🍄🍄🍄🍄🍄🍄🍄🍄🍄🍄🍄
*ಫಿಕ್ಹ್ ಪ್ರಶ್ನೋತ್ತರ...*
*ಮದ್ಸ್ ಹಬ್ ನಾಲ್ಕು ಮಾತ್ರವೇಕೆ...*
❓❓❓❓❓❓❓❓❓❓❓
*﷽*
*ಭಾಗ* 0⃣1⃣
💥 *ಮದ್ಸ್ ಹಬ್ ಗಳನ್ನು ಅವಲಂಬಿಸುವುದು ಕಡ್ಡಾಯವೇ..? ಮದ್ಸ್ ಹಬ್ ಗಳು ನಾಲ್ಕು ಮಾತ್ರವೇಕೆ..? ಮದ್ಸ್ ಹಬ್ ಗಳ ಇಮಾಮರಿಗಿಂತ ಮೊದಲಿನ ಮುಸ್ಲಿಮರು ಮದ್ಸ್ ಹಬ್ ಗಳನ್ನು ಅವಲಂಬಿಸದೆ ಇದ್ದಿಲ್ಲವೇ..? ಈ ಬಗ್ಗೆ ವಿವರಿಸುವಿರಾ...?*
➡ ಇಸ್ಲಾಮಿನ ಮೂಲ ಪ್ರಮಾಣ ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಾಗಿವೆ. ಇವುಗಳಲ್ಲಿ ಮುಸ್ಲಿಮನ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು, ಆತನ ಗುಣ ನಡತೆಗಳು, ಆತನ ಆರಾಧನೆ, ವ್ಯವಹಾರ, ವಿವಾಹ ಮುಂತಾದ ಕರ್ಮೀಯ ವಿಷಯಗಳು, ದೇವಭಕ್ತಿಯನ್ನು ಹೊಂದಲು ಆತನು ಅರಿತಿರಬೇಕಾದ ಗತ ಚರಿತ್ರೆಗಳು, ಪರಲೋಕಕ್ಕೆ ಸಂಬಂಧಿಸಿದ ವಿಷಯಗಳು ಮುಂತಾಗಿ ಮುಸ್ಲಿಮನು ತಿಳಿದಿರಬೇಕಾದ ಎಲ್ಲ ವಿಷಯಗಳು ಅಡಕವಾಗಿದೆ. ಇವೆಲ್ಲವುಗಳನ್ನು ವಿವರವಾಗಿ ತಿಳಿಯಲು ಖುರ್ ಆನಿನ ಭಾಷೆ, ಸಾಹಿತ್ಯ, ಖುರ್ ಆನಿನ ಪ್ರತಿ ಸೂಕ್ತಗಳ ಅವತೀರ್ಣದ ಕಾರಣಗಳು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು, ಅವತೀರ್ಣದ ಅನುಕ್ರಮಣಿಕೆಗಳು, ಹದೀಸ್ ಗಳ ಜ್ಞಾನ, ಅವುಗಳ ಪರಂಪರೆಯ ಬಗ್ಗೆ ಅರಿವು, ಪರಂಪರೆಯಲ್ಲಿರುವ ವ್ಯಕ್ತಿಗಳ ಬಗ್ಗೆ ಅರಿವು ಮುಂತಾಗಿ ಅಗಾಧ ಪಾಂಡಿತ್ಯದ ಅಗತ್ಯವಿದೆ. ಮುಸ್ಲಿಮನು ತನ್ನ ವಿಶ್ವಾಸ, ಗುಣನಡತೆ, ಆರಾಧನೆ, ವ್ಯವಹಾರ, ವಿವಾಹ, ತಖ್ವಾ ಮುಂತಾದವು ಹೇಗಿರಬೇಕೆಂಬುದನ್ನು ತಿಳಿಯಲು ಮೇಲಿನಂತೆ ಖುರ್ ಆನ್ ಮತ್ತು ಹದೀಸ್ ಗಳ ಬಗ್ಗೆ ಪಾಂಡಿತ್ಯ ಇರುವವರನ್ನು ಅವಲಂಬಿಸುವುದು ಅನಿವಾರ್ಯವಾಗಿರುತ್ತದೆ. ಪಾಂಡಿತ್ಯ ಇರುವವರಿಂದ ಕೇಳಿ ತಿಳಿಯದೆ, ಕಲಿಯದೆ ಸಾಮಾನ್ಯನಿಗೆ ಆ ಅರಿವು ದೊರಕುವುದಿಲ್ಲ ತಾನೇ.?
*(ಮುಂದುವರಿಯುವುದು)*
No comments:
Post a Comment