Tuesday, April 28, 2020

🇸🇱🇸🇱🇸🇱🇸🇱🇸🇱🇸🇱🇸🇱
*ಎಸ್ಸೆಸ್ಸೆಫ್ ನ ಹುಟ್ಟು*,
*ನೈಜ ಅಹ್ಲುಸುನ್ನದ ಧ್ಯೇಯೋದ್ದೇಶಗಳು.*
〰〰〰〰〰〰〰
       ಭಾಗ➖02
〰〰🇸🇱🇸🇱🇸🇱〰〰
✍ ~ಗಫೂರ್ ಬಾಯಾರು~
➖➖➖➖➖➖➖
⚖ *ಸಂವಿಧಾನ*⚖
➖➖➖➖➖➖➖
1973 ರಲ್ಲಿ ಸಂವಿಧಾನ ಅಸ್ಥಿತ್ವಕ್ಕೆ ಬಂತು. 2010ರಲ್ಲಿ ಕೊನೆಯದಾಗಿ ಆವಿಷ್ಕರಿಸಲಾಯಿತು.

👉 *ನಿಯಮ ಭಾಗ 5*

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ನೇತೃತ್ವ ನೀಡುವಂತಹ *ಪರಿಶುದ್ಧ ಅಹ್ಲುಸ್ಸುನತ್ತಿವಲ್ ಜಮಾಅತ್ತಿನ* ಆಶಯಾದರ್ಶಗಳಲ್ಲಿ ವಿಶ್ವಾಸವಿರಿಸಿ ಗಟ್ಟಿಯಾಗಿ ನೆಲೆಗೊಳ್ಳುವ ಒಂದು ಮುಸ್ಲಿಂ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿ ಬೆಳೆಸಿ ಅದರಿಂದ ಅವರಿಗೆ ಧರ್ಮಭಕ್ತಿ, ದೇಶಭಕ್ತಿ, ಐಕ್ಯತೆ, ಶಿಸ್ತು, ಆತ್ಮಶಕ್ತಿ, ಹಾಗು ಉತ್ತಮ ನಡವಳಿಕೆಗಳಿಂದ, ವಿದ್ಯಾಭ್ಯಾಸದ ಉನ್ನತಿಯನ್ನು  ಉಂಟು ಮಾಡಿ, ಪರಲೋಕ ಮೋಕ್ಷಕ್ಕೆ ಪ್ರಧಾನ್ಯತೆ ನೀಡಿಕೊಂಡು ಮುಸ್ಲಿಂ ವಿದ್ಯಾರ್ಥಿಗಳ ಐಹಿಕವು, ಪಾರತ್ರಿಕವು ಆದ ಅಭ್ಯೂನ್ನತಿಗಳಿಗಾಗಿ ಪ್ರತ್ಯೇಕವಾಗಿ, ಮುಸ್ಲಿಂ ಬಹುಜನತೆಯ ಐಹಿಕ ಮತ್ತು ಪಾರತ್ರಿಕವು ಆದ ಅತ್ಯುನ್ನತಿಗಾಗಿ ಸಾರ್ವಜನಿಕವಾಗಿ ಕಾರ್ಯಾಚರಿಸಬೇಕು.

  👉 *ನಿಯಮ ಭಾಗ 6*

ಭಾಗ 5ರಲ್ಲಿ ಹೇಳಿದ ಗುರಿಯನ್ನು ತಲುಪಲಿಕ್ಕಾಗಿ ಈ ಸಂಘಟನೆ ಕೆಳಗೆ ಹೇಳುವ ಪ್ರವರ್ತನೆ ಮಾರ್ಗವನ್ನು ಸ್ವೀಕರಿಸಲಾಗುವುದು.

1-ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಅಂತರ್ ಲೀನವಾಗಿ ನೆಲೆಗೊಳ್ಳುವ ಸಾಹಿತ್ಯ ಕಲಾವಾಸನೆಯನ್ನು ಅಭಿವೃದ್ಧಿಪಡಿಸಲು ಸಾಹಿತ್ಯ ಸಮಾಜಗಳನ್ನು, ಪ್ರಕಾಶನಗಳನ್ನು, ಸ್ಪರ್ದೆಗಳನ್ನು ನಡೆಸುವುದು.

2-ಮುಸ್ಲಿಮರಲ್ಲಿ ವಿಶಿಷ್ಯಾ ವಿದ್ಯಾರ್ಥಿ ಯುವಜನ ವಿಭಾಗಗಳಲ್ಲಿ ಧರ್ಮಬೋಧನೆ, ದೀನಿಜ್ಞಾನವು ಉಂಟು ಮಾಡುವುದಕ್ಕಾಗಿ ಮತಪಠಣ ತರಬೇತಿಗಳು, ಚರ್ಚಾಕೂಟಗಳು, ಶಿಬಿರಗಳು, ಮತಪ್ರಸಂಗಗಳು ಮೊದಲಾದವುಗಳನ್ನು ಸಂಘಟಿಸುವುದು. ಲಘುಲೇಖನಗಳು, ಪುಸ್ತಕಗಳು, ಮುಂತಾದವುಗಳನ್ನು ವಿತರಣೆ ಮಾಡುವುದು.

3-ಸಂಘಟನೆಯ ಮುಖಪತ್ರವಾದ *ರಿಸಾಲ* ಪುಸ್ತಕದ ಪ್ರಕಾಶನ  ವಿಭಾಗವಾದ ಐ.ಪಿ.ಬಿ. ಯ ಹಾಗು ಅಹ್ಲುಸ್ಸುನತ್ತಿ ವಲ್ ಜಮಾಅತ್ತಿನ ಇತರ ಅನುಕಾಲಿಕ ಪ್ರಕಾಶನಗಳ  ಪ್ರಚಾರಕ್ಕಾಗಿ ಪರಿಶ್ರಮಿಸುವುದು.

4-ಮುಸ್ಲಿರಲ್ಲಿ ನೆಲೆಗೊಳ್ಳುವ ಅಧಾರ್ಮಿಕ ಪ್ರವಣತೆಯನ್ನು ಕೊನೆಗೊಳಿಸಲು, ಧರ್ಮ ಅನುಷ್ಠಾನಗಳಿಗೆ ಗಮನಕೊಡಲು ಸಾಧ್ಯವಾದಷ್ಟು   ಪರಿಶ್ರಮಿಸುವುದು.

5-ಕೇಂದ್ರ ಕಮಿಟಿಯ ಅಧೀನದಲ್ಲಿ ಪತ್ರ ಪ್ರಕಾಶನಗಳನ್ನು ನಡೆಸುವುದು.
6-ಬಡ ಮುಸ್ಲಿಂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಉನ್ನತ ವಿದ್ಯೆಗಾಗಿ  ಕೇಂದ್ರ ಕಮಿಟಿ ನೇರವಾಗಿಯೋ, ಕೇಂದ್ರ ಕಮಿಟಿಯ ಅಧೀನದಿಂದಲೋ, ಅಂಗೀಕಾರದಿಂದಲೋ, ಕೆಳಸ್ತರದ ಕಮಿಟಿಗಳು  ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತರುವುದು.

7-ಸಮುದಾಯದಲ್ಲಿ ಅನಾಥರು, ಅಬಲೆಯರಾದವರ ವಿದ್ಯಾಭ್ಯಾಸ, ಆರೋಗ್ಯ, ಮುಂತಾದ ಕಾರ್ಯಗಳಲ್ಲಿ ಸಹಾಯ ಮಾಡಲು ಯೋಜನೆಗಳನ್ನು ರೂಪೀಕರಿಸಿ ಜಾರಿಗೊಳಿಸುವುದು.

8-ಮತಬೌಧಿಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡುವುದು, ಪ್ರಾಥಮಿಕ ಘಟದಲ್ಲೇ ವಿದ್ಯಾಭ್ಯಾಸವನ್ನು ಕೊನೆಗೋಳಿಸುವ ಪ್ರವೃತ್ತಿಯನ್ನು ಇಲ್ಲವಾಗಿಸಲು ನಿರಂತರ ಪ್ರಯತ್ನಿಸುವುದು.

9-ಅರಬಿ, ಉರ್ದು, ಭಾಷೆಗಳ ಪ್ರಚಾರಕ್ಕೂ, ಪೋಷಿಸಲು ಬೇಕಾಗಿ ಪರಿಶ್ರಮಿಸುವುದು.

10-ವಿದ್ಯಾರ್ಥಿಗಳ ನಡುವೆ ಮೈತ್ರಿಯನ್ನು, ಸಹೋದರ್ಯ ಸಂಬಂಧ ಸ್ಥಾಪಿಸುವುದು.

11-ಸಮುದಾಯದ ಹಾಗೂ ಸಮೂಹದ ಕ್ಷೇಮ ಪ್ರವರ್ತನೆಗಳಲ್ಲಿ ಸಹಕರಿಸುವುದು.

12-ಸಂಸ್ಕಾರ, ಸಾಮ್ರಾಜ್ಯತ್ವ, ಮಾನವಹಕ್ಕು ಉಲ್ಲಂಘನೆ, ರಾಜಕೀಯ ವೈರಾಗ್ಯ ಎಂಬಿತ್ಯಾದಿ ವಿಷಯಯಗಳ ವಿರುದ್ಧವಾಗಿ ಪ್ರವರ್ತಿಸುವುದು.

👨‍👨‍👦 *ಪ್ರಧಾನ ಸಮ್ಮೇಳನಗಳು*👨‍👨‍👦

*ಮುಂದುವರಿಯುವುದು*

✍ ~ಗಫೂರ್ ಬಾಯಾರ್~
🇸🇱🇮🇳🇸🇱🇮🇳🇸🇱🇮🇳🇸🇱

No comments:

Post a Comment