😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣2⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠
ತನ್ನ ಸಾಕು ಮಗಳ ವಿವಾಹಕ್ಕೆ ತಕ್ಕ ವರ ಸಿಗಲಿಲ್ಲವೆಂಬ ಬೇಸರದಿಂದ ಚಿಂತಾಮಗ್ನರಾಗಿ ಕುಳಿತಿದ್ದ *ಅಲಿ(ರ.ಅ)ರ* ಬಳಿ ಬಂದ ಆಗಂತುಕನೊಬ್ಬ ಹೇಳಿದ *ಅಸ್ಸಲಾ ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್....* ⤵
ಗಹನವಾದ ಚಿಂತೆಯಲ್ಲಿ ಮುಳುಗಿದ್ದ *ಸಯ್ಯದುನಾ ಅಲಿ ಬಿನ್ ಅಬೀತ್ವಾಲಿಬ್(ರ)ರಿಗೆ* ಆಗಂತುಕನ ಸಲಾಂ ಗಮನಕ್ಕೆ ಬರಲಿಲ್ಲವಾದಾಗ
ಆ ಆಗಂತುಕ ಮತ್ತೊಮ್ಮೆ *ಅಸ್ಸಲಾಮು ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್...* ಎಂದ.
ಇಲ್ಲ ಈ ಬಾರಿಯೂ *ಅಲಿ(ರ)ರಿಂದ* ಯಾವುದೇ ಉತ್ತರ ಬರಲಿಲ್ಲವಾದಾಗ ಆ ಆಗಂತುಕ ಮೂರನೆ ಬಾರಿ ಅಸ್ಸಲಾಮು *ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್...* ಎಂದಾಗ ವಾಸ್ತವಕ್ಕೆ ಮರಳಿದ *ಅಲಿ (ರ) ರವರು ವಅಲೈಕುಮ್ ವ ರಹ್ಮತುಲ್ಲಾಹ್...* ಎನ್ನುತ್ತಾ
ಓಹ್... *ನುಅ್'ಮಾನ್....(ರ)* ಏನು ವಿಶೇಷ? ಎಂದರು.
ಹೌದು ಬಹುಮಾನ್ಯರೆ!.. ನಾನು *ನುಅ್'ಮಾನ್(ರ).* ನಾನು ಆಗಮಿಸಿದಾಗ ತಾವೇನೇೂ ಗಹನವಾದ ಚಿಂತೆಯಲ್ಲಿ ಮುಳುಗಿದ್ದಿರಿ?
ತಮ್ಮನ್ನು ಅಷ್ಟೊಂದು ಚಿಂತೆಗೀಡು ಮಾಡಿದ ಆ ವಿಷಯವೇನು? *ಅಮೀರುಲ್ ಮುಅ್'ಮಿನೀನ್?*
ಆಗ *ಅಲಿ (ರ)ರವರು* ಎಲ್ಲ ವಿಷಯವನ್ನೂ
*ನುಅಮಾನ್ (ರ)ಗೆ* ವಿವರಿಸಿದ ಬಳಿಕ "ಎಲ್ಲರೂ ಆ ಮಗಳ ಮನೆತನದ ಬಗ್ಗೆಯೇ ವಿಚಾರಿಸುತ್ತಾರೆ ನಾನೇನು ಮಾಡಲಿ *ನುಅ್'ಮಾನ್? (ರ)* ಎಂದರು ನಿಟ್ಟುಸಿರು ಬಿಡುತ್ತಾ....
ತುಸು ಯೇೂಚಿಸಿದ ಬಳಿಕ *ನುಅಮಾನ್ (ರ)* ಹೇಳಿದರು.
ಬಹುಮಾನ್ಯರೇ...!
ನಾನೊಬ್ಬ ಅನಾಥನಾಗಿದ್ದು
ತಮ್ಮ ಸಮ್ಮತಿಯಿದ್ದರೆ *ಉಮ್ಮಲ್ ಹಕೀಂ(ರ)ಳನ್ನು* ನಾನು ವಿವಾಹವಾಗುತ್ತೇನೆ. ಎಂದರು..!
ಅನಾಥರಾದರೂ ಉತ್ತಮ ಗುಣ ನಡತೆಯ ಸದ್ಗುಣ ಸಂಪನ್ನರಾಗಿದ್ದ *ನುಅ್'ಮಾನ್(ರ)ರವನ್ನು ಚೆನ್ನಾಗಿ ಬಲ್ಲವಾಗಿದ್ದ ಅಲಿ (ರ)* ಸಂತೋಷದಿಂದ ಆಗಲಿ *ಉಮ್ಮುಲ್ ಹಕೀಂ(ರ)ಳನ್ನು ತಮಗೆ ವಿವಾಹ ಮಾಡಿಕೊಡಲು ನನಗೆ ಸಂಪೂರ್ಣ ಸಹಮತವಿದೆಯೆನ್ನುತ್ತಾ ಅಲ್ಲಾಹನು ತಮಗೆ ಒಳಿತನ್ನು ಕರುಣಿಸಲಿ!* ಎಂದು ಹೇಳುತ್ತಾ ಮನದುಂಬಿ ಪ್ರಾರ್ಥಿಸಿದರು.
ಇವರಿಬ್ಬರ ಈ ಸಂಭಾಷಣೆಗಳನ್ನು ಮನೆಯೊಳಗಿನಿಂದ ಕೇಳಿಸಿಕೊಂಡ *ಉಮ್ಮುಲ್ ಹಕೀಂ (ರ)* ಸಂತಸದಿಂದ ಪುಳಕಿತಳಾಗಿ ಮನದಲ್ಲೇ ತಲೆ ದೂಗಿದಳು.
ಇತ್ತ *ನುಅಮಾನ್(ರ)ರವರ* ಮನಸ್ಸೂ ಕೂಡ ಹರ್ಷದ ಹೊನಲಾಗಿತ್ತು.
ಕೆಲ ದಿನಗಳಲ್ಲೇ *ಅಲಿ (ರ)ರವರು ಉಮ್ಮುಲ್ ಹಕೀಮ್(ರ)ಳನ್ನು ನುಅಮಾನ್(ರ)ರಿಗೆ* ನಿಖಾಹ್ ಮಾಡಿ ಕೊಟ್ಟರು.
ಆ ನವ ದಂಪತಿಗಳಿಬ್ಬರೂ ಮದೀನಾದಲ್ಲಿ ಸಣ್ಣ ಗುಡಿಸಲೊಂದನ್ನು ಕಟ್ಟಿ ಸುಖ, ಸಂತೋಷದಿಂದ ದಾಂಪತ್ಯ ಜೀವನ ನಡೆಸಲಾರಂಭಿಸಿದರು.
*ಅಲಿ (ರ) ರವರು* ಸಮಯ ಸಿಕ್ಕಿದಾಗಲೆಲ್ಲ ಅಲ್ಲಿಗೆ ತೆರಳಿ ಆ ದಂಪತಿಗಳ ಯೇೂಗ ಕ್ಷೇಮ ವಿಚಾರಿಸುತ್ತಿದ್ದರು.
ಹೀಗೆ ದಿನಗಳು, ಮಾಸಗಳಾಗಿ, ಮಾಸಗಳು, ವರ್ಷಗಳಾಗಿ ಉರುಳುತ್ತಿತ್ತು.
ಹಾಗಿರಲೊಂದು ದಿನ *ಅಮಿರುಲ್ ಮುಅಮಿನೀನ್ ಅಲಿ (ರ)ರವರು* ಮದೀನ ಮಸೀದಿಗೆ ತೆರಳುತ್ತಿರುವಾಗ, ದಾರಿ ಮಧ್ಯೆ ಮದೀನ ಪಟ್ಟಣದಲ್ಲಿ ಜನರ ಗುಂಪೊಂದನ್ನು ಕಂಡು ಅತ್ತ ಹೆಜ್ಜೆ ಹಾಕಿದರು.
*ಅಲಿ (ರ) ರನ್ನು* ಕಂಡ ಜನ ಅತ್ತಿತ್ತ ಸರಿದು ಬಹುಮಾನ್ಯರಿಗೆ ದಾರಿ ಬಿಟ್ಟು ಕೊಟ್ಟರು. ಆಗ ಅಲ್ಲಿದ್ದ ಅಜಾನುಬಾಹುನಾದ ದಡೂತಿ ಶರೀರದ ಮನುಷ್ಯನೊಬ್ಬ *ಅಲಿ (ರ) ರವರನ್ನು* ಕಂಡ ಕೂಡಲೇ *"ಅಸ್ಸಲಾಮ್ ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್*" ಎಂದನು.
*ವ ಅಲೈಕುಮ್ ಸಲಾಂ ವ ರಹ್ಮತುಲ್ಲಾಹ್...* ಎನ್ನುತ್ತಾ *ಅಲಿ (ರ)*
ನೀನು ಯಾರು?
ಈ ಮೊದಲು ಮದೀನದಲ್ಲಿ ನಿನ್ನನ್ನು ಕಂಡ ಪರಿಚಯವಿಲ್ಲವಲ್ಲ? ಎಂದು ಕೇಳಿದರು.
ಆಗ ಆ ಅಜಾನುಬಾಹು ಹೇಳಿದ, *ಬಹುಮಾನ್ಯರೇ...*
ನಾನು ಮದೀನಾ ನಿವಾಸಿಯಲ್ಲ *ಶಾಮ್'ನಿಂದ* ಬಂದಿದ್ದೇನೆ.
ಅಲ್ಲಿನ ಗವರ್ನರ್ ನನ್ನನ್ನಿಲ್ಲಿಗೆ ಕಳುಹಿಸಿದರು ಎಂದಾಗ....
ಅವರು ನಿನ್ನನ್ನಿಲ್ಲಿಗೆ ಕಳುಹಿಸಲು ಕಾರಣವೇನು? ಎಂದು ಕೇಳಿದರು *ಅಲಿ(ರ)*
ತಮ್ಮ ಸೇನಾಪಡೆಗೆ ಸೇರಲಿಕ್ಕಾಗಿ ನನ್ನನ್ನು ಕಳುಹಿಸಿದ್ದಾರೆ ಎಂದನು.
ಆಗ *ಅಲಿ(ರ)* ಮುಗುಳ್ನಗುತ್ತಾ ನಿನ್ನ ಹೆಸರೇನು? ಎಂದು ಕೇಳಿದರು.
ನನ್ನ ಹೆಸರು..
*"ಇಬ್ನು ಮುಲ್'ಜಂ"* ಎಂದು ಉತ್ತರಿಸಿದನು.
ಇದನ್ನು ಕೇಳಿದ *ಅಲಿ (ರ) ರವರು* ತಕ್ಷಣ ಹೇಳಿದರು.
" إنا لله وإنا إليه راجعون "
*ಅಲಿ (ರ) ರವರ* ಬಾಯಿಂದ ಈ ವಾಕ್ಯ ಕೇಳಿದ, *ಇಬ್ನು ಮುಲ್'ಜಂ* ವಿಚಲಿತನಾಗಿ ಯಾ *ಅಮೀರುಲ್ ಮುಅ್'ಮಿನೀನ್...* ನಾನು ತಮ್ಮ ಸೇನಾಪಡೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಬಂದಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ.
ಮತ್ತೆ ತಾವೇಕೆ ಹಾಗೆ ಹೇಳಿದಿರಿ? ⬇
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment