Tuesday, March 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 3⃣2⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
🌌🌌🌌🌌🌌🌌🌌🌌🌌
✍ _ಗಫೂರ್ ಬಾಯಾರ್_
☔☔☔☔☔☔☔☔☔

ಇದನ್ನು ಕೇಳಿದ *ಹುಸೈನ್ (ರ)* ನಿಸ್ತೇಜ ಭಾವದಿಂದ ಅವನ ಮುಖ ನೋಡುತ್ತಾ ಹೇಳಿದರು... ⬇

*ಯಾ ಅಂರ್...*
ಈ ಊರಿನವರ ಆಹ್ವಾನದ ಮೇರೆಗೆ  ಬಂದವರು ನಾವು.. ಮಾತ್ರವಲ್ಲ, ಅವರ ಕಷ್ಟಗಳನ್ನು ಅಧ್ಯಯನ ನಡೆಸಿದ ನಂತರವಷ್ಟೇ ಈ ತೀರ್ಮಾನಕ್ಕೆ ಬಂದಿದ್ದೇವೆ. ಆದ್ದರಿಂದ ಸದ್ಯಕ್ಕೆ ಅವರನ್ನು ಯಝೀದನ ದುರಾಡಳಿತದಿಂದ ಪಾರು ಮಾಡದೆ ಹಿಂದಿರುಗುವ ಪ್ರಶ್ನೆಯೇ ಇಲ್ಲ.

ನಮಗೆ ಅಧಿಕಾರದ ಮೇೂಹವಿಲ್ಲ. ಅದರ ಅಗತ್ಯವೂ ನಮಗಿಲ್ಲ. ಆದರೆ ಅಲ್ಲಾಹನ ಪ್ರತಿನಿಧಿಗಳಾದ ನಾವು ಮರಣವನ್ನು ಭಯಪಡಲಾರೆವು. ಆದ್ದರಿಂದ ನೀನು ನಿನ್ನ ಧೌತ್ಯವನ್ನು ನಿರ್ವಹಿಸು..!

ಆದರೆ ನಮಗೊಮ್ಮೆ ಆ ಯಝಿದ್'ನನ್ನು ಭೇಟಿಯಾಗಿ ನೇರವಾಗಿ ಅವನೊಂದಿಗೆ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಬೇಕಿದೆ.

ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನಮ್ಮ ನಾಯಕರಾದ ಮುತ್ತು ರಸೂಲ್ ﷺ ರವರ ಬಳಿ ಹೇೂಗುತ್ತೇವೆಯೇ ವಿನಃ ಮಕ್ಕಾಕ್ಕೆ ಮರಳಲಾರೆವು. ಆದ್ದರಿಂದ ನೀನಿನ್ನು ಹೋಗಬಹುದು ಎಂದರು.

ಸದ್ಯದ ಮಟ್ಟಿಗೆ ಸಂಗಡಿಗರೊಂದಿಗೆ ಅಲ್ಲಿಂದ ಹಿಂದಿರುಗಿದ ಅಂರ್'ವಸಅದ್'ನು, ಉಬೈದ್'ನ ಬಳಿ ತೆರಳಿ ಈ ವಿಷಯ ತಿಳಿಸಿದಾಗ ಉಬೈದ್ ಹೇಳಿದನು...

*"ಈ ತನಕ ಹುಸೈನ್ (ರ)ರಿಗೆ ತಮ್ಮ ತಂಡದೊಂದಿಗೆ ಅಲ್ಲಿಂದ ಹಿಂದಿರುಗಲು ಅವಕಾಶವಿತ್ತು. ಆದರೆ ಇನ್ನು ಹಿಂದಿರುಗಲು ಅವಕಾಶ ನೀಡಬಾರದು. ಒಂದು ವೇಳೆ ಹಿಂದಿರುಗುವುದಾದರೆ ಯಝೀದನನ್ನು ಖಲೀಫನೆಂದು ಅಂಗೀಕರಿಸಲೇಬೇಕು. ಇಲ್ಲದಿದ್ದರೆ ಯೂಪ್ರಟಿಸ್ ನದಿ ತೀರದಲ್ಲಿರುವುದರಿಂದ ಅವರು ಆ ನದಿಯ  ನೀರನ್ನಾಶ್ರಯಿಸಿರುತ್ತಾರೆ. ಅವರಿಗೆ ನದಿಯಿಂದ ಒಂದು ಹನಿ ನೀರು ಮುಟ್ಟಲೂ ಸಹ ಅವಕಾಶ ಕೊಡಬಾರದು" ಎಂದು ಆಜ್ಞಾಪಿಸಿ, ಸಾವಿರ ಸೈನಿಕರ ಹೆಚ್ಚುವರಿ ಪಡೆಯೊಂದಿಗೆ ಉಬೈದನೇ ಬಂದು ಯೂಪ್ರಟಿಸ್ ನದಿಯ ಸುತ್ತಮುತ್ತ ಪಹರೆಗೆ ಹಲವಾರು ಸೈನಿಕರನ್ನು ನಿಯಮಿಸಿದನು.*

ಇತ್ತ ಹುಸೈನ್ (ರ) ಮತ್ತು ಸಹಯಾತ್ರಿಕರ ತಂಡ ತಂದಿದ್ದ ಆಹಾರವೂ ಮುಗಿದಿದ್ದರಿಂದ ಮತ್ತು ಕೂಫಾ ನಿವಾಸಿಗಳ ನೆರವೂ ಲಭಿಸದ ಕಾರಣ ಯೂಪ್ರಟಿಸ್ ನದಿಯ ನೀರನ್ನಷ್ಟೇ ಅವಲಂಭಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದರೆ ಇದೀಗ ಯಝೀದ್'ನನ್ನು ಖಲೀಫನೆಂದು ಅಂಗೀಕರಿಸದಿದ್ದಲ್ಲಿ ಯೂಪ್ರಟಿಸ್ ನದಿಯ ನೀರನ್ನೂ ಮುಟ್ಟದಂತೆ ಉಬೈದ್'ನ ಪಡೆ ನಿರ್ಬಂಧ ಹೇರಿದ ಕಾರಣ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು.

*ಯಾತ್ರಾ ತಂಡದಲ್ಲಿ ಚಿಕ್ಕ ಮಕ್ಕಳೂ ಇದ್ದಿದ್ದರಿಂದ ದಾಹ ಸಹಿಸಲಾರದ ಪುಟ್ಟ ಮಕ್ಕಳ ಅಳು ಮುಗಿಲು ಮುಟ್ಟಿತ್ತು.*

ಮಕ್ಕಳ ಅಳು ಮುಗಿಲು ಮುಟ್ಟಿದಾಗ ಅದನ್ನು ಕಾಣಲಾರದೆ ಇಬ್ನು ಅಬ್ಬಾಸ್ (ರ)ರವರು ಹುಸೈನ್ (ರ)ರವರೊಂದಿಗೆ ಹೇಳಿದರು.

ದಾಹದಿಂದ ಬಳಲುತ್ತಿರುವ  ಪುಟ್ಟ ಕಂದಮ್ಮಗಳ ರೇೂದನವನ್ನು ನನ್ನಿಂದ ಕಾಣಲಾಗುತ್ತಿಲ್ಲ. ಹಾಗಾಗಿ ಉಬೈದ್'ನ ಶಸ್ತ್ರಸಜ್ಜಿತ ಪಡೆಯೊಂದಿಗೆ ಹೇೂರಾಡಿಯಾದರೂ ಸರಿ ನದಿಯಿಂದ ನೀರು ತರಲು ನಾವು ಹೇೂಗುತ್ತೇವೆ. ಹಾಗಾಗಿ ದಯವಿಟ್ಟು ತಾವು ಅನುಮತಿ ನೀಡಬೇಕು ಎಂದರು.

*ಮಕ್ಕಳ ಅಳುವನ್ನು ಕಂಡು ಅಸಹಾಯಕತೆಯಿಂದ ಪರಿತಪಿಸುತ್ತಿದ್ದ ಹುಸೈನ್(ರ) ತಕ್ಷಣ ಸಮ್ಮತಿಸಿದರು.*

ಆಗ ಇಬ್ನು ಅಬ್ಬಾಸ್ (ರ)ರವರು ತಮ್ಮೊಂದಿಗಿದ್ದ ಎಪ್ಪತ್ತೆರಡು ಜನರ ತಂಡದಿಂದ ಮೂವತ್ತು ಅಶ್ವಪಡೆ ಯೇೂಧರನ್ನೂ ಮತ್ತು ಇಪ್ಪತ್ತು ಕಾಲಾಳು ಪಡೆ ಯೇೂಧರನ್ನೂ ಕರೆದೊಯ್ದರು.

ಇಬ್ನು ಅಬ್ಬಾಸ್ (ರ)ರವರ ನೇತೃತ್ವದ ತಂಡ ನೀರಿಗಾಗಿ ಯೂಪ್ರಟಿಸ್ ನದಿಯ ಕಡೆ ಬರುತ್ತಿರುವುದನ್ನು ಕಂಡ ಉಬೈದ್ ಹೇಳಿದ...

ನೇೂಡಲ್ಲಿ ಅವರು ನೀರಿಗಾಗಿ ಬರುತ್ತಿದ್ದಾರೆ. ಅವರನ್ನು ನೀರಿನ ಹತ್ತಿರ ಬರದಂತೆ ತಡೆಯಬೇಕು ಎನ್ನುತ್ತಿದ್ದಂತೆ, ನದಿ ತಟದಲ್ಲಿ ಕಾವಲು ಕಾಯುತ್ತಿದ್ದ ಯೇೂಧರು ಮತ್ತು ಉಬೈದ್'ನೊಂದಿಗೆ ಅಲ್ಪ ದೂರದಲ್ಲಿದ್ದ ಸೈನಿಕರು ಸೇರಿಕೊಂಡು  ಇಬ್ನು ಅಬ್ಬಾಸ್ (ರ) ರವರ ತಂಡದ ಮೇಲೆ ಬಾಣ ಮತ್ತು ಈಟಿಯ ಸುರಿಮಳೆಗೈಯ್ಯಲಾರಂಬಿಸಿದರು.

*ಹಲವು ದಿನಗಳಿಂದ ಅನ್ನ ನೀರಿಲ್ಲದೆ ಬಳಲಿ ಬೆಂಡಾದ ಐವತ್ತೆರಡು ಜನರ ಮೇಲೆ ಒಮ್ಮೆಲೆ ಸಾವಿರಾರು ಸೈನಿಕರು ಬಿಲ್ಲು ಬಾಣಗಳ ಸುರಿಮಳೆಗೆರೆದರೆ ಹೇಗಿರಬಹುದು ಸ್ಥಿತಿ?*

{ಒಂದು ಮೂಲದ ಪ್ರಕಾರ ಇಬ್ನು ಅಬ್ಬಾಸ್ (ರ)ರವರ ನೇತೃತ್ವದ ಮುಸ್ಲಿಂ ಪಡೆ ಶತ್ರು ಸೈನಿಕರೊಂದಿಗೆ ಹೇೂರಾಡಿ ನಲವತ್ತು ಚರ್ಮದ ಪಾತ್ರೆಯಲ್ಲಿ ನೀರು ತಂದಿದ್ದಾರೆಂಬ ಬಗ್ಗೆ ಉಲ್ಲೇಖವಿದೆ}

ಮತ್ತೊಂದು ಮೂಲದ ಪ್ರಕಾರ... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment