*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಭಾಗ--3
*___________________________________*
_*ಪವಿತ್ರ ಖುರ್'ಆನ್ ಏನು ಹೇಳುತ್ತದೆ?*_
_ಅಲ್ಲಾಹನು ಹೇಳುತ್ತಾನೆ;_
لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ ( التوبة 108)
_ಪ್ರಾರಂಭದಲ್ಲೇ ಭಕ್ತಿಯ ಮೇಲೆ ನಿರ್ಮಿಸಿದ ಮಸೀದಿಯು ತಮಗೆ ನಮಾಜಿಗೆ ಅತ್ಯತ್ತಮವಾಗಿದೆ.ಆ ಮಸೀದಿಯಲ್ಲಿ ಶುದ್ಧಿಯನ್ನು ಇಷ್ಟಪಡುವ ಪುರುಷರಿದ್ದಾರೆ.ಶುದ್ಧಿಯಿರುವವರನ್ನು ಅಲ್ಲಾಹನು ಇಷ್ಟಪಡುವನು._
(ಸೂರಾ ತೌಬಾ 108)
____________________________________
ಪುರುಷರು ನಮಾಜು ಮಾಡುವ ಮಸೀದಿಯು ಭಕ್ತಿಯ ಮಸೀದಿಯೆಂದೂ ತಮ್ಮ ನಮಾಜು ಆ ಮಸೀದಿಯಲ್ಲಾಗಿರಬೇಕೆಂದೂ ಅಲ್ಲಾಹನು ಪ್ರವಾದಿವರ್ಯರಲ್ಲಿ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾನೆ.
ಅಲ್ಲಾಹನು ಹೇಳುತ್ತಾನೆ,
فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ (36)
رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
( سورة النور 37)
_ಮಸೀದಿಗಳಲ್ಲಿ ದಿಕ್ರ್'ಗಳ ಮೂಲಕ ಶಬ್ಧವೆತ್ತುವುದಕ್ಕೆ ಅಲ್ಲಾಹನು ಸಮ್ಮತಿ ನೀಡಿದ್ದಾನೆ._
_ಆ ಮಸೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ದ್ಸಿಕ್ರ್ ಹೇಳುವ ಪುರುಷರಿದ್ದಾರೆ._
_ಯಾವುದೇ ವ್ಯಾಪಾರ ವಹಿವಾಟುಗಳು ಅವರ ದ್ಸಿಕ್ರ್ ಗೆ ತಡೆಯಾಗಲಾರದು._
(ಸೂರಾ ಅತ್ತೌಬ 36,37)_
____________________________________
ಮೇಲಿನ ಎರಡು ಸೂಕ್ತಗಳಲ್ಲೂ ಅಲ್ಲಾಹನು ಮಸೀದಿಯ ಬಗ್ಗೆ ಪರಾಮರ್ಶಿಸುವಾಗ ಪುರುಷರನ್ನು ಮಾತ್ರ ಹೇಳಿದ್ದಾನೆ.ಇದಕ್ಕೆ ಕ್ಕಾರಣವೇನು?
ಖುರ್'ಆನ್ ವ್ಯಾಖ್ಯಾನಗಾರರು ವಿವರಣೆಯನ್ನು ನೋಡೋಣ.
ಇಮಾಮ್ ರಾಝೀ(ರ)ಬರೆಯುತ್ತಾರೆ;
خصَّ الرِّجَال بِالذِّكْر لِأَنَّ النِّسَاءَ لَسْنَ مِنْ أَهْلِ التِّجَارَاتِ أَوِ الْجَمَاعَاتِ(رازي 6/24)
ಸ್ತ್ರೀಯರಿಗೆ ವ್ಯಾಪಾರ ಮತ್ತು ಜಮಾಅತ್ ಇಲ್ಲದಿರುವುದರಿಂದಲೇ ಅಲ್ಲಾಹನು ಪುರುಷರನ್ನು ಮಾತ್ರ ಹೇಳಿದ್ದಾನೆ.(ರಾಝಿ 6/24)
____________________________________
ಇಮಾಮ್ ಇಸ್ಮಾಯಿಲ್ ಹಿಖ್ಖಿ (ರ)ಹೇಳುತ್ತಾರೆ;
لانه لا جمعة علي النساء ولا جماعة في المساجد
(روح االبيان 6/161)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಗಳಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ.
(ರೂಹುಲ್ ಬಯಾನ್ 6/161)
____________________________________
ಇಮಾಮ್ ಮಲ್'ಹರೀ (ರ)ಹೇಳುತ್ತಾರೆ;
لانه ليس علي النساء جمعة ولا جماعة في المسجد
(تفسير المظهري 6/541)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಯಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ
(ತಫ್ಸೀರುಲ್ ಮಲ್'ಹರಿ 6/541)
____________________________________
ಇಮಾಮ್ ಸ್ವಾವೀ(ರ)ಹೇಳುತ್ತಾರೆ;
خصوا بالذكر لان شأنهم حضور المساجد للجمعة والجماعات.
(حاشية الصاوي 3/141)
ಜುಮಾ ಮತ್ತು ಜಮಾಅತ್ ನಮಾಜ್ ಗೆ ಸೇರುವುದು ಪುರುಷರು ಮಾತ್ರವಾಗಿರುವುದರಿಂದ ಪುರುಷರನ್ನು ಮಾತ್ರ ಇಲ್ಲಿ ಹೇಳಲಾಗಿದೆ.
(ಸ್ವಾವೀ3/141)
____________________________________
ತಫ್ಸೀರು ಖಾಝಿನ್ ನಲ್ಲಿ ಈ ರೀತಿ ಇದೆ;
خص الرجال بالذكر في هذه المساجد لأن النساء ليس عليهن حضور المساجد لجمعة ولا جماعة (تفسير الخازن 3/333)
ಮಸೀದಿಯ ಬಗ್ಗೆ ಪ್ರಸ್ತಾಪಿಸಿದಾಗ ಪುರುಷರ ಬಗ್ಗೆ ಮಾತ್ರ ಹೇಳಲು ಕಾರಣ,ಸ್ತ್ರೀಯರು ಜುಮುಅ ಮತ್ತು ಜಮಾಅತ್ ಗೆ ಹಾಜರಾಗದಿರುವುದರಿಂದಾಗಿದೆ.
(ತಫ್ಸೀರು ಖಾಝಿನ್3/333)
ಇದೇ ರೀತಿ (تفسير الجمل )
ತಫ್ಸೀರುಲ್ ಜಮಲ್ 3/227,
ತಫ್ಸೀರು ಮ ಆಲಿಮುತ್ತಂಝೀಲ್ ನ 3/295(تفسير معالم التنزيل)
ರಲ್ಲೂ ಹೇಳಲಾಗಿದೆ.
____________________________________
ನೂತನವಾದಿಗಳ ನಾಯಕ ಮಿಸ್ಟರ್ ಆಲೂಸೀ ಹೇಳುತ್ತಾರೆ;
وتخصيص الرجال بالذكر لانهم الاحقاء بالمساجد.(تفسير روح المعاني 18/177)
ಮಸೀದಿಯೊಂದಿಗೆ ಅತೀ ಸಂಭಂಧಪಟ್ಟವರು ಪುರುಷರಾದುದರಿಂದ ಅಲ್ಲಾಹನನ್ನು ಪುರುಷರನ್ನು ಮಾತ್ರ ಹೇಳಿದ್ದಾನೆ.
(ರೂಹುಲ್ ಮಆನಿ 18/177)
____________________________________
ಇಮಾಮ್ ಕುರ್ತುಬಿ ಹೇಳುತ್ತಾರೆ;
وخصهم بالذكر دل على أن النساء لا حظ لهن في المساجد ؛ إذ لا جمعة عليهن ، ولا جماعة ، وأن صلاتهن في بيوتهن أفضل
(قرطبي 12/184)
ಸ್ತ್ರೀಯರಿಗೆ ಮಸೀದಿಯಲ್ಲಿರುವ ಜುಮುಅ ಮತ್ತು ಜಮಾಅತ್ ನಲ್ಲಿ ಪಾಲ್ಗೊಲ್ಲುವ ಅವಕಾಶವಿಲ್ಲದಿರುವುದರಿಂದ ಪುರುಷನನ್ನು ಮಾತ್ರ ಅಲ್ಲಾಹನು ಹೇಳಿದ್ದಾನೆ.ಸ್ತ್ರೀಯರಿಗೆ ಅವರ ಮನೆಯೇ ನಮಾಜಿಗೆ ಉತ್ತಮವಾಗಿದೆ.
(ತಫ್ಸೀರು ಖುರ್ತುಬೀ 12/184)
____________________________________
ಸಲಪಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ಹೇಳುವುದು ನೋಡಿ,
فأما النساء فصلاتهن في بيوتهن أفضل لهن; لما رواه أبو داود ، عن عبد الله بن مسعود ، رضي الله عنه ، عن النبي صلى الله عليه وسلم قال : " صلاة المرأة في بيتها أفضل من صلاتها في حجرتها ، وصلاتها في مخدعها أفضل من صلاتها في بيتها "
(ابن كثير 3/295)
ಸ್ತ್ರೀಯರಿಗೆ ನಮಾಜು ನಿರ್ವಹಿಸಲು ಅವರ ಮನೆಯೇ ಉತ್ತಮವಾಗಿದೆ.ಇಮಾಮ್ ಅಬೂದಾವೂದ್ (ರ)ವರದಿ ಮಾಡಿದ "ಸ್ತ್ರೀಯರಿಗೆ ಅವರ ಮನೆಯ ಒಳಗಿನ ಕೋಣೆಯು ನಮಾಜಿಗೆ ಉತ್ತಮವಾಗಿದೆ" ಎಂಬ ಹದೀಸ್ ಅದಕ್ಕೆ ಆಧಾರವಾಗಿದೆ.
(ಇಬ್ನ್ ಕಸೀರ್ 3/302).
____________________________________
ನೋಡಿರಿ!!
ಮಹಿಳೆಯರಿಗೆ ನಮಾಜು ನಿರ್ವಹಿಸಲು ಮಸೀದಿ ಉತ್ತಮವಲ್ಲವೆಂದು ಖುರ್'ಆನ್ ನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನಾಗಿದೆ ಮೇಲೆ ನೀವು ಓದಿದ್ದು,ಇದಕ್ಕೆ ವಿರುದ್ಧವಾಗಿ ಯಾವುದೇ ಗ್ರಂಥಗಳಿಂದ ಒಂದೇ ಒಂದು ವಾಖ್ಯಾವನ್ನು ತೋರಿಸಲು ಯಾರಿಗೂ ಸಾಧ್ಯವಿಲ್ಲ.
ಆದುದರಿಂದ ಸತ್ಯ ತಿಳಿಯಲು ಬಯಸುವ ವಿಶ್ವಾಸಿಗೆ ಇಷ್ಟು ಪುರಾವೆಗಳು ಧಾರಾಳ ಸಾಕು.
*ಮುಂದುವರಿಯುವುದು........*
No comments:
Post a Comment