Tuesday, February 27, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 0⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 *"ಒಮ್ಮೆ ನಿಲ್ಲು.. ಮುಲ್'ಜಂ..."*
ಎಂಬ ಸುಕೇೂಮಲವಾದ ಸ್ತ್ರೀ ಶಬ್ಧ ಕೇಳಿ ತನ್ನ ಕುದುರೆಯನ್ನು ನಿಲ್ಲಿಸಿದ..

*ಇಬ್ನು ಮುಲ್'ಜಂ* ಸುತ್ತಲೂ ಕಣ್ಣಾಡಿಸಿದಾಗ.. ⬇

ಆಗ ಅಲ್ಲಿ ತುಸು ದೂರದಲ್ಲಿ....

ಕಾಲ್ಪನಿಕ ಪ್ರೇಮ ಕಾವ್ಯಗಳಲ್ಲಿ ಕವಿಗಳಿಂದ ವರ್ಣಿಸಲ್ಪಡುವ ಆಗಸದಿಂದ ಧರೆಗಿಳಿದ ಅಪ್ಸರೆಯಂತೆ ಕಂಗೊಳಿಸುತ್ತಿರುವ  ಸೌಂದರ್ಯದ ಖನಿಯಂತಿರುವ ಯುವತಿಯೇೂರ್ವಳು ಬಳುಕುತ್ತಾ *ಇಬ್ನು ಮುಲ್'ಜಂನತ್ತಲೇ* ಬರುತ್ತಿದ್ದಾಳೆ..!!

ಚೆಲುವಿನ ಚಿತ್ತಾರದಂತೆ ತಿದ್ದಿ ತೀಡಿದಂತಹ ಬೆಳದಿಂಗಳ ಬಾಲೆಯಂತೆ ಕಂಗೊಳಿಸುತ್ತಾ ಮನಸೂರೆಗೊಳ್ಳುವ ಅವಳ ಸೌಂದರ್ಯದ ಸಿರಿಯನ್ನು ಕಂಡು ಬೆರಗಾದ *ಇಬ್ನು ಮುಲ್'ಜಂ* ಆಕೆಯ  ಅಪ್ರತಿಮವಾದ ಆ ಚೆಲುವಿನ ಸಿರಿಯನ್ನು ಸವಿಯುತ್ತಾ ಮೈ ಮರೆತು ನಿಶ್ಚಲನಾಗಿ ಶಿಲೆಯಂತೆ ನಿಂತು ಬಿಟ್ಟ...

ವಯ್ಯಾರದಿಂದ ಬಳುಕುತ್ತಾ ಅವನ ಬಳಿ ಬಂದ ಆ ಲಲನಾಮಣಿ ಮತ್ತಷ್ಟು ವಯ್ಯಾರದಿಂದ ಕೇಳಿದಳು.. ನಿನ್ನ ಹೆಸರು..
*ಇಬ್ನು ಮುಲ್'ಜಂ* ಎಂದಲ್ಲವೇ?

ಹೌದು...

ನಿನ್ನ ಹೆಸರು?..

ನನ್ನ ಹೆಸರು *ಖತ್ವಾಮಿ..*

ನೀನು *ಅಲಿ (ರ)ರವರ* ಸೇನಾ ಉಪ ನಾಯಕ ತಾನೇ...?

ಹೌದು...

ಹಾಗಾದರೆ ದಯವಿಟ್ಟು ನೀನಿಂದು ನನ್ನ ಮನೆಗೆ ಅಥಿತಿಯಾಗಿ ಆಗಮಿಸಬೇಕು? ಎಂದಳು.

ಅವಳ ಆ ಮಾದಕ  ಸೌಂದರ್ಯಕ್ಕೆ ಮನ ಸೇೂತಿದ್ದ *ಇಬ್ನು ಮುಲ್'ಜಂ* ಬಯಸದೆ ಬಂದ ಈ ಭಾಗ್ಯವನ್ನು ಅಷ್ಟು ಸುಲಭದಲ್ಲಿ ಕೈ ಬಿಟ್ಟಾನೆಯೇ...? ಸಂತೋಷದಿಂದ
ಮನದಲ್ಲೇ ಕೇಕೆ ಹಾಕುತ್ತಾ *"ಖಂಡಿತಾ ಅದಕ್ಕೇನಂತೆ....* ಎಂದ. (ಅಂತರಂಗದಲ್ಲಿ ಮನೆಗಷ್ಟೇ ಅಲ್ಲ ನಿನ್ನಂತಹ ಅಪ್ಸರೆ ಆಹ್ವಾನಿಸಿದರೆ ಯಾವ ಪಾತಾಳಕ್ಕಾದರೂ ಬರಲು ತಾನು ಸಿದ್ಧ ಎಂಬಂತಿತ್ತು ಅವನ ಉತ್ತರ)

ಹಾಗೆ ಅವಳ ಅಪ್ರತಿಮ ಸೌಂದರ್ಯದಿಂದ ಹುಚ್ಚನಂತಾದ *ಮುಲ್'ಜಂ* ಎಲ್ಲವನ್ನೂ ಮರೆತ *ಖತ್ವಾಮಿ* ಎಂಬ ಆ ಯುವತಿಯೊಂದಿಗೆ ಅವಳ ಮನೆಗೆ ನಡೆದನು.

ಮನೆ ತಲುಪಿದಾಗ ಇಬ್ನು *ಮುಲ್'ಜಂನನ್ನು* ಕೊಠಡಿಯಲ್ಲಿ ಕುಳ್ಳಿರಿಸಿ.. ಕುಡಿಯಲು ಪಾನೀಯ ನೀಡಿ ಸತ್ಕರಿಸಿದ ಬಳಿಕ....

ಪರಸ್ಪರ ಯೇೂಗ ಕ್ಷೇಮ ವಿಚಾರಿಸುತ್ತಿರುವಾಗ  *ಖತ್ವಾಮಿ* ಹೇಳಿದಳು..

*ಇಬ್ನು ಮುಲ್'ಜಂ...*

 ಎರಡು ತಲೆಮಾರಿಗೆ ಬೇಕಾಗಿರುಷ್ಟು ಸಂಪತ್ತು ನನಗಿದೆ. ಆದರೆ ಅದನ್ನು ಆಸ್ವಾದಿಸಲು ನನ್ನೊಂದಿಗೆ ಯಾರೂ ಇಲ್ಲ ಅಂದರೆ.. ನನ್ನ ತಂದೆ ಮತ್ತು ಪತಿ ಇಬ್ಬರೂ ಎರಡು ವರ್ಷಗಳ ಹಿಂದೆ ಮದೀನಾ ಸಮೀಪ ಮುಸ್ಲಿಂ ಸೇನೆಯ ವಿರುದ್ಧದ ಯುದ್ಧಕ್ಕೆ ಹೋದವರು ಈ ತನಕ ಹಿಂದಿರುಗಿ ಬರಲಿಲ್ಲ.
ಮಾತ್ರವಲ್ಲ, ಅವರ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ.

ಅಂದು ನಡೆದ ಆ ಯುದ್ಧದಲ್ಲಿ ನನ್ನ ತಂದೆ ಮತ್ತು ಪತಿ ನಿಮ್ಮ ಶತ್ರು ಸೈನ್ಯದಲ್ಲಿದ್ದರೂ ಮುಸ್ಲಿಂ ಸೈನ್ಯದ ಸೇನೆಯಲ್ಲಿ ನೀನೂ ಇದ್ದೆಯಲ್ಲವೇ...? ಹಾಗಾಗಿ ಅವರ ಕುರಿತು ನಿನ್ನಲ್ಲೇನಾದರೂ ಮಾಹಿತಿಯಿದೆಯೇ?  ಎಂದು ಕೇಳಿದಳು.

ಅವರ ಹೆಸರೇನು?

*ಖತ್ವಾಮಿ* ತನ್ನ ತಂದೆ ಮತ್ತು ಪತಿಯ ಹೆಸರುಗಳನ್ನು ಹೇಳಿದಾಗ...

ತುಸು ಹೊತ್ತು ಯೇೂಚಿಸಿದ ನಂತರ *ಮುಲ್'ಜಂ* ಹೇಳಿದ,
ಅವರಿಬ್ಬರೂ *ಅಲಿ (ರ) ಯವರೊಂದಿಗಿನ ಕಾಳಗದಲ್ಲಿ ಇರಿತಕ್ಕೊಳಗಾಗಿ ಹತರಾಗಿದ್ದಾರೆ. ಮಾತ್ರವಲ್ಲ ಅವರಿಬ್ಬರ ರುಂಡವನ್ನು ಅಲಿ (ರ) ರವರು ಕತ್ತರಿಸಿ ಹಾಕಿದ್ದಾರೆ.*

ಇದನ್ನು ಕೇಳಿದ ಖತ್ವಾಮಿ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment