📚📚📚📚📚📚📚📚📚📚📚
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚
*ಭಾಗ* 0⃣3⃣ *(ಕೊನೇಯ ಭಾಗ)*
*﷽*
*ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ* ⤵
ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರ ಕಾಲಕ್ಕೆ ಮುಂಚೆಯೂ, ಆನಂತರವೂ ಜಗತ್ತಿನ ನಾನಾ ಕಡೆ ಬಹಳಷ್ಟು ಔಲಿಯಾಗಳ ಆಗಮನವಾಗಿದೆ.
ಸ್ವಹಾಬಿಗಳು ನಂತರ ತಾಬಿಉಗಳ ಮೊದಲ್ಗೊಂಡು ನಂತರ ಸೂಫಿ ಪರಂಪರೆಯ ಅಲ್ಲಾಹನ ಇಷ್ಟದಾಸರು ಜಗತ್ತಿನೆಲ್ಲೆಡೆ ವ್ಯಾಪಿಸುತ್ತಾ ಬಂದಿದ್ದಾರೆ. ಪ್ರವಾದಿ ಕುಟುಂಬದ ಸ್ವರ್ಣ ಪರಂಪರೆಯಲ್ಲಿ ಜನಿಸಿ ಬಂದು ಬಗ್ದಾದಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಅಶ್ಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.) ಉಮ್ಮ ಉಬೈದಾದಲ್ಲಿ
ವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಶೈಖ್ ಅಹಮದುಲ್ ಕಬೀರ್ ಕಬೀರ್ರಿಫಾಯಿ (ಖ.ಸಿ) ರಂತವರೂ ಆಯ ಕಾಲದ ಸರ್ವ ಸಜ್ಜನರೂ ಔಲಿಯಾಗಳ ನಾಯಕರಾಗಿದ್ದರು. ಗೌಸ್ ಪದವಿಯ ಮಹೋನ್ನತರೂ ಕೂಡ ಅವರಾಗಿದ್ದರು. ಅಸ್ಸಯ್ಯದ್ ಶೈಖ್ ಅಹ್ಮದುಲ್ ಬದವೀ (ಖ.ಸಿ) ಅಸ್ಸಯ್ಯದ್ ಶೈಖ್ ಇಬ್ರಾಹೀಂ ದಾಸೂಖಿ (ಖ.ಸಿ) ಮುಂತಾದವರು ಅಖ್ತಾಬ್ ಶ್ರೇಷ್ಟರಲ್ಲಿ ಗುರುತಿಸಿಕೊಂಡವರಾಗಿದ್ದಾರೆ .ಹಾಗೆಯೇ ಸಯ್ಯಿದತು ರಾಬಿಯತುಲ್ ಅದವಿಯ್ಯ (ರ) ನಫೀಸತುಲ್ ಮಿಸಿರಿಯ (ರ) ಮುಂತಾದ ನಾರಿ ಶ್ರೇಷ್ಠರು ಜಗತ್ತಿನೆಲ್ಲೆಡೆ ಸುಪರಿಚಿತರಾಗಿದ್ದಾರೆ.ಇವರೆಲ್ಲಾ ತಮ್ಮ ಜೀವಿತ ಕಾಲದಲ್ಲೂ ಮತ್ತು ಮರಣ ನಂತರವೂ ಅದ್ಛುತ ಪವಾಡಗಳ ಪ್ರವಾಹಕರಾಗಿದ್ದರು .ಇಂದಿಗೂ ಇವರ ಸಮಾದಿಗಳು ಶಿಕ್ಷಣ ಕೇಂದ್ರಗಳ ಜೀವಳವಾಗಿಯೂ ಬಡವರ ಆಶಾ ಕೇಂದ್ರಗಳಾಗಿಯೂ ಸದಾ ಜನರ ಬೀಡಾಗಿರುತ್ತದೆ.
*(ಮುಗಿಯಿತು)*
📚📚📚📚📚📚📚📚📚📚📚
*ಇದೇ ರೀತಿ ಹಲವಾರು ವಿಚಾರಗಳನ್ನೊಳಗೊಂಡ ಇತಿಹಾಸದ ಚರಿತ್ರೆಯನ್ನು ಮುಂದಿಡುವ ಒಂದು ವಿಶೇಷ ಲೇಖನ ನಿಮ್ಮ ಮುಂದೆ ಶೀಘ್ರವೇ ಬರಲಿದೆ ...*
✨✨✨✨✨✨✨ ✨✨✨✨
✨ *ಬೈಲುಪೇಟೆಯ ಮುತ್ತುಗಳು* ✨
✨✨✨✨✨✨✨✨✨✨✨
*ಇನ್ ಷಾ ಅಲ್ಲಾಹ್ ...ಅಲ್ಲಾಹು ತೌಫೀಕ್ ನೀಡಲಿ ಆಮೀನ್ ..*
📚📚📚📚📚
*✍🏻ಹಬೀಬ್ ಕಂದಾರ್ ಉಸ್ತಾದ್*☘
No comments:
Post a Comment