರ)ರವರೇ... ತಮಗೆ ಪತ್ರ ಬರೆದ ಮುಸ್ಲಿಂ ಇಬ್ನು ಉಹೈದ್ (ರ)ರಾಗಲೀ ಮತ್ತು ಅವರಿಗೆ ವಾಸ್ತವ್ಯ ಕಲ್ಪಿಸಿದ ಹಾನಿಯಾ (ರ)ರವರಾಗಲೀ ಇಂದು ಜೀವಂತವಿಲ್ಲ. ಸಕಾಲದಲ್ಲಿ ಕೂಫದ ಜನತೆಯಿಂದ ಅಗತ್ಯ ನೆರವು ದೊರೆಯದ ಕಾರಣ ಯಝೀದ್'ನ ಕಿಂಕರನಾದ ಉಬೈದ್ ಅವರನ್ನು ಕೊಂದಿದ್ದಾನೆ. ಮಾತ್ರವಲ್ಲ ಮುಸ್ಲಿಂ (ರ) ಎರಡು ಮಕ್ಕಳನ್ನೂ ಸಹ ನಿರ್ದಯೆಯಿಂದ ವಧಿಸಿದ್ದಾರೆ..*

ಅದರಿಂದ್ದ ನೀವು ಕೂಫದತ್ತ ಹೇೂಗದೆ ಮಕ್ಕಾಕ್ಕೆ  ಹಿಂದಿರುಗುವುದು ಉತ್ತಮ ಎಂದು ಸಲಹೆ ನೀಡಿದರು.

ಆಗ *ಹುಸೈನ್ (ರ)* ಕೇಳಿದರು.. ಆ ಮಕ್ಕಳನ್ನು ಸಹ ಅವರು ಬಿಡಲಿಲ್ಲವೇ...?

ಇಲ್ಲ ನಿರ್ದಯಿಯಾದ ಹಂತಕನೊಬ್ಬ ಆ ಮಕ್ಕಳನ್ನು ಬಹು ಕ್ರೂರವಾಗಿ ತಲೆ ಕಡಿದು ಕೊಂದಿದ್ದಾನೆ.

ಆಗ ಡೇರೆಯೊಳಗೆ ಹೇೂದ
ಹುಸೈನ್ (ರ)ರವರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment