💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ-0⃣9⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
*ಸಲಾಮಿನ ನಂತರ ಹೇಗೆ ಕುಳಿತುಕೊಳ್ಳಬೇಕು?*
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಝಿಕ್ರ್ ದುಆಗಳನ್ನು ನಡೆಸುತ್ತಿದ್ದರೆಂದು ಮುಂದಿನ ಭಾಗದಲ್ಲಿ ವಿವರಿಸಲಾಯಿತು.
ಈ ಝಿಕ್ರ್ ನ ವೇಳೆ ಯಾವ ರೀತಿ ಕುಳಿತುಕೊಳ್ಳಬೇಕೆಂದು ಪರಿಶೀಲಿಸೋಣ.
_ಒಂಟಿಯಾಗಿ ನಮಾಝ್ ಮಾಡುವವನು ಕಿಬ್ಲಾಗೆ ಅಭಿಮುಖವಾಗಿ ನಮಾಝ್ ನಲ್ಲಿ ಕುಳಿತಂತೆ ನಮಾಝಿನ ನಂತರವೂ ಕುಳಿತು ಕೊಳ್ಳಬೇಕು._
ಇನ್ನು ಇಮಾಮ್ ಆಗಿ ನಮಾಝ್ ನಿರ್ವಹಿಸಿದವನು ಕುಳಿತು ಕೊಳ್ಳಬೇಕಾದ ರೂಪವನ್ನು ತಿಳಿಯೋಣ.
_ಇಮಾಮ್ ನಮಾಝಿನ ಬಳಿಕ ಮಅ್'ಮೂಮ್ ಗಳ ಅಭಿಮುಖವಾಗಿ ಕುಳಿತು ಕೊಳ್ಳಬೇಕು._
(ಗುರುವರ್ಯರಾದ ತೋಕೆ ಉಸ್ತಾದರ ಪುಸ್ತಕದ ಕೆಲವೊಂದು ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ.)
ಇಮಾಮ್ ಬುಖಾರಿ(ರ)ವರದಿ;
عن سمرة بن جندب قال كان النبي صلى الله عليه وسلم إذا صلى صلاة أقبل علينا بوجهه (بخاري )
ಸಮುರತ್ ಬಿನ್ ಜುಂದುಬ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ನಿಂದ ವಿರಮಿಸಿದರೆ ನಮ್ಮ ಕಡೆಗೆ ಮುಖ ಮಾಡಿ ಕುಳಿತು ಕೊಳ್ಳುತ್ತಿದ್ದರು.
(ಬುಖಾರಿ1/119 )
ಹದೀಸಿನಲ್ಲಿ *ಅಖ್'ಬಲ ಅಲೈನಾ ಬಿವಜ್'ಹಿಹಿ* ಎಂಬುವುದರ ಅರ್ಥ "ನಮಗೆ ಮುಖ ಮಾಡಿ ಎದ್ದು ಬರುತ್ತಿದ್ದರು" ಎಂದಲ್ಲ.
ಬದಲು "ತಮ್ಮ ಶರೀರವನ್ನು ಕ್ವಿಬ್'ಲಾದ ಭಾಗದಿಂದ ತಿರುಗಿಸಿ ಕುಳಿತುಕೊಳ್ಳುತ್ತಿದ್ದರು" ಎಂದಾಗಿದೆ.ಇದನ್ನು ಹದೀಸ್ ಗಳಿಂದಲೇ ತಿಳಿದು ಕೊಳ್ಳಬಹುದು.
ಇಮಾಮ್ ಅಬೂದಾವೂದ್ (ರ)ಮತ್ತು ಇಮಾಮ್ ಬಗವೀ(ರ)ರವರು ಉಲ್ಲೇಖಿಸಿದ ಹದೀಸ್ ನಲ್ಲಿ ಹೀಗೆ ಕಾಣಬಹುದು.
عن جابر بن يزيد عن أبيه قال: صَلّيتُ خلف النبي- عليه السلام- فكان إذا انصَرف انْحرف (شرح السنة 3/214، اوداوود )
ಜಾಬಿರ್(ರ)ತನ್ನ ಪಿತೃವರ್ಯರಾದ ಯಝೀದ್(ರ)ರವರಿಂದ ವರದಿ:ನಾನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದೆ.ನಮಾಝ್ ನಿಂದ ವಿರಮಿಸಿದ ಬಳಿಕ ಅವರು ತಿರುಗಿ ಕುಳಿತರು(ಅಬೂದಾವೂದ್,
ಶರಉಸ್ಸುನ್ನ 3/214)
*------------------------------------------*
ಇಮಾಮ್ ನಸಾಈ (ರ)ವರದಿ,
عن يزيد بن الاسود انه صلي مع رسول الله صلي الله عليه وسلم صلاة الصبح فلما صلي انحرف
ಯಝೀದ್ ಬಿನಿಲ್ ಅಸ್ವದ್ (ರ)ಹೇಳುತ್ತಾರೆ; "ನಾನು ಒಮ್ಮೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನಮಾಝ್ ಮಾಡಿದೆ.ಸಲಾಮಿನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ ಕುಳಿತರು.(ಸುನನ್ ನಸಾಈ 1/196)
*------------------------------------------*
ಇದರ ವ್ಯಾಖ್ಯಾನದಲ್ಲಿ ಇಮಾಮ್ ಸಿಂದೀ(ರ)ಹೇಳುತ್ತಾರೆ;
(قوله انحرف)اي عن جهة القبلة ومال بوجهه الي القوم .(شرح سندي 1/196)
"ಇನ್'ಹರಫ ಎಂದರೆ ಕಿಬ್ ಲಾದ ಭಾಗದಿಂದ ಜನರ ಭಾಗಕ್ಕೆ ತಮ್ಮ ಮುಖದೊಂದಿಗೆ ತಿರುಗಿದರು"ಎಂದಾಗಿದೆ.(ಶರಹುಸ್ಸಿಂದಿ 1/196)
*------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
No comments:
Post a Comment