*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣6⃣
📚📚📚📚📚📚📚📚📚📚
4⃣ *ಇಮಾಂ ಅಬೂದಾವೂದ್(ರ.ಅ)* :
*ಅಬೂದಾವೂದ್ ಸುಲೈಮಾನ್(ರ.ಅ) ಹಿಜಿರಾ 202-275ರ ಕಾಲಾವಧಿಯಲ್ಲಿ ಜೀವಿಸಿದ್ದ ಪ್ರಸಿದ್ಧ ವಿದ್ವಾಂಸರಾಗಿದ್ದಾರೆ. ಅವರು ಹದೀಸ್ ಗ್ರಂಥಗಳಲ್ಲಿ ಮೂರನೆಯದಾಗಿ ಪರಿಗಣಿಸಲ್ಪಡುವ ಸಂಗ್ರಹದ ಕತ್ರ್. ಅಬೂದಾವೂದ್(ರ.ಅ) ಈಜಿಪ್ಟ್, ಸಿರಿಯಾ, ಖುರಾಸಾನ್, ಇರಾಕ್ ಮೊದಲಾದ ಪ್ರದೇಶಗಳಿಗೆ ತೆರಳಿ ಅಲ್ಲಿನ ಖ್ಯಾತ ವಿದ್ವಾಂಸರುಗಳಿಂದ ಹದೀಸ್ ಕಲಿತು ಸಂಗ್ರಹಿಸಿದರು*.
*ಅಬ್ದುಲ್ಲಾಹಿಬ್ ನು ಮಸ್ಲಮ (ರ.ಅ) , ಅಹ್ಮದ್ ಬಿನ್ ಹಂಬಲ್ (ರ.ಅ), ಯಹ್ಮಾ ಬಿನ್ ಮಈನ್(ರ.ಅ), ಖತಯ್ ಬತುಬಿನ್ ಸಈದ್(ರ.ಅ), ಉಸ್ಮಾನ್ ಬಿನ್ ಅಬೀಶೈಬ (ರ.ಅ) ಮೊದಲಾದವರು ಅಬೂದಾವೂದ್(ರ.ಅ)ರವರ ಗುರುಗಳಾಗಿದ್ದಾರೆ. ಇಮಾಂ ತಿರ್ಮುದಿ(ರ.ಅ), ಇಮಾಂ ನಸಾಈ (ರ.ಅ) , ಅಬೂ ಅವಾನ(ರ.ಅ) ಮುಂತಾದ ಖ್ಯಾತ ನಾಮರು ಇವರ ಶಿಷ್ಯರಾಗಿದ್ದರು. ಸುನನು ಅಬೂದಾವೂದ್ ಹದೀಸ್ ಗ್ರಂಥದ ಜೊತೆಗೆ ಇವರು ಇತರ ಅನೇಕ ಗ್ರಂಥಗಳನ್ನು ಕೂಡ ರಚಿಸಿರುವರು*.
*ಇವರ ಗ್ರಂಥದಲ್ಲಿ 5 ಲಕ್ಷ ಹದೀಸ್ ಗಳಿಂದ ಆಯ್ಕೆಯಾದ 4800 ಹದೀಸ್ ಗಳಿವೆ. ಹದೀಸ್ ಮತ್ತು ಫಿಕ್ಹ್ ನ್ನು ಸಮನ್ವಯಗೊಳಿಸಿ ಪ್ರತಿಪಾದಿಸುವ ಶೈಲಿ ಈ ಗ್ರಂಥದ ವೈಶಿಷ್ಟ್ಯತೆಯಾಗಿದೆ. ಇಮಾಂ ನವವೀ(ರ.ಅ) ಹೇಳುತ್ತಾರೆ ; "ಕರ್ಮ ಶಾಸ್ತ್ರದ ರಂಗಕ್ಕಿಳಿಯುವವರಿಗೆ ಸುನನ್ ಅಬೂದಾವೂದನ್ನು ಅವಗಣಿಸಲು ಸಾಧ್ಯವಿಲ್ಲ. ಏಕೆಂದರೆ ಅಹ್ಕಾಂಗಳಿಗೆ ಸಂಬಂಧಪಟ್ಟ ಬಹುತೇಕ ಹದೀಸ್ ಗಳು ಅದರಲ್ಲಿವೆ". ತಮ್ಮ ಗ್ರಂಥವನ್ನು ರಚಿಸಿದ ನಂತರ ಇಮಾಂ ಅಬೂದಾವೂದ್ (ರ.ಅ)ರವರು ಅದನ್ನು ತಮ್ಮ ಉಸ್ತಾದರಾದ ಅಹ್ಮದ್ ಬಿನ್ ಹಂಬಲ್(ರ.ಅ)ರಿಗೆ ತೋರಿಸಿ ಅವರ ಒಪ್ಪಿಗೆ ಪಡೆದಿದ್ದರು*.
*ಮುಂದುವರಿಯುವುದು*.....
📚📚📚📚📚📚📚📚📚📚
No comments:
Post a Comment