Wednesday, February 28, 2018

*ಅಹ್ಲು ಬೈತ್*

ಭಾಗ --2

📝 *_ಮುನೀರ್ ಸಖಾಫಿ,ಸಾಲೆತ್ತೂರು._*


ಅಲ್ಲಾಹನು ಹೇಳುತ್ತಾನೆ,
 إِنَّمَا يُرِيدُ اللَّهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا (الاحزاب 33)
ಓ ಅಹ್ಲ್ ಬೈತ್! ನಿಮ್ಮಿಂದ ಮಾಲಿನ್ಯ ನೀಗಿಸಲು ಮತ್ತು ನಿಮ್ಮನ್ನು ಸರಿಯಾಗಿ ಶುದ್ಧೀಕರಿಸಲು ಮಾತ್ರ ಅಲ್ಲಾಹನು ಇಛ್ಛೆಪಡುತ್ತಾನೆ.(ಅಹ್'ಝಾಬ್ 33)

ಇದರ ವ್ಯಾಖ್ಯಾನದಲ್ಲಿ ಉಮರ್ ಬಿನ್ ಅಬೀ ಸಲಮ (ರ) ಈ ರೀತಿ ವರದಿ ಮಾಡುತ್ತಾರೆ.
 نزلت هذه الآية على النبي صلى الله عليه وسلم إنما يريد الله ليذهب عنكم الرجس أهل البيت ويطهركم تطهيرا في بيت أم سلمة فدعا النبي صلى الله عليه وسلم فاطمةوحسنا وحسينا فجللهم بكساء وعلي خلف ظهره فجلله بكساء ثم قال اللهم هؤلاء أهل بيتي فأذهب عنهم الرجس وطهرهم تطهيرا
(ترمذي3205)
ಉಮ್ಮು ಸಲಮ ಬೀವಿ(ರ)ಮನೆಯಲ್ಲಾಗಿದೆ ಪ್ರಸ್ತುತ ಆಯತ್ ಅವತೀರ್ಣಗೊಂಡದ್ದು.ಆಗ ಒಂದು ಕಂಬಳಿಯೊಳಗೆ ಅಲೀ(ರ)ಫಾತಿಮಾ (ರ),ಹಸನ್(ರ),ಹುಸೈನ್ (ರ) ರನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೇರಿಸಿ ಈ ರೀತಿ ಪ್ರಾರ್ಥಿಸಿದರು;"ಅಲ್ಲಾಹನೇ!ಇವರಾಗಿದ್ದಾರೆ ನನ್ನ ಅಹ್ಲು ಬೈತ್.ಆದುದರಿಂದ ಇವರಿಂದ ನೀನು ಮಾಲಿನ್ಯವನ್ನು ನೀಗಿಸು,ಇವರನ್ನು ನೀನು ಶುದ್ಧೀಕರಿಸು."
(ತುರ್'ಮುದ್ಸೀ 3205)

ಇಮಾಮ್ ತುರ್ಮುದಿ ವರದಿ;
يا أيها الناس إني قد تركت فيكم ما إن أخذتم به لن تضلوا ، كتاب الله وعترتي أهل بيتي
(ترمذي 3718)

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಓ ಜನರೇ! ನಿಮ್ಮಿಂದ ನಾನು ಒಂದನ್ನು ತ್ಯಜಿಸಿ ಹೋಗಲಿದ್ದೇನೆ.ಅದನ್ನು ನೀವು ಬಿಗಿಯಾಗಿ ಹಿಡಿಯುವ ತನಕ ನೀವು ದಾರಿ ತಪ್ಪಲಾರಿರಿ. ಅದು ಅಲ್ಲಾಹನ ಕಿತಾಬ್(ಕುರ್'ಆನ್)ಮತ್ತು ನನ್ನ ಅಹ್ಲ್ ಬೈತ್.
(ತುರ್ಮುದ್ಸೀ 3718)

ಇಮಾಮ್ ಹಾಕಿಂ ರ ಮುಸ್ತದ್'ರಕ್ ನಲ್ಲಿ ಹೀಗಿದೆ;
يا ايها الناس اني تارك فيكم امرين لن تضلوا ان اتبعتموهما وهما كتاب الله واهل بيتي عترتي
(مستدرك 4577)

ಓ ಜನರೇ! ನಿಮ್ಮ ಬಳಿ 2 ಕಾರ್ಯಗಳನ್ನು ನಾನು ತ್ಯಜಿಸಿ ಹೋಗಲಿದ್ದೇನೆ.ಅವೆರಡನ್ನು ನೀವು ಅನುಸರಿಸುವ ಕಾಲದಲ್ಲಿ ನೀವು ದಾರಿ ತಪ್ಪಲಾರಿರಿ.ಅಲ್ಲಾಹನ ಕಿತಾಬ್ ಮತ್ತು ನನ್ನ ಅಹ್ಲು ಬೈತ್ ಆಗಿದೆ ಅದು.
(ಹಾಕಿಂ 4555)

 ಇಮಾಮ್ ಅಹ್'ಮದ್ ವರದಿ ಮಾಡಿದ ಹದೀಸ್ ನೋಡಿ,
عن زيد بن ثابت قال قال رسول الله صلي الله عليه وسلم ،إني تارك فيكم خليفتين : كتاب الله، أهل بيتي ، وانهما لن يفترقا حتى يردا علي الحوض جميعا
(مسند احمد 21697)
ಝೈದ್ ಬಿನ್ ಸಾಬಿತ್ (ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ನಿಮ್ಮಲ್ಲಿ 2 ಪ್ರತಿನಿಧಿಗಳನ್ನು ತ್ಯಜಿಸಿ  ನಾನು ಹೋಗಲಿದ್ದೇನೆ.ಅಲ್ಲಾಹನ ಗ್ರಂಥ ಮತ್ತು ನನ್ನ ಅಹ್ಲ್ ಬೈತ್ ಆಗಿದೆ ಅದು.ನನ್ನ ಹೌಳ್ ನ ಬಳಿ(ಹೌಳುಲ್ ಕೌಸರ್)ತಲುಪುವ ತನಕ ಅದು ಬಿಟ್ಟು ನಿಲ್ಲಲಾರದು.
(ಅಹ್'ಮದ್ 21697)

ಇಮಾಮ್ ಮುಸ್ಲಿಂ (ರ)ವರದಿ,

 قام رسول الله صلى الله عليه وسلم يوما فينا خطيبا بماء يدعى خما بين مكة والمدينة فحمد الله وأثنى عليه ووعظ وذكر ثم قال أما بعد ألا أيها الناس فإنما أنا بشر يوشك أن يأتي رسول ربي فأجيب
 وأنا تارك فيكم ثقلين أولهما كتاب الله فيه الهدى والنور فخذوا بكتاب الله واستمسكوا به فحث على كتاب الله ورغب فيه ثم قال وأهل بيتي أذكركم الله في أهل بيتي أذكركم الله في أهل بيتي أذكركم الله في أهل بيتي فقال له حصين ومن أهل بيته يا زيد ؟
أليس نساؤه من أهل بيته؟
 قال نساؤه من أهل بيته ولكن أهل بيته من حرم الصدقة بعده قال ومن هم ؟
قال هم آل علي ،وآل عقيل ،وآل جعفر ،وآل عباس
قال كل هؤلاء حرم الصدقة ؟
قال نعم (مسلم )
ಝೈದ್ ಬಿನ್ ಅರ್'ಖಮ್ (ರ)ಹೇಳುತ್ತಾರೆ;
ಮಕ್ಕಾ ಮತ್ತು ಮದೀನದ ನಡುವೆ ಇರುವ 'ಕಮ್ಮ್' ಎಂಬ ಸ್ಥಳದಲ್ಲಿ ಒಂದು ಬಾವಿಯ ಸಮೀಪ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಭಾಷಣ ಮಾಡಿದರು.ಅದರಲ್ಲಿ ಹೀಗೆ ಹೇಳಿದರು,ನಿಶ್ಚಯವಾಗಿಯೂ ನಾನು ಮನುಷ್ಯನಾಗಿದ್ದೇನೆ.ನನ್ನ ಬಳಿ ದೇವ ದೂತ ಆಗಮಿಸುವ ಸಮಯವಾಗಿದೆ.ಬಂದರೆ ನಾನು ಕರೆಗೆ ಉತ್ತರಿಸುವೆ.
2 ಕಾರ್ಯ ನಿಮ್ಮ ಬಳಿ ತ್ಯಜಿಸಿ ನಾನು ಹೋಗಲಿದ್ದೇನೆ.ಒಂದು ಅಲ್ಲಾಹನ ಗ್ರಂಥ.ಅದರಲ್ಲಿ ಸನ್ಮಾರ್ಗ ಮತ್ತು ಪ್ರಕಾಶವಿದೆ.ಆದುದರಿಂದ ಅಲ್ಲಾಹನ ಗ್ರಂಥ ನೀವು ಬಿಗಿಯಾಗಿ ಹಿಡಿಯಿರಿ.ನನ್ನ ಅಹ್ಲು ಬೈತಾಗಿದೆ ಇನ್ನೊಂದು.ನನ್ನ ಅಹ್ಲ್ ಬೈತ್ ನ ವಿಷಯದಲ್ಲಿ ನಿಮಗೆ  ಅಲ್ಲಾಹನನ್ನು ನಾನು ನೆನಪಿಸುತ್ತೇನೆ.
ಹೀಗೆ 3 ಸಲ ಹೇಳಿದರು.
ಇದು ಹೇಳಿದಾಗ ಹುಸೈನ್ (ರ)ರವರು ಝೈದ್ (ರ)ರೊಂದಿಗೆ ಕೇಳಿದರು;ಅಹ್ಲ್ ಬೈತ್ ಅಂದರೆ ಯಾರು?
ಪ್ರವಾದೀ ಪತ್ನಿಯರು ಅಹ್ಲ್ ಬೈತ್ ನಲ್ಲಿ ಒಳಪಡುವರೇ?
ಝೈದ್ (ರ)ಹೇಳಿದರು."ಪ್ರವಾದೀ ಪತ್ನಿಯರು ಅಹ್ಲು ಬೈತ್ ನಲ್ಲಿ ಒಳಪಡುವರು.
ಆದರೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಹ್ಲ್ ಬೈತ್ ಅವರ  ವಫಾತ್ ನ ನಂತರ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆ."
ಆಗ ಹುಸೈನ್(ರ)ಕೇಳಿದರು;ಅದು ಯಾರು?
ಝೈದ್ (ರ)ಹೇಳಿದರು;"ಅವರು ಅಲೀ,ಉಖೈಲ್,ಜಅಫರ್,ಅಬ್ಬಾಸ್(ರ) ಇವರ ಸಂತಾನವಾಗಿದ್ದಾರೆ."
ಅವರು ಪುನಃ ಕೇಳಿದರು;ಇವರೆಲ್ಲರೂ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆಯೇ?
ಝೈದ್(ರ) "ಹೌದು"ಎಂದು ಮರುತ್ತರಿಸಿದರು.
 (ಮುಸ್ಲಿಂ 6378)

ಒಟ್ಟಿನಲ್ಲಿ ಮೇಲೆ ಹೇಳಿದ
 ಹದೀಸಿನಿಂದ ಈ ಕಾರ್ಯಗಳು ಸ್ಪಷ್ಟವಾಯಿತು.

1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಅತೀ ಸಾಮಿಪ್ಯವಿರುವವರು ಅಹ್ಲು ಬೈತ್ ಆಗಿದ್ದಾರೆ.

2.ಅದರಲ್ಲಿ ಪ್ರವಾದಿ ವರ್ಯರ ಪತ್ನಿಯರು,ಮಕ್ಕಳು,ಅಳಿಯಂದಿರು ,ಸಂತಾನಗಳು ಎಲ್ಲಾ ಒಳಪಡುವರು.

3.ಅವರನ್ನೆಲ್ಲಾ ಗೌರವಿಸುವಂತೆ ಇಸ್ಲಾಂ ಆಜ್ಞಾಪಿಸಿದೆ.

4.ಅಲೀ ,ಜಅಫರ್,ಉಖೈಲ್,ಅಬ್ಬಾಸ್(ರ) ಎಂಬವರು ಹಾಗೂ ಅಂತ್ಯ ದಿನದ ವರೆಗೆ ಅವರ ಸಂತಾನ ಪರಂಪರೆಯಲ್ಲಿರುವ ಎಲ್ಲರಿಗೂ ಝಕಾತ್ ನೀಡುವುದು ನಿಷಿದ್ಧವಾಗಿದೆ.

5.ಇವರಿಗೆ ಅಹ್ಲ್ ಬೈತ್ ಎಂಬ ಉನ್ನತ ಪದವಿ ಇದೆ.


*ಮುಂದುವರಿಯುವುದು...*

No comments:

Post a Comment