Wednesday, February 28, 2018

*PFI ಯವರೇ ಉತ್ತರಿಸಿ*

قَالَ رَسُولَ اللَّهِ ﷺ : إِنَّ اللَّهَ لَا يَقْبِضُ الْعِلْمَ انْتِزَاعًا يَنْتَزِعُهُ مِنْ الْعِبَادِ وَلَكِنْ يَقْبِضُ الْعِلْمَ بِقَبْضِ الْعُلَمَاءِ حَتَّى إِذَا لَمْ يُبْقِ عَالِمًا اتَّخَذَ النَّاسُ رُءُوسًا جُهَّالًا فَسُئِلُوا فَأَفْتَوْا بِغَيْرِ عِلْمٍ فَضَلُّوا وَأَضَلُّوا . رواه البخاري

ಅಮ್ರ್ ಬಿನ್ ಆಸ್ (ರ) ವರದಿ;

*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು:*
*ದಾಸರ ಹೃದಯದಿಂದ ಇಲ್ಮನ್ನು ಅಲ್ಲಾಹನು ಮಾಯ ಮಾಡಲಾರನು. ಹೊರತು ವಿದ್ವಾಂಸರ ಮರಣದ ಮೂಲಕ ಇಲ್ಮ್ ನಷ್ಟ ಹೊಂದುವವು. ಆಲಿಂಗಳು ಇಲ್ಲದ ಆ ಕಾಲದಲ್ಲಿ ಜನರು ಜಾಹಿಲ್ ಗಳನ್ನು ನಾಯಕರಾಗಿಸಿ ಅವರೊಂದಿಗೆ ಫತ್ವಾ ಕೇಳುವರು. ದೀನೀ ಜ್ಞಾನವಿಲ್ಲದ ಆ ಜಾಹಿಲ್ ಗಳು ಫತ್ವಾ ನೀಡುವರು. ಅವರು ಸ್ವಯಂ ದಾರಿ ತಪ್ಷಿದವರೂ ಇತರರನ್ನು ದಾರಿ ತಪ್ಪಿಸುವವರೂ ಆಗಿದ್ದಾರೆ. (ಹದೀಸ್ ಬುಖಾರಿ ಶರೀಫ್)*


*ಅಂತ್ಯ ದಿನ ಸಮೀಪಿಸುವಾಗ ಜಾಹಿಲ್ ಗಳು ದೀನ್ ಹೇಳುತ್ತಾರೆ.*

*ಈ ಮಾತು ಸತ್ಯ ವಾಗುತ್ತಿದೆ..*

*ಪೂರ್ವ ಕಾಲದಲ್ಲಿ ನಮಗೆ ಧಾರ್ಮಿಕ ಪ್ರಭಾಷಣ ಮಾಡಲು ಬರುತ್ತಿದ್ದವರು ಉಲಮಾಗಳು.*

*ದೀನ್ ಬಗ್ಗೆ ಅವರಿಗೆ ಅರಿವಿತ್ತು.*

*PFI ಎಂಬ ಶನಿ ಕಾಟ ಬಂದಾಗ ತಲೆಗೆ ಟೊಪ್ಪಿ ಹಾಕದ ಜಾಹಿಲ್'ಗಳು ಧಾರ್ಮಿಕ ಪ್ರಭಾಷಣ ಮಾಡಲು ವೇದಿಕೆ ಏರುತ್ತಿದ್ದಾರೆ.*

*ಇದರ ಅರ್ಥ ಇವರಿಗೆ ದೀನ್ ಹೇಳಲು ಉಲಮಾಗಳು ಬೇಡ ಎಂದಲ್ಲವೇ ?*

*ದಾರ್ಮಿಕ ಪ್ರಭಾಷಣ ಜಾಹಿಲ್'ಗಳು ನಡೆಸುವುದಕ್ಕೂ ಧರ್ಮ ರಕ್ಷಣೆಗೂ ಯಾವ ಸಂಬಂಧ ವಿದೆ ?*

*ಉಲಮಾಗಳ ಹಾದಿ ಬಿಟ್ಟ ಇವರ ಹಿಂದೆ ಹೋದರೆ ನಮ್ಮ ಪರಲೋಕ ಗತಿ.,?*


*ನೋಡಿ ತಲೆಗೆ ಟೊಪ್ಪಿ ಇಲ್ಲದವರು ಮತ ಪ್ರಭಾಷಣ ಮಾಡಲು ಬರುವ ಪೊಸ್ಟರ್.*

👇👇👇👇👇👇

No comments:

Post a Comment