*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣7⃣
📚📚📚📚📚📚📚📚📚📚
5⃣ *ಇಮಾಂ ತುರ್ಮುದಿ(ರ.ಅ)* :
*ಇಮಾಂ ಅಬೂ ಈಸಾ ಮುಹಮ್ಮದ್ ಅತ್ತುರ್ಮುದಿ(ರ.ಅ). ಹಿಜಿರಾ 209-279 ರ ಕಾಲಾವಧಿಯ ಪ್ರಮುಖ ವಿದ್ವಾಂಸರಾಗಿದ್ದಾರೆ. ಅವರು ಉನ್ನತ ಅಧ್ಯಯನಕ್ಕಾಗಿ ಹಲವು ಪ್ರದೇಶಗಳಿಗೆ ಪ್ರಯಾಣ ಕೈಗೊಂಡಿದ್ದರು. ಇವರ ಉಸ್ತಾದರುಗಳಲ್ಲಿ ಇಮಾಂ ಬುಖಾರಿ(ರ.ಅ) ಪ್ರಮುಖರಾಗಿದ್ದಾರೆ. ತುರ್ಮುದಿ (ರ.ಅ)ರವರು ಹದೀಸ್ ರಂಗದಲ್ಲಿ ಕ್ರಿಯಾಶೀಲರಾಗಲು ಉಸ್ತಾದ್ ಬುಖಾರಿ(ರ.ಅ)ರವರ ಪ್ರೇರಣೆಯೇ ಕಾರಣವಾಗಿದೆ. ಮರ್ ಬಿನ್ ಅಲಕ್(ರ.ಅ)ರವರಿಂದ ಇಮಾಂ ಹಾಕಿಂ (ರ.ಅ) ಉಲ್ಲೇಖಿಸುತ್ತಾರೆ : "ಇಮಾಂ ಬುಖಾರಿರವರ ನಿಧನಾ ನಂತರ ಸೂಕ್ಷ್ಮತೆ ಮತ್ತು ಜ್ಞಾನದಲ್ಲಿ ಅವರನ್ನು ಪ್ರತಿನಿಧಿಸುತ್ತಿದ್ದ ಏಕೈಕ ವ್ಯಕ್ತಿ ಖುರಾಸಾನಿನಲ್ಲಿರುವುದಾದರೆ ಅದು ಇಮಾಂ ತುರ್ಮುದಿ(ರ.ಅ) ಮಾತ್ರ"*.
*ಸುಮಾರು 5000 ಕ್ಕಿಂತಲೂ ಮಿಕ್ಕಿದ ಹದೀಸ್ ಗಳನ್ನೊಳಗೊಂಡಿರುವ ಗ್ರಂಥವು ತುರ್ಮುದಿ(ರ.ಅ)ರವರ ಪ್ರಮುಖ ಕೊಡುಗೆಯಾಗಿದೆ. ಅದರಲ್ಲಿ ಹಲವಾರು ಮಹಾ ವಿದ್ವಾಂಸರುಗಳಿಂದ ಸಂಗ್ರಹಿಸಿದ ಹದೀಸ್ ಗಳಲ್ಲಿ ಆಯ್ದ ಹದೀಸ್ ಗಳಿವೆ. ಇಮಾಂ ಇಬ್ನ್ ಲ್ ಆಸಿರ್(ರ.ಅ) ಹೇಳುತ್ತಾರೆ ; "ಜಾಮಿಉತ್ತುರ್ಮುದಿ ಅತ್ಯಂತ ವಿಶಿಷ್ಟವಾದ ಗ್ರಂಥವಾಗಿದೆ. ಅದರ ಶೈಲಿ ಸುಂದರ ಮತ್ತು ಸರಳವಾಗಿದೆ. ಹೆಚ್ಚು ಪುನರಾವರ್ತನೆಗಳಿಲ್ಲ. ಇತರ ಗ್ರಂಥಗಳಿಗೆ ಹೋಲಿಸಿದರೆ ಅತ್ಯಧಿಕ ವಿಷಯಗಳನ್ನೊಳಗೊಂಡಿದೆ. ಕರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಿವರಣೆಗಳು ಈ ಗ್ರಂಥದ ವೈಶಿಷ್ಟ್ಯತೆಯಾಗಿದೆ"*. (ಜಾಮಿಉಲ್ ಊಸೂಲ್)
*ಇಮಾಂ ತುರ್ಮುದಿ(ರ.ಅ) ಹೀಗೆಂದಿರುವರು ; ನಾನು ಈ ಗ್ರಂಥವನ್ನು ಹಿಜಾಝ್ , ಇರಾಕ್ ಮತ್ತು ಖುರಾಸಾನಿನ ವಿದ್ವಾಂಸರ ಸಮಕ್ಷಮ ಪ್ರಸ್ತುತಪಡಿಸಿದೆ. ಅವರೆಲ್ಲರೂ ಅದರಲ್ಲಿ ಸಂತೃಪ್ತಿ ವ್ಯಕ್ತಪಡಿಸಿದರು. ನನ್ನ ಈ ಗ್ರಂಥವಿರುವ ಮನೆಗಳಲ್ಲಿ ಪ್ರವಾದಿﷺರವರ ಉಪಸ್ಥಿತಿ ಅನುಭವ ವೇದ್ಯವಾಗುವುದು. ಜಾಮಿಉತ್ತುರ್ಮಿದಿಗೆ ಹದೀಸ್ ಗ್ರಂಥಗಳಲ್ಲಿ 4 ನೇ ಸ್ಥಾನವಿದೆ. ಕೆಲವರು 3 ನೇ ಸ್ಥಾನವನ್ನು ಕೊಟ್ಟಿದ್ದಾರೆ*.
*ಮುಂದುವರಿಯುವುದು*.....
📚📚📚📚📚📚📚📚📚📚
No comments:
Post a Comment