*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --2
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 1 :*_
*ಒಳ್ಳೆಯ ಪತ್ನಿ*
ಅಲ್ಲಾಹನು ಹೇಳುತ್ತಾನೆ.
وَأَنكِحُوا الْأَيَامَىٰ مِنكُمْ وَالصَّالِحِينَ مِنْ عِبَادِكُمْ وَإِمَائِكُمْ ۚ إِن يَكُونُوا فُقَرَاءَ يُغْنِهِمُ اللَّهُ مِن فَضْلِهِ ۗ وَاللَّهُ وَاسِعٌ عَلِيمٌ
(سورة النور 32 )
ನಿಮ್ಮಲ್ಲಿ ಜೋಡಿಗಳಿಲ್ಲದೆ ಒಂಟಿಯಾಗಿರುವ ಸ್ತ್ರೀ - ಪುರುಷರಿಗೂ ಮತ್ತು ನಿಮ್ಮ ದಾಸ-ದಾಸಿ ಯರಲ್ಲಿ ಸಜ್ಜನರಾಗಿರುವವರಿಗೂ ವಿವಾಹ ಮಾಡಿಕೊಡಿರಿ . ಅವರು ಬಡವರಾಗಿದ್ದರೆ
ಅಲ್ಲಾಹನು ತನ್ನ ಔದಾರ್ಯದಿಂದ ಅವರನ್ನು ಶ್ರೀಮಂತಗೊಳಿಸುವನು.
ಅಲ್ಲಾಹನು ಅತೀ ವಿಶಾಲವಂತನೂ ಸರ್ವಜ್ಞನೂ ಆಗಿರುತ್ತಾನೆ .
(ಸೂರತ್ತುನ್ನೂರ್ 32)
ಒಂಟಿ ಜೀವನ ಯಾರಿಗೂ ಉತ್ತಮವಲ್ಲ.
ಸಮಯವಿಡೀ ಆರಾಧನೆಗಳಲ್ಲಿ ಮಗ್ನರಾಗಿ ಅಲ್ಲಾಹನ ಸಾಮಿಪ್ಯ ಕರಗತ ಮಾಡಲು ಉದ್ದೇಶಿಸಿದ ಸ್ವಹಾಬಿಗಳನ್ನು ಕರೆದು ಮದುವೆಯಾಗುವಂತೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಜ್ಞಾಪಿಸಿದ್ದು ಹದೀಸುಗಳಲ್ಲಿದೆ.
ತನ್ನ ಮಡದಿಯಾಗಿ ಬರುವವಳು ಒಳ್ಳೆಯ ಪತ್ನಿಯಾದರೆ ಪುರುಷನ ಜೀವನ ಬೆಳಕಾಗುತ್ತದೆ.
ಆತನ ಮನೆ ಮತ್ತು ಕುಟುಂಬ ಬೆಳಕಿನಲ್ಲಿರುತ್ತದೆ.
ವಿರುದ್ಧವಾದರೆ ಕತ್ತಲೆಯೂ ಆಗುತ್ತದೆ.
ಉತ್ತಮ ಪತ್ನಿ ಲಭಿಸಿದವನ ಬಗ್ಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಕೆಲವೊಂದು ಹದೀಸ್ ನೋಡೋಣ.
عَنْ أَبِي هُرَيْرَةَ رَضِيَ اللَّهُ عَنْهُ عَنْ النَّبِيِّ صَلَّى اللَّهُ عَلَيْهِ وَسَلَّمَ قَالَ : تُنْكَحُ الْمَرْأَةُ لِأَرْبَعٍ : لِمَالِهَا ، وَلِحَسَبِهَا ، وَلِجَمَالِهَا ، وَلِدِينِهَا ، فَاظْفَرْ بِذَاتِ الدِّينِ تَرِبَتْ يَدَاكَ
(بخاري )
ಅಬೂಹುರೈರ (ರ)ವರದಿ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
ಕೆಲವರು ಸಂಪತ್ತಿಗಾಗಿ ಇನ್ನು ಕೆಲವರು ಕುಲ ನೋಡಿ ಇನ್ನು ಕೆಲವರು ಸೌಂಧರ್ಯ ನೋಡಿಯೂ ಇನ್ನು ಕೆಲವರು ದೀನ್ ನೋಡಿಯೂ ವಿವಾಹವಾಗುವರು.
ನೀನು ದೀನ್ ಇರುವ ಮಹಿಳೆಯನ್ನು ವಿವಾಹವಾಗು.
(ಬುಖಾರಿ)
-----------------------------------------------------
عن عبدالله بن عمرو أنّ الرسول -عليه الصلاة والسلام قال: الدُّنيا متاعٌ، وخيرُ متاعِ الدُّنيا المرأةُ الصَّالحةُ،
(مسلم)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಪ್ರಪಂಚದಲ್ಲಿರುವ ಸರಕುಗಳ ಪೈಕಿ ಉತ್ತಮವಾದ ಸರಕು ಉತ್ತಮ ಸ್ತ್ರೀಯಾಗಿದ್ದಾಳೆ.
(ವರದಿ : ಮುಸ್ಲಿಂ 1467)
-----------------------------------------------------
عن ثوان قال: قال رسول الله صلي الله عليه وسلم :
ليَتَّخِذْ أَحَدُكُمْ قَلْبًا شَاكِرًا ، وَلِسَانًا ذَاكِرًا ، وَزَوْجَةً تُعِينُه أَحَدَكُمْ عَلَى أَمْرِ الْآخِرَةِ
(احمد 22437 )
ನಿಮ್ಮ ಹೃದಯ ಕೃತಜ್ಞತೆ ಸಲ್ಲಿಸುವ ಹೃದಯವಾಗಿರಲಿ.
ನಾಲಗೆ ಅಲ್ಲಾಹನ ಸ್ಮರಿಸುವಂತಾಗಿರಲಿ.ನಿಮ್ಮ ಪರಲೋಕಕ್ಕೆ ಸಹಾಯ ಮಾಡುವ ಪತ್ನಿಯಿರಲಿ.
(ಇಮಾಮ್ ಅಹ್ಮದ್ ವರದಿ 22437)
-----------------------------------------------------
عَنْ مَعْقِلِ بْنِ يَسَارٍ قَالَ: قَالَ رسول الله صلي الله عليه وسلم : «تَزَوَّجُوا الْوَدُودَ الْوَلُودَ فَإِنِّي مُكَاثِرٌ بِكُمُ الأُمَمَ» (أبو داود 2050)
ಮಹ್'ಖಿಲ್ ಬಿನ್ ಯಸಾರ್(ರ)ವರದಿ,
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಪತಿಯನ್ನು ಅತೀ ಪ್ರೀತಿಸುವ ಹೆಣ್ಣನ್ನು ಮತ್ತು ಅತೀ ಹೆಚ್ಚು ಹೆರುವವಳನ್ನು ಮದುವೆಯಾಗಿರಿ.
ನಿಮ್ಮ ಮೂಲಕ ನನ್ನ ಅನುಯಾಯಿಗಳು ಅಧಿಕವಾಗುವುದನ್ನು ನಾನು ನಿರೀಕ್ಷಿಸುತ್ತೇನೆ.
(ಅಬೂದಾವೂದ್ )
-----------------------------------------------------
ಒಳ್ಳೆಯ ಪತ್ನಿಯು ಒಬ್ಬನ ವಿಜಯದ ಮೂರು ಸಂಕೇತಗಳಲ್ಲಿ ಒಂದಾಗಿದೆಯೆಂದೂ ಕೆಟ್ಟ ಹೆಣ್ಣು ಒಬ್ಬನ ಪರಾಜಯದ ಮೂರು ಸಂಕೇತಗಳಲ್ಲಿ ಒಂದಾಗಿದೆಯೆಂದೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ.
قال رسول الله صلى الله عليه وسلم: من سعادة ابن آدم ثلاثة، ومن شقاوة ابن آدم ثلاثة: من سعادة ابن آدم: المرأة الصالحة، والمسكن الصالح، والمركب الصالح، ومن شقاوة ابن آدم: المرأة السوء، والمسكن السوء، والمركب السوء.(احمد )
ಒಬ್ಬನ ವಿಜಯದ ಸಂಕೇತ ಮೂರಾಗಿದೆ.
1. ಉತ್ತಮ ಹೆಣ್ಣು
2.ಉತ್ತಮ ಮನೆ
3.ಉತ್ತಮ ವಾಹನ
ಪರಾಜಯದ ಸಂಕೇತವೂ ಮೂರಾಗಿದೆ.
1.ಕೆಟ್ಟ ಹೆಣ್ಣು
2.ಕೆಟ್ಟ ಮನೆ
3.ಕೆಟ್ಟ ವಾಹನ.
(ವರದಿ :ಇಮಾಮ್ ಅಹ್ಮದ್)
ಒಟ್ಟಿನಲ್ಲಿ ಈ ಎಲ್ಲಾ ಹದೀಸುಗಳಿಂದ ಮತ್ತು ಆಯತ್'ನಿಂದ ಉತ್ತಮ ಪತ್ನಿ ಲಭಿಸಿದವನು ಭಾಗ್ಯವಂತನೆಂದು ಸ್ಪಷ್ಟವಾಗುತ್ತದೆ.
ಉತ್ತಮ ಪುರುಷನಿಗೆ ಉತ್ತಮ ಪತ್ನಿ ಲಭಿಸಿದರೆ ಉತ್ತಮ ಕುಟುಂಬ ಅಲ್ಲಿ ಸೃಷ್ಠಿಯಾಗುತ್ತದೆ.
ಈ ಎರಡರಲ್ಲಿ ಒಂದು ತಪ್ಪಿದರೆ ಆ ಕುಟುಂಬ ಛಿಧ್ರವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ
ಉತ್ತಮ ಬೆಳೆ ಬರಬೇಕಾದಲ್ಲಿ ಉತ್ತಮ ಭೂಮಿ ಬೇಕೆಂಬುದರಲ್ಲಿ ಸಂಶಯವಿಲ್ಲ ತಾನೇ!!
ತನಗೆ ಲಭಿಸಿದ ಪತ್ನಿ ಉತ್ತಮವಲ್ಲದಿದ್ದರೆ ಅವರನ್ನು ಸರಿ ದಾರಿಗೆ ತರುವ ಕೆಲವೊಂದು ಮಾಹಿತಿಗಳು ಮುಂದಿನ ಭಾಗದಲ್ಲಿ.
ಎಲ್ಲರಿಗೂ ಶೇರ್ ಮಾಡಿ
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment