Wednesday, February 28, 2018

*ಅಸ್ಸಲಾಮು ಅಲೈಕುಂ*

*ಸ್ಟೋನ್ ಪ್ರೋಬ್ಲಂ ಇದೆಯೇ ಚಿಂತಿಸಬೇಡಿ*

ಸೌದಿ ಅರೇಬಿಯಾದ ನನ್ನ ಪ್ರವಾಸಿ ಜೀವನದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಆಗಿರಬಹುದು ನನಗೆ ಮೂತ್ರಕಲ್ಲಿನ ತೊಂದರೆ ಅನುಭವಿಸಬೇಕಾಯಿತು.
ಎರಡು ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಂಪೂರ್ಣವಾಗಿ ಗುಣಮುಖವಾಗಲಿಲ್ಲ.
ಪ್ರವಾಸಿ ಜೀವನವನ್ನು ಮುಗಿಸಿ ಊರಿಗೆ ಮರಳಿ ಹತ್ತು ದಿನ ಕಳೆದ ಬಳಿಕ ಮೂತ್ರಕಲ್ಲಿನ ತೊಂದರೆ ಅಧಿಕವಾಗಿ ಅತೀವ ನೋವು ಅನುಭವಿಸಬೇಕಾಯಿತು.
ನಂತರ ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರು ಹೇಳಿದರು,
16mm ನ ಕಲ್ಲು ಇದೆ‌. ಶಸ್ತ್ರಚಿಕಿತ್ಸೆಯಲ್ಲದೇ ಇದಕ್ಕೆ ಪರಿಹಾರವಿಲ್ಲ. ಆದ್ದರಿಂದ ಆಹಾರದಲ್ಲಿ ಗಮನವಿರಲಿ ಎಂದು ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಲು ಸೂಚನೆ ನೀಡಿದರು.
ಮನೆಯವರು ಹೇಳಿದರು, ಶಸ್ತ್ರಚಿಕಿತ್ಸೆಯನ್ನೇ ಮಾಡೋಣ, ಇನ್ನೇನೂ ಮಾಡಲಾಗದು ಎಂದು.

ಆದರೆ ನನಗೆ ತೃಪ್ತಿಯಾಗದೇ ನಾನು ನೇರ ಬಹುಮಾನ್ಯರಾದ ಕನ್ಯಾನ ಉಸ್ತಾದ್ ರವರ ಬಳಿ ತೆರಳಿದೆ. ಉಸ್ತಾದರು ಹೇಳಿದರು, ಶಸ್ತ್ರಚಿಕಿತ್ಸೆಯ ಯಾವುದೇ ಆವಶ್ಯಕತೆ ಇಲ್ಲ. ನಿನಗೆ ಬೇಕಾದ ಆಹಾರವನ್ನು ಸೇವಿಸು. ನಾನು ನಿನಗೆ ನೀರನ್ನು ಕೊಡುತ್ತೇನೆ ಎಂದು ಮಂತ್ರಿಸಿದ ನೀರನ್ನು ಕೊಟ್ಟರು.
ಅಲ್ಲಾಹನ ಖಳಾ ಪ್ರಕಾರ ನಾನು ಉಸ್ತಾದರು ಕೊಟ್ಟ ನೀರನ್ನು 20 ದಿನ ಕುಡಿದೆ ಆಶ್ಚರ್ಯವೆಂಬಂತೆ 16mm ನ ಕಲ್ಲು ಮೂತ್ರದೊಂದಿಗೆ ಹೊರಬಂತು.!! ಅಲ್ ಹಮ್ದುಲಿಲ್ಲಾಹ್.
ಈಗ ಅದರ ಯಾವುದೇ ತೊಂದರೆಯೂ ಇಲ್ಲ.

ಹಲವಾರು ಸಹೋದರರು ಮೂತ್ರಕಲ್ಲಿನ ರೋಗದಿಂದ ಬಳಲುತ್ತಿರುವುದರಿಂದ ಉಪಕಾರವಾಗಲಿ ಎಂಬ ಉದ್ದೇಶದಿಂದ ನನ್ನ ಸ್ವಂತ ಅನುಭವವನ್ನು ಈ ಸಂದೇಶದ ಮೂಲಕ ರವಾನಿಸುತ್ತಿದ್ದೇನೆ.

ಅಲ್ಲಾಹು ನಮ್ಮೆಲ್ಲರ ರೋಗಗಳನ್ನು ಗುಣಪಡಿಸಿ ದೀರ್ಘಾಯುಸ್ಸನ್ನು ಕರುಣಿಸಲಿ, ಆಮೀನ್...

 *9606712981*
〰〰〰〰〰〰〰〰〰〰

No comments:

Post a Comment