🍃 🤝 *ಚಿಂತಿಸುವವರಿಗಾಗಿ*
▪ಸಣ್ಣ ಕಥೆ▪
🍀🍀🍀🍀🍀🍀🍀🍀
ಒಂದು ದಿನ ಇಬ್ಬರು ಸ್ನೇಹಿತರು ಯಾವುದೋ ಕಾರಣದಿಂದ ಒಂದು ಜನ ವಾಸವಿಲ್ಲದ ದ್ವೀಪದ ಮಧ್ಯೆ ಸಿಲುಕಿಕೊಳ್ಳುವರು. ಸುತ್ತಲೂ ಸಮುದ್ರ ಮಾತ್ರವೇ ಕಾಣಿಸುತ್ತಿತ್ತು. ಅವರಿಗೆ ತಿನ್ನಲು ಆಹಾರವಿಲ್ಲ. ಸರಿಯಾದ ಬಟ್ಟೆಯಿಲ್ಲ. ನೋಡುವಾಗ 2-3 ದಿನದಿಂದ ಆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಲಕ್ಷಣವಿದೆ. ತಮ್ಮ ಸಹಾಯಕ್ಕೆ ಯಾರು ಕೂಡ ದೊರೆಯುವ ಸಾಧ್ಯತೆಯಿಲ್ಲಾ ಅನ್ನುವ ಹಂತದಲ್ಲಿ ಅವರಿಬ್ಬರೂ ಒಂದು ನಿರ್ಧಾರ ಕೈಗೊಳ್ಳುವರು.
ಅವರಲ್ಲಿ ಓರ್ವ: ನಾವಿಬ್ಬರೂ ಅಲ್ಲಾಹನಲ್ಲಿ ನಮಗೆ ಬೇಕಾಗುವ ಆಹಾರದ ಬಗ್ಗೆ ಪ್ರಾರ್ಥಿಸೋಣ.
ಇನ್ನೊಬ್ಬ: ಆಗಲಿ ಎಂದ,
ಮೊಲನೆಯವ ತನ್ನ ಬಲ ಭಾಗದಲ್ಲಿ ಎರಡನೆಯವ ತನ್ನ ಎಡ ಭಾಗದಲ್ಲಿ ಅವರಿಗೆ ಇಷ್ಟದ ಭಕ್ಷ್ಯದ ಬಗ್ಗೆ ಅಲ್ಲಾಹನಲ್ಲಿ ಕಣ್ಣು ಮುಚ್ಚಿ ತಮ್ಮ ಮನಸ್ಸಿನ ಆಳದಿಂದ ಪ್ರಾರ್ಥಿಸಿದರು. ಪ್ರಾರ್ಥನೆ ಮುಗಿದು ಮೊದಲನೆಯವ ಕಣ್ಣು ತೆರೆದು ನೋಡಿದಾಗ ಅದ್ಭುತವೋ❗ ಪವಾಡವೋ❗ ಎಂಬಂತೆ ತನ್ನ ಮುಂದೆ ವಿವಿಧ ತರದ ಆಹಾರವನ್ನು ಕಂಡನು. ಆತ ತಟ್ಟನೆ ತಿರುಗಿ ತನ್ನ ಸ್ನೇಹಿತನ ಕಡೆ ನೋಡಿದಾಗ ಅಲ್ಲಿ ಯಾವುದೇ ವಸ್ತುಗಳನ್ನು ಕಾಣಲು ಸಾಧ್ಯವಾಗಲಿಲ್ಲ.
ಆಗ ಮೊದಲನೆಯ ಸ್ನೇಹಿತ ತನಗೆ ದೊರೆತ ಆಹಾರದಿಂದ ಅವನಿಗೂ ಕೊಟ್ಟ, ಇಬ್ಬರೂ ಊಟ ಮಾಡಿದರು. ಮಾರನೆಯ ದಿನ ಅವರಿಗೆ ಬೇಕಾಗಿರುವ ಉಡುಗೆಗಾಗಿ ಪ್ರಾರ್ಥಿಸಿದರು. ಇಂದು ಕೂಡ ಮೊದಲನೆಯ ಸ್ನೇಹಿತನ ಮುಂದೆ ಅವರಿಗೆ ಬೇಕಾಗಿರುವ ಬಟ್ಟೆಗಳನ್ನು ಅಲ್ಲಾಹನು ಕೊಟ್ಟನು.
ಅದರಿಂದ ಆತ ಕಳೆದ ಬಾರಿ ಆಹಾರ ಕೊಟ್ಟಂತೆ ತನ್ನ ಬಟ್ಟೆಗಳಿಂದ ತನ್ನ ಸ್ನೇಹಿತನಿಗೂ ಕೊಟ್ಟ.
ಮೂರನೇ ದಿನದಂದು ಇಬ್ಬರೂ ಈ ದ್ವೀಪದಿಂದ ಪಾರಾಗಳು ಯಾವುದಾದರೂ ದಾರಿ ತೋರಿಸಿ ಕೊಡುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಇಂದು ಕೂಡ ಅದೇ ಸ್ನೇಹಿತನ ಮುಂದೆ ಒಂದು ದೋಣಿ ಬಂದು ನಿಂತಿತು.
ಈಗ ಮಾತ್ರ ಅವನೊಬ್ಬನೇ ದೋಣಿ ಹತ್ತಿದ. ತನ್ನ ಸ್ನೇಹಿತನನ್ನು ಬಿಟ್ಟು ಅವನೊಬ್ಬನೇ ಆ ದ್ವೀಪದಿಂದ ಹೊರಟನು. ಪ್ರಯಾಣ ಮುಂದುವರೆದು ಸಮುದ್ರದ ಮಧ್ಯಭಾಗಕ್ಕೆ ತಲುಪಿದಾಗ ಒಂದು ಅಶರೀರವಾಣಿ ಕೇಳಿಸಿತು. "ನಿನಗೆ ನಾನು ನೀಡಿದ ಎಲ್ಲಾ ಸೌಕರ್ಯದಿಂದ ನೀನು ಅರ್ಧವನ್ನು ನಿನ್ನ ಸ್ನೇಹಿತನಿಗೆ ಮೀಸಲಿಟ್ಟೆ. ಆದರೆ ನಿಮಗೆ ಪಾರಾಗಳು ನಾನು ನೀಡಿದ ದೋಣಿಯಲ್ಲಿ ಆತನನ್ನು ಜೊತೆಯಾಗಿಸದೆ ಯಾಕಾಗಿ ಬಿಟ್ಟು ಬಂದೆ"?
ಅವನು ನುಡಿದ ಓ.. ಅಲ್ಲಾಹನೇ ನೀನು ನನಗೆ ಕೊಟ್ಟ ಎಲ್ಲಾ ವಸ್ತುಗಳಿಂದ ನಾನು ನನ್ನ ಸ್ನೇಹಿತನಿಗೆ ನೀಡಿದೆ. ಅವನು ನಿನ್ನಲ್ಲಿ ಭಕ್ತಿ ಇರಿಸದ ಕಾರಣ ಅವನಿಗೆ ಯಾವುದನ್ನೂ ನೀನು ನೀಡಲಿಲ್ಲ. ಮೂರು ದಿನದ ಬೇಡಿಕೆಯಲ್ಲೂ ನೀನು ನನ್ನ ಪ್ರಾರ್ಥನೆಗೆ ಮಾತ್ರ ಉತ್ತರಿಸಿದೆ. ನಿನಗೆ ಇಷ್ಟವಿಲ್ಲದ ಆತನನ್ನು ನಾನು ಈ ದೋಣಿಯಲ್ಲಿ ಹತ್ತಿಸಿದರೆ ನಿನ್ನ ಕೋಪಕ್ಕೆ ತುತ್ತಾಗಿ ನನ್ನ ದೋಣಿಯನ್ನು ನೀನು ಮುಳುಗಿಸುವೇ ಅನ್ನುವ ಭಯದಿಂದ ನಾನು ಆತನನ್ನು ಬಿಟ್ಟು ಬಂದೆ.
ಅಲ್ಲಾಹನು ಹೇಳಿದ "ಓ ಮನುಷ್ಯ ನಿನ್ನ ಪ್ರಾರ್ಥನೆಯ ಫಲವಾಗಿ ಯಾವುದನ್ನೂ ನಿನಗೆ ನಾನು ನೀಡಿಲ್ಲ. ನೀನು ಪ್ರಾರ್ಥಿಸುತ್ತಿರುವ ವೇಳೆ ನಿನ್ನ ಸ್ನೇಹಿತ ಈ ರೀತಿ ಪ್ರಾರ್ಥಿಸುತ್ತಿದ್ದ. *'ಓ.. ಅಲ್ಲಾಹನೇ ನನ್ನ ಸ್ನೇಹಿತ ಮಾಡಿದ ಪ್ರಾರ್ಥನೆಗೆ ಉತ್ತರಕೊಡು',* ಎಂದು ನಿನ್ನ ಪ್ರತಿಯೊಂದು ಪ್ರಾರ್ಥನೆಗೂ ಇದನ್ನೇ ನುಡಿಯುತ್ತಿದ್ದ. ಅವನು ಇದನ್ನು ಬಿಟ್ಟು ಬೇರೆಯಾವುದನ್ನೂ ಪ್ರಾರ್ಥಿಸಿಲ್ಲ. ಅವನ ಪ್ರಾರ್ಥನೆಯ ಫಲವಾಗಿ ನಾನು ನಿನಗೆ ಎಲ್ಲವನ್ನೂ ನೀಡಿದೆ ಎಂದು ಆ ಅಶರೀರವಾಣಿಯು ನುಡಿದಾಗ ಅವನಿಗೆ ಮಾತೇ ಹೊರಡಲಿಲ್ಲ.
⏹ *ನೀತಿ ಪಾಠ:*
ನಾವು ಯಾರನ್ನು ಕೂಡ ನಿಂದಿಸಬಾರದು, ಹಿಯ್ಯಾಳಿಸಬಾರದು. ಅದು ದೊಡ್ಡ ಆಲಿಮ್-ಗಳಾಗಲಿ, ಉಸ್ತಾದರುಗಳಾಗಲಿ, ಔಲಿಯಾಗಳಾಗಲಿ, ಸಾಧಾರಣ ಮನುಷ್ಯನೇ ಆಗಲಿ. ಅವರು ಜೀವಿಸಿ ಇರಲಿ ಅಥವಾ ಮರಣಿಸಿದವರಾಗಲಿ. ಯಾವುದೇ ಜಾತಿಯನ್ನು ಯಾವುದೇ ಧರ್ಮವನ್ನು ನಿಂದಿಸ ಬೇಡಿ. ಅವನು ಅಲ್ಲಾಹನಲ್ಲಿರಿಸಿದ ಭಕ್ತಿ ಅಲ್ಲಾಹನಿಗೆ ಮಾತ್ರವೇ ಗೊತ್ತು.
ಆಲಿಮ್'ಗಳಿಗೆ ಅಲ್ಲಾಹನು ಉನ್ನತ ಸ್ಥಾನವನ್ನು ನೀಡಿದ್ದಾನೆ. ನೀವು ಅಂತಹ ಉಸ್ತಾದರುಗಳ, ತಂಙಳುಗಳ ಹಸಿ ಮಾಂಸವನ್ನು ಕಿತ್ತು ತಿಂದರೆ ಅವರ ಮೇಲೆ ಸುಳ್ಳು ಅಪವಾದ ಹೊರಿಸಿದರೆ ಖಂಡಿತವಾಗಿಯೂ ಈ ಲೋಕದಲ್ಲೂ ನಾಳೆ ಪರಲೋಕದಲ್ಲೂ ನಮಗೆ ಜಯಿಸಲು ಸಾಧ್ಯವಿಲ್ಲ.
ಅಲ್ಲಾಹನು ನಮ್ಮೆಲ್ಲರನ್ನೂ ಸಜ್ಜನರ ಜೊತೆ ಸೇರಿಸಲಿ.
اَمِين ْ
✒ *BsR Sltr* 🔍
No comments:
Post a Comment