*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣9⃣
📚📚📚📚📚📚📚📚📚📚
7⃣ *ಇಮಾಂ ಇಬ್ನ್ ಮಾಜ(ರ.ಅ)* :
*ಅಬೂ ಅಬ್ದುಲ್ಲಾ ಮುಹಮ್ಮದ್ ಬಿನ್ ಮಾಜ(ರ.ಅ). ಹಿಜಿರಾ 209-273. ಜ್ಞಾನಾರ್ಜನೆಗಾಗಿ ಬಾಲ್ಯದಲ್ಲಿಯೇ ಬಸ್ರಾ, ಕೂಫಾ, ಬಾಗ್ದಾದ್, ಮಕ್ಕಾ, ಶಾಮ್ , ರಯ್ಯ್ ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿಯ ಮಹಾ ವಿದ್ವಾಂಸರ ಶಿಷ್ಯತ್ವವನ್ನು ಸ್ವೀಕರಿಸಿದರು. ಇವರು ಅಬೂಬಕ್ಕರ್ ಬಿನ್ ಅಬೀಶೈಬ(ರ.ಅ), ಯಝೀದ್ ಬಿನ್ ಅಬ್ದುಲ್ಲಾಹಿಲ್ ಯಮಾನಿ(ರ.ಅ) , ಅಬೂಸುರ್ ಅತು ರ್ರಾಝಿ(ರ.ಅ) ಮೊದಲಾದ ವಿದ್ವಾಂಸರಿಂದ ಹದೀಸ್ ಕಲಿತರು. ಇಬ್ನ್ ಮಾಜ ತಫ್ಸೀರ್ ಮತ್ತು ಚರಿತ್ರೆಯಲ್ಲಿಯೂ ಗ್ರಂಥಗಳನ್ನು ರಚಿಸಿದ್ದಾರೆ. ಇಮಾಂ ಇಬ್ನ್ ಮಾಜ(ರ.ಅ)ರವರ ಗ್ರಂಥದಲ್ಲಿ 1500 ಅಧ್ಯಾಯಗಳಲ್ಲಿ 4341 ಹದೀಸ್ ಗಳಿವೆ. ಇದು ಸಿಹಾಹುಸ್ಸಿತ್ತದಲ್ಲಿ ಆರನೆಯ ಗ್ರಂಥವಾಗಿದೆ. ಸುನನುಬ್ನ್ ಮಾಜದಲ್ಲಿ ಮುವತ್ತಾ ಹಾಗೂ ಇತರ 5 ಗ್ರಂಥಗಳಲ್ಲಿಲ್ಲದ ಕೆಲವು ಹದೀಸ್ ಗಳಿವೆ. ಸ್ವಹೀಹ್ , ಹಸನ್ ಹಾಗೂ ಲಈಫ್ ಆದ ಹದೀಸ್ ಗಳನ್ನು ಸ್ವೀಕರಿಸಿದ ಕಾರಣದಿಂದ ಇದು 6 ನೇ ಸ್ಥಾನಕ್ಕೆ ತಲುಪುವಂತಾಯಿತು. ಇಬ್ನ್ ಮಾಜರ ಸಮಕಾಲೀನರು ಅವರು ಮತ್ತು ಅವರ ರಚನೆಗಳನ್ನು ತುಂಬಾ ಗೌರವಿಸುತ್ತಿದ್ದರು*.
*ಹದೀಸ್ ಸಂಗ್ರಹ ಮತ್ತು ಕ್ರೋಢೀಕರಣದಲ್ಲಿ ಮೇಲಿನವರು ಮಾತ್ರವಲ್ಲದೇ ಇತರ ಅನೇಕ ಹದೀಸ್ ವಿದ್ವಾಂಸರು ಕೂಡಾ ಪ್ರಯತ್ನಶೀಲರಾಗಿದ್ದರು. ಅವರಲ್ಲಿ ಇಮಾಂ ಹಾಕಿಂ (ರ.ಅ), ಇಮಾಂ ದಾರುಖುತ್ನಿ(ರ.ಅ), ಇಮಾಂ ಬಿರ್ಖಾನಿ(ರ.ಅ), ತ್ವಬ್ರಾನಿ, ಇಮಾಂ ಸುಯೂತಿ(ರ.ಅ) ಮೊದಲಾದವರು ಪ್ರಖ್ಯಾತ ಹದೀಸ್ ವಿದ್ವಾಂಸರಾಗಿದ್ದರು*.
*ಮುಂದುವರಿಯುವುದು*.....
📚📚📚📚📚📚📚📚📚📚
No comments:
Post a Comment