😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*ಅಲಿ (ರ) ರವರ* ಬಾಯಿಂದ ಈ ವಾಕ್ಯ ಕೇಳಿದ, *ಇಬ್ನು ಮುಲ್'ಜಂ* ವಿಚಲಿತನಾಗಿ ಯಾ ಅಮೀರುಲ್ ಮುಅ್'ಮಿನೀನ್...
ನಾನು ತಮ್ಮ ಸೇನಾಪಡೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಬಂದಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ.
ಮತ್ತೆ ತಾವೇಕೆ ಹಾಗೆ ಹೇಳಿದಿರಿ..? ⬇
ಆಗ *ಅಲಿ(ರ)* ಅವನ ಮುಖವನ್ನೇ ದಿಟ್ಟಿಸುತ್ತಾ...
*"ನೀನು ನನ್ನ ಹಂತಕನಾಗಲಿರುವೆ ಎಂದು ನನ್ನ ಅಂತರಂಗ ಹೇಳುತ್ತಿದೆ. ಮಾತ್ರವಲ್ಲ ನೀನು ನನ್ನನ್ನು ಹತ್ಯೆಗೈಯ್ಯಲಿರುವ ಆ ದೃಶ್ಯವನ್ನು ಕೂಡ ನಾನು ಕಾಣುತ್ತಿದ್ದೇನೆ" ಎಂದರು*
ಇದರಿಂದ ಮತ್ತಷ್ಟು ವಿಚಲಿತನಾದ ಇಬ್ನು ಮುಲ್'ಜಂ, *ಯಾ ಅಮೀರುಲ್ ಮುಅ್'ಮಿನೀನ್....*
ತಾವೇನು ಹೇಳುತ್ತಿದೀರಿ? ನಿಜವಾಗಿಯೂ ನಾನು ತಮ್ಮ ಸೇನೆಗೆ ಸೇರಬೇಕೆಂಬ ಏಕೈಕ ಉದ್ದೇಶದಿಂದ ಮಾತ್ರ ಆಗಮಿಸಿದವನು. ಒಂದು ವೇಳೆ ನನ್ನ ಮೇಲೆ
ತಮಗೆ ಸಂಶಯವಿದ್ದರೆ ನನ್ನನ್ನು ಜೈಲಿಗೆ ತಳ್ಳಿರಿ. ಎಂದನು ಗದ್ಗದಿತನಾಗಿ...
ಆಗ *ಅಲಿ (ರ)* ರವರು ಹೇಳಿದರು.
ಸರಿ, ನೀನು ಸೈನ್ಯಕ್ಕೆ ಸೇರಬೇಕೆಂಬ ಸದುದ್ದೇಶದಿಂದ ಬಂದವನಾಗಿದ್ದರೆ ಖಂಡಿತಾ ನಿನ್ನನ್ನು ಸೇನೆಗೆ ಸೇರಿಸಿಕೊಳ್ಳುತ್ತೆನೆ.
ಆದರೆ ಅದಕ್ಕೂ ಮೊದಲು ನಿನ್ನಲ್ಲಿ ನಾನೊಂದು ಪ್ರಶ್ನೆ ಕೇಳಲಿಚ್ಚಿಸುತ್ತೇನೆ..?
ನಿನ್ನ ತಾಯಿ ನಿನ್ನನ್ನು ಬಾಲ್ಯದಲ್ಲಿ ಬೆಳಿಗ್ಗೆ ನಿದ್ರೆಯಿಂದ ಕರೆದು ಎಬ್ಬಿಸುತ್ತಿದ್ದುದು ಯಾವ ರೀತಿಯಲ್ಲಾಗಿತ್ತೆಂಬುದು ನಿನಗೆ ನೆನಪಿದೆಯೇ?
*ಹೇ.. ಶೈತಾನಾ.. ಹೇ.. ನೀಚಾ.. ಹೇ.. ದುಷ್ಟಾ.. ಮುಂತಾದ ಕೆಟ್ಟ ಪದಗಳನ್ನು ಉಪಯೇೂಗಿಸಿ ತಾನೇ ನಿನ್ನ ತಾಯಿ ನಿನ್ನನ್ನು ಎಬ್ಬಿಸುತ್ತಿದ್ದುದು..?*
ಅಷ್ಟೇ ಅಲ್ಲ, ನಿನ್ನ ತಾಯಿಯು ಅಲ್ಲಾಹನ ಆಜ್ಞೆ, ಆದೇಶಗಳನ್ನು ಪಾಲಿಸದ ಮುಸ್ಲಿಂ ನಾಮಧಾರಿಯಾಗಿದ್ದಳು ಅಲ್ಲವೇ?
ಆಗ *ಇಬ್ನು ಮುಲ್'ಜಂ'* ಹೌದು *ಅಮೀರುಲ್ ಮುಅ್'ಮಿನೀನ್...*
ತಾವು ಹೇಳಿದ್ದು ಸತ್ಯ. ನಾನು ಸ್ವಲ್ಪ ಜಾಸ್ತಿ ನಿದ್ರೆ ಮಾಡುವವನಾದುದರಿಂದ ನನ್ನ ತಾಯಿ ಹಾಗೆನ್ನುತ್ತಾ ನನ್ನನ್ನು ಎಬ್ಬಿಸುತ್ತಿದ್ದಳು ಅಷ್ಟೇ ಎಂದನು.
ಆಗ *ಅಲಿ(ರ)* ಹೇಳಿದರು, ನಿನ್ನ ತಾಯಿ ನಿನ್ನನ್ನು ಹಾಗೆ ಕೆಟ್ಟ ಪದಗಳ ಮೂಲಕ ಶಪಿಸುತ್ತಾ ನಿನ್ನನ್ನು ಕರೆಯುತ್ತಿದ್ದುದೇ ನೀನು ದಾರಿ ತಪ್ಪಲು ಕಾರಣವಾಗಿದೆ. ಮಾತ್ರವಲ್ಲ ಖಂಡಿತವಾಗಿಯೂ ನೀನು ನನ್ನ ಹಂತಕನಾಗಲಿರುವೆ ಎಂದರು. (ಹೆತ್ತ ಮಕ್ಕಳನ್ನು ಇಂತಹ ಕೆಟ್ಟ ಪದಗಳಿಂದ ಕರೆಯುವ ಮಾತಾಪಿತರಿದ್ದರೆ ಅಂಥವರು ಈ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು)
ಸದ್ಯದ ಮಟ್ಟಿಗೆ ಆತನ ಮೇಲೆ ಯಾವುದೇ ಗುರುತರವಾದ ಆರೇೂಪಗಳೂ ಇಲ್ಲದಿದ್ದುದರಿಂದ *ಇಬ್ನು ಮುಲ್'ಜಂ'ನನ್ನು ಅಲಿ(ರ)* ತಮ್ಮ ಸೇನೆಗೆ ಸೇರಿಸಿಕೊಂಡರು.
*ಅಲಿ (ರ)ರವರನ್ನು ವಧಿಸಲಿರುವ ಗೂಢ ತಂತ್ರದ ಭಾಗವಾಗಿ ಮತ್ತೊಂದು ಘಟನೆಯೊಂದಿಗೆ ಬೆಸೆದು ಸಾಗುತ್ತದೆ ಕರ್ಬಲ ಯುದ್ಧದ ಕರುಣಾಜನಕ ಚರಿತ್ರೆ....*
ಈ ಘಟನೆಯ ನಂತರ *ಇಬ್ನು ಮುಲ್'ಜಂನ ಸಹಭಾಗಿತ್ವದಲ್ಲಿ ಕೆಲವು ಸಣ್ಣ ಯುದ್ಧಗಳು ನಡೆದಿವೆ. ಅದರಲ್ಲಿ ನಹ್'ರುವಾನ್ ಯುದ್ಧ* ವೂ ಒಂದು.
*ಶಾಮ್'ನ* ಭಾಗದಲ್ಲಿ ನಡೆದ *ನಹ್'ರುವಾನ್ ಯುದ್ಧದಲ್ಲಿ ಇಬ್ನು ಮುಲ್'ಜಂ* ಸೇನಾ ಉಪ ನಾಯಕನಾಗಿ ನೇಮಿಸಲ್ಪಟ್ಟಿದ್ದನು.
*ಇಬ್ನು ಮುಲ್'ಜಂ'ನ* ನೇತೃತ್ವದಲ್ಲಿ ನಡೆದ ಆ ಸಮರದಲ್ಲಿ ಮುಸ್ಲಿಂ ಸೈನ್ಯ ವಿಜಯ ಸಾಧಿಸಿತು.
ಈ ವಿಜಯದ ಸುವಾರ್ತೆಯನ್ನು ಮದೀನಾದಲ್ಲಿರುವ *ಖಲೀಫರಾದ ಸಯ್ಯದುನಾ ಅಲಿ(ರ)ರಿಗೆ ತಲುಪಿಸುವ ದೂತನಾಗಿ ಇಬ್ನು ಮುಲ್'ಜಂ'ನನ್ನೇ ಅಲ್ಲಿನ ಗವರ್ನರ್ ಆಯ್ಕೆ ಮಾಡಿದರು.*
ಹಾಗಾಗಿ ನಹ್'ರುವಾನ್ ಯದ್ಧದಲ್ಲಿ ಮುಸ್ಲಿಂ ಸೇನೆಯ ವಿಜಯದ ಸುವಾರ್ತೆಯೊಂದಿಗೆ *ಇಬ್ನು ಮುಲ್'ಜಂ* ತನ್ನ ಕುದುರೆಯ ಮೇಲೇರಿ ಮದೀನಾದತ್ತ ಹೊರಟನು.
ವಿಶಾಲವಾದ ಖರ್ಜೂರದ ತೋಟವೊಂದರೊಳಗೆ ನಿಧಾನವಾಗಿ ಸಾಗುತ್ತಿರುವಾಗ *ಇಬ್ನು ಮುಲ್'ಜಂ'ನಿಗೆ* ಒಂದು ಸುಕೇೂಮಲವಾದ ಸ್ತ್ರೀ ಶಬ್ದ ಕೇಳಿಸಿತು.
*"ಓ ಇಬ್ನು ಮುಲ್'ಜಂ ನಿಲ್ಲು.. ಒಮ್ಮೆ ನಿಲ್ಲು..! ಮುಲ್'ಜಮ್...*
*ಇಬ್ನು ಮುಲ್'ಜಂ* ತನ್ನ ಕುದುರೆಯನ್ನು ನಿಲ್ಲಿಸಿ ಸುತ್ತ ಮುತ್ತ ಕಣ್ಣಾಯಿಸಿದ
ಆಗ ಅಲ್ಲಿ.... ತುಸು ದೂರದಲ್ಲಿ... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment