Tuesday, January 23, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
 1⃣8⃣
📚📚📚📚📚📚📚📚📚📚

6⃣ *ಇಮಾಂ ನಸಾಈ(ರ.ಅ)* :
 *ಇಮಾಂ ಅಬೂಅಬ್ದುರ್ರಹ್ಮಾನ್ ಅಲ್ ಖುರಾಸಿ ಅನ್ನಸಾಈ(ರ.ಅ). ಹಿಜಿರಾ 215-303 ಕಾಲಾವಧಿಯ ಓರ್ವ ಪ್ರಖಾಂಡ ಹದೀಸ್ ವಿದ್ವಾಂಸರಾಗಿದ್ದಾರೆ. ಇಮಾಂ ಖುತ್ವಯ್ ಬತುಬಿನ್ ಸಈದ್(ರ.ಅ) , ಇಸ್ಹಾಕ್ ಬಿನ್ ರಹಾವೈಹಿ(ರ.ಅ), ಮುಹಮ್ಮದ್ ಬಿನ್ ಬಸ್ಸಾರ್(ರ.ಅ), ಇಮಾಂ ದಾವೂದ್(ರ.ಅ), ಮುಹಮ್ಮದ್ ಬಿನ್ ಶಯಲಾನ್(ರ.ಅ), ಸುವೈದ್ ಬಿನ್ ನಸ್ರಾ(ರ.ಅ) ಮೊದಲಾದವರು ಇಮಾಂ ನಸಾಈ(ರ.ಅ)ರವರ ಗುರು ಪರಂಪರೆಗೆ ಸೇರಿದವರಲ್ಲಿ ಪ್ರಮುಖರು*.

              *ಇಮಾಂ ನಸಾಈ(ರ.ಅ) ಜ್ಞಾನವನ್ನು ಅರಸಿಕೊಂಡು ಖುರಾಸಾನ್, ಹಿಜಾಝ್ , ಶಾಮ್ , ಇರಾಕ್ ಮುಂತಾದ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದರು. ಕೊನೆಗೆ ಅವರು ಈಜಿಪ್ಟ್ ನ್ನು ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡರು. ಆ ಕಾಲದಲ್ಲಿ ಖ್ಯಾತನಾಮರಾದವರು  ಅನೇಕ ವಿದ್ವಾಂಸರು ಇವರ ಶಿಷ್ಯತ್ವವನ್ನು ಸ್ವೀಕರಿಸಿ ಅಧ್ಯಯನದಲ್ಲಿ ನಿರತರಾಗಿದ್ದರು. ಇವರ ಶಿಷ್ಯರಲ್ಲಿ ಇಮಾಂ ತಬ್ರಾನೀ(ರ.ಅ) , ಇಮಾಂ ತ್ವಹಾವಿ(ರ.ಅ), ಇಮಾಂ ಇಬ್ನ್ ಸುನ್ನಿ(ರ.ಅ) ಮೊದಲಾದವರು ಪ್ರಮುಖರಾಗಿದ್ದರು. ಫಳಾಇಲುಸ್ವಹಾಬ್, ಫಳಾಇಲು ಅಲಿಯ್ಯ್, ಅಲ್ ಖಸಾಇಸ್, ಅಲ್ ಮನಾಸಿಕ್ ಮುಂತಾದವುಗಳು ಇಮಾಂ ನಸಾಈ(ರ.ಅ)ರವರ ಕೃತಿಗಳಾಗಿವೆ*.

              *ಮೇಲಿನ ಗ್ರಂಥಗಳ ಪೈಕಿ 5761 ಹದೀಸ್ ಗಳನ್ನೊಳಗೊಂಡ ಅಸ್ಸುನನುಲ್ ಕುಬ್ರಾ ಹಾಗೂ ಅದರ ಸಂಕ್ಷೇಪವಾದ ಅಸ್ಸುನನುಸ್ಸುಗ್ರಾ ನಸಾಈ(ರ.ಅ)ರವರ ಪ್ರಮುಖ ರಚನೆಗಳಾಗಿವೆ. ಇದು ಸಿಹಾಹುಸ್ಸಿತ್ತದಲ್ಲಿ ಒಳಪಡುವ ಗ್ರಂಥವಾಗಿದೆ. ಪ್ರಸ್ತುತ ಗ್ರಂಥವು ಪ್ಯಾಲಸ್ತೀನಿನ ರಮಲ್ಲಾದ ಅಮೀರ್ ರವರಿಗೆ ಸಮರ್ಪಿಸಲ್ಪಟ್ಟಿದೆ. ಹದೀಸ್ ಕ್ರೋಢೀಕರಣದಲ್ಲಿ ತುಂಬಾ ಜಾಗರೂಕತೆ ಪಾಲಿಸಿದ ಕಾರಣದಿಂದ ಹಲವರು ಸುನನುನ್ನಸಾಈಗೆ ಮುಸ್ಲಿಂನ ಸ್ಥಾನವನ್ನು ನೀಡಿದ್ದಾರೆ*.

*ಮುಂದುವರಿಯುವುದು*.....

📚📚📚📚📚📚📚📚📚📚

No comments:

Post a Comment