*ನಮಾಝಿನ ಬಳಿಕ ಕೂಟುದುಆ*
*﷽*
*ಭಾಗ---1⃣0⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ವಹ್ಹಾಬಿಗಳ ಅಂಗೀಕೃತ ನೇತಾರ ಮುಹಮ್ಮದ್ ಬಿನ್ ಇಸ್ಮಾಈಲ್ ಎಂಬವರು ಹೇಳುವುದನ್ನು ನೋಡಿ,
_دعاء الإمام مستقبل القبلة , مستدير المأمومين فلم يأت به سنة بل الذي ورد أنه صلى الله عليه وسلم كان يستقبل المأمومين إذا سلم . قال البخاري : باب يستقبل الإمام الناس إذا سلم . وورد حديث سمرة جندب وحديث زيد بن خالد كان اذا صلي اقبل علينا بوجهه, وظاهره : المداومة علي ذلك (سبل السلام 1/236)_
_ನಮಾಝಿನ ನಂತರ_
_ಮಅ್'ಮೂಮುಗಳಿಗೆ ಬೆನ್ನು ತಿರುಗಿಸಿ ಕಿಬ್ ಲಾಗೆ_ _ಅಭಿಮುಖವಾಗಿ ಕುಳಿತು ಪ್ರಾರ್ಥಿಸುವುದು ಹದೀಸುಗಳಲ್ಲಿ ವರದಿಯಾಗಿಲ್ಲ.ಬದಲು_ _ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿಯಾದದ್ದು ಮಅ್'ಮೂಮುಗಳ ಭಾಗಕ್ಕೆ ಮುಖಮಾಡಿ ಕುಳಿತುಕೊಳ್ಳುತ್ತಿದ್ದರು_ _ಎಂಬುವುದಾಗಿದೆ.ಇಮಾಮ್ ಬುಖಾರಿಯವರು ಇದನ್ನು ತಿಳಿಸಿದ್ದಾರೆ.ಸಮುರತ್ ಬಿನ್ ಜುಂದುಬ್ (ರ)ಹಾಗೂ ಝೈದ್ ಬಿನ್ ಖಾಲಿದ್(ರ)ರವರಿಂದ ಹೀಗೆ ವರದಿಯಾಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮುಗಿದೊಡನೆ ನಮ್ಮ ದಿಕ್ಕಿಗೆ ಮುಖ ಮಾಡುತ್ತಿದ್ದರು.ಇದರ ಬಾಹ್ಯವೇನೆಂದರೆ ಪ್ರಸ್ತುತ ರೀತಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕುಳಿತುಕೊಳ್ಳುವುದು ಅವರ ನಿತ್ಯ ರೂಢಿಯಾಗಿತ್ತು ಎಂಬುವುದಾಗಿದೆ._
_(ಸುಬುಲುಸ್ಸಲಾಂ 336/1)_
*------------------------------------------*
ನೋಡಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನಿಂದ ವಿರಮಿಸಿದರೆ ಎದ್ದು ಹೋಗದೆ ಸುನ್ನಿಗಳು ಇಂದು ನಿರ್ವಹಿಸುವಂತೆ ಜನರ ಭಾಗಕ್ಕೆ ತಿರುಗಿ ಕುಳಿತುಕೊಳ್ಳುತ್ತಿದ್ದರು ಎಂದು ನೂತನವಾದಿಗಳ ನೇತಾರರೂ ಕೂಡಾ ಅಂಗೀಕರಿಸಿದ್ದಾರೆ.
ಈ ತಿರುಗುವಿಕೆ ಹೇಗೆಯಾಗಿತ್ತು ಎಂಬುವುದು ಇನ್ನೊಂದು ಪ್ರಶ್ನೆಯಾಗಿದೆ.
ಇದು ಸಾಮಾನ್ಯವಾಗಿ ಇಂದು ಮಸೀದಿಗಳಲ್ಲಿ ಕಂಡು ಬರುವಂತೆ ಬಲಭಾಗ ಮಅ್'ಮೂಮೂಮುಗಳಿಗೂ ಎಡಭಾಗ ಮಿಹ್'ರಾಬಿಗೂ ಬರುವ ರೀತಿಯಲ್ಲಾಗಿತ್ತು .ಇದನ್ನು ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ಸ್ಪಷ್ಟಗೊಳಿಸುತ್ತದೆ.
_عن البراء قال: كنا إذا صلَّينا خلف رسول الله صلي الله عليه وسلم أحببنا أن نكون عن يمينه، يُقبل علينا بوجهه، (مسلم_ _1/247)_
_ಬರಾಅ್ ಬಿನ್ ಆಝಿಬ್(ರ)ವರದಿ;ಅವರು_ _ಹೇಳುತ್ತಾರೆ,ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಿಂದೆ ನಮಾಝ್ ಮಾಡಿದರೆ ಅವರು ನಮ್ಮ ಕಡೆಗೆ ಮುಖ ಮಾಡುವುದನ್ನು ಕಾಣಲು_ _ಅವರ ಬಲಭಾಗದಲ್ಲಿ ನಿಂತುಕೂಳ್ಳುವುದನ್ನು ನಾವು ಇಷ್ಟಪಡುತ್ತಿದ್ದೆವು._
(ಮುಸ್ಲಿಂ 1/247)
*-----------------------------------------*
ಈ ಹದೀಸಿನಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಲಾಂ ಹೇಳಿದ ಬಳಿಕ ಮಅ್'ಮೂಮುಗಳ ಧಿಕ್ಕಿಗೆ ತನ್ನ ಬಲ ಭಾಗ ಬರುವ ರೀತಿಯಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬುವುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.ಏಕೆಂದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಮುಖ ಮಾಡುವುದನ್ನು ಕಾಣಲು ನಾವು ಅವರ ಬಲಭಾಗದಲ್ಲಿ ನಿಲ್ಲುತ್ತಿದ್ದೆವು ಎಂದು ಹೇಳಬೇಕಾದರೆ ಪ್ರವಾದಿಯವರು ಸಲಾಮಿನ ಬಳಿಕ ಪ್ರಸ್ತುತ ರೀತಿಯಲ್ಲಿ ಕುಳಿತುಕೊಳ್ಳಬೇಕು.ಇಲ್ಲದಿದ್ದರೆ ನಾವು ಅವರ ಬಲಭಾಗದಲ್ಲಿ ನಿಲ್ಲುವುದನ್ನು ಇಷ್ಟಪಡುತ್ತಿದ್ದೆವು ಎಂದು ಬರಾಅ್(ರ)ಹೇಳುವುದರಲ್ಲಿ ಅರ್ಥವಿಲ್ಲ.
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
No comments:
Post a Comment