😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 3⃣6⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*عَدَدَ مَا فِي عِلْمِ الله*
*صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔
ಅಲಿ ಅಕ್ಬರ್ (ರ)ರವರ ಜನಾಝವನ್ನು ಮರೆಯಲ್ಲಿಟ್ಟ ಹುಸೈನ್ (ರ)ರವರು ಡೇರೆಯೊಳಗೆ ಕಾಲಿಟ್ಟರು ಆಗ.... ⬇
*ಹುಸೈನ್ (ರ) ರವರ ಒಂದೂವರೆ ವರ್ಷ ಪ್ರಾಯದ ಮಗುವಾದ ಅಲಿ ಅಸ್ಗರ್ (ರ) ಎಂಬ ಮಗು ದಾಹ ಸಹಿಸಲಾರದೆ ರೇೂದಿಸುತ್ತಿತ್ತು.*
ಪತಿಯನ್ನು ಕಂಡಾಗ, ಮಹದಿ *ಶಹ್ರು ಬಾನು (ರ)* ಅಳುತ್ತಾ ಹೇಳಿದರು...
ಪ್ರಿಯರೇ...
ತಮ್ಮ ಈ ಹಸುಗೂಸಿಗೆ ಅಲ್ಪವಾದರೂ ನೀರು ಸಿಗದಿದ್ದರೆ ಇದರ ಸ್ಥಿತಿ ಚಿಂತಾಜನಕವಾಗಬಹುದು. ಅನ್ನಾಹಾರಗಳಿಲ್ಲದ ಕಾರಣ ಎದೆಹಾಲು ಸಹ ಬತ್ತಿ ಹೇೂಗಿದೆ. ಆದ್ದರಿಂದ ಶತ್ರು, ಮಿತ್ರರ ವ್ಯತ್ಯಾಸವನ್ನರಿಯದ ನಿಷ್ಕಳಂಕವಾದ ಈ ಹಾಲುಗಲ್ಲದ ಹಸುಳೆಗೆ ಹೇಗಾದರೂ ಮಾಡಿ ಗುಟುಕು ನೀರು ಕೊಡಲು ಉಬೈದ್'ನೊಂದಿಗೆ ವಿನಂತಿಸಿರಿ..
ಸದ್ಯದ ಪರಿಸ್ಥಿತಿಯಲ್ಲಿ ಅವರನ್ನೆದುರಿಸಿ ನೀರು ತರಲು ಸಾಧ್ಯವಿಲ್ಲ. ಹಾಗಾಗಿ ಮಗುವಿನ ಜೀವವುಳಿಸುವ ಸಲುವಾಗಿ ಗುಟುಕು ನೀರು ಕೊಡಿ ಎಂದು ಅಂಗಾಲಾಚಿದರೆ ಈ ಮಗುವಿನ ಮುಖ ನೇೂಡಿಯಾದರೂ ನೀರು ಕೊಡದೆ ಇರಲಾರರು ಎಂದರು.
ಮಗುವಿನ ಜೀವವುಳಿಸುವ ಸಲುವಾಗಿ ಶತ್ರುವಿನ ಮುಂದೆ ಗುಟುಕು ನೀರಿಗಾಗಿ ಅಂಗಾಲಾಚಲು ಸಿದ್ಧರಾದ ಸಯ್ಯದುನಾ ಹುಸೈನ್ (ರ)ರವರು *ಸಯ್ಯದುನಾ ಅಲಿ ಅಸ್ಗರ್ (ರ)* ಎಂಬ ಆ ಹಾಲುಗಲ್ಲದ ಹಸುಳೆಯನ್ನೆತ್ತಿಕೊಂಡು ಬಿಸಿಲಿನ ಝಳ ತಾಗದಿರಲು ಬಿಳಿ ವಸ್ತ್ರವೊಂದನ್ನು ಮಗುವಿಗೆ ಹೊದಿಸಿ ಶತ್ರು ಸೈನಿಕರತ್ತ ಹೆಜ್ಜೆ ಹಾಕಿದರು...
*ಉಬೈದ್'* ಮತ್ತು *ಅಂರು ವಸಅದಿ* ನ ಸಮೀಪ ತೆರಳಿದ ಹುಸೈನ್ (ರ)ರವರು ಮಗುವನ್ನು ತೋರಿಸುತ್ತಾ ಹೇಳಿದರು..
*ಯಾ ಉಬೈದ್....*
ದುನಿಯಾವೆಂದರೇನೆಂದೇ ಅರಿಯದ ಇಂತಹ ಮುಗ್ಧ ಮಕ್ಕಳೂ ಸಹ ನಮ್ಮ ಜೊತೆಗಿದ್ದಾರೆ. ನಮ್ಮ ವಿಷಯ ಬಿಡಿ, ನಿಷ್ಕಳಂಕರಾದ ಈ ಮುದ್ದು ಕಂದಮ್ಮಗಳಿಗೂ ಸಹ ನೀರು ಸಿಗದಂತೆ ನೀವು ತಡೆದಿದ್ದೀರಿ..
ಈ ಹಾಲುಗಲ್ಲದ ಹಸುಳೆಗಳಿಗಾದರೂ ಗುಟುಕು ನೀರು ಕೊಡಲಾರಿರಾ..? ಎಂದು ಅಂಗಾಲಾಚಿದರು.
( *_ಪ್ರಿಯ ಓದುಗರೇ..... ಸೃಷ್ಟಿಕರ್ತನಾದ ಅಲ್ಲಾಹನು ಈ ನದಿ-ವನ, ಬೆಟ್ಟ-ಗುಡ್ಡ, ಗಿರಿ-ಶಿಖರ, ಸಾಗರ-ಸರೇೂವರ, ಸಸ್ಯಸಂಕುಲ ಮತ್ತು ಪ್ರಾಣಿ ಸಂಕುಲಗಳನ್ನೊಳಗೊಂಡ ಭೂಮಿ, ಆಕಾಶ, ಸ್ವರ್ಗ, ನರಕಗಳನ್ನು ತನ್ನ ಯಾವ ಸಂದೇಶ ವಾಹಕರ ಗೌರವಾರ್ಥ ಸೃಷ್ಟಿದನೇೂ ಆ ಸಂದೇಶ ವಾಹಕರ ಬರ್ಕತ್ತಿನಿಂದ ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಔಧಾರ್ಯದಿಂದ ಧಾರೆಯೆರೆದ ಜೀವದೊಂದಿಗೆ ಬದುಕುತ್ತಿರುವವರು ಅಲ್ಲಾಹನ ಒಡೆತನದ ಜೀವನಾಧಾರವಾದ ನೀರನ್ನು ಅಲ್ಲಾಹನ ಆ ಹಬೀಬರ ﷺ ಮೊಮ್ಮೊಕ್ಕಳಿಗೇ ಸಿಗದಂತೆ ತಡೆ ಹಿಡಿದು ಗುಟುಕು ನೀರಿಗಾಗಿ ಅಂಗಾಲಾಚುವಂತೆ ಮಾಡಿದ್ದರೆಂದರೆ ಇದಕ್ಕಿಂತ ನೇೂವಿನ ಸಂಗತಿ ಇನ್ನೊಂದಿದೆಯೇ?_*)
ಹುಸೈನ್ (ರ)ರವರು ಮಗುವಿನ ಜೀವವುಳಿಸುವ ಸಲುವಾಗಿ ಗುಟುಕು ನೀರಿಗಾಗಿ ಅಂಗಾಲಾಚುತ್ತಿರುವುದನ್ನು ಕಂಡಾಗ ಅಂರ್ ಮತ್ತು ಉಬೈದ್ ಪರಸ್ಪರ ಮುಖ ನೋಡಿ ಕೊಂಡರು.
ನಂತರ *ಉಬೈದ್* ಹೇಳಿದನು..
ಈ ಮಗುವಿಗೆ ಅಗತ್ಯವಾದ ನೀರನ್ನು ನಾವು ಕೊಡಬಲ್ಲೆವು. ಆದರೆ ಉಳಿದ ನೀರನ್ನು ನೀವು ಕುಡಿಯಲಾರಿರಾ?
*ಹುಸೈನ್ (ರ)* ಹೇಳಿದರು..
ಇಲ್ಲ. ಖಂಡಿತಾ ಇಲ್ಲ. ಈ ಮಗುವಿಗೆ ಮಾತ್ರ ನೀರು ಸಿಕ್ಕಿದರೆ ಸಾಕು.
ಆ ಬಗ್ಗೆ ನಿಮಗೆ ಸಂಶಯವಿದ್ದರೆ ಈ ಮಗುವನ್ನು ನಾನಿಲ್ಲಿ ಮಲಗಿಸಿ ಸರಿದು ನಿಲ್ಲುತೇನೆ. ಮಗುವಿಗೆ ನೀವೇ ನೀರು ಕುಡಿಸಿರಿ ಎಂದರು.
*ಹಾಗೆ ಹುಸೈನ್ (ರ) ಮತ್ತು ಉಬೈದ್ ಮಾತನಾಡುತ್ತಿರುವಾಗ ಅಲಿ ಅಕ್ಬರ್ (ರ)ರವರ ಎದೆಯ ಮೇಲೆ ಹತ್ತಿ ನಿಂತು ಭರ್ಜಿಯಿಂದ ಗುದ್ದಿ ಬಿಲ್ಲು ಬಾಣ ಮತ್ತು ಈಟಿಯಿಂದ ತಿವಿದಿದ್ದ ಅದೇ ಕ್ರೂರಿಯಾದ "ಶಿಮ್ರ್" ಎಂಬಾತನು ಹುಸೈನ್ (ರ)ರವರ ಕೈಲಿದ್ದ ಹಾಲುಗಲ್ಲದ ಹಸುಳೆಯತ್ತ ಬಾಣ ಹೂಡಿಯೇ ಬಿಟ್ಟ..!!*
*ಆ ಬಾಣವು ನೇರವಾಗಿ ಅಲಿ ಅಸ್ಗರ್ (ರ) ರವರ ಗಂಟಲಿನೊಳಗೆ ಹೊಕ್ಕಿತು.* 🏹
*ದಾಹ ಸಹಿಸಲಾರದೆ ಒದ್ದಾಡುತ್ತಾ ಹುಸೈನ್ (ರ) ರವರ ಕೈಗಳಲ್ಲಿ ಮುದುಡಿ ಮಲಗಿದ್ದ ಸಯ್ಯದುನಾ ಅಲಿ ಅಸ್ಗರ್ (ರ) ಎಂಬ ಹಾಲುಗಲ್ಲದ ಹಸುಗೂಸು ನೋವಿನಿಂದ ಒಮ್ಮೆ ಚೀರಿ ಶಹೀದಾಗುವುದರೊಂದಿಗೆ ಶುಹದಾ ಎಂಬ ಅತ್ಯುನ್ನತ ಪದವಿಯೊಂದಿಗೆ ದಾಹ, ಹಸಿವು, ನೇೂವು ಮತ್ತು ಸಂಕಟಗಳಿಂದ ಮುಕ್ತವಾದ ಚಿರ ಶಾಶ್ವತವಾದ ಲೇೂಕಕ್ಕೆ ತೆರಳಿ ಚಿರ ವಿಶ್ರಾಂತಿ ಪಡೆಯಲಾರಂಭಿಸಿತು. ಇನ್ನಲಿಲ್ಲಾಹ್....* 😰
*(ಸಯ್ಯದುಶ್ಶುಹದಾಅ್ ಸಯ್ಯದುನಾ ಅಲಿ ಅಸ್ಗರ್ (ರ) ರವರ ಹಕ್ಕ್'ಜಾಹ್ ಬರ್ಕತ್'ನಿಂದ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರ ಮಕ್ಕಳಿಗೂ ಎಲ್ಲಾ ತರದ ಆಪತ್ತುಗಳಿಂದಲೂ ಸಂರಕ್ಷಣೆ ನೀಡಿ ಅನುಗ್ರಹಿಸುವುದರೊಂದಿಗೆ ಆಫಿಯತ್'ನೊಂದಿಗೆ ದೀರ್ಘಾಯಸ್ಸು ಕರುಣಿಸಿ ಅನುಗ್ರಹಿಸಲಿ ಆಮೀನ್)*
ಇದನ್ನು ಕಂಡು ಅವಾಕ್ಕಾದ ಹುಸೈನ್ (ರ) ರವರು.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment