Tuesday, February 27, 2018

😰⚔⚔⚔⚔⚔⚔⚔ 😰
😰 *ಕಣ್ಣೀರ ಕಡಲಾದ ಕರ್ಬಲ*  😰
😰🗡   *ಯುದ್ಧ ಚರಿತ್ರೆ*  🗡    😰
😰😰😰😰😰😰😰😰😰
     👉 *ಭಾಗ-* 0⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

*ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಔಧಾರ್ಯದಿಂದಲೂ ಮತ್ತು ಅವನ ಹಬೀಬರಾದ ನೆಬಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಹಕ್ಕ್'ಜಾಹ್ ಬರ್ಕತ್ತಿನಿಂದಲೂ ಮುಸ್ಲಿಂ ಉಮ್ಮತ್ತನ್ನು ಎಲ್ಲಾ ವಿಧ ಆಪತ್ತು ಮತ್ತು ಮುಸೀಬತ್ತುಗಳಿಂದಲೂ ಸಂಪೂರ್ಣ ರಕ್ಷಣೆ ನೀಡಿ ಸಂರಕ್ಷಿಸಲಿ ಆಮೀನ್.*
ಎಂಬ ಪ್ರಾರ್ಥನೆಯೊಂದಿಗೆ...

ಇಸ್ಲಾಮಿನ ಇತಿಹಾಸದಲ್ಲೇ ಮರೆಯಲು ಅಸಾಧ್ಯವಾದ ಮತ್ತು ಇಡೀ ಮುಸ್ಲಿಂ ಸಮುದಾಯವನ್ನೇ ಕಣ್ಣೀರ ಕಡಲಲ್ಲಿ ಮುಳುಗಿಸಿದ ಇರಾಕಿನ ಕೂಫ ಎಂಬಲ್ಲಿ ನಡೆದ *ಕರ್ಬಲಾ* ಎಂಬ ಕರುಣಾಜನಕವಾದ ಯುದ್ಧ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿ ಧಾರಾವಾಹಿಯ ಮೂಲಕ ನಿಮ್ಮ ಮುಂದೆ ಸಮರ್ಪಿಸಲಿಚ್ಚಿಸುತ್ತೇನೆ
ಇನ್ಷಾ ಅಲ್ಲಾಹ್..

ಅಶ್ರಫುಲ್ ಖಲ್ಖ್ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರವರ ಅಳಿಯನೂ, ಇಸ್ಲಾಮಿಕ್ ಆಡಳಿತದ ನಾಲ್ಕನೆ ಖಲೀಫರೂ, ಅಶ್'ರತುಲ್ ಮುಬಶ್ಶಿನರಲ್ಲಿ ಒಳಪಟ್ಟವರೂ, ಖುಲಫಾವುರ್ರಾಶಿದೀನರೂ ಆದ *ಸಯ್ಯದುನಾ ಅಲಿ ಬಿನ್ ಅಬೀ ತಾಲಿಬ್(ರ)* ರವರ ದತ್ತು ಪುತ್ರಿಯಾಗಿದ್ದರು *ಉಮ್ಮುಲ್ ಹಕಿಂ (ರ)* ಎಂಬ ಹೆಣ್ಣು ಮಗು.

ಮಾತಾಪಿತರಿಂದ ಉಪೇಕ್ಷಿಸಲ್ಪಟ್ಟು ಅನಾಥವಾಗಿ ಖರ್ಜೂರ ತೋಟವೊಂದರಲ್ಲಿ ಇರುವೆಗಳಿಂದ ಕಚ್ಚಿಸಿಕೊಳ್ಳುತ್ತಾ ಮಲಗಿದ್ದ ಹಾಲುಗಲ್ಲದ ಹಸುಳೆಯೊಂದನ್ನು ಕಂಡ *ಅಲಿ (ರ)ರವರು* ಆ ಮಗುವನ್ನು ತಮ್ಮ ಮನೆಗೆ ಕೊಂಡೊಯ್ದು ಬೆಳೆಸಿದರು.
ಆ ಮಗು ಬೆಳೆದು ದೊಡ್ಡವಳಾಗಿ ಹದಿನಾರರ ಹರೆಯಕ್ಕೆ ತಲುಪಿದಾಗ....

ಸೌಂದರ್ಯದ ಖನಿಯಾಗಿದ್ದ *ಉಮ್ಮುಲ್ ಹಕಿಂ (ರ)*
ಒಮ್ಮೆ ಖರ್ಜೂರ ತೋಟವೊಂದರಲ್ಲಿ ತಮ್ಮ ಆಡುಗಳನ್ನು ಮೇಯಿಸುತ್ತಿರುವಾಗ, ತುಸು ದೂರದಲ್ಲಿ ಖರ್ಜೂರದ ಮರಗಳ ಮರೆಯಲ್ಲಡಗಿ ತನ್ನನ್ನು ಯಾರೋ ಗಮನಿಸುತ್ತಿರುವಂತೆ ಅವಳಿಗೆ ಬಾಸವಾಯಿತು. ಮತ್ತೊಮ್ಮೆ ಅವಳು ಸೂಕ್ಷ್ಮವಾಗಿ ಗಮನಿದಾಗ, ಅಲ್ಲೊಬ್ಬ ಪುರುಷನನ್ನು ಕಂಡಳು.

ಅದು ಬೇರೆ ಯಾರೂ ಅಲ್ಲ.
*ಕೂಫ ಗವರ್ನರ್ ಆಗಿದ್ದ ಮುಅವಿಯ(ರ) ಎಂಬವರ ಪುತ್ರ ಯಝೀದ್ ಆಗಿದ್ದನು.*

ಹದಿನಾರರ ಹರೆಯದ ಮೈಕೈ ತುಂಬಿಕೊಂಡು ಸೌಂದರ್ಯದ ಖನಿಯಂತಿದ್ದ *ಉಮ್ಮುಲ್ ಹಕೀಮ್'ಳ (ರ)*  ಸೌಂದರ್ಯವನ್ನು ಕಂಡ ಯುವಕ *ಯಝೀದ್'ನ* ಹೃನ್ಮನಗಳಲ್ಲಿ ಆಗಲೇ ಆ ತರುಣಿಯ ಬಗೆಗೆ ರಂಗುರಂಗಿನ ಕನಸುಗಳು ಮೊಳಕೆಯೊಡೆಯಲಾರಂಭಿಸಿತ್ತು. ಹೇಗಾದರೂ ಸರಿ *ಉಮ್ಮುಲ್ ಹಕಿಂ (ರ)ಳನ್ನು* ತನ್ನವಳನ್ನಾಗಿಸಿಕೊಳ್ಳಬೇಕೆಂದು ಅವನ ಅಂತರಂಗ ಆಶಿಸಿತು.

           ...ಆದರೆ....
*ಉಮ್ಮುಲ್ ಹಕೀಮ್'ಳಿಗಾದರೇೂ* ಯಝೀದ್'ನೆಂದರೆ ಕುಡುಕನೂ, ದುಷ್ಟನೂ ಲಂಪಟನೂ ಮತ್ತು ಸ್ತ್ರೀ ಮೇೂಹಿ ಎಂಬುದು ಅವಳ ಭಾವನೆಯಾಗಿತ್ತು. ಅದೂ ಸತ್ಯವೂ ಆಗಿತ್ತು. ಹಾಗಾಗಿ ತಕ್ಷಣ *ಉಮ್ಮುಲ್ ಹಕೀಮ್(ರ)* ಅಲ್ಲಿಂದ ಮನೆಗೆ ತೆರಳಿದಳು. ಆಗ ಅವಳನ್ನು ಹಿಂಬಾಲಿಸಿದ ಯಝೀದನು ವ್ಯಕ್ತಿಯೊಬ್ಬನ ಮೂಲಕ *"ಯಝೀದ್'ನಿಗೆ* ನಿಮ್ಮನ್ನು ವಿವಾಹವಾಗಬೇಕೆಂಬ ಆಕಾಂಕ್ಷೆಯಿದೆ ತಮ್ಮ ಅಭಿಪ್ರಾಯವೇನು?" ಎಂದು ಕೇಳುವಂತೆ *ಉಮ್ಮುಲ್ ಹಕೀಮ್'ಳ* (ರ) ಮನೆಗೆ ಕಳುಹಿಸಿದನು.

ವಿವಾಹ ಅಭ್ಯರ್ಥನೆಯೊಂದಿಗೆ ಆಗಮಿಸಿದ *ಯಝೀದ್'ನ* ದೂತನನ್ನು ಕಂಡು ಕೆಂಡಾಮಂಡಲಳಾದ *ಉಮ್ಮುಲ್ ಹಕೀಂ (ರ)* ಮತ್ತೆಂದೂ ಇಂತಹ ಪ್ರಸ್ತಾಪದೊಂದಿಗೆ ಬರಬೇಡವೆಂದು ಎಚ್ಚರಿಸಿ ಹೊರ ದಬ್ಬಿದಳು. ನಂತರ ಬೇರೆ ದಾರಿ ಕಾಣದೆ ತನ್ನ ಮನದ ಇಂಗಿತವನ್ನು ತನ್ನ  ತಂದೆಯಾದ *ಮುಆವಿಯಾ(ರ)'* ರವರಿಗೆ ತಿಳಿಸಿದನು.
ಅವರದನ್ನು ಖಂಡತುಂಡವಾಗಿ ವಿರೋಧಿಸಿದರಲ್ಲದೆ
ತಾಯಿ ತಂದೆ ಯಾರೆಂದು ತಿಳಿಯದ ಆ ಹೆಣ್ಣನ್ನು ಮದುವೆಯಾಗಲು ತನ್ನ ಸಮ್ಮತಿಯಿಲ್ಲವೆಂದು ಒತ್ತಿ ಹೇಳಿದರು.
ಆದರೆ *ಉಮ್ಮುಲ್ ಹಕೀಮ್ (ರ) ಳ* ಅಪ್ರತಿಮ ಸೌಂದರ್ಯಕ್ಕೆ ಮಾರುಹೇೂದ *ಯಝೀದನಿಗೆ* ತಂದೆಯ ವಿರೇೂಧ ಸಹ್ಯವಾಗಲಿಲ್ಲವಾದರೂ ತಂದೆಯನ್ನು ಎದುರಿಸಲಾಗದೆ ನಿರಾಶನಾಗಿ ಸುಮ್ಮನಿರಬೇಕಾಯಿತು. ಆದರೆ ಆ ನಿರಾಸೆ ತನ್ನ
ತಂದೆಯೊಂದಿಗೆ ದ್ವೇಷವಾಗಿ ಬದಲಾಗತೊಡಗಿತು.

ದಿನಗಳುರುಳಿತು...

ಆದರೆ *ಯಝೀದ್'ನನ್ನು* ಪತಿಯಾಗಿ ಸ್ವೀಕರಿಸಲು ಒಪ್ಪದ *ಉಮ್ಮುಲ್ ಹಕೀಂ (ರ)ಳಿಗೆ* ನಂತರ ಹಲವಾರು ಉನ್ನತ ಮನೆತನಗಳಿಂದ ಸಂಬಂಧಗಳು ಬಂತಾದರೂ ಹೆತ್ತ ತಾಯಿ ತಂದೆ ಯಾರೆಂಬ ಬಗ್ಗೆ ಗೊತ್ತಿಲ್ಲದ ಕಾರಣದಿಂದ *ಉಮ್ಮುಲ್ ಹಕೀಮ್'ಳನ್ನು* ವಿವಾಹವಾಗಲು ಯಾರೂ ಒಪ್ಪುತ್ತಿರಲಿಲ್ಲ.

ಹಾಗಿರಲೊಂದು ದಿನ *ಹಝ್ರತ್ ಅಲಿ (ರ)ರವರು ಉಮ್ಮುಲ್ ಹಕೀಮ್(ರ)ಳ* ವಿವಾಹಕ್ಕಾಗಿ ಯಾವ ಸಂಬಂಧವೂ ಕೂಡಿ ಬರದ ಕಾರಣ ಆ ವಿಷಯದ ಕುರಿತು ಚಿಂತಾಮಗ್ನರಾಗಿ ಕುಳಿತಿದ್ದಾಗ....

ಅವರ ಬಳಿ ಬಂದ ವ್ಯಕ್ತಿಯೊಬ್ಬ ಹೇಳಿದ *ಅಸ್ಸಲಾಮು ಅಲೈಕುಮ್.. ಯಾ ಅಮೀರುಲ್ ಮಅ್'ಮಿನೀನ್....*

*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment