💚 *70 ಸಾವಿರ ತಹ್ಲೀಲ್ ಇದರ ಮಹತ್ವ*💚
ಒಬ್ಬರು 70 ಸಾವಿರ *ಲಾ ಇಲಾಹ ಇಲ್ಲಾಲ್ಲಾಹ್* ಮರಣ ಹೊಂದಿದ ವ್ಯಕ್ತಿಯ ಮೇಲೆ ಹೇಳಿದರೆ ಹೇಳಲ್ಪಟ್ಟ ಆ ಮಯ್ಯಿತ್ ಗೆ ಯಾವುದೇ ವಿಚಾರಣೆಯಿಲ್ಲದೆ ಸ್ವರ್ಗ ಪ್ರವೇಶ ಸಿಗುವುದು. ಎಂದು ಹದೀಸ್ ಆಧಾರಗಳಲ್ಲಿ ಹೇಳಲಾಗಿದೆ.
ಮುಲ್ಲಾ ಅಲಿಯ್ಯಿಲ್ ಖಾರಿ (ರ) ರವರು ಉಲ್ಲೇಖಿಸುತ್ತಾರೆ. ವಿಶ್ವಪ್ರಸಿದ್ಧ ಆತ್ಮೀಯ ವಿದ್ವಾಂಸರಾಗಿದ್ದ ಮುಹಿಯ್ಯದ್ದೀನುಬ್ನು ಅರಬಿ (ರ.ಅ) ರವರು ಉಪಯುಕ್ತ ಹದೀಸ್ ನ ಪ್ರಬಲತೆಯನ್ನು ಪರಿಶೀಲಿಸಲಿಕ್ಕಾಗಿ 70ಸಾವಿರ ತಹ್ಲೀಲ್ ನಿಶ್ಚಿತ ಸಮಯದ ಒಳಗೆ ಹೇಳಿ ಮುಗಿಸಿದರು.
ಕೆಲವು ದಿವಸಗಳು ಕಳೆಯಿತು ಒಂದು ದಿವಸ ಇಬ್ನು ಅರಬಿಯವರ ಪ್ರಿಯ ಶಿಷ್ಯನು ತನ್ನ ತಾಯಿಯೂ ನರಕಾಗ್ನಿಯಲ್ಲಿ ಬಿದ್ದು ಸುಟ್ಟು ಕರಕಲಾಗುವುದಾಗಿ ಕನಸು ಕಂಡರು.
ತಾಯಿಯ ಪರಲೋಕ ಜೀವನದ ನಿಜಸ್ಥಿತಿಯನ್ನು ಕನಸಿನ ಮೂಲಕ ದರ್ಶಿಸಿದ ಮಗನು ಪ್ರಸ್ತುತ ಕನಸಿನ ವಿವರವನ್ನು ಗುರುಗಳಿಗೆ ತಿಳಿಸಿದರು.
ಶಿಷ್ಯನನ್ನು ಸಮಾಧಾನ ಪಡಿಸಿದ ನಂತರ ಇಬ್ನು ಅರಬಿ (ರ) ರವರು ಹೇಳಿದರು. ನೀನು ಇವತ್ತು ಸಮಾಧಾನದಿಂದ ಹಿಂದಿರುಗಿ ಹೋಗು. ಇಂದು ರಾತ್ರಿ ಕಾಣುವ ಕನಸಿನ ವಿವರವನ್ನು ನಾಳೆ ಬಂದು ನನಗೆ ತಿಳಿಸಬೇಕು. ಅಂದು ರಾತ್ರಿ ತಾಯಿಯು ಸಂತೋಷ ಹಾಗೂ ಸುಖಾಡಂಬರಗಳಲ್ಲಿ ಉಲ್ಲಸಿತರಾಗಿ ಸ್ವರ್ಗೀಯ ಜೀವನವನ್ನು ಅನುಭವಿಸುತ್ತಿರುವ ಆನಂದದಾಯಕವಾದ ದೃಶ್ಯವನ್ನು ಆಗಿತ್ತು ಮಗನಿಗೆ ಕಾಣಲು ಸಾಧ್ಯವಾಯಿತು. ಮಗನು ಸಂತೋಷದಿಂದ ತಾಯಿಯನ್ನು ಆಲಿಂಗನ ಮಾಡಿ ಕೇಳಿದ. "ಅಮ್ಮಾ ... ನಿನ್ನೆ ನಾನು ನಿಮ್ಮನ್ನು ನರಕದಲ್ಲಿ ಇರುವುದಾಗಿ ಕನಸು ಕಂಡೆ. ಇಂದು ನಿಮಗೆ ಸ್ವರ್ಗಾವಕಾಶ ಲಭ್ಯವಾಗಲು ಕಾರಣವಾದರೂ ಏನು...?
ತಾಯಿ ಹೇಳಿದರು " ಮಗನೇ.... ನಿನ್ನ ಪ್ರಿಯ ಗುರುವರ್ಯರಾದ ಇಬ್ನು ಅರಬಿ (ರ) ರವರು ಹೇಳಿಮುಗಿಸಿದ್ದ 70000 ತಹ್ಲೀಲ್ ಗಳನ್ನು ಯಾವುದು ಮೈಮನಸ್ಯವಿಲ್ಲದೆ ಮಹಾನುಭಾವರು ನನಗೆ ಹದ್ಯಾ ಮಾಡಿದರು. ಆ ಕ್ಷಣದಿಂದ ನನಗೆ ನರಕ ವಿಮೋಚನೆ ಲಭಿಸುವುದರೊಂದಿಗೆ ಸ್ವರ್ಗದ ಬಾಗಿಲು ಗಳನ್ನು ನನಗೆ ತೆರೆಯಲ್ಪಟ್ಟಿತು...
ಆಹ್ಲಾದಕರವಾದ ಈ ಕನಸನ್ನು ಶಿಷ್ಯನು ಗುರುವರ್ಯರಾದ ಇಬ್ನು ಅರಬೀ (ರ) ಅವರಿಗೆ ತಿಳಿಸಿದಾಗ ಅವರು ಅಲ್ಲಾಹನಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಮೇಲೆ ಸೂಚಿಸಿದ ಹದೀಸ್ ಪ್ರಬಲವಾದದ್ದು ಎಂಬ ಸತ್ಯವೂ ಈ ಘಟನೆಯ ಮೂಲಕ ಶೈಖ್ ರವರು ಮನವರಿಕೆ ಮಾಡಿಕೊಂಡರು (ಮಿರ್ ಕಾತುಲ್ ಮಫಾತೀಹ್)
❤❤❤🌴❤❤❤❤❤
💚🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.*
*Swallu alal habeebﷺ*
*✍ಅಬೂ ಆಶಿಕ್*
No comments:
Post a Comment