*ತಟ್ಟ ಮೌಲವಿಗಳು ಮತ್ತು ಏಜೆಂಟುಗಳು....*
ಇದೀಗ ಹಣಕ್ಕೆ ದುಂಬಾಲು ಬಿದ್ದದ್ದು *ಕುಮ್ಮಣಂ ಮೌಲವೀ!*
ಒಂದುವರೆ ಗಂಟೆಯ ಪ್ರಭಾಷಣಕ್ಕೆ ಹತ್ತು ಸಾವಿರ ಕೊಡಲಾಗಿದೆ.ಆದರೆ
ಕುಮ್ಮಣಂರ ದಾಹ ತೀರಲೇಇಲ್ಲ!
*ಮೂವತ್ತು* ಸಾವಿರ ಬೇಕಂತೆ..!
ಬರೋಬ್ಬರಿ ಮೂವತ್ತು ಸಾವಿರ!!
ಹತ್ತು ಸಾವಿರ+ಸ್ವಾಧಿಷ್ಟ ಫುಡ್+ಯಾತ್ರೆಯ ಸಂಪೂರ್ಣ ಖರ್ಚುಗಳನ್ನು ಜಮಾತ್ ಕಮಿಟಿಯವರು ಭರಿಸಿದ ನಂತರವೂ *ಕುಮ್ಮಣಂ* ಗೆ ಕಾಲ್ ಮಾಡಿದಾಗ ಅದು ಸಾಕಗಲಿಲ್ಲ ಎಂಬ ವರಸೆ ಬೇರೆ.ಜೊತೆಗೆ ಮುನಾಫಿಕ್ ಎಂಬ ಬೈಗುಳದ ಸುರಿಮಳೆ.
ಒಬ್ಬ ಸಾಮಾನ್ಯ ಮನುಷ್ಯನನ್ನು ಮುನಾಫಿಕ್ ಎಂದು ಜರೆದು ಮಾತನಾಡುವ ಈ ಕುಮ್ಮಣಂ ಮೌಲವಿ ಪ್ರಭಾಷಣಕ್ಕೆ ನಿಂತರೆ ನಾಲಗೆಯ ಆಫತ್ತಿನ ಕುರಿತು ಇಷ್ಟುದ್ದದ ವಯಲ್ ಹೇಳುತ್ತಾರೆ.
ಹಾಗಾದರೆ ನಾಲಗೆಯ ಆಫತ್ತು ಕುಮ್ಮಣಂ ಗೆ ಭಾಧಕವಲ್ಲವೇ?
ನಿಜವಾಗಿಯೂ ಈ ತಟ್ಟ ಮೌಲವಿಗಳು ಪರಿಶುದ್ಧ ದೀನೀ ಪ್ರಭೋಧನ ಮಾರ್ಗವಾಗಿರುವ 'ಉರ್ದಿ' ಪರಂಪರೆಯನ್ನು ಆರ್ಕೆಸ್ಟ್ರಾದಂತೆ ಬೆಲೆ ನಿಗದಿ ಪಡಿಸಿ ಅತ್ಯಂತ ಚೀಪ್ ಮಾಡಿಬಿಟ್ಟರು!
ಜನರಿಗೂ ಅಷ್ಟೇ ಇಂದಿನ ವಯಲ್ ಅಂದರೆ ಅದೊಂದು ಆಸ್ವಾದನೆಯಾಗಿ ಬಿಟ್ಟಿದೆ.
ಯಾರು ಹೆಚ್ಚು ರಾಗ ಎಳೆಯುತ್ತಾರೋ ಅವರ ರೇಟ್ ಅಷ್ಟೇ ಉದ್ದವಿರುತ್ತದೆ.
ಅಂದು ನಮ್ಮ ಉಲಮಾಗಳ ಹ್ರದಯದಿಂದ ಬರುವ ವಯಲ್ ಕೇಳಿದ ನಮ್ಮ ತಾತಂದಿರಿಗೆ ಅಲ್ಲಾಹನ ಭಯವಿತ್ತು.
ಎಷ್ಟೇ ಬಡತನವಿದ್ದರೂ ಮನಸ್ಸಿಗೆ ನೆಮ್ಮದಿ ಇತ್ತು.ಆಧ್ಯಾತ್ಮಿಕತೆಯ ಪ್ರಭೆ ಅವರ ಮುಖದಲ್ಲಿ ಕಂಗೊಳಿಸುತ್ತಿತ್ತು.
ಆದರೆ ಕೇರಳದ ಕಟ್ಟಕಡೆಯಿಂದ ಬರುವ ಈ ತಟ್ಟ ಮೌಲವಿಗಳ ಪ್ರಭಾಷಣ ಕೇಳಿ ನಮಾಜಿನ ಫರಳ್ ನಿಖರವಾಗಿ ಕಲಿತವರು ಎಷ್ಟು ಮಂದಿ ಇದ್ದಾರೆ? ತಯಮ್ಮಮ್ ನ ವಿಧಿ ಕಲಿತವರು ಯಾರಿದ್ದಾರೆ?
ಹೋಗಲಿಬದುಕಿನಲ್ಲಿ ಆತ್ಮೀಯವಾಗಿ ಛೇಂಜಸ್ ಆದವರು ಯಾರಿದ್ದಾರೆ?
ಸಣ್ಣ ಬಡ ಕುಟುಂಬವೊಂದು ಚಿಕ್ಕ ಮನೆ ಕಟ್ಟಿ ಕೂರಲು ಸಾದ್ಯವಾಗುವಷ್ಟು 5/6 ಲಕ್ಷ ರೂಪಾಯಿ ಒಬ್ಬ ತಟ್ಟ ಮೌಲವಿಯ ಒಂದುವರೆ ಗಂಟೆಯ ಪ್ರಭಾಷಣಕ್ಕೆ ಖರ್ಚು ಮಾಡುವುದೆಂದರೆ ಅದರ ಕುರಿತು ಸಮುದಾಯ ಏಕೆ ಎಚ್ಚೆತ್ತು ಕೊಂಡಿಲ್ಲ?
ಎಲ್ಲರೂ ಶೋಕಿಯ ಹಿಂದೆಯೇ ಹೋದರೆ ಈ ಸಮುದಾಯವನ್ನು ಸರಿದಾರಿಗೆ ಕೊಂಡೊಯ್ಯುವವರು ಯಾರು?
ನಿಜವಾಗಿಯೂ ನಾವು ಮೂರ್ಖರಾಗುತ್ತಿದ್ದೇವೆ.ತಟ್ಟ ಮೌಲವಿಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಲೇ ಇದ್ದಾರೆ.
ನಮ್ಮನ್ನು ಹಿಂಡಿ ಸಿಪ್ಪೆ ಮಾಡಿ ಅವರ ಜೇಬು ಗಟ್ಟಿಮಾಡಿ ಕೈತೊಳೆದು ಹೋಗುತ್ತಾರೆ.
ನಮ್ಮ ಬಡ ತಂದೆಯಂದಿರು ಸಂಜೆವರೆಗೆ ಬೆನ್ನು ಮುರಿದು ದುಡಿದು ಸಿಕ್ಕಿದ ಅಲ್ಪ ಸಂಬಳದಿಂದ ಹತ್ತಿಪ್ಪತ್ತು ರೂಪಾಯಿ ಸಲಾತ್ ಡಬ್ಬಿಯಲ್ಲಿ ಹಾಕಿ ವರ್ಷ ಒಂದಾದಾಗ ಆ ಡಬ್ಬಿ ಕಲಕ್ಷನ್ ಹಣದಿಂದ ವಾರ್ಷಿಕ ಮಾಡಿ ಆ ಹಣವನ್ನು ತಟ್ಟ ಮೌಲವಿಗಳಿಗ ಜೇಬಿಗೆ ತುರುಕಿಸಿ ಕೊಡುವ ಜಮಾತ್ ಕಮಿಟಿಗಳು ಇಲ್ಲಿ ಚಿಂತಿಸಬೇಕು.
ಒಂದು ಕಾರ್ಯಕ್ರಮದ ಯಶಸ್ವಿ ಜನಸೇರುವುದೋ ರಾಗ ಎಳೆಯುವುದೋ ಅಲ್ಲ,ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒಬ್ಬನಾದರೂ ನೇರದಾರಿ ಹಿಡಿಯಬೇಕು ಆಗ ಕಾರ್ಯಕ್ರಮ ಪೂರ್ಣ ಯಶಸ್ವಿಯಾಯಿತು ಎಂದರ್ಥ.
ಆದರೆ ಇಲ್ಲಿ ಅದು ಸಂಭವಿಸುವುದಿಲ್ಲ.ವಯಲನ್ನು ಕೇವಲ ಆಸ್ವಾದನೆಯಾಗಿ ಮಾತ್ರ ಕಂಡು ಜನ ಹರಿದು ಬರುತ್ತಾರೆ.
ನಮ್ಮ ಕರ್ನಾಕದಲ್ಲೇ ಪ್ರತಿಭಾವಂತರು ಇದ್ದಾರೆ.ಹ್ರದಯದಿಂದ ಹ್ರದಯಕ್ಕೆ ತಟ್ಟುವ ಉರ್ದಿ ಹೇಳುವವರು ಇದ್ದಾರೆ.
ಅವರಿಗೆ ಡಿಮ್ಯಾಂಡ್ ಕೂಡಾ ಇಲ್ಲ.
ಕೆಲವೊಂದು ಕಡೆ ಉರ್ದಿಗೆ ಹೋದ ಅದೇ ಉಸ್ತಾದ್ ವೇದಿಕೆ ಮೇಲೆ ಹಾಕಿದ ಶೀಟಿನ ಹಣ ತನ್ನ ಜೇಬಿನಿಂದಲೇ ಕೊಟ್ಟು ದಅವತ್ ನಡೆಸಿದ ಉಸ್ತಾದರು ಇದ್ದಾರೆ.
ಅವರಿಗೆ ಸಾವಿರದ ಗರಿನೋಟುಗಳು ನೀಡುವ ಅಗತ್ಯವೂ ಇಲ್ಲ.
ಏನಿದರೂ ಅವರಿಗಾದ ಖರ್ಚಿಗೆ ಸಣ್ಣ ಮೊತ್ತ ಕೊಟ್ಟದ್ದನ್ನು ಸ್ವೀಕರಿಸಿ ಉರ್ದಿಯನ್ನು ದಅವತ್ ಆಗಿ ಕಂಡವರು ಇರುವಾಗ,ಹಣ ಡಿಮ್ಯಾಂಡ್ ಮಾಡುವ ಈ ತಟ್ಟ ಮೌಲವಿಗಳನ್ನು ಯಾಕೆ ಕರೆಸಿ ನಾವು ಮೂರ್ಖರಾಗುವುದು?
ಜನರೇ ಚಿಂತಿಸಿ....
ಇದು ಅವರೊಂದಿಗಿರುವ ವ್ಯಕ್ತಿ ವೈರಾಗ್ಯ ಅಂತ ಭಾವಿಸಬೇಡಿ...
ಒಂದು ಬದಲಾವಣೆ ಬರಲಿ.
ಉರ್ದಿಗೆ ಬರುವ ಮೌಲವಿಗಳ ಡಿಮ್ಯಾಂಡ್ ನಿಲ್ಲಲಿ.
ಅವರ ಏಜೆಂಟುಗಳ ಬ್ರಷ್ಟಾಚಾರಕ್ಕೆ ಕೊನೆಯಾಗಲಿ...
ನಮ್ಮ ಮೂರ್ಖತನಕ್ಕೆ ಇನ್ನಷ್ಟು ಕಾಲ ನಾವು ಬಲಿಯಾಗದಿರೋಣ....
ಸ್ವಲ್ಪ ಚಿಂತಿಸಿ.....
ಡಿಮ್ಯಾಂಡ್ ಮಾಡುವ ಮೌಲವಿಗಳನ್ನು ನಮಗೆ ದೂರ ಮಾಡಲು ಸಾದ್ಯವಿಲ್ಲವೇ...?
ಮೈಕ್ ಮುಂದೆ ಪರಲೋಕ ಹೇಳಿ ಹೆದರಿಸುವ ತಟ್ಟ ಮೌಲವಿಗಳ ಸಾಲಿಗೆ ಸೇರಿದ ಕುಮ್ಮಣಂ ರವರ ಅಸಲಿ ಮುಖ ಹೇಗಿದೆ ಕೇಳಿ ನೋಡಿ...
ನಿಜವಾಗಿಯೂ ಆತ್ಮೀಯತೆಯ ಉರ್ದಿ ಹೇಳುವ ಮಜ್ಲಿಸುಗಳಿಗೆ ಮುಖ್ಯ ಪ್ರಭಾಷಣ ಮಾಡಲು ಇವರೆನ್ನೆಲ್ಲಾ ಹತ್ತಿಸಬಹುದೇ....?
ನೀವೇ ಯೋಚಿಸಿ....
ಕುಮ್ಮಣಂ ಅಝ್ಹರಿ ಮತ್ತು ಅವರ ಏಜೆಂಟ್ ನಲ್ಲಿ ಒಬ್ಬ ಸಾಮಾನ್ಯ ಯುವಕ ಮಾತನಾಡಿದಾಗ ಅವರ ಅಸಲಿ ಮುಖ ಅನಾವರಣವಾಯಿತು....
ಕೇಳಿ ನೋಡಿ👇👇
No comments:
Post a Comment