😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 3⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
ಹುಸೈನ್ (ರ) ಅಪ್ಪಣೆ ಕೊಡು ಎಂದಾಗ ಮಹದಿ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಹೇಳಿದರು... ⬇
ಕಂದಾ...
ಅಲ್ಲಾಹನ ಕಲ್ಪನೆ ಏನಿದೆಯೇೂ ಅದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅಲ್ಲಾಹನ ರಸೂಲರೂ ನಮ್ಮ ಪಿತಾಮಹರೂ ಆದ *ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ* ರಿಗೆ ಮುಕರ್ರಬುಲ್ ಅಮ್ಲಾಕ್ ಮಲಕ್ ಜಿಬ್'ರೀಲ್ (ಅ)ರು ಹಸ್ತಾಂತರಿಸಿದ ಮಣ್ಣಿಗೆ ಸಮನಾದ ಮಣ್ಣು ಈ ಭೂಲೇೂಕದಲ್ಲಿ ಎಲ್ಲಿದೆಯೇೂ ಅಲ್ಲಿ ಅಹ್ಲ್'ಬೈತಿನ ಕುಡಿಗಳು ಹತರಾಗಲಿರುವರೆಂದು ಸೃಷ್ಟಿಕರ್ತನಾದ ಅಲ್ಲಾಹನಿಂದ ಬಂದ ವಹ್ಯ್ ಸಂದೇಶದ ಮೂಲಕ ತಿಳಿಸಿದ್ದಾರೆ. ಆ ಸ್ಥಳ ಇದೇ ಆಗಿರಬಹುದೆಂದು ನಿನ್ನ ತಂದೆಯವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಲ್ಲಾಹನ ತೀರ್ಮಾನವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಮಗೂ...
ಹಾಗಾಗಿ ಸೃಷ್ಟಿಗಳಾದ ನಾವು ಎಲ್ಲವನ್ನೂ ಸೃಷ್ಟಿಕರ್ತನಾದ ಅಲ್ಲಾಹನ ಔಧಾರ್ಯಕ್ಕೆ ಸಮರ್ಪಿಸೇೂಣ. ಇನ್ನು ಇಹಲೇೂಕದಲ್ಲಿ ನಾವು ಭೇಟಿಯಾಗಬಹುದೆಂಬ ನಿರೀಕ್ಷೆಯಿಲ್ಲ. ಒಂದು ವೇಳೆ ಈ ಲೇೂಕದಲ್ಲಿ ಭೇಟಿಯಾಗಲು ನಮಗೆ ಸಾಧ್ಯವಾಗದಿದ್ದರೆ ನಾಳೆ ಸ್ವರ್ಗದಲ್ಲಿ ಭೇಟಿಯಾಗೇೂಣ ಇನ್ಷಾಅಲ್ಲಾಹ್...
ಎನ್ನುತ್ತಾ ಕಂಬನಿ ತುಳುಕುವ ಕಂಗಳೊಂದಿಗೆ ಆಶೀರ್ವದಿಸುತ್ತಾ ತಮ್ಮ ಮುದ್ದು ಕಂದಮ್ಮನನ್ನು ಶಸ್ತ್ರಸಜ್ಜಿತ ಅಸಂಖ್ಯ ಶತ್ರು ಸೈನಿಕರಿಂದ ತುಂಬಿರುವ ರಣರಂಗಕ್ಕೆ ಬೀಳ್ಕೊಟ್ಟರು.
ತಾಯಿಯ ಸಮ್ಮತಿ ಲಭಿಸಿದ ನಂತರ ತಂದೆಯಾದ ಹುಸೈನ್ (ರ)ರವರ ಸಮ್ಮತಿಯನ್ನೂ ಪಡೆದು ಪಡೆಯಂಗಿ ಧರಿಸಿ ಪಿತಾಮಹರಾದ ಸಯ್ಯದುನಾ ಅಲಿ (ರ) ರವರ 'ದುಲ್'ಫುಖಾರ್' ಎಂಬ ಖಡ್ಗವನ್ನು ಹಿಡಿದು 'ದುಲ್'ದುಲ್' ಎಂಬ ಕುದುರೆಯನ್ನೇರಿ ಶತ್ರು ಸೈನಿಕರತ್ತ ಧಾವಿಸಿ,
*"ಎಲೈ ದುರಹಂಕಾರಿ ಯಝೀದನ ಕಿಂಕರರೇ....*
*ನಿಮಗೆ ನನ್ನ ಪರಿಚಯವಿರದು. ಅಲ್ಲಾಹನ ಶತ್ರುಗಳ ಸಿಂಹಸ್ವಪ್ನವಾಗಿದ್ದ ಅಲಿ ಹೈದರ್ (ರ)ರವರ ಪೌತ್ರನಾದ ಅಲಿ ಅಕ್ಬರ್ ಇಬ್ನು ಹುಸೈನ್ (ರ) ನಾನು. ನನ್ನ ಕೈಯ್ಯಲ್ಲಿರುವುದು ನನ್ನ ಪಿತಾಮಹರು ಅಸಂಖ್ಯ ಶತ್ರುಗಳನ್ನು ಪರಲೇೂಕಕ್ಕೆ ಅಟ್ಟಿದ 'ದುಲ್'ಫುಖಾರ್' ಖಡ್ಗವಾಗಿದ್ದು, ಕುದುರೆಯೂ ನನ್ನ ಪಿತಾಮಹರದೇ ಆಗಿದೆ. ಆದ್ದರಿಂದ ಈ ಖಡ್ಗದ ರುಚಿ ನೇೂಡಬೇಕೆನಿಸಿದವರು ಮುಂದೆ ಬನ್ನಿ* ಎಂದು ಸಿಂಹದ ಮರಿಯಂತೆ ಘರ್ಜಿಸಿದರು.
ಯುದ್ಧ ರಂಗದಲ್ಲಿ ಪಳಗಿರುವ ಸೈನಿಕರಾದ ತಮಗೆ ಹದಿನೆಂಟರ ಹರೆಯದ ಈ ಯುವಕ ಯಾವ ಲೆಕ್ಕ ಎಂಬ ಭಾವದಿಂದ ಮುನ್ನುಗ್ಗಿ ಬರುತ್ತಿದ್ದ ಒಬ್ಬೊಬ್ಬ ಸೈನಿಕನನ್ನೂ ಅಲಿ ಹೈದರ್ (ರ) ರವರ ಕೈಯ್ಯಲ್ಲಿ ಪಳಗಿದ್ದ ತಂತ್ರಶಾಲಿಯಾದ ದುಲ್'ದುಲ್ ಎಂಬ ಆ ಕುದುರೆಯ ನೆರವಿನಿಂದ ಕೊಚ್ಚಿ ಕೊಚ್ಚಿ ಹಾಕಿದರು. ಈ ಘನಘೇೂರ ಕದನದಲ್ಲಿ ಹಲವು ಶತ್ರು ಸೈನಿಕರು ಗಾಯಾಳುಗಳಾದರೆ ಮತ್ತೆ ಹಲವರು ಪರಲೇೂಕ ಸೇರಿದರು.
ಕೊನೆಗೆ ಕೆಲ ಸೈನಿಕರ ಖಡ್ಗದೇಟು ಅಲಿ ಅಕ್ಬರ್ (ರ)ರಿಗೂ ತಾಗಿ ಗಾಯಾಳುವಾದರೂ ಛಲ ಬಿಡದೆ ಯುದ್ಧ ಮುಂದುವರಿಸಿದ್ದರು. ಕೊನೆಗೆ ದಾಹ ಸಹಿಸಲಾರದೆ ಡೇರಿಯತ್ತ ದಿಟ್ಟಿಸಿದರು. ಅಲ್ಲಿ ಹುಸೈನ್ (ರ) ಪ್ರಾರ್ಥಿಸುತ್ತಾ ಯುದ್ಧರಂಗವನ್ನು ವೀಕ್ಷಿಸುತ್ತಿದ್ದರು. ತಕ್ಷಣ ಕುದುರೆಯನ್ನು ಡೇರೆಯತ್ತ ತಿರುಗಿಸಿ ಹುಸೈನ್ (ರ)ರವರ ಬಳಿ ಬಂದ ಸಯ್ಯದುನಾ ಅಲಿ ಅಕ್ಬರ್ (ರ) ತಮ್ಮ ತಂದೆಯೊಂದಿಗೆ ಹೇಳಿದರು...
*ಅಪ್ಪಾ....*
*ನನಗೆ ದಾಹ ಸಹಿಸಲಾಗುತ್ತಿಲ್ಲ ದಾಹವಡಗಿಸಲು ತುಸು ನೀರು ಕೊಡುವಿರಾ?*
ಮೊದಲೇ ಅಸಹಾಯರಾಗಿದ್ದ ಆ ಮಹಾನರು ತಮ್ಮ ಕರುಳಿನ ಕುಡಿಯ ಈ ಕೇೂರಿಕೆಗೆ ಏನು ಹೇಳಲು ಸಾಧ್ಯ? ಅಸಹಾಯಕತೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಾ ಕಂದಾ... ನಮ್ಮ ಅವಸ್ಥೆ ನಿನಗೆ ತಿಳಿಯದೇ? ಹಾಲುಗಲ್ಲದ ಹಸುಳೆಗಳು ದಾಹದಿಂದ ನರಳುತ್ತಿರುವುದನ್ನು ಕಂಡು ಕಂಬನಿ ಸುರಿಸುವುದಲ್ಲದೆ ನನ್ನಿಂದ ಮತ್ತೇನೂ ಮಾಡಲು ಸಾಧ್ಯವಾಗುತ್ತಿಲ್ಲ ಮಗೂ ಎಂದರು.
ಅದೇ ಸಮಯದಲ್ಲಿ ಶತ್ರು ಸೈನಿಕನೊಬ್ಬ ನದಿಗಿಳಿದು ನೀರಿನಲ್ಲಿ ಆಟವಾಡುತ್ತಾ ಹುಸೈನ್ (ರ)ರನ್ನುದ್ದೇಶಿಸಿ,
ಯಾ ಹುಸೈನ್ (ರ) ರವರೇ...
ನಿಮ್ಮ ಹಾಗೂ ನಿಮ್ಮ ಮಗನ ಜೀವವುಳಿಯಬೇಕಾದರೆ ಈ ನೀರು ಅನಿವಾರ್ಯವಾಗಿದೆ ಅಲ್ಲವೇ? ಆದರೆ ನನಗಿದರ ಅವಶ್ಯಕತೆಯಿಲ್ಲ. ಎನ್ನುತ್ತಾ ತನ್ನೆರಡು ಕೈಗಳಿಂದಲೂ ನೀರನ್ನು ಹುಸೈನ್ (ರ)ರತ್ತ ತಟ್ಟಿ ಚಿಮ್ಮಿಸಿ ಅಪಹಾಸ್ಯ ಮಾಡುತ್ತಾ ಕೂಗಿ ಹೇಳಿದನು...
ದಾಹದಿಂದ ನರಳುತ್ತಾ ಗುಟುಕು ನೀರಿಗಾಗಿ ಅಂಗಾಲಾಚುತ್ತಿರುವ ಮಗ ಅಲಿ ಅಕ್ಬರ್ (ರ)ರನ್ನು ಎದೆಗೊತ್ತಿ ಹಿಡಿದು ನೀರು ಚಿಮ್ಮುತ್ತಾ ಅಪಹಾಸ್ಯ ಮಾಡಿ ಕುಹಕವಾಡುತ್ತಿರುವ ಶತ್ರು ಸೈನಿಕನನ್ನು ಕಂಡಾಗ ಹೃದಯವೇ ಒಡೆದು ಹೇೂದಂತಾದ ಸಯ್ಯದುನಾ ಹುಸೈನ್ (ರ)ರವರು.... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment