😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 3⃣5⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*عَدَدَ مَا فِي عِلْمِ الله*
*صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔
ದಾಹದಿಂದ ನರಳುತ್ತಾ ಗುಟುಕು ನೀರಿಗಾಗಿ ಅಂಗಾಲಾಚುತ್ತಿರುವ ಮಗ ಅಲಿ ಅಕ್ಬರ್ (ರ)ರನ್ನು ಸಂತೈಸುತ್ತಿರುವಾಗ ನೀರು ತೇೂರಿಸುತ್ತಾ ಕುಹಕವಾಡುತ್ತಾ ಅಪಹಾಸ್ಯ ಮಾಡಿದ ಶತ್ರು ಸೈನಿಕನನ್ನು ಕಂಡಾಗ ಹೃದಯವೇ ಒಡೆದು ಹೇೂದಂತಾದ ಸಯ್ಯದುನಾ ಹುಸೈನ್ (ರ)ರವರು.... ⬇
ತಮ್ಮೆರಡೂ ಪಾವನ ಕರಗಳನ್ನೆತ್ತಿ ಯಾ ಅಲ್ಲಾಹ್ ದಾಹದಿಂದ ಒಣಗಿ ನರಳುತ್ತಿರುವಾಗ ನೀರು ತೇೂರಿಸಿ ಅಪಹಾಸ್ಯ ಮಾಡುತ್ತಿರುವ ಈ ದುಷ್ಟನಿಗೆ ದಾಹವೆಂದರೇನೆಂಬುದನ್ನು ಮನವರಿಕೆ ಮಾಡಿಕೊಡು ನಾಥಾ... ಎಂದು ಕಂಬನಿ ಸುರಿಸುತ್ತಾ ಪ್ರಾರ್ಥಿಸಿದರು.
ಹುಸೈನ್ (ರ)ರವರ ಪ್ರಾರ್ಥನೆಯ ಫಲವಾಗಿ ಅಪಹಾಸ್ಯ ಮಾಡಿದ ಆ ಸೈನಿಕನಿಗೆ ಕೆಲ ದಿನಗಳಲ್ಲೇ ಸಹಿಸಲಾರದ ದಾಹದೊಂದಿಗೆ ಹೊಟ್ಟೆಯ ಒಳ ಭಾಗದಲ್ಲಿ ಸಿಕ್ಕಾಪಟ್ಟೆ ಬಿಸಿಯೂ, ಬೆನ್ನುಹುರಿಯಲ್ಲಿ ಸಹಿಸಲಾರದ ಛಳಿಯೂ ಆರಂಭವಾಯಿತು. ಆದ್ದರಿಂದ ಹೊಟ್ಟೆಯನ್ನು ತಂಪಾಗಿಸಲು ತಣ್ಣಗಿನ ವಸ್ತುವನ್ನೂ ಬೆನ್ನಿಗೆ ಬಿಸಿ ಶಾಖವನ್ನೂ ಕೊಡುತ್ತಾ, ಎಷ್ಟು ನೀರು ಕುಡಿದರೂ ದಾಹವಡಗದೆ ನೀರು ಕುಡಿಯುತ್ತಲೇ ಹೊಟ್ಟೆಯೊಡೆದು ಸತ್ತನೆನ್ನುತ್ತದೆ ಇತಿಹಾಸ.
*( _ಅಲ್ಲಾಹನ ದೀನಿನ ಸೇವೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಹಾತ್ಮರನ್ನು ಅಥವಾ ಆಲೀಮರನ್ನು ಸಂಘಟನೆಯ ಹೆಸರಿನಲ್ಲಿ ಕುಹಕವಾಡುವುದು ಇಂದು ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ. ಅಂಥವರು ಕರ್ಬಲಾ ರಣರಂಗದಲ್ಲಿ ನಡೆದ ಮೇಲಿನ ಘಟನೆಯಿಂದಲಾದರೂ ಪಾಠ ಕಲಿತು ತಮ್ಮ ಸ್ವಭಾವವನ್ನು ತಿದ್ದಿಕೊಳ್ಳದಿದ್ದರೆ ಅಲ್ಲಾಹನಿಂದ ಗಂಭೀರ ಪರಿಣಾಮ ಎದುರಿಸಬೇಕಾದೀತೆನ್ನುವುದಕ್ಕೆ ಇದು ಜ್ವಲಂತ ನಿದರ್ಶನ)_*
ಇತ್ತ ದಾಹ ಸಹಿಸಲಾಗುತ್ತಿಲ್ಲ ಗುಟುಕು ನೀರು ಕೊಡಿ ಎಂದು ಅಂಗಾಲಾಚುತ್ತಿರುವ ಮಗ ಅಲಿ ಅಕ್ಬರ್ (ರ) ರವರ ನಾಲಿಗೆಗೆ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ಇಟ್ಟು ಹುಸೈನ್ (ರ) ಪ್ರಾರ್ಥಿಸುತ್ತಿದ್ದಂತೆ ಅಲಿ ಅಕ್ಬರ್ (ರ)ರವರ ದಾಹ ಶಮನವಾದ ಕಾರಣ ಖಡ್ಗದೊಂದಿಗೆ ಕುದುರೆಯೇರಿ ಮತ್ತೆ ರಣರಂಗಕ್ಕೆ ಧುಮುಕಿ ವೀರಾವೇಶದಿಂದ ಹೇೂರಾಡಿ ಹಲವರನ್ನು ಸದೆ ಬಡಿದ ನಂತರ ನಿತ್ರಾಣರಾಗಿ ಕುಸಿದು ಕುದುರೆಯಿಂದ ಕೆಳ ಬಿದ್ದರು.
ಆಗ ಶತ್ರು ಪಡೆಯಿಂದ ಧಾವಿಸಿ ಬಂದ *ಶಿಮ್ರ್* ಎಂಬ ವ್ಯಕ್ತಿಯೊಬ್ಬ ಕುಸಿದು ಬಿದ್ದಿರುವ ಅಲಿ ಅಕ್ಬರ್ (ರ)ರವರ ಎದೆಯ ಮೇಲೆ ಹತ್ತಿ ನಿಂತು ಅವರ ಕಣ್ಣಿಗೆ ಬಾಣ ಬಿಟ್ಟು ಈಟಿಯಿಂದ ಅಲಿ ಅಕ್ಬರ್ (ರ)ರವರ ಎದೆಗೆ ತಿವಿಯುತ್ತಾ ಕರುಳುಗಳನ್ನು ಹೊರಗೆಳೆಯಲಾರಂಭಿಸಿದನು.
ತಕ್ಷಣ ಶತ್ರು ಪಾಳೆಯದ ಸೈನಿಕನೊಬ್ಬ ಅತ್ತ ಧಾವಿಸಿ ಅವನನ್ನು ತಡೆಯಲೆತ್ನಿಸಿಸಿದಾಗ ತನ್ನ ಖಡ್ಗದಿಂದ ಆ ಸೈನಿಕನನ್ನೂ ಹತ್ಯೆಗೈದನು.
ಅಲಿ ಅಕ್ಬರ್ (ರ)ರವರು ಯುದ್ಧರಂಗಕ್ಕೆ ಹಿಂದಿರುಗಿದಾಗ ಡೇರೆಯೊಳಗೆ ಹೇೂಗಿದ್ದ ಹುಸೈನ್ (ರ) ತುಸು ಹೊತ್ತಿನ ನಂತರ ಡೇರೆಯಿಂದ ಹೊರ ಬಂದು ಯುದ್ಧ ರಂಗದತ್ತ ಕಣ್ಣಾಯಿಸಿದಾಗ...
ಶತ್ರು ಸೈನಿಕರು ಬಹಳ ದೂರದಲ್ಲಿದ್ದರು. ಆದರೆ ಯುದ್ಧ ನಡೆಯುತ್ತಿದ್ದ ಸ್ಥಳದಲ್ಲಿ ಯಾರನ್ನೂ ಕಾಣದಾದಾಗ....
"ಯಾ ಅಲ್ಲಾಹ್ ನನ್ನ ಮಗನನ್ನು ಕಾಣಿಸುತ್ತಿಲ್ಲವಲ್ಲ ಅವನಿಗೇನಾಯಿತು?" ಎಂದು ಮನದಲ್ಲೇ ಪ್ರಶ್ನಿಸುತ್ತಾ ಅತ್ತ ಹೋಗಿ ನೋಡಿದಾಗ...
*ಅಲಿ ಅಕ್ಬರ್ (ರ) ರವರ ದೇಹ ನಿಶ್ಚಲವಾಗಿ ಒಂದೆಡೆ ರುಂಡ ಮುಂಡಗಳನ್ನು ಕತ್ತರಿಸಿ ಬೇರ್ಪಡಿಸಿದ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿತ್ತು.* 😰
{ _ಕರ್ಬಲಾ ರಣರಂಗದಲ್ಲಿ ಸಯ್ಯದುನಾ ಅಲಿ ಅಕ್ಬರ್ (ರ) ರವರ ಅಂಗಾಂಗಳನ್ನು ಶತ್ರುಗಳು ತುಂಡು ತುಂಡಾಗಿ ಕತ್ತರಿಸಿದ್ದನ್ನು, ಅಸದುಲ್ ಇಲಾಹ್ (ಅಲ್ಲಾಹನ ಸಿಂಹ) ವೆಂಬ ಗೌರವನಾಮಕ್ಕೆ ಪಾತ್ರರಾದ ಸಯ್ಯದುನಾ ಹಂಝತುಲ್ ಕರ್ರಾರ್ (ರ)ರವರ ದೇಹವನ್ನು ಶತ್ರುಗಳು ಉಹ್ದ್ ಯುದ್ಧದಲ್ಲಿ ತುಂಡರಿಸಿದ್ದಕ್ಕೆ ಸಮವೆಂದು ಇಸ್ಲಾಮಿಕ್ ಇತಿಹಾಸಕಾರರು ಹೇೂಲಿಸಿದ್ದಾರೆ_}
*ಇದನ್ನು ಕಂಡ ಹುಸೈನ್ (ರ) ರವರ ಹೃದಯವೇ ಒಡೆದಂತಾಗಿ "ಯಾ ಅಲಿ ಅಕ್ಬರ್ ನೀನೂ ಹೊರಟು ಹೇೂದೆಯಾ...?" ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಸಯ್ಯದುನಾ ಅಲಿ ಅಕ್ಬರ್ (ರ)ರವರ ಜನಾಝವನ್ನು ಬಟ್ಟೆಯೊಂದರಲ್ಲಿ ಹಾಕಿಕೊಂಡು ಡೇರೆಯ ಹತ್ತಿರಕ್ಕೆ ತಂದರಾದರೂ ಪತ್ನಿ ಶಹ್ರುಬಾನ್ (ರ)ರಿಗೆ ಕಾಣದಂತೆ ಡೇರೆಯ ಮರೆಯಲ್ಲಿಟ್ಟರು.*
ಕಾರಣ ತುಸು ಮುಂಚೆ ತಮ್ಮಿಂದ ಅಪ್ಪಣೆ ಪಡೆದು ಪಡೆಯಂಗಿ ಧರಿಸಿ ಉತ್ಸಾಹದಿಂದ ಹೇೂದ ಮಗ ಕೈಕಾಲು ತಲೆ ಮಾತ್ರವಲ್ಲ ಹೊಟ್ಟೆಯೊಳಗಿನ ಕರುಳುಗಳೆಲ್ಲ ಬೇರ್ಪಟ್ಟ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡರೆ ಹೆತ್ತ ಕರುಳಿಗೆ ಸಹಿಸಲಾದೀತೇ? ಹೃದಯ ಒಡೆಯದಿರದೇ? ಹಾಗಾಗಿ ಅಲಿ ಅಕ್ಬರ್ (ರ)ರವರ ಜನಾಝವನ್ನು ಮರೆಯಲ್ಲಿಟ್ಟ ಹುಸೈನ್ (ರ)ರವರು ಡೇರೆಯೊಳಗೆ ಕಾಲಿಟ್ಟರು.
ಆಗ.... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:
Post a Comment