*ಮರಣ ಹೊಂದಿದವರ ಹೆಸರಲ್ಲಿ 70,000 ತಹ್'ಲೀಲ್ ಗೆ ಆಧಾರವಿದೆಯೇ?*
___________________________________
📝 _ಮುನೀರ್ ಸಖಾಫಿ,ಸಾಲೆತ್ತೂರು_
*ಭಾಗ--2*
ಶೈಖ್ ಅಬೂಯಝೀದುಲ್ ಖುರ್ತುಬೀ(ರ) ಹೇಳುತ್ತಾರೆ,
عن الشيخ أبي زيد القرطبي قال: سمعت في بعض الآثار أن من قال: لا اله إلا الله سبعين ألف مرة كانت له فداء من النار، فعملت على ذلك رجاء بركة الوعد فعملت منها لأهلي وعملت منها أعمالاً ادخرتها لنفسي وكان إذ ذاك يبيت معنا شاب يقال إنه يكاشف في بعض الأوقات بالجنة والنار، وكانت الجماعة ترى له فضلاً على صغر سنه، وكان في قلبي منه شيء، فاتفق أن استدعانا بعض الإخوان إلى منزله، فنحن نتناول الطعام والشاب معنا إذ صاح صيحة منكرة، واجتمع في نفسه وهو يقول: يا عم هذه أمي في النار، وهو يصيح بصياح عظيم لا يشك من سمعه أنه عن أمر، فلما رأيت ما به من الانزعاج قلت في نفسي اليوم أجرب صدقه فألهمني الله السبعين ألفاً، ولم يطلع على ذلك أحد إلا الله، فقلت في نفسي: الأثر حق، والذين رووه صادقون: اللهم إن السبعين ألفاً فداء هذه المرأة أمّ هذا الشاب، فما استتمت الخاطر في نفسي إلا أن قال: يا عمّ ها هي أخرجت الحمد لله رب العالمين.فحصلت لي الفائدتان.
ايماني بصدق الاثر ،وسلامتي من الشاب وعلمي بصدقه رضي الله عنهما ونفعنا بهما.
(روض الرياحين ، 159)
ಲಾಇಲಾಹ ಇಲ್ಲಲ್ಲಾಹು ಎಂಬ ದ್ಸಿಕ್ರ್ 70,000 ಸಲ ಹೇಳಿದರೆ ಅವನಿಗೆ ಅದು ನರಕ ಮೋಚನಯಾಗಿದೆಯೆಂದು ಕೆಲವು ಆಸಾರ್ ಗಳಲ್ಲಿ ನಾನು ಕೇಳಿದ್ದೆನು.ಅದು ಪ್ರಕಾರ ನನ್ನ ಕುಟುಂಬಕ್ಕೆ ಮತ್ತು ನನ್ನ ಸ್ವಂತಕ್ಕಾಗಿಯೂ ಹಲವಾರು ಸಲ ನಾನು ಹೇಳಿ ಇಟ್ಟಿದ್ದೆ.
ಒಂದು ದಿನ ನಮ್ಮೊಂದಿಗೆ ಮನೆಯಲ್ಲಿ ಒಬ್ಬ ಯುವಕ ಇದ್ದರು.ಕೆಲವೊಂದು ಸಮಯಗಳಲ್ಲಿ ಅವರು ನರಕ ಮತ್ತು ಸ್ವರ್ಗವನ್ನು ಕಾಣುತ್ತಿದ್ದರೆಂದು ಜನರು ಹೇಳುತ್ತಿದ್ದರು.ಆದುದರಿಂದಲೇ ಜನರು ಆ ಯುವಕನನ್ನು ಬಹಳ ಗೌರವದಿಂದ ಕಾಣುತ್ತಿದ್ದರು.ಆದರೆ ನನಗೆ ಅದರಲ್ಲಿ ಸಂಶಯವಿತ್ತು.ಹಾಗೇ ಒಂದು ದಿವಸ ಗೆಳೆಯರಲ್ಲೊಬ್ಬ ನಮ್ಮನ್ನು ಔತನ ಕೂಟಕ್ಕೆ ಮನೆಗೆ ಆಹ್ವಾನಿಸಿದರು.ನಾವು ಆಹಾರ ಸೇವಿಸುತ್ತಿರುವಾಗ ಆ ಯುವಕನೂ ಕೂಡಾ ನಮ್ಮೊಂದಿಗಿದ್ದರು.ತಟ್ಟನೇ ಆ ಯುವಕ ಜೋರಾಗಿ ಕೂಗಿದರು!.
ಬಹಳ ಗಟ್ಟಿಯಾಗಿ ಆ ಯುವಕ "ನನ್ನ ತಾಯಿಯು ನರಕದಲ್ಲಿ "ಎಂದು ಅಳುತ್ತಿದ್ದರು.ಆ ಯುವಕನ ಈ ಅಕ್ರಂಧನ ಕಂಡಾಗ ಆ ಯುವಕನ ನೈಜತೆಯನ್ನು ತಿಳಿಯಲು ನಾನು ಹೇಳಿ ಇಟ್ಟಿದ್ದ 70,000 ತಹ್'ಲೀಲನ್ನು ಆ ಯುವಕನ ತಾಯಿಗೆ ನಾನು ಹದ್ಯಾ ಮಾಡಿದೆನು.ಅಲ್ಲಾಹನ ಹೊರತು ಬೇರೆ ಯಾರಿಗೂ ಅದು ತಿಳಿದಿರಲಿಲ್ಲ.
ನಾನು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿ ಮುಗಿಸುವಷ್ಟರಲ್ಲಿ ಆ ಯುವಕ ನನ್ನಲ್ಲಿ ಹೇಳಿದರು."ನನ್ನ ತಾಯಿಯನ್ನು ನರಕದಿಂದ ಮೋಚಿಸಲ್ಪಡಲಾಗಿದೆ.ಪ್ರಪಂಚ ರಕ್ಷಕನಾದ ಅಲ್ಲಾಹನಿಗೆ ಸರ್ವ ಸ್ತುತಿಗಳು.
ಈ ಘಟನೆಯಿಂದ ನನಗೆ ಎರಡು ಕಾರ್ಯಗಳು ತಿಳಿಯಿತು.
1.ಆ ಅಸರ್ ನಲ್ಲಿ (70000 ತಹ್'ಲೀಲ್ ನರಕ ಮೋಚನೆ ಎಂಬ ಮಾತು) ಸತ್ಯವೆಂದು ಮನವರಿಕೆಯಾಯಿತು.
2.ಆ ಯುವಕ ಸಂತ್ಯವಂತನಾಗಿದ್ದ ಎಂಬುವುದು.
(ರೌಳುರ್ರಯಾಹೀನ್,ಪುಟ 159)
ಇಮಾಮ್ ಮುಲ್ಲಾ ಅಲಿಯ್ಯುಲ್ ಖಾರೀ(ರ) ಹೇಳುತ್ತಾರೆ,
قال الشيخ محيي الدين بن العربي : أنه بلغني عن النبي صلى الله عليه وسلم أن من قال : لا إله إلا الله سبعين ألفا غفر له ، ومن قيل له غفر له أيضا ، فكنت ذكرت التهليلة بالعدد المروي من غير أن أنوي لأحد بالخصوص ، بل على الوجه الإجمالي ، فحضرت طعاما مع بعض الأصحاب ، وفيهم شاب مشهور بالكشف ، فإذا هو في أثناء الأكل أظهر البكاء فسألته عن السبب فقال : أرى أمي في العذاب فوهبت في باطني ثواب التهليلة المذكورة لها فضحك وقال : إني أراها الآن في حسن المآب ، قال الشيخ : فعرفت صحة الحديث بصحة كشفه ، وصحة كشفه بصحة الحديث .
(مرقاة 2/102)
70,000 ಸಲ ಒಬ್ಬ ಲಾಇಲಾಹ ಇಲ್ಲಲ್ಲಾಹ್ ಎಂಬ ದ್ಸಿಕ್ರ್ ಹೇಳಿದರೆ ಅವನ ತಪ್ಪುಗಳನ್ನು ಮನ್ನಿಸಲಾಗುವುದು.ಬೇರೊಬ್ಬನಿಗೆ ಅದನ್ನು ಹೇಳಿದಲ್ಲಿ ಅವನ ತಪ್ಪುಗಳನ್ನೂ ಮನ್ನಿಸಲಾಗುವುದು ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಹದೀಸ್ ನನಗೆ ಲಭಿಸಿದೆ.ಅದು ಪ್ರಕಾರ ನಾನು
ಅಷ್ಟು ತಹ್'ಲೀಲ್ ನಾನು ಯಾರನ್ನೂ ಸಂಕಲ್ಪಿಸದೆ ಹೇಳಿದೆ.ಆ ವೇಳೆ ಗೆಳೆಯರೊಂದಿಗೆ ಒಂದು ಔತನ ಕೂಟಕ್ಕೆ ನಾವು ಹಾಜರಾದೆವು.ಕರಾಮತ್ ನಿಂದ ಪ್ರಸಿದ್ಧಿಗೊಂಡ ಒಬ್ಬರು ನಮ್ಮೊಂದಿಗಿದ್ದರು.ಆಹಾರ ಸೇವಿಸುವ ಮಧ್ಯೆ ಅವರು ಜೋರಾಗಿ ಅತ್ತರು.ಕಾರಣ ಕೇಳಿದಾಗ ತನ್ನ ತಾಯಿಯನ್ನು ನರಕದಲ್ಲಿ ನಾನು ಕಾಣುತ್ತಿದ್ದೇನೆ ಎಂದು ಅವರು ಉತ್ತರಿಸಿದರು.ಆಗ ನಾನು ಹೇಳಿ ಇಟ್ಟಿದ್ದ ತಹ್'ಲೀಲ್ ನ ಪ್ರತಿಫಲವನ್ನು ಅವರ ತಾಯಿಗೆ ನೀಡುವೆಯೆಂದು ನಾನು ಮನಸ್ಸಲ್ಲಿ ಸಂಕಲ್ಪ ಮಾಡಿದೆ.ಆಗಲೇ ಅವರು ಜೋರಾಗಿ ನಗಾಡಿದರು.ಈಗ ನನ್ನ ತಾಯಿಯನ್ನು ನಾನು ಉತ್ತಮ ಅವಸ್ಥೆಯಲ್ಲಿ ದರ್ಶಿಸುತ್ತಿದ್ದೇನೆ ಎಂದು ಅವರು ಹೇಳಿದರು.ಇಬ್ನುಲ್ ಅರಬೀ (ರ)ಹೇಳುತ್ತಾರೆ.ಅವರ ಸರಿಯಾದ ಕಶ್ಫ್ ಕಾರಣ ಹದೀಸ್ ಸ್ವಹೀಹ್ ಆಗಿದೆಯೆಂದೂ ಸ್ವಹೀಹ್ ಆದ ಹದೀಸ್ ಕಾರಣ ಅವರ ಕಶ್ಫ್ ಸರಿಯಾಗಿದೆಯೆಂದೂ ನನಗೆ ದೃಡಪಟ್ಟಿತು.
(ಮಿರ್ಖಾತುಲ್ ಮಫಾತೀಹ್ 2/102)
ಮರಣ ಹೊಂದಿದವರಿಗಾಗಿ ತಹ್'ಲೀಲ್ ಹೇಳಿದರೆ ಅದರ ಫಲ ಮೃತರಿಗೆ ಲಭಿಸುವವು ಎಂಬುವುದು ಇದರಿಂದ ಬಹಳ ಸ್ಪಷ್ಟವಾಯಿತು.
*ಮುಂದುವರಿಯುವುದು.....*
No comments:
Post a Comment