♻ *ನಮಾಝಿನ* *ಬಳಿಕ* *ಕೂಟು* *ದುಆ*♻
*ಭಾಗ---2*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಇಮಾಮ್ ಇಬ್ನುಲ್ ಜೌಝೀ (ರ) ಹೇಳುತ್ತಾರೆ;
"وفي معني الكلام خمسة قوال
احدها فإذا فرغت من الفرائض فانصب في قيام الليل قاله ابن مسعود
والثاني فإذا فرغت من الصلاة فانصب في الدعاء قاله ابن عباس والضحاك وقاتل.
(تفسير زاد المسير 9/166)
ಪ್ರಸ್ತುತ ಸೂಕ್ತಕ್ಕೆ ಐದು ಅರ್ಥಗಳಿವೆ.
ಒಂದನೆಯದು , ನೀವು ಫರ್ಲ್ ನಮಾಝಿನಿಂದ ವಿರಮಿಸಿದರೆ ಖಿಯಾಮುಲ್ಲೈಲ್ ನಲ್ಲಿ ನಿರತರಾಗಿರಿ. ಈ ವ್ಯಾಖ್ಯನವನ್ನು ಇಬ್ನ್ ಮಸ್ ಊದ್ (ರ) ಹೇಳಿದ್ದಾರೆ.
ಎರಡನೇಯ ಅರ್ಥ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.ಈ ವ್ಯಾಖ್ಯಾನವನ್ನು ಇಬ್ನ್ ಅಬ್ಬಾಸ್ , ಲಹ್ಹಾಕ್ , ಮುಖಾತಿಲ್ (ರ) ಹೇಳಿದ್ದಾರೆ.
(ಝಾದುಲ್ ಮಸೀರ್ 9/166)
_*-----------------------------------*_
ಇಮಾಮ್ ಖುರ್ತುಬೀ (ರ) ಹೇಳುತ್ತಾರೆ;
"قوله تعالي (فإذا فرغت )قال ابن عباس وقتادة : فإذا فرغت من صلاتك (فانصب )اي بالغ في الدعاء،وسله حاجتك.(قرطبي20/108)
ಇಬ್ನ್ ಅಬ್ಬಾಸ್ (ರ) ಮತ್ತು ಖತಾದ (ರ) ಹೇಳಿದರು;ನೀವು ನಮಾಝ್ ನಿಂದ ವಿರಮಿಸಿದರೆ ಗಾಡವಾದ ಪ್ರಾರ್ಥನೆಯಲ್ಲಿ ನಿರತರಾಗಿರಿ, ನಿಮ್ಮ ಆವಶ್ಯಗಳನ್ನು ಅಲ್ಲಾಹನಲ್ಲಿ ಕೇಳಿರಿ.
(ತಫ್ಸೀರುಲ್ ಖುರ್ಥುಬೀ 20/108)
_*-----------------------------------*_
ಇಮಾಮ್ ಸುಯೂತೀ (ರ) ಬರೆಯುತ್ತಾರೆ;
" أخرج عبد بن حميد وابن جرير وابن المنذر وابن أبي حاتم وابن مردويه من طرق عن ابن عباس في قوله : { فإذا فرغت فانصب } الآية قال : إذا فرغت من الصلاة فانصب في الدعاء ، واسأل الله وارغب إليه .
واخرج ابن مردويه عن ابن عباس في قوله {فإذا فرغت فانصب } الاية قال الله لرسوله: اذا فرغت من صلاتك وتشهدت فانصب الي ربك واسأله حاجتك.
- وأخرج ابن أبي الدنيا في الذكر عن ابن مسعود { فإذا فرغت فانصب } إلى الدعاء {وإلى ربك فارغب } في المسألة.
(الدر المنثور 8/522)
ಅಬ್ದ್ ಬಿನ್ ಹುಮೈದ್ (ರ),ಇಬ್ನ್ ಜರೀರ್ ,ಇಬ್ನುಲ್ ಮುಂದಿರ್ ,ಇಬ್ನ್ ಅಬೀ ಹಾತಮ್ ,ಇಬ್ನ್ ಮರ್ದವೈಹಿ (ರ) ಮುಂತಾದವರು ಇಬ್ನ್ ಅಬ್ಬಾಸ್ (ರ) ರಿಂದ ಹಲವಾರು ಪರಂಪರೆಗಳ ಮೂಲಕ ಮಾಡಲಾದ ವರದಿಯಲ್ಲಿ 'ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ.ಅಲ್ಲಾಹನೊಂದಿಗೆ ನಿಮ್ನ ಆವಶ್ಯಗಳನ್ನು ಕೇಳಿ ಪಡೆಯಿರಿ'ಎಂದಿದೆ.
ಅದೇ ರೀತಿ ಇಬ್ನ್ ಮರ್ದವೈಹಿಯವರ ಬೇರೊಂದು ರಿಪೋರ್ಟ್ ನಲ್ಲೂ ಕೂಡಾ ನಮಾಝಿನ ಬಳಿಕ ಅಲ್ಲಾಹನಲ್ಲಿ ಕೇಳಿರಿ ಎಂದೂ ಇದೆ.
ಇಬ್ನ್ ಅಬಿದ್ದುನ್ಯಾ (ರ) ಇಬ್ನ್ ಮಸ್ ಊದ್ (ರ) ರಿಂದ ' ನೀವು ನಮಾಝಿನಿಂದ ವಿರಮಿಸಿದರೆ ಅಲ್ಲಾಹನಲ್ಲಿ ಬೇಡುವುದರಲ್ಲಿ ತಲ್ಲೀನರಾಗಿರಿ' ಎಂದು ವರದಿ ಮಾಡಿದ್ದಾರೆ.
ಅದ್ದುರ್ರುಲ್ ಮಂಸೂರ್ 8/566)
*-----------------------------------*
ಮುಂದುವರಿಯುದು....
No comments:
Post a Comment