♻ *ನಮಾಝಿನ* *ಬಳಿಕ* *ಕೂಟು* *ದುಆ*♻
*ಭಾಗ---6*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಇಮಾಮ್ ನಸಾಈ ವರದಿ,
*عن عقبة بن عامر قال امرني رسول الله صلي الله عليه وسلم ان اقرأ المعوذات دبر كل صلاة.*
*(نسائي 3/68)*
ಉಖ್ ಬತ್ ಬಿನ್ ಆಮಿರ್ (ರ) ಹೇಳುತ್ತಾರೆ;ಎಲ್ಲಾ ನಮಾಝಿನ ನಂತರ ಸೂರತುಲ್ ಮುಅವ್ವಿಝಾತ್ ಓದುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನಲ್ಲಿ ಆಜ್ಞಾಪಿಸಿದರು".
(ಸುನನು ನ್ನಸಾಈ 3/68)
_*-----------------------------------*_
ಇನ್ನೊಂದು ಹದೀಸ್ ನೋಡಿ;
عن ابي الزبير قال سمعت عبد الله بن الزبير يحدث علي هذا المنبر وهو يقول كان رسول الله صلي الله عليه وسلم اذا سلم يقول *لا اله الا الله وحده لا شريك له له الملك وله الحمد وهو علي كل شيئ قدير لا حول ولا قوة الا بالله لا اله الا الله لا نعبد الا اياه اهل النعمة والفضل والثناء الحسن لا اله الا الله مخلصين له الدين ولو كره الكافرون'.*
ಅಬ್ದುಲ್ಲಾಹಿ ಬಿನ್ ಝುಬೈರ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಹೇಳುತ್ತಿದ್ದರು,
*"ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹು, ಲಹುಲ್ ಮುಲ್ಕ್ ವಲಹುಲ್ ಹಂದು ವಹುವ ಅಲಾ ಕುಲ್ಲಿನ್ ಶೈಯಿನ್ ಖದೀರ್.ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹಿ ಲಾಇಲಾಹ ಇಲ್ಲಲ್ಲಾಹು ಲಾ ನಹ್ ಬುದು ಇಲ್ಲಾ ಇಯ್ಯಾಹು ಅಹ್ ಲನ್ನಿಅಮತಿ ವಲ್ ಫಲ್ ಲಿ ವಸ್ಸನಾಇಲ್ ಹಸನಿ ಲಾ ಇಲಾಹ ಇಲ್ಲಲ್ಲಾಹು ಮುಖ್ ಲಿಸೀನ ಲಹುದ್ದೀನ್.ವಲವ್ ಕರಿಹಲ್ ಕಾಫಿರೂನ್."*
(ನಸಾಈ 3/69)
_*-----------------------------------*_
ಇನ್ನೊಂದು ಹದೀಸಿನಲ್ಲಿ ಈ ರೀತಿ ಇದೆ.,
عن وراد كاتب المغيرة بن شعبة قال كتب معاوية الي المغيرة بن شعبة اخبرني بشئ سمعته من رسول الله صلي الله عليه وسلم فقال *كان رسول الله صلي الله اذا قضي الصلاة قال لا اله الله وحده لا شريك له له الملك وله الحمد وهو علي كل شيئ قدير.اللهم لا مانع لما اعطيت ولا معطي لما منعت ولا ينفع ذا الجد منك الجد*
(نسائي3/70)
ಮುಆವಿಯ(ರ) , ಮುಗೀರತ್ ಬಿನ್ ಶುಅಬ (ರ)ರಿಗೆ ಬರೆದ ಪತ್ರದಲ್ಲಿ ಈ ರೀತಿ ಹೇಳಿದರು;
" ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಕೇಳಿದ ಯಾವುದಾದರೊಂದು ಕಾರ್ಯವನ್ನು ನನಗೆ ತಿಳಿಸಿ ಕೊಡುವಿರಾ?"
ಆಗ ಮುಗೀರ (ರ) ಈ ರೀತಿ ಹೇಳಿದರು,
*" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಲಾಇಲಾಹ ಇಲ್ಲಲ್ಲಾಹು ವಹ್ ದಹು ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಂದು ವಹುವ ಅಲಾ ಕುಲ್ಲಿ ಶೈಯಿನ್ ಖದೀರ್.ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಹ್ ತೈತ ವಲಾ ಮುಅತಿಯ ಲಿಮಾ ಮನ ಅತ ವಲಾ ಯಂಫಉ ದ್ಸಲ್ ಜದ್ದಿ ಮಿಂಕಲ್ ಜದ್ದ್."*
ಎಂದು ಹೇಳುತ್ತಿದ್ದರು.
(ನಸಾಈ 3/70)
_*-----------------------------------*_
ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ;
عن عاشة رضي الله عنها ان يهودية دخلت عليها فذكرت عذاب القبر فقالت لها اعاذك الله من عذاب القبر فسالت عائشة رسول الله صلي الله عليه وسلم عن عذاب القبر فقال نعم، عذاب القبر.
*قالت عائشة فما رأيت رسول الله صلي الله صلي الله عليه وسلم بعد صلي صلاة الا تعوذ من عذاب القبر.*
(متفق عليه)
ಆಯಿಶಾ (ರ) ಹೇಳುತ್ತಾರೆ,ಒಬ್ಬಳು ಯಹೂದಿ ಸ್ತ್ರೀ ಆಯಿಶಾ (ರ) ಬಳಿ ಬಂದು ನಿಮ್ಮನ್ನು ಅಲ್ಲಾಹನು ಖಬ್ ರಿನ ಅಝಾಬ್ ನಿಂದ ಪಾರುಗೊಳಿಸಲಿ ಎಂದು ಹೇಳಿದಾಗ ಆಯಿಶಾ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಖಬರಿನ ಶಿಕ್ಷೆಯ ಬಗ್ಗೆ ಕೇಳಿದರು.ಖಬರಿನ ಶಿಕ್ಷೆ ಸತ್ಯವೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು.
*ಆಯಿಶಾ ಬೀವಿ(ರ) ಹೇಳುತ್ತಾರೆ,ಅದರ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖಬರಿನ ಶಿಕ್ಷೆಯ ಮೋಚನೆಗಾಗಿ ಪ್ರಾರ್ಥಿಸದೆ ನಮಾಝ್ ಮಾಡುವುದನ್ನು ನಾನು ನೋಡಿಲ್ಲ.*
(ಬುಖಾರಿ 2/274 , ಮುಸ್ಲಿಮ್ 3/92)h
_*-----------------------------------*_
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಎದ್ದು ಹೋಗದೆ , ಅಲ್ಲೇ ಕುಳಿತು ದ್ಸಿಕ್ರ್ ಮತ್ತು ದುಆಗಳನ್ನು ನಡೆಸುತ್ತಿದ್ದರೆಂದು ಈ ಮೇಲಿನ ಹದೀಸಿನಿಂದ ಬಹಳ ಸ್ಪಷ್ಟವಾಯಿತು.
ಮುಂದುವರಿಯುದು..........
No comments:
Post a Comment