*ಹದ್ದಾದ್* *ರಾತೀಬ್'ನ* *ಮಹತ್ವ*
〰〰〰〰〰〰〰〰〰
ರಾತೀಬುಲ್ ಹದ್ದಾದ್ ರೂಢಿ ಮಾಡಿಕೊಳ್ಳುವುದು ವಿಪತ್ತುಗಳಿಂದ ರಕ್ಷೆ ಹೊಂದಲು ಉತ್ತಮ ಮಾರ್ಗ. ಹದ್ದಾದ್ ಮಹತ್ವವನ್ನು ಸಾರುವ ಅನೇಕ ಘಟನೆಗಳು ವಿಶ್ವಾಸಯೋಗ್ಯರಾದ ಹಲವು ಮಹನೀಯರಿಂದ ವರದಿಯಾಗಿದೆ.
'ಖುತುಬಿ ಮುಹಮ್ಮದ್ ಮುಸ್ಲಿಯಾರ್(ನ.ಮ)ರವರ ಜೀವನ ಚರಿತ್ರೆ ಪುಸ್ತಕದಲ್ಲಿ ಹದ್ದಾದ್ ಮಹತ್ವವನ್ನು ಸಾರುವ ಒಂದು ಘಟನೆ.👇
ಒಮ್ಮೆ ಮಹಾನುಬಾವರಾದ ಮುಹಮ್ಮದ್ ಮುಸ್ಲಿಯಾರ್'ರವರು(ನ.ಮ) ತೀವ್ರ ಚಳಿಯಿರುವ ರಾತ್ರಿಯಲ್ಲಿ ದಾರಿಯೊಂದರಲ್ಲಿ ಸಾಗುತ್ತಿದ್ದರು.ಜತೆಗೆ ಅನೇಕ ಶಿಷ್ಯರೂ ಇದ್ದರು.ದಾರಿ ಮಧ್ಯದಲ್ಲಿ ಮಹಾನುಬಾವರ ಕಾಲಿಗೆ ಏನೋ ಕಚ್ಚಿತು.ಶಿಷ್ಯರು ಬೆಳಕಿನ ಸಹಾಯದಿಂದ ಕಚ್ಚಿದ ವಸ್ತುವನ್ನು ಹುಡುಕಾಡಿದರು.ಏನೂ ಸಿಗದಿದ್ದರೂ ಕಚ್ಚಿದ ವಸ್ತು ಸರ್ಪವೆಂದು ಎಲ್ಲರಿಗೂ ಖಚಿತತೆಯಿತ್ತು.ಶಿಷ್ಯಂದಿರು ಗರಬಡಿದವರಂತೆ ನಿಂತಿರುವಾಗ ಮಹಾನುಭಾವರು ಅವರನ್ನು ಸಮಾಧಾನ ಪಡಿಸುತ್ತಾ ಹೇಳಿದರು.
" _ಅದು_ _ಅದರ_ _ಪಾಡಿಗೆ_ _ಹೋಗಲಿ_. _ನಾವು_ _ನಮ್ಮ_ _ಪಾಡಿಗೆ_ _ಹೋಗೋಣ_."
ಅದೇ ದಾರಿಯಲ್ಲಿ ಮರಳಿ ಬರುವಾಗ ಸ್ವಲ್ಪ ದೂರದಲ್ಲಿ ಸರ್ಪವೊಂದು ಸತ್ತು ಬಿದ್ದಿತ್ತು. ಕಠಿಣ ವಿಷವಿರುವ ಸರ್ಪವಾಗಿತ್ತದು.ಆ ಸರ್ಪ ಕಚ್ಚಿದರೆ ಎಂಟು ಹೆಜ್ಜೆ ಹಾಕುವುದಕ್ಕಿಂತ ಮುಂಚಿತವಾಗಿಯೇ ಶವವಾಗುತ್ತಾರೆಂದು ನಂಬಲ್ಪಡುವ ಸರ್ಪವಾಗಿತ್ತದು.ಸತ್ತು ಬಿದ್ದು ಸ್ವಲ್ಪ ಸಮಯ ಮಾತ್ರವಾಯಿತು ಎಂದು ಯಾರೋ ಹೇಳಿದಾಗ ಶಿಷ್ಯಂದಿರಿಗೆ ಏನೋ ಒಂದು ಅವ್ಯಕ್ತ ಭಯವು ಮಿಂಚಿ ಮಾಯವಾಯಿತು.ಉಸ್ತಾದರಿಗೆ ಕಚ್ಚಿದ ಹಾವು ಈ ಹಾವು ಆಗಿದ್ದರೆ ಉಸ್ತಾದರ ಗತಿಯೇನು ? ಎಂದು ಚಿಂತಿಸತೊಡಗಿದರು.ಇದೆಲ್ಲವನ್ನೂ ಗಮನಿಸುತ್ತಿದ್ದ ಖುತುಬಿ ಮುಹಮ್ಮದ್ ಮುಸ್ಲಿಯಾರ್ ಹೇಳಿದರು.
" _ನಾವು_ _ಆಗ_ _ಈ_ _ದಾರಿಯಲ್ಲಿ_ _ಹೋಗುವಾಗ_ _ನನಗೆ_ _ಕಚ್ಚಿದ_ _ಸರ್ಪವದು_. _ಸಾಮಾನ್ಯವಾಗಿ_ _ಹಾವಿನ_ _ವಿಷವು_ _ಮನುಷ್ಯರಿಗೆ_ _ತಗುಲುತ್ತೆ_. _ಇಲ್ಲಿ_ _ನನ್ನ_ _ವಿಷವು_ _ಹಾವಿಗೆ_ _ತಗುಲಿದೆ_. _ಆ_ _ಕಾರಣದಿಂದ_ _ಹಾವು_ _ಸತ್ತು_ _ಬಿದ್ದಿದೆ_. _ನನಗೇನೂ_ _ಸಂಭವಿಸಲೂ_ _ಇಲ್ಲ_. _ಕಾರಣ_ , _ನಾನಿವತ್ತೂ_ _*ಹದ್ದಾದ್*_ _ಓದಿರುವೆ_. _ಹದ್ದಾದನ್ನು_ _ನಿತ್ಯ_ _ರೂಡಿ_ _ಮಾಡಿದವನು_ _ಯಾವ_ _ವಸ್ತುವಿನಿಂದಲೂ_ _ತೊಂದರೆ_ _ಉಂಟಾಗದು_."
ಅನೇಕ ಶ್ರೇಷ್ಠತೆಯಿರುವ ದಿಕ್ರ್'ಗಳಿರುವ ಮಸೀದಿಯಲ್ಲಿ ನಡೆಯುವ ಹದ್ದಾದ್ ರಾತೀಬಿನಲ್ಲಿ ಭಾಗವಹಿಸಿದರೆ ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದ ಪುಣ್ಯವನ್ನು ಸಂಪಾದಿಸಬಹುದು.ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದವರ ಪಾಪಗಳನ್ನು ಕ್ಷಮಿಸಲಾಗುವುದೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
ಹದ್ದಾದ್ ರಾತೀಬ್'ನಲ್ಲಿ ಇರುವ ಒಂದು ಪ್ರಮುಖ ದಿಕ್ರ್ ಆಗಿದೆಇದು👇
*اعوذ بكلمات الله التامات من شر ما خلق*
ಈ ದಿಕ್ರನ್ನು ಒಬ್ಬನು ಬೆಳಗ್ಗೆ ಹೇಳಿದರೆ ಸಂಜೆ ತನಕ,ಸಂಜೆ ಹೇಳಿದರೆ ಬೆಳಗಿನ ತನಕ ಅವನಿಗೆ ವಿಷಭಾದೆ ತಟ್ಟದು ಎಂಬ ಹದೀಸ್ ವಚನವಿದೆ.
_ಹದ್ದಾದ್_ _ರಾತೀಬನ್ನು_ _ನಿತ್ಯರೂಡಿ_ _ಮಾಡಲು_ _ಅಲ್ಲಾಹು_ _ನಮಗೆ_ _ತೌಫೀಕ್_ _ನೀಡಲಿ_... _ಆಮೀನ್_
*اللهم صل علي محمد وعلي اله وصحبه وسلم*
✍ *PM ಪಾಲ್ತಾಡು*
🌿🌿🌿🌿🌿🌿🌿🌿
No comments:
Post a Comment