💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ---0⃣4⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
*ನಮಾಝಿನ* *ನಂತರ* *ದುಆಃ ಹದೀಸುಗಳಲ್ಲಿ...*
*------------------------------*
ಇಮಾಮ್ ತುರ್ಮುದ್ಸೀ ವರದಿ ಮಾಡಿದ ಹದೀಸ್ ನೋಡಿ,
*"عن* *ابي* *امامة* *قال* *:قيل* *لرسول* *الله* *صلي* *الله* *عليه* *وسلم* *اي* *الدعاء* *اسمع* ؟ *قال* *جوف* *الليل* *الاخر* *ودبر* *الصلوات* *المكتوبات* *قال* *هذا* *حديث* *حسن*
*(ترمذي)*
ಅಬೂ ಉಮಾಮ (ರ) ವರದಿ;
ಪ್ರವಾದಿಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ 'ಪ್ರಾರ್ಥನೆ ಸ್ವೀಕರಿಸಲ್ಪಡುವ ಸಮಯ ಯಾವುದೆಂದು 'ಒಬ್ಬರು ಕೇಳಿದರು.ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, ರಾತ್ರಿಯ ಕೊನೆಯ ಸಮಯದಲ್ಲಿ ಮತ್ತು ಎಲ್ಲಾ ಫರ್ಲ್ ನಮಾಝಿನ ಬಳಿಕವೂ ಆಗಿದೆ. ಇಮಾಂ ತುರ್ಮದ್ಸೀ ಹೇಳುತ್ತಾರೆ. ಈ ಹದೀಸ್ ಹಸನ್ ಆಗಿದೆ.
(ತುರ್ಮುದ್ಸೀ 2/198)
*----------------------------------*
ಇಮಾಮ್ ತ್ವಬ್ ರಾನಿ ವರದಿ ಮಾಡಿದ ಹದೀಸ್ ನಲ್ಲಿ ಈ ರೀತಿ ಇದೆ;
" *عن العرباض بن سارية قال قال رسول الله صلي عليه وسلم من صلي الصبح فريضة فله دعوة مستجابة ومن ختم القران فله دعوة مستجابة*
*(معجم الكبير 18/259 ، مجمع الزوائد 7/175، كنز العمال 2/100 )*
ಇರ್ಬಾಲ್ ಬಿನ್ ಸಾರಿಯ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ" ಫರ್ಳ್ ನಮಾಝಿನ ಬಳಿಕ ಮಾಡುವ ಪ್ರಾರ್ಥನೆಗೆ ಉತ್ತರವಿದೆ.ಖುರ್ ಆನ್ ಖತಮ್ ಮುಗಿಸಿ ಪ್ರಾರ್ಥಿಸುವ ಪ್ರಾರ್ಥನೆಗೂ ಉತ್ತರವಿದೆ.
(ಮುಅಜಮುಲ್ ಕಬೀರ್ 18/259,
ಮಜ್ಮ್ ಮಉಝ್ಝವಾಯಿದ್ 7/175,
, ಕಂಝುಲ್ ಉಮ್ಮಾಲ್ 2/100)
*-----------------------------------*
ಬೇರೊಂದು ಹದೀಸ್ ನೋಡಿ;
*اذا صليتم الصبح فافزعوا الي الدعاء وباكروا في طلب الحوائج اللهم بارك لامتي في بكورها.*
(كنز العمال 2/100)
ನೀವು ಸುಬಹಿ ನಮಾಝ್ ಮಾಡಿದರೆ ದುಆದಲ್ಲಿ ತಲ್ಲೀನರಾಗಿರಿ.ಪ್ರಭಾತದಲ್ಲಿ ನಿಮ್ಮ ಆವಶ್ಯತೆಗಳನ್ನು ಕೇಳಿರಿ.ಅಲ್ಲಾಹನೇ ! ಪ್ರಭಾತ ಸಮಯದಲ್ಲಿ ನನ್ನ ಉಮ್ಮತ್ ಗೆ ನೀನು ಸಮೃದ್ಧಿ ನೀಡು.
(ಕಂಝುಲ್ ಉಮ್ಮಾಲ್ 2/100)
*-----------------------------------*
ಇಮಾಮ್ ತ್ವಬ್ ರಾನಿ ವರದಿ;
عن جعفر بن محمد الصادق قال : الدعاء بعد المكتوبة افضل من الدعاء بعد النافلة كفضل المكتوبة علي النافلة.
(تحفة الاحوذي 2/197)
ಫರ್ಲ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದು ಸುನ್ನತ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದಕ್ಕಿಂತಲೂ ಶ್ರೇಷ್ಠವಾಗಿದೆ.ಸುನ್ನತ್ ನಮಾಝಿಗಿಂತ ಫರ್ಳ್ ನಮಾಝ್ ಶ್ರೇಷ್ಠವಾದಂತೆ.
(ತುಹ್ ಫತುಲ್ ಅಹ್ ವದ್ಸೀ 2/197)
*-----------------------------------*
ಇಮಾಮ್ ಇಬ್ನ್ ಅಬೀ ಶೈಬ (ರ) ವರದಿ ;
عن اسود العامري عن ابيه قال صليت مع رسول الله صلي الله عليه وسلم الفجر فلما سلم انحرف ورفع يديه ودعا رواه ابن ابي شيبة في مصنفه.
(تحفة الاحوذي 2/199)
ಅಸ್ವದುಲ್ ಆಮಿರ್ (ರ) ತನ್ನ ತಂದೆಯಿಂದ ವರದಿ ಮಾಡುತ್ತಾರೆ.ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸುಬಹಿ ನಮಾಝ್ ಮಾಡಿದೆ.ನಮಾಝ್ ನ
ಸಲಾಂ ಹೇಳಿದ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ
ಕುಳಿತು ಕೈ ಎತ್ತಿ ಪ್ರಾರ್ಥಿಸಿದರು.
(ತುಹ್ ಫತುಲ್ ಅಹ್ವದ್ಸೀ 2/199)
*-----------------------------------*
ನಮಾಝ್ ಮುಗಿದ ನಂತರ ಪ್ರಾರ್ಥಿಸಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮತ್ತು ಸ್ವಹಾಬಿಗಳ ಚರ್ಯೆಯಿಂದ ಸಾಬೀತಾಗಿದೆ.ನಮಾಝ್ ಮುಗಿದ ಕೂಡಲೇ ಅವರು ಯಾರೂ ಕೂಡಾ ಎದ್ದು ಓಡುತ್ತಿರಲಿಲ್ಲ.ಬದಲು ಅಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದರು.ಅದರ ಕುರಿತಿರುವ ಹದೀಸಾಗಿದೆ ಮೇಲೆ ನೀವು ಓದಿದ್ದು.ಈ ವಿಷಯದಲ್ಲಿ ಇನ್ನೂ ಕೂಡಾ ಹಲವಾರು ಹದೀಸು ಗಳು ಇವೆ.
ಅವುಗಳನ್ನು ಮುಂದಿನ ಭಾಗದಲ್ಲಿ ನೋಡೋಣ.
ಇಂಶಾ ಅಲ್ಲಾಹ್.
_*-----------------------------------*_
*(ಮುಂದುವರಿಯುದು...*.)
_📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
&
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
No comments:
Post a Comment