Tuesday, March 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

ಮತ್ತೊಂದು ಮೂಲದ ಪ್ರಕಾರ... ⬇

ಇಬ್ನು ಅಬ್ಬಾಸ್ (ರ) ನೇತೃತ್ವದ ಮುಸ್ಲಿಂ ಸೈನಿಕರು ಆ ಬಿಲ್ಲು ಬಾಣ ಮತ್ತು ಈಟಿಯ ದಾಳಿಗೀಡಾಗಿ ಒಬ್ಬೊಬ್ಬರೇ ನೆಲಕ್ಕುರುಳಲಾರಂಭಿಸಿದರು. ಒಬ್ಬ ಶತ್ರು ಸೈನಿಕ ಬಿಟ್ಟ ಬಾಣವು ಸಯ್ಯದುನಾ ಇಬ್ನು ಅಬ್ಬಾಸ್ (ರ)ರವರ ಕಣ್ಣಿನೊಳಹೊಕ್ಕಿತು. ಅನ್ನಾಹಾರಗಳಿಲ್ಲದೆ ಮೊದಲೇ ನಿಶ್ಶಕ್ತರಾಗಿದ್ದ ಇಬ್ನು ಅಬ್ಬಾಸ್ (ರ)ರವೊಂದಿಗೆ ಆ ಐವತ್ತೆರಡು ಧೀರ ಯೇೂಧರೂ ಶಹೀದಾಗಿದ್ದಾರೆ. ಇನ್ನಲಿಲ್ಲಾಹ್....

ಅಲ್ಪ ಸಮಯದ ಬಳಿಕ ಅಲ್ಲಿಗಾಗಮಿಸಿದ ಅಹ್ಲ್'ಬೈತಿನ ಕಣ್ಮಣಿಯಾದ ಸಯ್ಯದುನಾ ಹುಸೈನ್ (ರ)ರವರು ಸಾವಿರಾರು ಸೈನಿಕರನ್ನೆದುರಿಸಿ ನೀರು ತರಲಾಗದೆಂಬ ಅರಿವಿದ್ದರೂ ಅಲ್ಲಾಹನಿಗಾಗಿ, ಅವನ ದೀನಿಗಾಗಿ, ಅವನ ಹಬೀಬರ ﷺ ಹೃದಯದ ಕುಸುಮವಾದ ಅಹ್ಲ್'ಬೈತಿನ ಕಣ್ಮಣಿಗಾಗಿ ತಮ್ಮ ಬದುಕಿನ ಕೊನೆಯುಸಿರಿನ ತನಕವೂ ಜೊತೆ ನಿಂತು ನೀರು ತರಲು ಅನುಮತಿ ಕೊಟ್ಟಾಗಲೂ ಮರು ಮಾತನಾಡದೆ ಇಬ್ನು ಅಬ್ಬಾಸ್ (ರ)ರೊಂದಿಗೆ ಹೇೂಗಿ ಶತ್ರು ಸೈನಿಕರ ಆಕ್ರಮಣಕ್ಕೀಡಾಗಿ ಶಹೀದಾದ ಆ ಶುಹದಾಗಳ ಪವಿತ್ರ ಜನಾಝವನ್ನು ಕಂಡು ಕಂಬನಿ ಮಿಡಿಯುತ್ತಾ ಪ್ರಾರ್ಥಿಸುವುದಲ್ಲದೆ ಸಾವಿರಾರು ಶತ್ರು ಸೈನಿಕರ ಮುಂದೆ ಅಹ್ಲ್'ಬೈತಿನ ಆ ಕಣ್ಮಣಿ ಇನ್ನೇನು ತಾನೆ ಮಾಡಲು ಸಾಧ್ಯ? ಬಹಳ ಹೊತ್ತು ಅಲ್ಲೇ ನಿಂತು ಕಂಬನಿ ಮಿಡಿದ ಸಯ್ಯದುನಾ ಹುಸೈನ್ (ರ) ರವರು ನಂತರ ಡೇರೆಯತ್ತ ನಡೆದರು.

ಆಗ ಡೇರೆಯಲ್ಲಿ ಕಂಡ ದೃಶ್ಯ ಅವರ ಅಂತಃಕರಣವನ್ನೇ ಕಲಕಿತು.

ಅಲ್ಲಿ ಹುಸೈನ್ (ರ)ರವರ ದ್ವಿತೀಯ ಪುತ್ರರಾದ ಹದಿನೆಂಟು ವರ್ಷ ವಯಸ್ಸಿನ *ಅಲಿ ಅಕ್ಬರ್ (ರ)* ತಮ್ಮ ತಾಯಿಯಾದ ಶಹ್ರುಬಾನು (ರ) ರೊಂದಿಗೆ...

*ಅಮ್ಮಾ ನೀರು ತರಲೆಂದು ಹೇೂದ ನಮ್ಮ ತಂಡದ ಸದಸ್ಯರೆಲ್ಲರೂ ಶತ್ರುಗಳ ದಾಳಿಗೀಡಾಗಿ ಶಹೀದಾಗಿರುವುದರಿಂದ ತಾವು ಅಪ್ಪಣೆ ಕೊಟ್ಟರೆ ನಾನು ಹೇೂಗಿ ಆ ಶತ್ರುಗಳೊಂದಿಗೆ ಹೇೂರಾಡಿ ನೀರು ತರುತ್ತೇನೆ. ಅದು ಸಾಧ್ಯವಾಗದಿದ್ದರೆ ಅಲ್ಲಾಹನ ಮಾರ್ಗದಲ್ಲಿ ದೀನಿಗಾಗಿ ಶಹೀದಾಗುತ್ತೇನೆ. ಹಾಗಾಗಿ ಯುದ್ಧಕ್ಕೆ ತೆರಳಲು ನನಗೆ ಅನುಮತಿ ಕೊಡಿ ಅಮ್ಮಾ...* ಎನ್ನುತ್ತಿದ್ದಾರೆ.

ಇದನ್ನು ಕೇಳಿದ ಮಹದಿ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಅಪ್ಪಣೆ ಕೊಟ್ಟರೆ ಸಾವಿರಾರು ಸೈನಿಕರೊಂದಿಗೆ ಹದಿನೆಂಟರ ಹರೆಯದ ತಮ್ಮ ಪ್ರಿಯ ಪುತ್ರ ಹಿಂದಿರುಗಿ ಬರಬಹುದೆಂಬ ಯಾವ ಭರವಸೆಯೂ ಇಲ್ಲದ ಕಾರಣ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಹುಸೈನ್ (ರ) ರನ್ನು ಕಂಡೊಡನೆ ಮಹದಿ ಕಂಗಳಿಂದ ವರ್ಷಧಾರೆಯಂತೆ ಹರಿಯುತ್ತಿರುವ ಕಂಬನಿಗಳನ್ನೊರೆಸುತ್ತಾ....

*ಪ್ರಿಯರೇ... ನಮ್ಮ ಹೃದಯದ ಕುಸುಮವಾದ ಅಲಿ ಅಕ್ಬರ್ (ರ) ಯುದ್ಧಕ್ಕೆ ತೆರಳಲು ನನ್ನೊಂದಿಗೆ ಅನುಮತಿ ಕೇಳುತ್ತಿದ್ದಾನೆ. ಅವನಿಗೆ ನಾನು ಏನೆನ್ನಲಿ? ಎನ್ನುತ್ತಾ ಅಳಲಾರಂಭಿಸಿದರು.*

ಪ್ರಿಯ ಓದುಗರೇ... ತನ್ನಂತರಂಗದ ಕುಸುಮದಂತಹ ಪುತ್ರ ಅನುಮತಿ ಕೇಳುತ್ತಿರುವುದು ಮೃತ್ಯುಕೂಪಕ್ಕೆ ತೆರಳಲೆಂದು ಮನವರಿಕೆಯಾದರೆ ಯಾವ ಮಾತೃ ಹೃದಯ ತಾನೆ ಸಹಿಸೀತು?

ಮೊದಲೇ ಅನ್ನಾಹಾರವಿಲ್ಲದೆ ಕನಿಷ್ಟ ದಾಹವಡಗಿಸಲೂ ಸಹ ಗುಟುಕು ನೀರೂ ಲಭಿಸದೆ ಕಂಗಾಲಾಗಿ ನಿತ್ರಾಣರಾಗಿರುವವರು ಒಂದೆಡೆಯಾದರೆ ನೀರು ತರಲೆಂದು ಹೇೂದವರೆಲ್ಲರೂ ಶತ್ರುಗಳ ಆಕ್ರಮಣಕ್ಕೀಡಾಗಿ ಶಹೀದಾದುದನ್ನು ಕಂಡು ಕಂಬನಿ ಮಿಡಿಯುತ್ತಾ ಭಾರವಾದ ಮನಸ್ಸಿನೊಂದಿಗೆ ಡೇರೆಯೊಳಗೆ ಪ್ರವೇಶಿಸಿದ ಸಯ್ಯದುನಾ ಹುಸೈನ್ (ರ)ರವರು ಉಮ್ಮಳಿಸಿ ಬರುವ ದುಖವನ್ನು ತಡೆಯುವ ವಿಫಲ ಪ್ರಯತ್ನ ಮಾಡುತ್ತಾ ಪತ್ನಿ ಶಹ್ರುಬಾನ್ (ರ) ನಾನೇನು ಹೇಳಲಿ ಅವನಿಗೆ ಅಪ್ಪಣೆ ಕೊಡು ಎಂದರು.

ಹುಸೈನ್ (ರ) ಅಪ್ಪಣೆ ಕೊಡು ಎಂದಾಗ ಮಹದಿ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಹೇಳಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment