Sunday, December 24, 2017

*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 4⃣

*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*

ದಾಂಪತ್ಯ ಜೀವನದಲ್ಲಿ ಭಧ್ರತೆಯಿರಬೇಕೆಂದು ಬಯಸುವವರು ವಿವಾಹಾಲೋಚನೆಯಿಂದಲೇ ಯೋಜನೆ ರೂಪಿಸಬೇಕು. ಉತ್ತಮ ದಂಪತಿಗಳ ಕುಟುಂಬವೂ ಸುಭದ್ರವಾಗಿರುತ್ತದೆ. ಸ್ತ್ರೀ, ವಾಹನ, ಮನೆ ಈ ಮೂರರಲ್ಲಿ ಸಮೃದ್ಧಿಯಿದೆಯೆಂದು ಇಮಾಮ್ ಬುಖಾರಿ (ರ.ಅ), ಇಮಾಮ್ ಮುಸ್ಲಿಂ (ರ.ಅ)ರವರು ವರದಿ ಮಾಡಿದ ಹದೀಸಿನಲ್ಲಿದೆ. ಆದುದರಿಂದಲೇ ಧರ್ಮ ಬದ್ಧತೆಯಿರುವ ಉತ್ತಮ ಸ್ತ್ರೀಯನ್ನೇ ಮದುವೆಯಾಗಬೇಕೆಂದು ಪ್ರವಾದಿಯವರು ಪ್ರೋತ್ಸಾಹಿಸಿದ್ದು. ವಿವಾಹವಾಗು ಸ್ತ್ರೀಯರಲ್ಲಿ ಗಮನಿಸಬೇಕಾದ ನಾಲ್ಕು ಅಂಶಗಳು ಹೀಗಿವೆ.

*1, ಧಾರ್ಮಿಕತೆ.*
*2, ಉತ್ತಮ ಕೌಟುಂಬಿಕ ಹಿನ್ನಲೆ.*
*3, ಸೌಂದರ್ಯ.*
*4, ಆರ್ಥಿಕತೆ.*

ಈ ಪೈಕಿ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಬೇಕು.
    ಇಮಾಮ್ ಅಬೂ ಅಬ್ದಿಲ್ಲಾಹಿನ್ನಫ್ ಸಾನಿ (ರ.ಅ)ರವರು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಈ ರೀತಿ ಬರೆಯುತ್ತಾರೆ. "ಉತ್ತಮ ಸ್ತ್ರೀ ಎಂದರೆ ಅನಗತ್ಯ ಮಾತನಾಡದವಳು ಮತ್ತು ಜೋರಾಗಿ ನಗದವಳು. ಪರಿಚಿತರನ್ನು ನೋಡಲು ಕೂಡಾ ಅವಳು ಮನೆಯಿಂದ ಹೊರ ಹೋಗಲಾರಳು. ಗಂಡನ ಹೊರತಾಗಿ ಇತರರ ಜತೆ ವಿಶ್ವಾಸವನ್ನು ಸಮರ್ಪಿಸದವಳು. ಗಂಡ ಹಾಗೂ ತಂದೆ ತಾಯಿಯಿಂದಲ್ಲದೇ ಇತರರಿಂದ ಉಡುಗೊರೆ ಸ್ವೀಕರಿಸದವಳು. ಸಂಬಂಧಿಕರ ವಿಷಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸದವಳು. ಯಾರನ್ನೂ ವಂಚಿಸದವಳು. ದುರ್ನಡತೆ ಇಲ್ಲದವಳು. ಗಂಡನ ಅಭಿಲಾಷೆಯಂತೆ ಲೈಂಗಿಕ ಕ್ರಿಯೆಗಳಲ್ಲಿ ಸಂತೃಪ್ತ ಮನೋಭಾವದೊಂದಿಗೆ ಸರ್ವಸ್ವವನ್ನೂ ಸಮರ್ಪಿಸುವವಳು. ದೂರು ಹೇಳದೇ, ಅಳದೇ ಗಂಡನೊಂದಿಗೆ ಸಹಕರಿಸುವವಳು. ಗಂಡನ ದುಃಖದಲ್ಲಿ ಭಾಗಿಯಾಗುವವಳು. ಗಂಡನಿಂದ ವರ್ಷಗಳ ಕಾಲ ದೂರವಿದ್ದರೂ ಪರಪುರುಷರೋಂದಿಗೆ ಶಾರೀರಿಕವಾಗಿ ಸೇರದವಳು. ನಗ್ನತೆ ಮರೆಮಾಚುವ ವಸ್ತ್ರ ಧರಿಸುವವಳು. ಶರೀರ ಶುಚಿತ್ವ ಪಾಲಿಸುವವಳು ಮತ್ತು ಗಂಡನ ಉಪಸ್ಥಿತಿಯಲ್ಲಿ ಸುಗಂಧ ದ್ರವ್ಯಗಳನ್ನು ಉಪಯೋಗಿಸುವವಳು ಇವಳೇ ಉತ್ತಮ ಸ್ತ್ರೀ."
     
*{ಮುಂದುವರೆಯುವುದು}*

No comments:

Post a Comment