Tuesday, October 8, 2019

ಸುಬಹಿ ನಮಾಝಿನಲ್ಲಿ ಖುನೂತ್

📝 ಮುನೀರ್ ಸಖಾಫಿ,ಸಾಲೆತ್ತೂರು.

----------------------------

ಶಾಫಿಈ ಮದ್ಸ್ ಹಬ್ ಪ್ರಕಾರ ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಾಗಿದೆ.

*ಪವಿತ್ರ* *ಖುರ್* *ಆನಿನಲ್ಲಿ* *ಅಲ್ಲಾಹನು* *ಈ* *ರೀತಿ* *ಹೇಳುತ್ತಾನೆ;*

"حافظوا علي الصلوات والصلاة الوسطي وقوموا لله قانتين.(البقرة 238)

ನೀವು ಎಲ್ಲಾ ನಮಾಝಿನಲ್ಲಿ ಜಾಗರೂಕರಾಗಿರಿ , ಮುಖ್ಯವಾಗಿ ಸುಬಹಿ ನಮಾಝಿನಲ್ಲಿ.ಖುನೂತ್ ಓದುವವರಾಗಿಯೂ ನಿರ್ವಹಿಸಿರಿ.(ಅಲ್ ಬಖರ)
ಈ ಆಯತ್ ನಲ್ಲಿ ಹೇಳಿದ " ಸ್ವಲಾತುಲ್ ವುಸ್ತ್ವ" ಎಂಬುವುದಕ್ಕೆ ಹಲವಾರು ಅರ್ಥಗಳನ್ನು ಮುಫಸ್ಸಿರ್ ಗಳು ನೀಡಿದ್ದಾರೆ.

ಇಮಾಮ್ ರಾಝೀ ಬರೆಯುದನ್ನು ನೋಡಿ,
"القول الثالث انها صلاة الصبح وهذا القول من الصحابة قول علي عليه السلام وعمر وابن عباس وجابر بن عبد الله وابي امامة الباهلي ومن التابعين قول طاوس وعطاء وعكرمة ومجاهد وهو مذهب الشافعي رحمه الله .(تفسير الرازي)

ಮೂರನೇ ಅಭಿಪ್ರಾಯ : ಸ್ವಲಾತುಲ್ ವುಸ್ತ ಎಂದು ಹೇಳಿದರೆ ಅದು ಸುಬಹಿ ನಮಾಝ್ ಆಗಿದೆ.ಈ ಅಭಿಪ್ರಾಯವನ್ನು ಸ್ವಹಾಬಿಗಳ ಪೈಕಿ ಅಲಿಯ್ಯ್ (ರ),  ಉಮರ್ (ರ), ಇಬ್ನ್ ಅಬ್ಬಾಸ್ (ರ), ಜಾಬಿರ್ ಬಿನ್ ಅಬ್ದಿಲ್ಲಾಹ್ (ರ), ಅಬೂ ಉಮಾಮ (ರ), ಮುಂತಾದವರೂ ತಾಬಿಈಗಳ ಪೈಕಿ ತ್ವಾವೂಸ್ (ರ), ಇಕ್ರಿಮ (ರ), ಅತ್ವಾಅ (ರ), ಮುಜಾಹಿದ್ (ರ),
ಮುಂತಾದವರೂ  ಹೇಳಿದ್ದಾರೆ.ಇದುವೇ ಆಗಿದೆ ಇಮಾಮ್ ಶಾಫಿಈ (ರ) ರವರ ಅಭಿಪ್ರಾಯ.
(ರಾಝಿ6/126)

ನಂತರ ಇಮಾಮ್ ರಾಝೀ (ರ) ರವರು ಸ್ವಲಾತುಲ್ ಉಸ್ತ್ವ ಎಂಬುವುದಕ್ಕೆ ಸುಬಹಿ ನಮಾಝ್ ಎಂದುನ್ ಅರ್ಥ ನೀಡಿದ್ದಕ್ಕೆ ಹಲವಾರು ಕಾರಣಗಳನ್ನು ವಿವರಿಸುತ್ತಾ ಹೇಳುತ್ತಾರೆ;

انه تعالي قال بعد ذكر الصلاة الوسطي وقوموا لله قانتين.قرن هذه الصلاة بذكر القنوت وليس في الشرع صلاة ثبت بالاخبار الصحاح القنوت فيها الا الصبح.فدل علي ان المراد بالصلاة الوسطي هي صلاة الصبح.(رازي)
"ಅಲ್ಲಾಹನು ಸ್ವಲಾತುಲ್ ಉಸ್ತ್ವ ಎಂದು ಹೇಳಿದ ನಂತರ "ನೀವು ಖುನೂತ್ ನಿರ್ವಹಿಸಿ ನಮಾಝ್ ಮಾಡಿರಿ" ಎಂದು ಹೇಳಿದರಿಂದಲೇ ತಿಳಿದು ಬಂತು "ಸ್ವಲಾತುಲ್ ವುಸ್ತ್ವ" ಎಂದರೆ ಅದು ಸುಬಹಿ ನಮಾಝ್ ಎಂದು,ಕಾರಣ  ಸ್ವಹೀಹ್ ಆದ ಹದೀಸ್ ಗಳಿಂದ ಖುನೂತ್ ಸಾಬೀತಾದ ನಮಾಝ್ ಸುಬಹಿ ನಮಾಝ್ ಮಾತ್ರವಾಗಿದೆ.(ರಾಝೀ6/127)
--------------------------
ಇಮಾಮ್  ಖುರ್ತುಬಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ;

وقد استدل من قال انها الصبح بقوله تعالي :وقوموا لله قانتين يعني فيها، ولا صلاة مكتوبة فيها قنوت الا الصبح.(قرطبي 3/300)

ಸ್ವಲಾತುಲ್ ಉಸ್ತ್ವ ಎಂಬುವುದರ ತಾತ್ಪರ್ಯ  ಸುಬಹಿ ನಮಾಝ್ ಎಂದು ಹೇಳಿದವರ ಅಧಾರ ನಂತರವಿರುವ
  وقوموا لله قانتين
ಎಂಬ
ಆಯತ್ ಆಗಿದೆ.ಫರ್ಲ್ ನಮಾಝಿನ ಪೈಕಿ  ಖುನೂತ್ ಇರುವ ನಮಾಝ್ ಸುಬಹಿ ನಮಾಝ್ ಮಾತ್ರವಾಗಿದೆ.(ಖುರ್ತುಬಿ 3/300)

ಇಮಾಮ್ ಬಗವೀ (ರ) ಹೇಳುತ್ತಾರೆ;
واختلف العلماء من الصحابة ومن بعدهم في الصلاة الوسطي فقال قوم :هي صلاة الفجر ، وهو قول عمر وابن عمر وابن عباس ومعاذ وجابر ،وبه قال عطاء وعكرمة ومجاهد واليه مال مالك والشافعي( معالم التنزيل 1/329)

"ಸ್ವಲಾತುಲ್ ಉಸ್ತ್ವ ಎಂಬುವುದರ ತಾತ್ಪರ್ಯವೇನು ಎಂಬುವುದರಲ್ಲಿ  ಸ್ವಹಾಬಿಗಳು ಮತ್ತು ತಾಬಿವುಗಳು ಅಭಿಪ್ರಾಯ ವ್ಯತ್ಯಾಸ ಹೊಂದಿದ್ದಾರೆ.
ಒಂದು ವಿಭಾಗವು ಅದು ಸುಬಹಿ ನಮಾಝ್ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಉಮರ್ (ರ) , ಇಬ್ನ್ ಉಮರ್ (ರ) ,ಇಬ್ನ್ ಅಬಾಸ್ (ರ) , ಮುಆದ್ಸ್ (ರ), ಜಾಬಿರ್ (ರ)ಮುಂತಾದ ಸ್ವಹಾಬಿಗಳು ಅತ್ವಾಅ (ರ) ,ಇಕ್ರಿಮ (ರ),ಮುಜಾಹಿದ್ (ರ) ಮುಂತಾದ ತಾಬಿವುಗಳು ಈ ಅಭಿಪ್ರಾಯವನ್ನು ತಾಳಿದ್ದಾರೆ.
ಇದೇ ಅಭಿಪ್ರಾಯವನ್ನು ಇಮಾಮ್ ಮಾಲಿಕ್ (ರ) ಮತ್ತು ಶಾಫೀ (ರ) ಹೇಳಿದ್ದಾರೆ".
( ಮ ಆಲಿಮುತ್ತಂಝೀಲ್ 1/329)

ಇಮಾಮ್ ಅಬುಸ್ಸುಊದ್ (ರ) ಹೇಳುವುದನ್ನು ನೋಡಿ;
وقال ابن المسيب المراد به القنوت في الصبح.(ابو السعود)

"ಸಈದು ಬಿನಿಲ್ ಮುಸಯ್ಯಿಬ್ (ರ) ಹೇಳುತ್ತಾರೆ;ಖುನೂತ್ ಓದಿ ನಮಾಝ್ ನಿರ್ವಹಿಸಿ ಎಂಬುವುದರ ಉದ್ದೇಶ ಸುಬಹಿ ನಮಾಝ್ ನಲ್ಲಿ ಖುನೂತ್ ಓದುವುದಾಗಿದೆ.
(ತಫ್ಸೀರು ಅಬುಸ್ಸುಊದು 1/282)

ಹಿಜರಿ 430 ರಲ್ಲಿ ವಫಾತ್ ಆದ ಇಮಾನ್ ಮಾವರ್ದಿ (ರ) ಹೇಳುತ್ತಾರೆ;
فاما حديث ابن عباس فقد روينا عنه انه كانت يقنت في الصبح ولذلك ذهب الي الصلاة الوسطي هي الصبح.لان القنوت فيها.
(الحاوي الكبير   2/198)

"ಇಬ್ನ್ ಅಬ್ಬಾಸ್ (ರ) ಸುಬಹಿ ನಮಾಝಿನಲ್ಲಿ ಖುನೂತ್ ಓದಿ ನಮಾಝ್ ನಿರ್ವಹಿಸುತ್ತಿದ್ದರೆಂದು ರಿಪೋರ್ಟ್ ಮಾಡಲ್ಪಟ್ಟಿದೆ.ಆದುದರಿಂದಲೇ ಮಹಾನುಭಾವರು ಸ್ವಲಾತುಲ್ ಉಸ್ತ್ವ ಎಂಬುವುದಕ್ಕೆ  ಸುಬಹಿ ನಮಾಝ್ ಎಂದು ಅರ್ಥನೀಡಿದ್ದಾರೆ.ಕಾರಣ ಖುನೂತ್ ಇರುವ ನಮಾಝ್ ಸುಬಹಿ ನಮಾಝ್ ಮಾತ್ರ"
(ಅಲ್ ಹಾವಿಲ್ ಕಬೀರ್ 2/198)

ಇಮಾಮ್ ಬೈಳಾವೀ (ರ) ಹೇಳುತ್ತಾರೆ;
وقال ابن المسيب المراد به القنوت في الصبح
(تفسير البيضاوي 1/536)

"ಇಬ್ನುಲ್ ಮುಸಯ್ಯಬ್ (ರ) ಹೇಳುತ್ತಾರೆ;ಈ ಆಯತ್ ನಲ್ಲಿ ಖುನೂತ್ ಓದಿರಿ ಎಂಬುವುದರ ಉದ್ದೇಶ ಸುಬಹಿ ನಮಾಝಿನಲ್ಲಿ ಖುನೂತ್ ಓದಿರಿ ಎಂದಾಗಿದೆ".
(ತಫ್ಸೀರುಲ್ ಬೈಳಾವೀ 1/536)
---------------------------
ಖುರ್ ಆನಿನಲ್ಲಿ ಖುನೂತ್ ನ ಬಗ್ಗೆ ಪ್ರಸ್ತಾಪಿಸಲಾದ ಆಯತ್ ನ ಕುರಿತು ಖುರ್ ಆನ್ ವ್ಯಾಖ್ಯಾನಗಾರರು ಬರೆದ ವ್ಯಾಖ್ಯಾನದಿಂದ  ಸುಬಹಿ ನಮಾಝಿ ನಲ್ಲಿ ಖುನೂತ್ ಇದೆಯೆಂದು ಇಮಾಮರುಗಳ ಮಾತಿನಿಂದಲೇ ಬಹಳ ಸ್ಪಷ್ಟವಾಯಿತು.

*ಖುನೂತ್* *ಹದೀಸ್* *ಗಳ* *ಆಧಾರದಲ್ಲಿ....*

ಇಮಾಮ್ ಬೈಹಖೀ (ರ) ರವರ ತನ್ನ ಸುನನ್ ನ  ಒಂದು ಅಧ್ಯಾಯ ನೋಡಿ;
 باب الدليل علي انه لم يترك اصل القنوت في صلاة الصبح انما ترك الدعاء لقوم او علي اخرين باسمائهم او قبائلهم.
 (ಅರ್ಥ : ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತನ್ನು ತ್ಯಜಿಸಲಿಲ್ಲ.ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಯನ್ನು ತ್ಯಜಿಸಿದ್ದಾರೆ.)

ನಂತರ ಇಮಾಮ್ ಬೈಹಖೀ (ರ) ಹಲವಾರು ಹದೀಸ್ ಗಳನ್ನು ವರದಿ ಮಾಡುತ್ತಾರೆ.
ಅದರಲ್ಲಿ ಕೆಲವೊಂದು ಹದೀಸನ್ನು ನೋಡಿರಿ,

عن الربيع بن انس : ان النبي صلي الله عليه وسلم قنت شهرا يدعو عليهم،ثم تركه ،فاما في الصبح فلم يزل يقنت حتي فارق الدنيا (سنن الكبري)

ಅನಸ್ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳ ಕಾಲ  ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸುತ್ತಿದ್ದರು.ನಂತರ ಅದನ್ನು ನಿಲ್ಲಿಸಿದರು.ಸುಬಹಿ ನಮಾಝಿನಲ್ಲಿ ವಫಾತ್  ತನಕ ಖೂನೂತ್ ಓದಿಯೇ ನಮಾಝ್ ನಿರ್ವಹಿಸುತ್ತಿದ್ದರು."
(ಸುನನುಲ್ ಬೈಹಖೀ).

ಇನ್ನೂಂದು ಹದೀಸ್ ನೋಡಿ,
عن الربيع بن انس قال: كنت جالسا عند انس فقيل له انما قنت رسول الله صلي الله عليه وسلم شهرا- فقال : ما زال رسول الله صلي الله عليه وسلم - يقنت في صلاة الغداة  حتي فارق الدنيا.
(سنن الكبري للبيهقي 3230)

ತಾಬಿಈ ಪ್ರಮುಖರಾದ ರಬೀಅ ಬಿನ್ ಅನಸ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ;
ನಾನು ಅನಸ್ ರಲಿಯಲ್ಲಾಹು ಅನ್ಹುರವರ ಬಳಿ ಕುಳಿತಿದ್ದೆ.ಆವಾಗ ಅಲ್ಲಿ ಒಬ್ಬರು ಹೀಗೆ ಹೇಳಿದರು;
" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳು ಮಾತ್ರ ಖುನೂತ್ ಓದಿದ್ದಾರೆ"ಇದನ್ನು ಕೇಳಿದ ,ಅನಸ್ ರಳಿಯಲ್ಲಾಹು ಅನ್ಹು ತಕ್ಷಣ ಹೇಳಿದರು,
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಮರಣದ ತನಕ ಖುನೂತ್ ನಿರ್ವಹಿಸಿದ್ದಾರೆ".
(ಸುನನುಲ್ ಕುಬ್ರಾ)

*ಹದೀಸ್* *ಲಹೀಫ್* *ಎಂಬ* *ವಾದಕ್ಕೆ* *ಉತ್ತರ* *...*

ಈ ಹದೀಸ್ ನ ಕುರಿತು ಇಮಾಮ್ ಬೈಹಖಿಯವರ ಮಾತು ನೋಡಿ;
قال ابو عبد الله : هذا اسناد صحيح سنده ثقات رواته، والربيع بن انس تابعي معروف من اهل البصرة سمع انس بن مالك ،روي عنه سليمان التيمي وعبد الله بن المبارك وغيرهما .وقال ابو محمد بن ابي حاتم سألت ابي وابا زرعة عن الربيع بن انس فقالا : صدوق
 ثقة.(سنن الكبري)

ಅಬೂ ಅಬ್ದುಲ್ಲಾ (ರ)ಹೇಳುತ್ತಾರೆ; ಈ ಹದೀಸಿನ ಸನದ್ ಸಹೀಹ್ ಆಗಿದೆ.ವರದಿಗಾರರೆಲ್ಲರೂ ವಿಶ್ವಾಸ ಯೋಗ್ಯರಾದ ವ್ಯಕ್ತಿಗಳಾಗಿದ್ದಾರೆ.ರಬೀಅ ಬಿನ್ ಅನಸ್ ಎಂಬವರು ಬಸರ ನಿವಾಸಿಯೂ ತಾಬಿವುಗಳ ಪೈಕಿ ಉನ್ನತರೂ ಆಗಿದ್ದಾರೆ.ಅಬೂ ಮುಹಮ್ಮದ್ (ರ) ಹೇಳುತ್ತಾರೆ; ನಾನು ನನ್ನ ತಂದೆಯೊಂದಿಗೆ ಮತ್ತು ಅಬೂ ಝುರ್ ಅರೊಂದಿಗೆ ಅವರ ಬಗ್ಗೆ ಕೇಳಿದಾಗ ಸತ್ಯವಂತರೆಂದು ಉತ್ತರಿಸಿದರು.
(ಸುನನುಲ್ ಕುಬ್ರಾ)

ಇಮಾಮ್ ಬೈಹಖಿ ಅಲ್ಲದೇ ಹಲವಾರು ಇಮಾಮರುಗಳು ಈ ಹದೀಸನ್ನು ಸಹೀಹ್ ಎಂದು ಹೇಳಿದ್ದಾರೆ.
ಇಮಾಮ್ ಹಾಫಿಲ್ ಹೈಸಮೀ (ರ) ಹೇಳುತ್ತಾರೆ;

 وعن انس ما زال رسول الله صلي الله عليه وسلم يقنت في الفجر حتي فارق الدنيا.رواه احمد والبزار بنحوه .ورجاله موثقون.
(مجمع الزوايد)

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ್ ಖುನೂತ್ ಓದುತ್ತಿದ್ದರು.
ಇದನ್ನು ಇಮಾಮ್ ಅಹ್ಮದ್ , ಬಝ್ಝಾರ್ ,ವರದಿ ಮಾಡಿದ್ದಾರೆ.ಇದರ ವರದಿಗಾರರು ವಿಶ್ವಸ್ಥರಾಗಿದ್ದಾರೆ.
(ಮಜ್ ಮಉಝ್ಝವಾಯಿದ್ )

ಒಂದು ವೇಳೆ ಈ ಹದೀಸ್ ಲಯೀಫ್ ಆಗಿದ್ದರೆ ಇಮಾಮ್ ಬೈಹಖಿಯವರೇ ಅದನ್ನು ಹೇಳುತ್ತಿದ್ದರು. ಮಾತ್ರವಲ್ಲ ಇಮಾಮ್ ಬೈಹಖಿ (ರ) ಈ ಹದೀಸನ್ನು ಸಹೀಹ್ ಎಂದೇ ಹೇಳಿದ್ದಾರೆ.
ಸುಬಹಿ ನಮಾಝಿನಲ್ಲಿ ಖುನೂತ್ ಓದುವುದು ಬಿದ್ ಅತ್ ಆಗಿದ್ದರೆ ಇಮಾಮ್ ಬೈಹಖಿ (ರ) ಈ ಹದೀಸನ್ನು ಖುನೂತ್ ಗೆ ಆಧಾರವಾಗಿ ವರದಿ ಮಾಡುತ್ತಿರಲಿಲ್ಲ.(ಇಮಾಮ್ ಬೈಹಖಿ ಪ್ರಸ್ತುತ ಹದೀಸ್ ವರದಿ ಮಾಡಿದ ಅಧ್ಯಾಯವನ್ನು ಮೇಲೆ ವಿವರಿಸಿದ್ದೇನೆ.)
ಇಮಾಮ್ ಬೈಹಖಿಯವರ ಪ್ರಸ್ತುತ ಹದೀಸಿನ ಕುರಿತು ಇಮಾಮ್ ಇಬ್ನ್ ಹಜರ್ (ರ) ರವರ ಗ್ರಂಥದಲ್ಲಿ ಲಹೀಫೆಂದು ಹೇಳಿದ್ದಾರೆಂದು ಒಬ್ಬ ಮೌಲವಿ ಬರೆದುದನ್ನು ಓದಲು ಸಾಧ್ಯವಾಯಿತು.
ಪವಿತ್ರ ಖುರ್ ಆನಿಗೆ ಮತ್ತು ಹದೀಸಿಗೆ ದುರ್ವ್ಯಾಖ್ಯಾನ ನೀಡುವುದು, ಹದೀಸನ್ನು ದುರ್ಬಲಗೊಳಿಸುವುದು ,ಕಿತಾಬಿನ ಇಬಾರತ್ ಕದ್ದು ಅರ್ಧ ಓದುವುದು ವಹ್ಹಾಬಿಗಳ ನಿತ್ಯ ಶೈಲಿಯಾಗಿ ಬಿಟ್ಟಿದೆ.ಇಲ್ಲೂ ಕೂಡಾ ಅದೇ ಸಂಭವಿಸಿದೆ.ಇಮಾಮ್ ಇಬ್ನ್ ಹಜರ್ (ರ)ಪ್ರಸ್ತುತ ಹದೀಸಿನಲ್ಲಿರುವ ವರದಿಗಾರರಾದ ಅಬೂ ಜಅಫರ್ ಎಂಬವರ  ಕುರಿತು ತನ್ನ "ತಹ್ದೀಬುತ್ತಹ್ದೀಬಿ" ನಲ್ಲಿ ಹಲವಾರು ಇಮಾಮರುಗಳು ಹೇಳಿದ ಹೇಳಿಕೆಗಳನ್ನು ಉದ್ಧರಿಸಿದ್ದಾರೆ.ಹಲವಾರು ಇಮಾಮರುಗಳು ಅವರ ಕುರಿತು ಸತ್ಯವಂತರೆಂದು ಹೇಳಿದ್ದನ್ನು ಅದರಲ್ಲೇ ಕಾಣಬಹುದು.ಇದನ್ನು ಮುಚ್ವಿಟ್ಟು ಅಜ್ಞಾನಿ ತನ್ನ ಬೇಳೆ ಬೇಯಿಸಲು ಶ್ರಮಿಸಿದ್ದಾನೆ.
ಪ್ರಸ್ತುತ ಗ್ರಂಥದಲ್ಲಿ ಇಮಾಮ್ ಇಬ್ನ್ ಹಜರ್ (ರ) , ಅಬೂಜಾಫರ್ ಎಂಬವರ ಕುರಿತು ಇಮಾಮರುಗಳು ಹೇಳಿದ್ದನ್ನು ವಿವರಿಸುವುದು ನೋಡಿ,
(ಮೌಲವಿ ಕದ್ದ ಭಾಗ)
قال اسحاق بن منصور عن يحي بن معين كان ثقة.
ಇಬ್ನ್ ಮಯೀನ್ ರಿಂದ ಇಬ್ನ್ ಇಸ್ ಹಾಖ್ (ರ) ಹೇಳುತ್ತಾರೆ;
ಅವರು ವಿಶ್ವಾಸ ಯೋಗ್ಯರು.
وقال ابن ابي خيثمة عن بن معين صالح.

ಇಬ್ನ್ ಅಬೀ ಕೈಸಮ ಹೇಳುತ್ತಾರೆ; ಅವರು ಸ್ವೀಕಾರ್ಯರು.
وقال الدوري عن  بن معين ثقة
 وهو يغلط فيما يروي عن مغيرة .

ಇಬ್ನ್ ಮಯೀನ್ ರಿಂದ ಇಮಾಮ್ ದವ್ ರೀ ಹೇಳುತ್ತಾರೆ;ಅವರು ವಿಷ್ವಾಸ ಯೋಗ್ಯರು.
ಮುಗೀರತ್ (ರ) ರಿಂದ ವರದಿ ಮಾಡಿದವುಗಳಲ್ಲಿ ಪ್ರಮಾದ ಸಂಭವಿಸಿದೆ.(ಖುನೂತ್ ನ ಹದೀಸ್ ಅವರಿಂದ ವರದಿ ಮಾಡಿದ ಹದೀಸ್ ಅಲ್ಲ.)
وقال محمد بن عثمان بن ابي شيبة عن علي بن المديني كان عندنا ثقة.
ಮುಹಮ್ಮಮದ್ ಬಿನ್ ಉಸ್ಮಾನ್ (ರ) ಹೇಳುತ್ತಾರೆ;
"ಅವರು ವಿಶ್ವಾಸಯೋಗ್ಯರು."
وقال بن عمار ثقة .
ಇಬ್ನ್ ಅಮ್ಮಾರ್ ಹೇಳಿದರು;
" ಅವರು ವಿಶ್ವಸ್ಥರು."
وقال ابو حاتم : ثقة صدوق صالح الحديث.
ಅಬೂ ಹಾತಿಮ್ ಹೇಳಿದರು;
"ಅವರು ಹದೀಸಿಗೆ ಅರ್ಹತೆಯಿರುವವರು"

وقال بن عدي : له احاديث صالحة
"ಅವರಿಗೆ ಸ್ವೀಕಾರ್ಹವಾದ ಹದೀಸುಗಳಿವೆ."
وقال بن سعد: كان  ثقة.
ಇಬ್ನ್ ಸ ಅದ್ (ರ) ಹೇಳುತ್ತಾರೆ; ಅವರು ವಿಶ್ವಸ್ಥರು"
 (ತಹ್ದೀಬುತ್ತಹ್ದೀಬ್ )

ಇನ್ನೂ ಕೂಡಾ ಅಬೂ ಜ ಅಫರ್ ಎಂಬವರ ವಿಶ್ವಾಸಯೋಗ್ಯರು ಎಂಬುವುದಕ್ಕೆ  ಹಲವಾರು ಉದ್ಧರಣಿಗಳಿವೆ.ಲೇಖನ ಧೀರ್ಘವಾಗುವ ಭಯದಿಂದ ಇಷ್ಟಕ್ಕೆ ಸೀಮಿತಗೊಳಿಸುತ್ತೇನೆ.

ಮಾತ್ರವಲ್ಲ ,ಒಂದು ಹದೀಸಿನ ಕುರಿತು ಲಹೀಫ್ ಅಥವಾ ಸ್ವಹೀಹ್ ಎಂದು ಹೇಳಲು ಹಾಫಿಲ್ ಗಳಾದ ಮುಹದ್ದಿಸ್ ಗಳಿಗೆ ಮಾತ್ರ ಅಕಾಶವಿದ್.ಅದು ಬಿಟ್ಟು ಕಂಡ ಕಂಡವರಿಗೆಲ್ಲಾ ಹದೀಸನ್ನು ಲಹೀಫ್ ಗೊಳಿಸುವ ಅರ್ಹತೆ ಇಲ್ಲ.ಈ ವಿಷಯವನ್ನು ಇಮಾಮ್ ಸುಯೂಥಿ (ರ) ತನ್ನ"ಅಲ್ ಫಿಯ" ದಲ್ಲಿ  ವಿವರಿಸಿದ್ದಾರೆ.ಹದೀಸಿನ ಕುರಿತು ಬಾಲಪಾಠವಿಲ್ಲದ ವಹ್ಹಾಬಿಗಳು ಏನು ಹೇಳಿದರೂ ಆಶ್ಚರ್ಯಪಡಬೇಕಾಗಿಲ್ಲ.

ಖುನೂತಿನ ಕುರಿತಿರುವ ಹದೀಸ್ ಗಳೆಲ್ಲವೂ ಲಹೀಫ್ ಆಗಿದ್ದರೆ(ವಹ್ಹಾಬಿಗಳ ವಾದ ಪ್ರಕಾರ) ಇಮಾಮರುಗಳು ಖುನೂತು ಸುನ್ನತ್ತೆಂದು ಗ್ರಂಥಗಳಲ್ಲಿ ಹೇಳುತ್ತಿರಲಿಲ್ಲ.
ಶಾಫಿಈ ಮದ್ಸ್ ಹಬ್ ನ ಎಲ್ಲಾ ಗ್ರಂಥಗಳಲ್ಲಿ ಖುನೂತ್ ಸುನ್ನತ್ತಿದೆಯೆಂದೂ ಒಂದುವೇಳೆ ಖುನೂತ್ ಮರೆತು ಹೋದರೆ ಸಹ್ ವಿನ ಸುಜೂದಿನಿಂದ ಅದು ಪರಿಹಸಲ್ಪಡುತ್ತದೆ ಎಂದು ಹೇಳುವಾಗ ಈ ಇಮಾಮರುಗಳೆಲ್ಲರೂ ಬಿದತ್ ನ ಪ್ರಚಾರಕರಾಗಿದ್ದರೇ?

ಒಟ್ಟಿನಲ್ಲಿ ಖುನೂತ್ ನ ಹದೀಸ್ ವರದಿ ಮಾಡಿದ ಅಬೂ ಜ ಅಫರ್ ಎಂಬವರು ವಿಶ್ವಾಸ ಯೋಗ್ಯರಾಗಿದ್ದಾರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಇಮಾಮರುಗಳು ಒಂದು ಹೇಳಿಕೆಯನ್ನು ಹೇಳಿದರೆ ಮುಸ್ಲಿಮರಿಗೆ ಅದು ಬಿಟ್ಟು ಅಧುನಿಕ  ವಹ್ಹಾಬಿಗಳ ಸಂಶೋಧನೆಯ ಅಗತ್ಯವಿಲ್ಲ.
ಮನಬಂದಂತೆ ಹದೀಸನ್ನು ದುರ್ಬಲ ಗೊಳಿಸಿದ ಅಲ್ಬಾನಿ ಎಂಬ ಅಲ್ಪಜ್ಞಾನಿಯೋ ಇನ್ನಿತರ ಇಬ್ನ್ ಬಾಝ್ ನಂತಹ ವಹ್ಹಾಬಿಗಳ ಮಾತಿಗೆ ಮುಸ್ಲಿಮರು ಬೆಲೆ ಕಲ್ಪಿಸಬೇಕಾದ ಆವಶ್ಯಕತೆಯಿಲ್ಲ.
---------------------------
ಇಮಾಮ್ ದಾರ್ ಖುತ್ ನಿಯ ಸುನನ್ ನಲ್ಲಿ ವರದಿ ಮಾಡಿದ ಹದೀಸ್ ನೋಡಿ;
عن انس بن مالك قال :ما زال رسو الله صلي الله عليه وسلم يقنت في الفجر حتي فارق الدنيا
(سنن الدار قطني)

ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು"
(ದಾರು ಖುತ್ ನಿ 2/39)

ಅದೇ ರೀತಿ ಇಮಾಮ್ ಬೈಹಖೀ (ರ) ತನ್ನ ಮ ಅರಿಫತು ಸುನನಿ ವಲ್ ಆಸಾರ್ 2/78 ನಲ್ಲಿ ಕೂಡಾ ಈ ಹದೀಸನ್ನು ವರದಿ ಮಾಡಿದ್ದಾರೆ.

ಇಮಾಮ್ ದಾರು ಖುತ್ ನೀ ವರದಿ ಮಾಡಿದ ಮೇಲಿನ ಹದೀಸಿನ ಕುರಿತು ಇಮಾಮ್ ಖುರ್ಥುಬೀ (ರ) ಸ್ವಹೀಹ್ ಎಂದು ಹೇಳಿದ್ದಾರೆ.
(ಖುರ್ಥುಬೀ 4/129)
"وروي الدارقطني باسناد صحيح عن انس انه قال : ما زال رسول الله صلي الله عليه وسلم يقنت في صلاة الغداة حتي فارق الدنيا". (قرطبي 4/129)

ಇಮಾಮ್ ಸಂಶುದ್ದೀನುಲ್ ಕರ್ಮಾನೀ (ರ) ಹೇಳುತ್ತಾರೆ;
"وقال الطبري الصواب فيه  ان يقال صح عن النبي صلي الله عليه وسلم انه قنت علي قتلة القراء اماشهرا او اكثر في كل صلاة مكتوبة وصح ايضا انه لم يزل يقنت  في صلاة الصبح حتي فارق الدنيا  فيقول اذا نابت المسلمين نائبة كان القنوت حسنا في الصلوات كلها والا في الصبح.
(  كرماني علي البخاري 6/97)

ಇಮಾಮ್ ತ್ವಬ್ರೀ (ರ) ಹೇಳುತ್ತಾರೆ;
"ಈ ವಿಷಯದಲ್ಲಿರುವ  ವಾಸ್ತವಿಕತೆ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು, ಖುರ್ ಆನ್ ಕಂಠಪಾಠ ಮಾಡಿದ ಸ್ವಹಾಬಿಗಳನ್ನು ವಧಿಸಿದ ಶತ್ರುಗಳಿಗೆ ವಿರುದ್ಧವಾಗಿ ಒಂದು ತಿಂಗಳು ಅಥವಾ ಹೆಚ್ಚು ತಿಂಗಳು ಗಳ ಕಾಲ ಎಲ್ಲಾ ಪರ್ಳ್ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು.
ಸುಬಹಿ ನಮಾಝಿನಲ್ಲಿ ಎಲ್ಲಾ ದಿವಸವೂ ವಫಾತ್ ತನಕ ಖುನೂತ್ ಓದಿ ನಮಾಝ್ ನಿರ್ವಹಿಸಿದ್ದರು ಎಂದು ಸ್ವಹೀಹಾದ ಹದೀಸಿನಲ್ಲಿ ಸಾಬೀತಾಗಿದೆ.
ಮುಸ್ಲಿಮರಿಗೆ ಯಾವುದಾದರೊಂದು ಸಂಕಷ್ಟ ಬಂದರೆ ಎಲ್ಲಾ ನಮಾಝಿನಲ್ಲೂ ಅದಿಲ್ಲದಿದ್ದರೆ ಸುಬಹಿ ನಮಾಝಿನಲ್ಲಿ ಮಾತ್ರ ಖುನೂತ್ ಓದಿ ನಮಾಝ್ ನಿರ್ವಹಿಸುವುದಾಗಿದೆ ಉತ್ತಮ.
(ಕರಮಾನೀ ಅಲಲ್ ಬುಖಾರಿ 6/97)

ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದೂ ಖುನೂತ್ ಓದಿ ನಮಾಝ್ ನಿರ್ವಹಿಸುದಾಗಿದೆ ಉತ್ತಮವೆಂದು ಈ ಉದ್ಧರಣಿಯಿಂದಲೂ ಸ್ಪಷ್ಟವಾಯಿತು.

ಇಮಾಮ್ ಅಬ್ದುರ್ರಝಾಕ್(ರ)ವರದಿ ಮಾಡಿದ ಒಂದು ಹದೀಸ್ ಹೀಗಿದೆ;
"عن انس بن مالك قال ما زال رسول الله صلي الله عليه وسلم  يقنت في الفجر حتي فارق الدنيا.
(مصنف عبد الرزاق)

ಅನಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ  ವಫಾತ್ ತನಕ ಖುನೂತ್ ಓದುತ್ತಿದ್ದರು"
(ಮುಸನ್ನಫ್ ಅಬ್ದುರ್ರಝ್ಹಾಕ್ 3/110 )

ಇಮಾಮ್ ಇಬ್ನ್ ಅಬೀ ಶೈಬ ವರದಿ ಮಾಡಿದ ಹದೀಸ್ ನೋಡಿ;
"عن انس ان النبي صلي الله عليه وسلم قنت في الفجر.
(مصنف ابن ابي شيبة 2/211)

ಅನಸ್ (ರ) ವರದಿ ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು"
(ಮುಸನ್ನಫ್ ಇಬ್ನ್ ಅಬೀ ಶೈಬ)

ಇಮಾಮ್ ಬಗವೀ (ರ) ಹೇಳುತ್ತಾರೆ;
"اخبرنا أبو سعد أحمد بن محمد الحميدي ، أنا الحاكم أبو عبد الله الحافظ ، نا أبو بكر محمد بن عبد الله الشافعي ، نا محمد بن إسماعيل السلمي ، نا أبو نعيم ، نا أبو جعفر الرازي ، عن الربيع ، عن أنس ، قال : ما زال رسول الله صلى الله عليه وسلم يقنت في صلاة الصبح حتى فارق الدنيا.

ಅನಸ್ (ರ) ಹೇಳುತ್ತಾರೆ;" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿಯೇ ಸುಬಹಿ ನಮಾಝ್ ನಿರ್ವಹಿಸುತ್ತಿದ್ದರು"

قال الحاكم : وإسناد هذا الحديث حسن ،
ಇಮಾಮ್ ಹಾಕಿಂ  ಹೇಳುತ್ತಾರೆ;
ಈ ಹದೀಸಿನ ಪರಂಪರೆ ಹಸನ್ ಆಗಿದೆ".

وروى شعبة ، عن عمرو بن مرة ، قال : سمعت ابن أبي ليلى ، يحدث عن البراء ، عن النبي صلى الله عليه وسلم أنه كان يقنت في الصبح .
ಬರ್ರಾಅ (ರ) ಹೇಳುತ್ತಾರೆ ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು"

وعن الأسود قال : صليت خلف عمر في السفر والحضر ما لا أحصي ، فكان يقنت في صلاة الفجر.
(شرح السنة للبغوي 3/124)

ಅಸ್ ವದ್ (ರ) ಹೇಳುತ್ತಾರೆ;
"ನಾನು ಉಮರ್ (ರ) ರೊಂದಿಗೆ ಯಾತ್ರೆಯಲ್ಲಿ ಮತ್ತು ಊರಿನಲ್ಲಿ ಲೆಕ್ಕವಿಲ್ಲದಷ್ಟು ಸಲ ನಮಾಝ್ ಮಾಡಿದ್ದೇನೆ.ಅವರು(ಉಮರ್ (ರ) ) ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು."
(ಶರಹುಸ್ಸುನ್ನ 3/124)
-----------------------------
ಇಮಾಮ್ ಬೈಹಖೀ (ರ) ಅನಸ್ (ರ) ರಿಂದ ಈ ರೀತಿ ವರದಿ ಮಾಡುತ್ತಾರೆ;
"عن انس بن مالك رضي الله عنه قال: صليت خلف رسول الله صلي الله عليه وسلم فقنت وخلف عمر فقنت وخلف عثمان فقنت"
(سنن الكبري)
ಅನಸ್ (ರ)  ಹೇಳುತ್ತಾರೆ;
ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಾಗೂ ಉಮರ್ (ರ),ಉಸ್ಮಾನ್ (ರ) ಹಿಂದೆ ನಿಂತು ನಮಾಝ್ ಮಾಡಿದ್ದೇನೆ.ಅವರೆಲ್ಲರೂ ಖುನೂತ್ ಓದಿದ್ದರು"
(ಸುನನುಲ್ ಕುಬ್ರಾ 3/43)

ಇನ್ನೊಂದು ಹದೀಸ್ ನೋಡಿ;
"حدثنا العوام بن حمزة  قال: سألت ابا عثمان عن القنوت في الصبح قال بعد الركوع ،قلت عمن قال عن ابي بكر وعمر وعثمان رضي الله عنه"
(سنن الكبري 3/43)

ಅವ್ವಾಮ್ ಬಿನ್ ಹಂಝ (ರ) ಹೇಳುತ್ತಾರೆ;
ನಾನು ಅಬೂ ಉಸ್ಮಾನ್ ರೊಂದಿಗೆ ಖುನೂತ್ ನ ಬಗ್ಗೆ ಕೇಳಿದಾಗ ಅವರು ಹೇಳಿದರು,
"ರುಖೂಅ ನ ಬಳಿಕ ಖುನೂತ್ ನಿರ್ವಹಿಸಬೇಕು"
ಆವಾಗ ನಾನು ಕೇಳಿದೆ,
"ನೀವು ಇದನ್ನು ಯಾರಿಂದ ತಿಳಿದು ಹೇಳುತ್ತೀರಿ?"
ಅದಕ್ಕೆ ಅವರು "ಅಬೂಬಕರ್ (ರ) , ಉಮರ್ (ರ) , ಉಸ್ಮಾನ್ (ರ) ರವರಿಂದ ಹೇಳುತ್ತಿದ್ದೇನೆ " ಎಂದು ಉತ್ತರಿಸಿದರು.
(ಸುನನುಲ್ ಕುಬ್ರಾ 3/43)

ಈ ಹದೀಸಿನ ಕುರಿತು ಇಮಾಮ್ ಬೈಹಖಿಯವರೇ ಈ ರೀತಿ ಹೇಳುತ್ತಾರೆ;
"هذا اسناد حسن ويحيى بن سعيد لا يحدث الا عن الثقات
(سنن البيهقي )
ಈ ಹದೀಸಿನ ಪರಂಪರೆ ಹಸನ್ ಆಗಿದೆ,ಇದರ
ಪರಂಪರೆಯಲ್ಲಿರುವ ಯಹ್ಯ ಬಿನ್ ಸಈದ್ ಎಂಬವರು ವಿಶ್ವಸ್ಥರಿಂದಲ್ಲದೇ ಹದೀಸ್ ವರದಿ ಮಾಡಿಲ್ಲ.
(ಸುನನುಲ್ ಕುಬ್ರಾ)
ಲಕ್ಷಕ್ಕೂ ಮಿಕ್ಕ ಹದೀಸ್ ಕಂಠಪಾಠ ಮಾಡಿದ ಇಮಾಮ್ ಬೈಹಖಿಯವರೇ ಹದೀಸ್ ಯೋಗ್ಯವಾದುದು ಎಂದು ಹೇಳುವಾಗ ದುರ್ವ್ಯಾಖ್ಯಾನ ವೀರರಾದ ವಹ್ಹಾಬಿಗಳ ಸರ್ಟಿಫಿಕೇಟ್ ಮುಸ್ಲಿಂ ಸಮುದಾಯಕ್ಕೆ ಅಗತ್ಯವಿಲ್ಲ.

ಇಮಾಮ್ ದಾರು ಖುತ್ ನಿ ವರದಿ ಮಾಡಿದ ಹದೀಸ್ ಈ ರೀತಿ ಇದೆ ;
"عن انس : ان النبي صلي الله عليه وسلم قنت شهرا يدعوا عليهم ثم تركه ، فاما في الصبح فلم يزل يقنت حتي فارق الدنيا.
(دراقطني )

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶತ್ರುಗಳಿಗೆ ವಿರುಧ್ಧವಾಗಿ ಒಂದು ತಿಂಗಳ ಕಾಲ ಪ್ರಾರ್ಥಿಸಿದ ನಂತರ ಅದನ್ನು ನಿಲ್ಲಿಸಿದರು.
ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು"
(ಸುನನು ದಾರು ಖುತ್ ನಿ)

ಇಮಾಮ್ ನವವೀ (ರ) ಬರೆಯುತ್ತಾರೆ;
"اعلم ان القنوت في الصبح سنة للحديث الصحيح فيه
عن انس رضي الله عنه: ان رسول الله صلى الله عليه وسلم لم يزل يقنت في الصبح حتى فارق الدنيا. رواه الحاكم ابو عبد الله في كتاب الاربعين، وقال: حديث صحيح.
(الاذكار 124)

ಖಂಡಿತವಾಗಿಯೂ ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಾಗಿದೆ.ಅನಸ್ (ರ) ರಿಂದ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದುತ್ತಿದ್ದರು ಎಂದು ಇಮಾಮ್ ಹಕಿಂ ವರದಿ ಮಾಡಿದ  ಸ್ವಹೀಹಾದ ಹದೀಸ್ ಅದಕ್ಕೆ ಪುರಾವೆಯಾಗಿದೆ"
(ಅಲ್ ಅದ್ಸ್ ಕಾರ್ 124)

ಇಮಾಮ್ ನವವೀ (ರ) ಹೇಳುತ್ತಾರೆ;
"واحتج اصحابنا بحديث انس رضي الله عنه " ان النبي صلي الله عليه وسلم قنت شهرا يدعوا عليهم ثم ترك فاما في الصبح فلم يزل يقنت حتي فارق الدنيا حديث صحيح رواه جماعة من الحفاظ وصححوه .ومن نص علي صحته الحافظ ابو عبد الله محمد بن علي البلخي والحاكم ابو عبد الله في مواضع من كتبه والبيهقي ورواه الدارقطني من طرق باساند صحيحة.
(شرح المهذب 3/504)

"ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳುಗಳ ಕಾಲ ಶತ್ರುಗಳಿಗೆ ವಿರುದ್ಧ ಪ್ರಾರ್ಥಿಸಿದ್ದರು.ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು " ಎಂಬ ಹದೀಸನ್ನು ನಮ್ಮ ಅಸ್ ಹಾಬ್ ಖುನೂತ್ ಗೆ ಪುರಾವೆ ಮಾಡಿದ್ದಾರೆ.
ಪ್ರಸ್ತುತ ಹದೀಸನ್ನು ಹಲವಾರು ಹಾಫಿಲ್ ಗಳು ವರದಿ ಮಾಡಿದ್ದೂ , ಅದು ಸ್ವಹೀಹ್ ಆಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.ಹಾಫಿಲ್ ಅಬೂ ಅಬ್ದಿಲ್ಲಾಹಿ ಮುಹಮ್ಮದ್ ಬಿನ್ ಅಲಿಯ್ಯುಲ್ ಬಲ್ಖಿ, ಅಬೂ ಅಬ್ದಿಲ್ಲಾಹಿ ಹಾಕಿಂ , ಇಮಾಮ್ ಬೈಹಖೀ , ಇಮಾಮ್ ದಾರಖುತ್ ನಿ ಅವರಲ್ಲಿ ಪ್ರಮುಖರು.
(ಶರಹುಲ್ ಮಹದ್ದಬ್ 3/504)
ಇದೇ ವಿಷಯವನ್ನು ಇಮಾಮ್ ಸಂಶುದ್ದೀನುಲ್ ಕರ್ಮಾನಿ ತನ್ನ ಸ್ವಹೀಹುಲ್  ಬುಖಾರಿಯ ವ್ಯಾಖ್ಯಾನ ಗ್ರಂಥದಲ್ಲೂ (6/97) ವಿವರಿಸಿದ್ದಾರೆ.

ಜೀವಮಾನವಿಡೀ ದೀನಿಗಾಗಿ ಹೋರಾಡಿ , ಶಿರ್ಕ್ ಮತ್ತು ಬಿದ್ ಅತ್ ನ ನಿರ್ಮೂಲನೆಗಾಗಿ ನೂರಾರು ಗ್ರಂಥಗಳನ್ನು ಸಮರ್ಪಿಸಿದ  ಇಮಾಮ್ ನವವೀ (ರ) ರವರಂತಹಾ  ವಿಧ್ವಾಂಸರು ಖುನೂತ್ ನ ಬಗ್ಗೆ ಇಷ್ಟೆಲ್ಲಾ ಸ್ಪಷ್ಟವಾಗಿ ಖುನೂತ್ ಸುನ್ನತ್ತಿದೆಯೆಂದೂ ಅದಕ್ಕಾಗಿ ಅವರು ಹದೀಸುಗಳನ್ನು ವಿವರಿಸುವವಾಗ ಬುದ್ಧಿಯಿರುವ ಯಾವ ಮನುಷ್ಯನಿಗೂ ಸತ್ಯ ಮನದಟ್ಟಾಗಬಹುದು.
ಅಲ್ಲಾಹನು ಕೊಟ್ಟ ಬುದ್ಧಿಯನ್ನು ವಹ್ಹಾಬೀ ಕಛೇರಿಯಲ್ಲಿ ಅಡವಿಡದೆ ಸತ್ಯವನ್ನು ಅಂಗೀಕರಿಸುವ ಶ್ರೀಮಂತಿಕೆಯ ಮನಸ್ಸು ಮನುಷ್ಯನದ್ದಾಗಬೇಕು.
----------------------------
ಇಮಾಮ್ ದಾರಖುತ್ ನಿ ವರದಿ ಮಾಡುತ್ತಾರೆ;

عن الحسن عن انس بن مالك قال صليت مع رسول الله صلي الله عليه وسلم فلم يزل يقنت بعد الركوع في صلاة الغداة حتي فارقته -قال- وصليت خلف عمر بن الخطاب فلم يزل يقنت بعد الركوع في صلاة الغداة حتي فارقته.
(دارقطني 2/40 )
"ಅನಸ್ ಬಿನ್ ಮಾಲಿಕ್ (ರ) ರಿಂದ ಹಸನ್ (ರ) ವರದಿ ,ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ನಮಾಝ್ ಮಾಡಿದ್ದೇನೆ.ಅವರು ಸುಬಹಿ ನಮಾಝಿನಲ್ಲಿ ರೂಕೂಅ ನ ನಂತರ ವಫಾತ್ ತನಕ ಖುನೂತ್ ಓದಿದ್ದರು.ಉಮರ್ (ರ)ರೊಂದಿಗೂ ನಮಾಝ್ ಮಾಡಿದ್ದೇನೆ.ಅವರೂ ಕೂಡಾ ಖುನೂತ್ ಓದಿದ್ದರು".
(ದಾರಖುತ್ ನಿ 2/40 )
---------------------------
عن الحسن عن انس قال قنت مع رسول الله صلي الله عليه وسلم وعمر حتي فارقتهما.
(دار قطني 2/40)
"ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ
,ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಮತ್ತು ಉಮರ್ (ರ)ರೊಂದಿಗೆ ಖುನೂತ್ ಓದಿದ್ದೇನೆ".
(ದಾರಖುತ್ ನಿ 2/40 )
------------------------ ---
عن علي وعمار انهما صليا خلف النبي صلي الله عليه وسلم -فقنت في صلاة الغداة.
(دارقطني 2/40)

ಅಲಿಯ್ಯ್ (ರ) ಮತ್ತು ಅಮ್ಮಾರ್ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದ್ದರು.ಸುಬಹಿ ನಮಾಝಿನಲ್ಲಿ ಅವರು ಖುನೂತ್ ಓದಿದ್ದರು".
(ದಾರಖುತ್ ನೀ 2/40)
------------------------ -----
عن سعيد بن عبد العزيز فيمن نسي القنوت في صلاة الصبح قال يسجد سجدتي السهو.
ಸಈದ್ ಬಿನ್ ಅಬ್ದುಲ್ ಅಝೀಝ್ (ರ) ಹೇಳುತ್ತಾರೆ;
"ಸುಬಹಿ ನಮಾಝಿನಲ್ಲಿ ಖುನೂತ್ ಮರೆತರೆ ಸಹ್ ವಿನ ಎರಡು ಸುಜೂದು ನಿರ್ವಹಿಸಬೇಕು".
(ದಾರಖುತ್ ನೀ 2/40)
------------------------ ---
عن ابن عباس قال ما زال رسول الله صلي الله عليه وسلم يقنت حتي فارق الدنيا
ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿದ್ದರು".
(ದಾರಖುತ್ ನೀ 2/41).
------------------------ ----
عن عطاء ان رسول الله صلي الله عليه وسلم قنت في الفجر
 ಅತ್ವಾಅ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದಿದ್ದರು"
(ಮುಸನ್ನಫ್ ಇಬ್ನ್ ಅಬೀಶೈಬ 2/211)
------------------------ ---
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಸ್ವಹಾಬಿಗಳು ಖುನೂತ್ ಓದಿದ ಕುರಿತು ವರದಿಯಾದ ಕೆಲವೊಂದು ಹದೀಸ್ ಗಳನ್ನು ನೀವು ಓದಿದಿರಿ.
ಈ ಹದೀಸ್ ಗಳನ್ನು ಸ್ವಹೀಹ್ ಎಂದು ಹೇಳಿದವರ ಉದ್ದರಣಿಗಳನ್ನು ಮೇಲೆ ವಿವರಿಸಲಾಗಿದೆ.
ಇದೂ ಅಲ್ಲದೇ ನೂರಾರು ಹದೀಸ್ ಗಳು ಈ ವಿಷಯದಲ್ಲಿ ಇವೆ.ಎಲ್ಲಾ ಹದೀಸ್ ಗಳ ಆಶಯ ಒಂದೇ ಆಗಿರುವುದರಿಂದ ಎಲ್ಲವನ್ನೂ ಇಲ್ಲಿ ನೀಡಲು ಬಯಸುವುದಿಲ್ಲ.
ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತೆಂದು ತಿಳಿಯಲು ಈ ಹದೀಸ್ ಗಳೇ ಧಾರಾಳ ಸಾಕು.
ಖುನೂತ್ ಬಿದ್ ಅತ್ ಆಗಿದ್ದರೆ (ಸುಬಹಿ ನಮಾಝಿನ ನಂತರ(ಸುನ್ನಿಗಳು ಎಲ್ಲಿ ಖನೂತ್ ಓದುವರು ಎಂದೂ ಕೂಡಾ ತಿಳಿಯದ ಶತ ಮೂರ್ಖ 😀😀) ಖುನೂತ್ ಓದುವುದು ವ್ಯಭಿಚಾರಕ್ಕಿಂತಲೂ ಮಹಾ ಪಾಪವೆಂದು ಮುಜಾಹಿದ್ ಬಾಲುಶ್ಶೇರಿ ಮೌಲವಿ ಹೇಳಿದ್ದಾನೆ.)ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಅನುಯಾಯಿಗಳು ಅದನ್ನು ನಿರ್ವಹಿಸುತ್ತಿರಲಿಲ್ಲ.ಮಾತ್ರವಲ್ಲ ಆ ಅನಾಚಾರವನ್ನು ಇಮಾಮರು ಅವರ ಗ್ರಂಥಗಳಲ್ಲಿ ಉಲ್ಲೇಖಿಸುತ್ತಿರಲಿಲ್ಲ. ಶಾಫಿಈ ಮದ್ಸ್ ಹಬ್ ನಲ್ಲಿ ಖುನೂತ್ ಸುನ್ನತ್ತೆಂದು ಹೇಳದ ಯಾವ ಇಮಾಮರೂ ಕೂಡಾ ಇಲ್ಲ.
ವಹ್ಹಾಬಿಗಳ ವಾದ ಪ್ರಕಾರ ಇಮಾಮರುಗಳು ಮಹಾಪಾಪವನ್ನು ಪ್ರಚಾರ ಮಾಡಿದರೇ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.
 ---------------------------
*_ನಾಲ್ಕು_ಖಲೀಫರು_ಮತ್ತು _ತಾಬಿವುಗಳು...

ಇಮಾಮ್ ನವವೀ (ರ) ಬರೆಯುತ್ತಾರೆ;
وممن قال به ابو بكر الصديق وعمر بن الخطاب وعثمان وعلي وابن عباس والبراء بن عازب رضي الله عنهم رواه البيهقي باسانيد صحيحة وقال به من التابعين فمن بعدهم خلائق وهو مذهب ابن ابي ليلي والحسن ابن صالح ومالك
(شرح المهذب 3/504)

ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಿದೆ ಎಂದು ಹೇಳಿದವರಲ್ಲಿ  ಅಬೂ ಬಕರ್ (ರ) ,ಉಮರ್ (ರ),ಉಸ್ಮಾನ್ (ರ),ಅಲಿಯ್ಯ್ (ರ),ಇಬ್ನ್ ಅಬ್ಬಾಸ್ (ರ),ಬರಾಅ ಬಿನ್ ಆಝಿಬ್ (ರ),ಮುಂತಾದವರು ಪ್ರಮುಖರು.ಇಮಾಮ್ ಬೈಹಖೀ (ರ) ಇದನ್ನು ಸಹೀಹಾದ ಪರಂಪರೆಯೊಂದಿಗೆ ವರದಿ ಮಾಡಿದ್ದಾರೆ.ತಾಬಿವುಗಳ ಪೈಕಿ ಹಲವಾರು ಜನರು ಇದೇ ಅಭಿಪ್ರಾಯ ತಾಳಿದ್ದಾರೆ.ಇಮಾಮ್ ಅಬ್ನು ಅಬೀ ಲೈಲ, ಇಮಾಮ್ ಹಸನ್ ಬಿನ್ ಸ್ವಾಲಿಹ್ , ಇಮಾಮ್ ಮಾಲಿಕ್ ರವರ ಮದ್ಸ್ ಹಬ್ ಕೂಡಾ ಇದುವೇ ಆಗಿದೆ"
(ಶರಹುಲ್ ಮುಹದ್ದಬ್ 3/123)
--------------------------------
ಇಮಾಮ್ ಶಾಫಿಈ (ರ)ಹೇಳುತ್ತಾರೆ;
وقد قنت بعد رسول الله صلي الله عليه وسلم في الصبح ابو بكر وعمر وعلي كلهم بعد الركوع
(معرفة اللسنن والاثار 3/123)
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದ ನಂತರ ಅಬೂಬಕರ್ (ರ),ಉಮರ್ (ರ),ಅಲಿಯ್ಯ್ (ರ) ಖುನೂತ್ ಓದಿದ್ದರು.
(ಮ ಅರಿಫತುಸ್ಸುನನಿ ವಲ್ ಆಸಾರ್ 3/124)
--------------------------------
ನೂತನವಾದಿಗಳ ಅಂಗೀಕೃತ ವ್ಯಕ್ತಿಯಾಗಿದ್ದಾರೆ ಅಬ್ದುಲ್ ರಹೀಮ್ ಮುಬಾರಕ್
 ಪೂರಿ ಎಂಬವರು.
ಅವರ ತುಹ್ಫತುಲ್ ಅಹ್ ವದ್ಸೀ ಎಂಬ ಗ್ರಂಥದಲ್ಲಿ ಯಾವೆಲ್ಲ ಸ್ವಹಾಬಿಗಳು ಮತ್ತು ತಾಬಿವುಗಳು ಖುನೂತ್ ಓದುತ್ತಿದ್ದರು ಎಂಬ ಒಂದು ದೊಡ್ಡ ಪಟ್ಟಿಯನ್ನೇ ಅವರು ಪ್ರಸ್ತುತ ಗ್ರಂಥದಲ್ಲಿ ನೀಡಿದ್ದಾರೆ.
ಅದರಲ್ಲಿ ಅವರು ಹೇಳುವ ಕೆಲವೊಂದು ವಾಖ್ಯವನ್ನು ನೋಡಿ;
فمذهب اكثر الناس من الصحابة والتابعين فمن بعدهم من علماء الامصار علي اثبات القنوت فيها قال : فممن روينا ذلك عنه من الصحابة الخلفاء الراشدون ايو بكر وعمر وعثمان وعلي رضوان الله تعالي عليهم اجمعين....
ومن التابعين سعيد بن المسيب والحسن بن الحسن ومحمد بن سيرين رضي الله عنهم
(تحفة الاحوذي 2/432)

" ಸ್ವಹಾಬಿಗಳ ಮತ್ತು ತಾಬಿವುಗಳ ಪೈಕಿ ಒಂದು ದೊಡ್ಡ ವಿಭಾಗವು ಸುಬಹಿ ನಮಾಝಿನಲ್ಲಿ ಖುನೂತ್ ಇದೆ ಎಂಬ ಅಭಿಪ್ರಾಯದವರಾಗಿದ್ದರು.ಅವರಲ್ಲಿ ಅಬೂಬಕರ್ (ರ), ಉಮರ್ (ರ), ಉಸ್ಮಾನ್ (ರ) , ಅಲಿಯ್ಯ್ (ರ) ಮುಂತಾದವರು ಪ್ರಮುಖರು.
ಸಈದ್ (ರ), ಹಸನ್ ಇಬ್ನುಲ್ ಹಸನ್(ರ) ಇಬ್ನ್ ಸೀರೀನ್ (ರ) ಮುಂತಾದವರು ತಾಬಿವುಗಳಲ್ಲಿ ಪ್ರಮುಖರು.
(ತುಹ್ಫತುಲ್ ಅಹ್ ವದ್ಸೀ 2/432)
 ------------------------------
ಇಮಾಮ್ ಝುರ್ಖಾನೀ (ರ) ಬರೆಯುತ್ತಾರೆ;
"وحكي الحافظ العراقي  ان ممن قال بذلك الخلفاء الاربعة وابو موسي وابن عباس والبراء
ومن التابعين الحسن البصري وحميد الطويل والربيع بن خيثمة وسعيد بن المسيب وطاوس وغيرهم
ومن الائمة مالك والشافعي وابن مهدي والاوزاعي
ولا يرد انه روي عن الخلفاء الاربع وغيرهم انهم لم يكونوا يقنتون لانه اذا تعارض اثبات ونفي قدم الاثبات علي النفي.
(شرح الزرقاني 1/332)
ಹಾಫಿಲುಲ್ ಇರಾಖೀ (ರ) ಉಲ್ಲೇಖಿಸುತ್ತಾರೆ;
ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದು  ನಾಲ್ಕು ಖಲೀಫರುಗಳು  ಹಾಗೂ ಅಬೂಮೂಸಲ್ ಅಶ್ ಅರೀ (ರ),ಇಬ್ನ್ ಅಬ್ಬಾಸ್ (ರ),ಬರ್ರಾಅ (ರ)  ಮುಂತಾದ ಸ್ವಾಹಾಬಿಗಳು ಹೇಳಿದ್ದಾರೆ.
ತಾಬಿವುಗಳ ಪೈಕಿ ಹಸನುಲ್ ಬಸರೀ(ರ),ಹುಮೈದ್ (ರ),ರಬೀಅ (ರ),ಸಈದ್ (ರ),ತ್ವಾಊಸ್ (ರ), ಹಾಗೂ ಇನ್ನಿತರರೂ ಇಮಾಮರುಗಳ ಪೈಕಿ ಇಮಾಮ್ ಮಾಲಿಕ್ (ರ),ಇಮಾಮ್ ಶಾಫಿಈ (ರ),ಇಬ್ನು ಮಹ್ದೀ (ರ),ಇಮಾಮ್ ಅವ್ ಝಾಈ (ರ) ಮೊದಲಾದವರೂ ಹೇಳಿದ್ದಾರೆ.
ನಾಲ್ಕು ಖಲೀಫರು ಖುನೂತ್ ನಿರ್ವಹಿಸಿಲ್ಲ ಎಂಬ ವರದಿಯು ಇದಕ್ಕೆ  ವಿರೋಧವಾಗಲಾರದು.ಕಾರಣ ಒಂದು ವಿಷಯದಲ್ಲಿ اثبات ( ಸಾಬೀತು) ಹಾಗೂ نفي (ನಿರಾಕರಣೆ) ವರದಿಯಾದಲ್ಲಿ  اثبات ಪರಿಗಣಿಸಬೇಕೆಂದಾಗಿದೆ ನಿಯಮ. (ಖುನೂತ್ ಓದಿದ್ದಾರೆ ಎಂಬುವುದು ಸಾಪೀತುಪಡಿಸುವಿಕೆಯಾಗಿದೆ.ಓದಿಲ್ಲ ಎಂಬುವುದು ನಿರಾಕರಣೆಯಾಗಿದೆ.ಆದ್ದರಿಂದ ಓದಿದ್ದರು ಎಂಬ ಸಾಬೀತುಪಡಿಸುವಿಕೆಯನ್ನು ಪರಿಗಣಿಸಬೇಕು ಎಂದರ್ಥ.)
(ಶರಉಝ್ಝುರ್ಖಾನೀ 1/322)
------------------------------
ವಹ್ಹಾಬಿಗಳು   ಶೌಕಾನಿ ಯ ಕುರಿತು ಅವರ ಅಧಿಕೃತ ಪತ್ರಿಕೆಯಾದ "ಶಬಾಬ್" 2002  ನೇ ಫೆಬ್ರವರಿ ಪತ್ರಿಕೆಯ 22 ನೇ ಪುಟದಲ್ಲಿ "ಮುಜದ್ದಿದ್" ಎಂದು ಅವರ "ನೈಲುಲ್ ಅವ್ ತಾರ್" ಎಂಬ ಗ್ರಂಥವು
ಮುಸಿಮರಿಗೆ ಪ್ರಶಸ್ತ ಗ್ರಂಥವೆಂದೂ ಬಣ್ಣಿಸಿದ್ದಾರೆ.
ಆ ಶೌಕಾನಿಯ "ನೈಲುಲ್ ಅವ್ ತಾರ್" ನಲ್ಲಿ ಹೇಳುವುದು ನೋಡಿ;
وقد صح عنهم القنوت  واذا تعارض الاثبات والنفي قدم المثبت وحكاه عن اربعة من التابعين
(نيل الاوطار 2/345)

ಅವರಿಂದ (ನಾಲ್ವರು ಖಲೀಫರಿಂದ) ಖುನೂತ್ ಸ್ತಿರಪಟ್ಟಿದೆ.اثبات ಹಾಗೂ نفي   ವೈರುಧ್ಯವಾದ ರೀತಿಯಲ್ಲಿ ಬಂದರೆ اثبات ನ್ನು  ಪರಿಗಣಿಸಬೇಕಾಗಿದೆ.
(ನೈಲುಲ್ ಅವ್ತಾರ್ 2/345)
------------------------------
ವಾಸ್ತವ ಸಂಗತಿ ಈ ರೀತಿಯಿರುವಾಗ ಸತ್ಯವನ್ನು ಮರೆಮಾಚಿ ತಾವೇ ಅಂಗೀಕರಿಸುವ ನಾಯಕರು ಹೇಳುವುದನ್ನು ಕೂಡಾ ಕೇಳದ ವಹ್ಹಾಬಿಗಳು ವಾಸ್ತವದಲ್ಲಿ ಯಹೂದಿಗಳ ಏಜೆಂಟರೇ ಆಗಿದ್ದಾರೆ.
ವಹ್ಹಾಬಿಗಳೇ ಶೌಕಾನಿಯನ್ನು ಮುಜದ್ದಿದ್ ಎಂದು ಘೋಷಿಸಿದ ನಂತರ ಶೌಕಾನಿಯ ಮಾತು ಅವರಿಗೆ ವೇಧವೇ ಆಗಬೇಕು.
ಇವರ ವಾದ ಪ್ರಕಾರ ಶೌಕಾನಿ ಲಹೀಫ್ ಆದ ಹದೀಸ್ ವರದಿ ಮಾಡಿ ಬಿದ್ ಅತ್ ಪ್ರಚಾರ ಮಾಡಿದರೆ?
ಈ ಪ್ರಶ್ನೆಗೆ ವಹ್ಹಾಬಿಗಳು ಉತ್ತರಿಸಬೇಕು.
-------------------------------
ಇಮಾಮ್ ಮುಝ್ಝಿ (ರ) ಬರೆಯುತ್ತಾರೆ;
"وقال عمرو بن علي سمعت عبد الصمد بن عبد الوارث يقول سمعت خالدا العبد يقول قال الحسن صليت خلف ثمانية وعشرين بدريا كلهم يقنت في الصبح بعد الركوع فقلت ممن سمعت هذا ؟
قال من ميمون المرئي فلقيت ميمونا المرئي فسالته فقال قال الحسن صليت خلف ثمانية وعشرين بدريا كلهم يقنت في الصبح بعد الركوع".
(تهذيب الكمال 29/229)

ಅಮ್ರ್ ಬಿನ್ ಅಲಿಯ್ಯ್ ಹೇಳುತ್ತಾರೆ;
"ಅಬ್ದುಸ್ಸಮದ್ ಬಿನ್ ಅಬ್ದುಲ್ ವಾರಿಸ್ (ರ) ಹೇಳಿದರು ,ಹಸನ್ (ರ)ಬದ್ರ್ ಯುದ್ಧದಲ್ಲಿ ಭಾಗವಹಿಸಿದ  28 ಸ್ವಹಾಬಿಗಳ ಹಿಂದೆ ನಿಂತು ನಾನು ನಮಾಝ್ ಮಾಡಿದ್ದೇನೆ.ಅವರು ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು".
(ತಹ್ದೀಬುಲ್ ಕಮಾಲ್ 29/228)
------------------------------
ವಹ್ಹಾಬಿಗಳ ವಾದ ಪ್ರಕಾರ ಆ ಸ್ವಹಾಬಿಗಳು ನಮಾಝಿನಲ್ಲಿ ಬಿದ್ ಅತ್ ಮಾಡಿದರೇ?
ಅವರಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸುನ್ನತ್ ತಿಳಿದಿಲ್ಲವೇ?.

ಇಮಾಮ್ ಬಗವೀ (ರ) ಹೇಳುತ್ತಾರೆ ;
 قد اتفق أهل العلم على ترك القنوت في غير صلاة الصبح
من الفرائض ، روي عن أنس بن سيرين ، عن أنس بن مالك أن
النبي ( صلى الله عليه وسلم ) قنت شهرا ثم تركه.
(شرح السنة  3/123)

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ಅಲ್ಲದ ನಮಾಝಿನಲ್ಲಿ ಖುನೂತ್ ಉಪೇಕ್ಷಿಸಿದರು ಎಂಬುವುದರಲ್ಲಿ ವಿಧ್ವಾಂಸರು ಒಮ್ಮತಾಭಿಪ್ರಾಯ ತಾಳಿದ್ದಾರೆ.ಅನಸ್ (ರ)ರಿಂದ ಈ ರೀತಿ ವರದಿಯಾಗಿದೆ,
"ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ತಿಂಗಳ ಕಾಲ ಖುನೂತ್ ಓದಿದ್ದರು.ನಂತರ ತ್ಯಜಿಸಿದರು".
(ಶರಹುಸ್ಸುನ್ನ 3/123)
-------------------------------
📖📖📖
*_ಇಮಾಮರುಗಳು _ಏನು _ಹೇಳುವರು.

ಇಮಾಮ್ ಶಾಫಿಈ (ರ) ಹೇಳುತ್ತಾರೆ;
ويقنت في صلاة الصبح بعد الركعة الثانية قنت رسول الله صلي الله عليه وسلم ولم يترك علمناه القنوت في الصبح قط.
(الام )

ಎರಡನೇಯ ರುಕೂಅ ನ ನಂತರ ಸುಬಹಿ ನಮಾಝಿನಲ್ಲಿ ಖುನೂತ್ ಓದಬೇಕು.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖುನೂತ್ ಓದುತ್ತಿದ್ದರು.ಅದು ಸುಬಹಿ ನಮಾಝಲ್ಲಾಗಿತ್ತು ಎಂದು ನಾವು ತಿಳಿದಿದ್ದೇವೆ.
(ಕಿತಾಬುಲ್ ಉಮ್ಮ್ )
-------------------------------
ಇಮಾಮ್ ನವವೀ  (ರ) ಹೇಳುತ್ತಾರೆ;
ويسن القنوت في اعتدال ثانية الصبح (منهاج )
ಸುಬಹಿ ನಮಾಝಿನ 2 ನೇಯ ರಕ ಅತಿನ ಇಅತಿದಾಲ್ ನಲ್ಲಿ ಖುನೂತ್ ಸುನ್ನತ್ತಾಗಿದೆ"
(ಮಿನ್ ಹಾಜ್)
-------------------------------
ಇಮಾಂ ರಾಫಿಈ (ರ) ಹೇಳುತ್ತಾರೆ;
ويستحب القنوت في الصبح
(شرح الكبير )
ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಾಗಿದೆ.
(ಶರಹುಲ್ ಕಬೀರ್ )
-------------------------------
 ಇಮಾಮ್ ನವವೀ (ರ) ಹೇಳುತ್ತಾರೆ;
والسنة في صلاة الصبح ان يقنت في الركعة الثانية
(شرح المهذب )
ಸುಬಹಿ ನಮಾಝಿನ ಎರಡನೇಯ ರಕ ಅತಿನಲ್ಲಿ ಖುನೂತ್ ನಿರ್ವಹಿಸುವುದು ಸುನ್ನತ್ತಾಗಿದೆ"
(ಶರಹುಲ್ ಮಹದ್ದಬ್ )
-------------------------------

ಇಮಾಮ್ ಇಬ್ನ್ ಹಜರ್ (ರ) ಬರೆಯುತ್ತಾರೆ;
ويسن القنوت في اعتدال ثانية الصبح للخبر الصحيح (تحفة المحتاج )
ಸುಬಹಿ ನಮಾಝಿನ ಎಅರಡನೆಯ ರಕ ಅತಿನ ಇಅತಿದಾಲ್ ನಲ್ಲಿ ಖುನೂತ್ ಸುನ್ನತ್ತಾಗಿದೆ.ಅದಕ್ಕೆ ಆಧಾರ ಸ್ವಹೀಹ್ ಆದ ಹದೀಸ್ ಆಗಿದೆ.
(ತುಹ್ ಫತುಲ್ ಮುಹ್ತಾಜ್ )
ಇದನ್ನೇ ನಿಹಾಯತುಲ್ ಮುಹ್ತಾಜಿನಲ್ಲೂ  ,ಮುಗ್ನಿಲ್ ಮುಹ್ತಾಜಿನಲ್ಲೂ ಕಾಣಬಹುದಾಗಿದೆ.
-------------------------------
ಇಮಾಮ್ ಝೈನುದ್ದೀನ್ ಮಕ್ದೂಮ್ (ರ) ಹೇಳುತ್ತಾರೆ;
وسن قنوت بصبح (فتح المعين )
"ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಾಗಿದೆ"
(ಫತ್ ಹುಲ್ ಮುಈನ್ )
-------------------------------
ನಾನಿಲ್ಲಿ ಒಂದೆರಡು ಕಿತಾಬುಗಳ ಉದ್ಧರಣಿಯನ್ನು ನೀಡಿದ್ದೇನಷ್ಟೆ.
ಶಾಫಿಈ ಮದ್ಸ್ ಹಬಿನ ಎಲ್ಲಾ ಗ್ರಂಥದಲ್ಲೂ ಖುನೂತ್ ಸುನ್ನತ್ತೆಂದು ಹೇಳಲಾಗಿದೆ.ಒಂದು ವೇಳೆ ಖುನೂತ್ ಮರೆತು ಹೋದಲ್ಲಿ ಸಹ್ ವಿನ ಸುಜೂದಿನಿಂದ ಅದನ್ನು ಪರಿಹರಿಸಲ್ಪಡುತ್ತದೆಯೆಂದೂ ಎಲ್ಲಾ ಗ್ರಂಥದಲ್ಲೂ ವಿವರಿಸಲಾಗಿದೆ.
ಖುನೂತ್ ಸುನ್ನತ್ತಿಲ್ಲ.ಹೊರತು ಅದು ಬಿದತ್ ಎಂದು ಹೇಳಿದ ಶಾಫಿಈ ಮದ್ಸ್ ಹಬಿನ ಯಾವುದೇ ಒಂದು ಗ್ರಂಥವನ್ನು ತೋರಿಸಲು ವಹ್ಹಾಬಿಗಳಿಗೆ ಸಾಧ್ಯವಿದೆಯೇ?
ಲಕ್ಷಗಟ್ಟಲೆ ಹದೀಸ್ ಕಂಠ ಪಾಠ ಮಾಡಿದ ಮುಹದ್ದಿಸ್ ಗಳು ಖುನೂತ್ ಸುನ್ನತ್ತಿದೆಯೆಂದು ವಿವರಿಸುವಾಗ ಆ ಇಮಾಮರುಗಳ ಗ್ರಂಥದ ಒಂದು ಸಾಲನ್ನು ಕೂಡಾ ತಪ್ಪಿಲ್ಲದೆ ಓದಲು ತಿಳಿಯದ ವಹ್ಹಾಬೀ ಮೌಲವಿಗಳ ಸಂಶೋಧನೆ ಮುಸ್ಲಿಂ ಸಮುದಾಯಕ್ಕೆ ಅಗತ್ಯವಿಲ್ಲ.
------------------------------

ವಹ್ಹಾಬಿಗಳ ಪುರಾವೆಗಳು ಮತ್ತು  ಅದಕ್ಕಿರುವ ಉತ್ತರಗಳು.

ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಿದೆಯೆಂದು ಈಗಾಗಲೇ ಪುರಾವೆ ಸಹಿತ ಸಮರ್ಥಿಸಿದ್ದನ್ನು ನೀವು ಓದಿದ್ದೀರಿ.
ಖುನೂತ್ ಬಿದ್ಅತ್ ಎಂದು ಚಿತ್ರೀಕರಿಸಲು ವಹ್ಹಾಬಿಗಳು ಓದುವ ಕೆಲವೊಂದು ಹದೀಸ್ ಗಳಿವೆ.ಆ ಹದೀಸ್ ಗಳು ಮತ್ತು ಇಮಾಮರುಗಳು  ಅದಕ್ಕೆ ನೀಡಿದ ಉತ್ತರವೇನೆಂದು ನೋಡೋಣ.

*ಹದೀಸ್* *ನಂ:1.*
عن انس رضي الله عنه ان رسول الله صلي الله عليه وسلم قنت شهرا  يدعوا علي احياء من احياء العرب ثم تركه.(مسلم 3/194)
ಅನಸ್ (ರ) ಹೇಳುತ್ತಾರೆ; ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ತಿಂಗಳ ಕಾಲ ಶತ್ರುಗಳಿಗೆ ವಿರುದ್ಧವಾಗಿ ಖುನೂತ್ ಓದಿ ಪ್ರಾರ್ಥಿಸಿದರು.ನಂತರ ಅದನ್ನು ತ್ಯಜಿಸಿದರು.
(ಮುಸ್ಲಿಂ 3/195)
-------------------------------
*ಹದೀಸ್* *ನಂ:2.*
عن انس بن مالك ان رسول الله صلي الله عليه وسلم قنت شهرا بعد الركوع في صلاة الفجر يدعو علي بني عصية
(مسلم 3/193)

ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳುಗಳ ಕಾಲ ಸುಬಹಿ ನಮಾಝಿನಲ್ಲಿ ರೂಕೂಅ ನ ನಂತರ ಬನೂ ಉಸಯ್ಯ ಗೋತ್ರದ ವಿರುದ್ಧ ಪ್ರಾರ್ಥಿಸಿದರು.
(ಮುಸ್ಲಿಂ )
-------------------------------
*ಹದೀಸ್* *ನಂ:3*
عن انس قال سألت  عن القنوت قبل الركوع او بعد الركوع فقال قبل الركوع .قال ،قلت فان ناسا يزعمون ان رسو الله صلي الله عليه وسلم قنت بعد الركوع .فقال انما قنت  رسو الله صلي الله عليه وسلم شهرا يدعو علي اناس قتلوا اناسا من اصحابه يقال لهم القراء.
(صحيح مسلم 3/193)

ಆಸಿಮ್ (ರ) ಹೇಳುತ್ತಾರೆ;
"ನಾನು ಅನಸ್ (ರ) ರೊಂದಿಗೆ ಖುನೂತ್ ನ ಬಗ್ಗೆ ಕೇಳಿದಾಗ ಅವರು ಹೇಳಿದರು," ಖುನೂತ್ ರುಕೂಅ ನ ಮುಂಚೆಯಾಗಿದೆ".ಆಗ ನಾನು ಕೇಳಿದೆ,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರುಕೂಅ ನ ನಂತರ ಖುನೂತ್ ಓದಿದ್ದರು ಎಂದು ಕೆಲವರು ವಾದಿಸುತ್ತಾರಲ್ಲವೇ?.ಆಗ ಅನಸ್ (ರ) ಹೇಳಿದರು;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳುಗಳ ಕಾಲ  ಖುರ್ ಆನ್ ವಿಧ್ವಾಂಸರಾದ ಸ್ವಹಾಬಿಗಳನ್ನು ಕೊಂದ ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸಿದ್ದರು"
(ಮುಸ್ಲಿಂ 3/193)

*ಈ ಮೂರು ಹದೀಸಿಗೆ *ಉತ್ತರ:*

ಇಮಾಮ್ ನವವೀ (ರ) ಹೇಳುತ್ತಾರೆ;
" وأما الحواب عن حديث أنس وأبى هريرة رضي الله عنهما في قوله ثم تركه فالمراد ترك الدعاء على أولئك الكفار ولعنتهم فقط لا ترك جميع القنوت أو ترك القنوت في غير الصبح. وهذا التأويل متعين لان حديث أنس في قوله " لم يزل يقنت في الصبح
حتى فارق الدنيا " صحيح صريح فيجب الجمع بينهما وهذا الذى ذكرناه متعين للجمع وقد روى البيهقي باسناده عن عبد الرحمن بن مهدي الامام انه قال انما ترك اللعن ويوضح هذا التأويل رواية أبي هريرة السابقة وهي قوله " ثم ترك الدعاء لهم "
(شرح المهذب 3/505)

ಅನಸ್ (ರ) ಮತ್ತು ಅಬೂಹುರೈರ (ರ) ರವರ ಹದೀಸಿನಲ್ಲಿ " ನಂತರ ಖುನೂತ್ ತ್ಯಜಿಸಿದರು" ಎಂಬುವುದರ ಅರ್ಥ ಕುಫ್ಫಾರ್ ಗಳ ವಿರುದ್ಧ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಯನ್ನು ತ್ಯಜಿಸಿದರು ಅಥವಾ ಸುಬಹಿಯೇತರ ನಮಾಝಿನಲ್ಲಿ ಖುನೂತ್ ತ್ಯಜಿಸಿದರು ಎಂದಾಗಿದೆ.ಅದಲ್ಲದೇ ಖುನೂತ್ ಸಂಪೂರ್ಣ ತ್ಯಜಿಸಿದರು ಎಂದರ್ಥವಲ್ಲ.ಈ ಹೇಳಿದ ವ್ಯಾಖ್ಯಾನ ಪ್ರಸ್ತುತ ಹದೀಸಿಗೆ  ನಿರ್ಣಯವಾಗಿದೆ.ಏಕೆಂದರೆ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿದ್ದರೆಂದು ಅನಸ್ (ರ) ವರದಿ ಮಾಡಿದ ಹದೀಸಿನಲ್ಲಿ ಸ್ವಹೀಹಾಗಿ ವರದಿಯಾಗಿದೆ.ಮಾತ್ರವಲ್ಲ , ಇಮಾಮ್ ಬೈಹಖೀ (ರ) ರವರ ತನ್ನ ಗ್ರಂಥದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶತ್ರುಗಳ ವಿರುದ್ಧ ಶಾಪ ಪ್ರಾರ್ಥನೆಯನ್ನು ತ್ಯಜಿಸಿದರೆಂದು ವರದಿ ಮಾಡಿದ್ದಾರೆ"
(ಶರಹುಲ್ ಮುಹದ್ದಬ್ 3/505)

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖುನೂತ್ ತ್ಯಜಿಸಿದರೆಂದು ಹೇಳಿದ್ದು ಸುಬಹಿ ನಮಾಝಿನಲ್ಲಿ ಮಾಡುತ್ತಿದ್ದ ಖುನೂತ್ ನ ಬಗ್ಗೆಯಲ್ಲವೆಂದೂ ಅದು ಶತ್ರುಗಳ ನಿರ್ವಹಿಸುತ್ತಿದ್ದ ಪ್ರಾರ್ಥನೆಯನ್ನು ತ್ಯಜಿಸಿದರು ಎಂದಾಗಿದೆ ಅದರ ಅರ್ಥ ಎಂದು ಈ ವ್ಯಾಖ್ಯಾನದಿಂದ ಸ್ಪಷ್ಟವಾಯಿತು.

ಇದೇ ವ್ಯಾಖ್ಯಾನವನ್ನು ಇಮಾಮ್ ನವವಿಯವರು ಶರಹ್ ಮುಸ್ಲಿಮಿನಲ್ಲೂ
(ಶರಹು ಮುಸ್ಲಿಂ 3/193), ಇಮಾಮ್ ಇಬ್ನ್ ಅಲ್ಲಾನ್ (ರ) ತನ್ನ ಫುತೂಹಾತುರಬ್ಬಾನಿಯ್ಯದ (2/286) ರಲ್ಲೂ ಇಮಾಮ್ ಬಗವೀ (ರ) ತನ್ನ ಶರಹುಸ್ಸುನ್ನ (3/123) ರಲ್ಲೂ ವಿವರಿಸಿದ್ದಾರೆ.
---------------------------

*ಹದೀಸ್* *ನಂ* *4*

اخبرنا ابو مالك قال قلت لابي يا ابت انك قد صليت خلف رسول الله صلي الله عليه وسلم وابي بكر وعمر وعثمان وعلي هاهنا بالكوفة قريبا من خمس سنين اكانوا يقنتون قال اي بني محدث
(مسند احمد 3/472، ترمذي ، نسائي 1/164، ابن ماجه 87 )

ಅಬೂ ಮಾಲಿಕ್ (ರ) ಹೇಳುತ್ತಾರೆ;
ನಾನು ನನ್ನ ತಂದೆಯೊಂದಿಗೆ ಕೇಳಿದೆ, ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ , ಅಬೂಬಕರ್ , ಉಮರ್ , ಉಸ್ಮಾನ್ ,ಅಲೀ (ರ) ರವರ್ ಹಿಂದೆ ನಮಾಝ್ ಮಾಡಿದ್ದೀರಲ್ಲವೇ .ಅವರು ಯಾರಾದರು ಖುನೂತ್ ಓದಿದ್ದರೇ?
ಆಗ ತಂದೆ ಹೇಳಿದರು;
" ಅದು ಹೊಸತಾಗಿ ನಿರ್ಮಿಸಲ್ಪಟ್ಟದ್ದಾಗಿದೆ"
(ಮುನದ್ ಅಹ್ಮದ್ , ನಸಾಈ, ತುರ್ಮುದ್ಸೀ)

*ಉತ್ತರ*:
ಇಮಾಮ್ ಇಬ್ನ್ ಅಲ್ಲಾನ್ (ರ) ಹೇಳುತ್ತಾರೆ;
واجاب ائمتنا بان الذين اثبتوا معهم زيادة علم فوجب تقديمهم لا سيما وهم اكثر.قلت : قال الحافظ ولعل النبي صلي الله عليه وسلم  ومن ذكر اسروه فلم يسمعه ابو مالك وكان بعيدا او نسي.
(فتوحات الربانية 2/287)

ನಮ್ಮ ಉಲಮಾಅ ಪ್ರಸ್ತುತ ಹದೀಸಿಗೆ ನೀಡಿದ ಉತ್ತರ ಈ ರೀತಿಯಾಗಿದೆ."ಖುನೂತ್ ಇದೆ ಎಂದು ಹೇಳಿದವರ ಬಳಿ ಹೆಚ್ಚು ಜ್ಞಾನವಿರುವುದರಿಂದ ಅವರ ಮಾತನ್ನು ಸ್ವೀಕರಿಸುವುದು ಖಡ್ಡಾಯವಾಗಿದೆ.ಮಾತ್ರವಲ್ಲ ಅವರ(ಖುನೂತ್ ಇದೆ ಎನ್ನುವವರ) ಸಂಖ್ಯೆಯು ಅಧಿಕವಾಗಿದೆ.
ಇಮಾಮ್ ಹಾಫಿಲ್ (ರ) ಹೇಳಿದರು;"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಹೆಸರು ಹೇಳಲ್ಪಟ್ಟ ಆ ಸ್ವಹಾಬಿಗಳು ಮೆಲು ದ್ವನಿಯಲ್ಲಿ ಖುನೂತ್ ಓದಿರುವುದರಿಂದಲೋ ಅಥವಾ ಅವರು ಇಮಾಮರಿಂದ ದೂರ ನಿಂತ ಕಾರಣದಿಂದ ಕೇಳದಿರಲು ಸಾಧ್ಯತೆ ಇದೆ.ಅಥವಾ ಖುನೂತ್  ಮರೆತಿರಲೂಬಹುದು.
(ಫುತೂಹಾತುರ್ರಬ್ಬಾನಿಯ್ಯ 2/287)

ನೂತನವಾದಿಗಳ ಅಂಗೀಕೃತ ನೇತಾರ ಮುಬಾರಕ್ ಫೂರಿಯವರು ಈ ಹದೀಸಿನ ಕುರಿತು ಹೇಳುವುದು ನೋಡಿ;
وقد صح عنهم االقنوت  واذا تعارض الاثبات والنفي قدم المثبت
(تحفة الاحوذي)

ಅವರಿಂದ  ಖುನೂತ್ ಸ್ತಿರಪಟ್ಟಿದೆ.اثبات (ಓದಿದ್ದಾರೆ)
ಹಾಗೂ نفي  (ಓದಿಲ್ಲ) ವೈರುಧ್ಯವಾದ ರೀತಿಯಲ್ಲಿ ಬಂದರೆ اثبات ನ್ನು  ಪರಿಗಣಿಸಬೇಕಾಗಿದೆ.
( ತುಹ್ಫತುಲ್ ಅಹ್ವದ್ಸೀ 2/363)
-------------------------------
*ಹದೀಸ್ ನಂ 5 :*

ಇಮಾಮ್ ಅಹ್ಮದ್ (ರ) ವರದಿ ಮಾಡುತ್ತಾರೆ;
"حدثني عبد الله حدثني حسين بن محمد ثنا خلف عن ابي مالك قال : كان ابي قد صلي خلف رسول الله صلي الله عليه وسلم وهو ابن ست عشرة سنة وابي بكر وعمر وعثمان فقلت له اكانوا يقنتون قال : لا اي بني محدث
(احمد 27253، ترمذي نسائي ،ابن ماجه )
ಅಬೂ ಮಾಲಿಕ್ (ರ) ಹೇಳುತ್ತಾರೆ;
ನನ್ನ ತಂದೆ 16 ವರ್ಷ ಪ್ರಾಯವಿದ್ದಾಗಲೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದ್ದರು.ಅದೇ ರೀತಿ ಅಬೂ ಬಕರ್, ಉಮರ್, ಉಸ್ಮಾನ್ (ರ) ಹಿಂದೆಯೂ ನಮಾಝ್ ಮಾಡಿದ್ದರು.ಅವರು ಯಾರೂ ಕೂಡಾ ಖುನೂತ್ ಓದುತ್ತಿರಲಿಲ್ಲ.
ಅದು ನೂತನವಾಗಿ ನಿರ್ಮಿಸಲ್ಪಟ್ಟದ್ದಾಗಿದೆ.
(ಮುಸ್ನದ್ ಅಹ್ ಮದ್ )

*ಉತ್ತರ*

ಇಮಾಮ್ ಬೈಹಖೀ (ರ) ಹೇಳುತ್ತಾರೆ;
طارق بن اشيم الاشجعي لم يحفظه عمن صلي خلفه فرآه محدثا وقد حفظه غيره فالحكم له دونه
(سنن الكبري للبيهقي 3/58)

ತ್ವಾರಿಖ್ ಬಿನ್ ಅಶ್ ಯಮ್ ಅಲ್ ಅಶ್ಜಈ (ರ)
( ಮೇಲಿನ ಹದೀಸಿನಲ್ಲಿ ಹೇಳಿದ ಅಬೂ ಮಾಲಿಕ್ ರ ತಂದೆಯ ಹೆಸರಾಗಿದೆ ಇದು.)ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಹಾಗೂ ಇತರ ಸ್ವಹಾಬಿಗಳಿಂದ ಖುನೂತ್ ಕಂಠಪಾಠ ಮಾಡಿಲ್ಲ.ಆದ್ದರಿಂದಲೇ ಅವರು ಅದನ್ನು ನೂತನವಾಗಿ ನಿರ್ಮಿಸಲ್ಪಟ್ಟದ್ದೆಂದು ಹೇಳಿದರು.ಇವರಲ್ಲದ ಹಲವರು ಖುನೂತ್ ಕಂಠಪಾಠ ಮಾಡಿದವರಾಗಿದ್ದಾರೆ.ಆದುದರಿಂದ ಖುನೂತ್ ಇದೆ ಎನ್ನುವವರ ಮಾತು ಸ್ವೀಕಾರ್ಯವಾಗಿದೆ.
(ಸುನನುಲ್ ಬೈಹಖೀ 3/58)

ಮೇಲಿನ ಹದೀಸಿನ ಕುರಿತು
ಇಮಾಮ್ ನವವೀ (ರ) ಬರೆಯುತ್ತಾರೆ;
"والجواب عن حديث سعيد بن طارق ان رواية الذين اثبتوا القنوت معهم زيادة علم وهم اكثر.فوجب تقديمهم.
(شرح المهذب 3/503)

ಖುನೂತ್ ಸ್ಥಿರಪಡಿಸುವವರ ಸಂಖ್ಯೆ ಅಧಿಕವಿದೆ.ಮಾತ್ರವಲ್ಲ ಅವರ ಬಳಿ ಹೆಚ್ಚು ಜ್ಞಾನವೂ ಇರುವುದರಿಂದ ಅವರನ್ನು ಅಂಗೀಕರಿಸುವುಸು ಖಡ್ಡಾಯವಾಗಿದೆ ಎಂದು ತ್ವಾರಿಖ್ (ರ) ಹದೀಸಿಗೆ ಉತ್ತರಿಸಬಹುದಾಗಿದೆ.
(ಶರಹುಲ್ ಮುಹದ್ದಬ್ 3/503)

ಇಮಾಮ್ ತ್ವೀಬೀ (ರ) ಹೇಳುತ್ತಾರೆ;
"
لا يلزم من نفي هذا الصحابي نفي القنوت ،لانه شهادة بالنفي وقد  شهد جماعة بالاثبات مثل الحسن وابي هريرة وانس وابن عباس رضي الله عنهم وصحبهم مع رسول الله صلي الله عليه وسلم اكثر من صحبة هذا الصحابي وهو طارق بن اشيم فتكون شهادتهم اثبت.
(الكاشف عن حقائق السنن 4/232)

ತ್ವಾರಿಖ್ ಬಿನ್ ಅಶ್ ಯಮ್ ಎಂಬ ಸ್ವಹಾಬಿಯು ಖುನೂತ್ ನಿಷೇಧಿಸಿದರಿಂದ ಖುನೂತ್ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.ಕಾರಣ ಅವರು ಇಲ್ಲ ಎಂಬುವುದಕ್ಕೆ ಸಾಕ್ಷ್ಯ ನಿಂತಿದ್ದಾರೆ.ಖುನೂತ್ ಇತ್ತು ಎಂಬುವುದಕ್ಕೆ ಹಸನ್ , ಅಬೂಹುರೈರ, ಅನಸ್, ಇಬ್ನ್ ಅಬ್ಬಾಸ್ (ರ) ಮುಂತಾದ ಗಣ್ಯರು ಸಾಕ್ಷ್ಯ ವಹಿಸಿದ್ದಾರೆ. ತ್ವಾರಿಖ್ (ರ) ಗಿಂತ ಅತೀ ಹೆಚ್ಚು ಈ ಸ್ವಹಾಬಿಗಳಿಗೆ ಪ್ರವಾದಿ  ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸಂಪರ್ಕವಿದೆ.ಆದುದರಿಂದ ಆ ಸ್ವಹಾಬಿಗಳ ಮಾತನ್ನು ಅಂಗೀಕರಿಸಬೇಕಾಗಿದೆ.
(ಅಲ್ ಕಾಶಿಫ್ ಅನ್ ಅಖಾಯಿಕಿ ಸ್ಸುನನ್ 4/232)
ಮಿರ್ಖಾತುಲ್ ಮಫಾತೀಹ್ ನಲ್ಲೂ (2/166) ಇದನ್ನು ಕಾಣಬಹುದಾಗಿದೆ.

ಇದೇ ಆಶಯವನ್ನು ವಹ್ಹಾಬಿಗಳ ನೇತಾರ ಮುಬಾರಕ್ ಫೂರಿ ಹೇಳಿದ್ದನ್ನು ಮೇಲೆ ನೀವು ಓದಿದ್ದೀರಿ.
---------------------------
*ಹದೀಸ್* *ನಂ* *:06*
عن عبد الله قال : لم يقنت النبي الاشهرا واحدا ،لم يقنت قبله ولا بعده.
(مسند البزار 1569)

ಅಬ್ದುಲ್ಲಾ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳು ಮಾತ್ರ ಖುನೂತ್ ಓದಿದ್ದಾರೆ.ಅದಕ್ಕಿಂತ ಮುಂಚೆ ಓದಿಲ್ಲ,ಅದರ ನಂತರವೂ ಓದಿಲ್ಲ.
(ಮುಸ್ನದುಲ್ ಬಝ್ಝಾರ್ 1569)

ಈ ಹದೀಸಿನ ವರದಿಗಾರರ ಹೆಸರು ಈ ರೀತಿಯಾಗಿದೆ
"1:ಶರೀಕ್.(شريك)
2.ಅಬೂ ಹಂಝತ್ .(ابو حمزة)
3.ಇಬ್ರಾಹೀಂ .(ابراهيم)
4.ಅಲ್ಖಮತ್ .(علقمة)
5.ಅಬ್ದುಲ್ಲಾ (ರ)(عبد الله).

ಇದರಲ್ಲಿರುವ ಅಬೂ ಹಂಝ ಎಂಬವರು ದುರ್ಬಲಾಗಿದ್ದಾರೆ.
ಇಮಾಮ್ ಹೈಸಮೀ (ರ) ಹೇಳುತ್ತಾರೆ ;
"وفيه ابو حمزة الاعور القصاب وهو ضعيف (مجمع الزوائد 2/137)

ಇದರ ಪರಂಪರೆಯಲ್ಲಿ ಅಬೂ ಹಂಝ ಅಲ್ ಅ ಅವರ್ ಎಂಬವರು ಇದ್ದಾರೆ.ಅವರು ದುರ್ಬಲರಾಗಿದ್ದಾರೆ.
(ಮಜ್ ಮಉಝ್ಝವಾಯಿದ್ 2/137)
      -----------------
ಇಮಾಮ್ ಮುಝ್ಝಿ ಅವರ ಕುರಿತು ಹೇಳುತಾರೆ;
"وقال عبد الله بن احمد حنبل عن ابيه ابو حمزة صاحب ابراهيم ضعيف الحديث
وقال في موضع اخر متروك الحديث
وقال ابو بكر بن ابي خيثمة سألت يحي بن معين عن ميمون ابي حمزة القصاب فقال ليس بشيء لا يكتب حديثه
وقال محمد بن عثمان بن ابي شيبة سمعت يحي بن معين وسئل عن ابي حمزة صاحب ابراهيم فقال كان اسمه ميمون وليس بشيء...
وقال ابراهيم بن يعقوب الجوزجاني ابو حمزة ميمون صاحب ابراهيم ضعيف الحديث وكذلك الدار قطني
وقال البخاري ميمون ابو حمزة القصاب الاعور الكوفي ليس بذاك وقال في موضع اخر ضعيف ذاهب الحديث
وقال ابو حاتم ليس بقوي
وقال النسائي ميمون ابو حمزة يروي عن ابراهيم ليس بثقة.
وقال ابو بكر الخطيب لا تقوم به حجة.(تهذيب الكمال 29/240)

ಅಹ್ಮದ್ ಬಿನ್ ಹಂಬಲ್ ರವರ ಪುತ್ರರಾದ ಅಬ್ದುಲ್ಲಾ (ರ) ಹೇಳುತ್ತಾರೆ;ಅಬೂ ಹಂಝ ದುರ್ಬಲರಾಗಿದ್ದಾರೆ.ಅವರ ಹದೀಸ್ ಅಯೋಗ್ಯವಾಗಿದೆ.

ಅಬೂಬಕರ್ ಬಿನ್ ಕೈಸಮತ್ ಹೇಳಿದರು;
ನಾನು ಯಹ್ಯಬಿನ್ ಮುಯೀನ್ ರೊಂದಿಗೆ ಅವರ ಬಗ್ಗೆ ಕೇಳಿದಾಗ ಅವರು ದುರ್ಬಲರೆಂದು ಮತ್ತು ಅವರ ಹದೀಸ್ ಬರೆಯಕೂಡದೆಂದು  ಹೇಳಿದರು.

ಮುಹಮ್ಮದ್ ಬಿನ್ ಉಸ್ಮಾನ್ (ರ) ಹೇಳಿದರು;ನಾನು ಯಹ್ಯ ಬಿನ್ ಮುಯೀನ್ ರೊಂದಿಗೆ ಅಬೂ ಹಂಝ ರ ಕುರಿತು ಕೇಳಿದಾಗ ಅವರು ಸ್ವೀಕಾರ್ಹರಲ್ಲವೆಂದು ಹೇಳಿದರು.

ಇಬ್ರಾಹಿಮ್ ಬಿನ್ ಯ ಅಖೂಬ್ (ರ) ಹೇಳುತ್ತಾರೆ; ಅಬೂ ಹಂಝರವರು ದುರ್ಬಲರಾಗಿದ್ದಾರೆ.ಅದೇ ರೀತಿ ಇಮಾಮ್ ದರಖುತ್ ನಿ ಕೂಡಾ ಹೇಳಿದ್ದಾರೆ.

ಇಮಾಮ್ ಬುಖಾರಿ ಹೇಳುತ್ತಾರೆ ಅವರು ದುರ್ಬಲರಾಗಿದ್ದಾರೆ.

ಇಮಾಮ್ ಹಾತಿಮ್ ಹೇಳುತ್ತಾರೆ; ಅವರು ದುರ್ಬಲರಾಗಿದ್ದಾರೆ.

ಇಮಾಮ್ ನಸಈ ಹೇಳುತ್ತಾರೆ; ಅವರು ವಿಶ್ವಸ್ಥರಲ್ಲ.

ಅಬೂಬಕರ್ ಅಲ್ ಖತೀಬ್ (ರ) ಹೇಳುತ್ತಾರೆ; ಅವರು ಅವರನ್ನು ಸ್ವೀಕರಿಸಲ್ಪಡದು.
(ತಹ್ದೀಬುಲ್ ಕಮಾಲ್ 29/240)
     ----------------
ವಹ್ಹಾಬಿಗಳ ಅಂಗೀಕೃತ ನೇತಾರ ಹಾಫಿಲು ದಹಬೀ ಹೇಳುತ್ತಾರೆ;
ميمون ابو حمزة القصاب الكوفي التمار وقال احمد متروك الحديث
وقال الدارقطني ضعيف
وقال البخاري ليس بالقوي عندهم
وقال النسائي ليس بثقة
(ميزان الاعتدال 4/234)

ಮೈಮೂನ್ ಅಬೂ ಹಂಝ ಅಲ್ ಕಸ್ಸಾಬ್ ಎಂಬವರ ಕುರಿತಿ ಇಮಾಮ್ ಅಹ್ಮದ್ (ರ) ಹೇಳುತ್ತಾರೆ; ಅವರ ಹದೀಸ್ ಸ್ವೀಕರಿಸಲ್ಪಡದು.
ಇಮಾಮ್ ದಾರಖುತ್ ನೀ ಹೇಳುತ್ತಾರೆ,ಅವರು ದುರ್ಬಲರಾಗಿದ್ದಾರೆ.
ಅಬೂ ಹಾತಿಂ ಹೇಳುತ್ತಾರೆ;ಅವರು ವಿಶ್ವಸ್ಥರಲ್ಲ.
ಇಮಾಮ್ ನಸಾಈ ಹೇಳುತ್ತಾರೆ ; ಅವರು ವಿಶ್ವಾಸಯೋಗ್ಯರಾದ ವ್ಯಕ್ತಿಯಲ್ಲ.(
ಮೀಝಾನುಲ್ ಇಅತಿದಾಲ್ 4/234)
       -----------------
ಈ ಮೇಲೆ ಹೇಳಿದ ಹದೀಸ್ ಇಮಾಮ್ ಬಝ್ಝಾರ್ (ರ) ಕೂಡಾ ವರದಿ ಮಾಡಿದ್ದಾರೆ.
ಇಮಾಮ್ ಬಝ್ಝಾರ್ (ರ) ಮತ್ತೊಂದು ಸ್ಥಳದಲ್ಲಿ ಅನಸ್ (ರ) ರಿಂದ ಸ್ವಹೀಹ್ ಆದ ಹದೀಸೊಂದನ್ನು ವರದಿ ಮಾಡಿದ್ದಾರೆ.
ಅದು ಈ ರೀತಿಯಾಗಿದೆ.
عن انس ان رسول الله صلي الله عليه وسلم قنت حتي مات وابو بكر حتي مات وعمر حتي مات رواه البزار ورجاله موثوقون (مجمع الزوائد 2/139)
ಅನಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಅಬೂ ಬಕರ್ ,ಉಮರ್ (ರ) ಕೊನೆಯ ತನಕ ಖುನೂತ್ ಓದಿದ್ದರು.
(ಮಜ್ ಮಉಝ್ಝವಾಯಿದ್ 2/139)

ಈ ರೀತಿ ಇಮಾಮ್ ಬಝ್ಝಾರ್ (ರ) ವರದಿ ಮಾಡಿರುವಾಗ ಖುನೂತ್ ಇಲ್ಲ ಎಂದು ಹೇಳಿದ ಹದೀಸ್ ಲಈಫೆಂದೇ ತಿಳಿದು ಬರುತ್ತದೆ.

ಒಟ್ಟಿನಲ್ಲಿ ವಹ್ಹಾಬಿಗಳು ಪ್ರಸ್ತುತ ಹದೀಸಿನ ಅಧಾರದಲ್ಲಿ ಖುನೂತ್ ನಿಷೇಧಿಸುವುದಾದರೆ ಅವರಿಗೆ ಅದರಲ್ಲಿ ಪ್ರಮಾಣವಿಲ್ಲ.ಕಾರಣ ಆ ಹದೀಸ್ ದುರ್ಬಲವೆಂದು ಹಾಫಿಲ್ ಗಳಾದ ಮುಹದ್ದಿಸ್ ಗಳು ಹೇಳಿದ್ದನ್ನು ನೀವು ಓದಿದ್ದೀರಿ.
------------------------------
 ----------------
*ಹದೀಸ್ ನಂ 7:*

ಇಮಾಮ್ ಬೈಹಖೀ (ರ)ವರದಿ ;
"اخبرنا ابو عبد الله الحافظ اخبرني ابو الحسن العنزي ثنا عثمان بن سعيد ثنا موسي بن اسماعيل ثنا
همام عن قتادة عن ابي مجلز قال صليت مع ابن عمر صلاة الصبح فلم يقنت فقلت لابن عمر لا اراك تقنت قاللا احفظه عن احد من اصحابنا
(سنن البيهقي 3/58)

ಅಬೂ ಮಿಜ್ ಲಝ್ (ರ) ಹೇಳುತ್ತಾರೆ,
ನಾನು ಇಬ್ನ್ ಉಮರ್ (ರ) ರೊಂದಿಗೆ ಸುಬಹಿ ನಮಾಝ್ ಮಾಡಿದೆ.ಅವರು ಅದರಲ್ಲಿ ಖುನೂತ್ ಓದದಿರುವಾಗ ನಾನು ಅವರೊಂದಿಗೆ ' ನೀವು ಓದುವುದನ್ನು ನಾನು ಕಂಡಿಲ್ಲವಲ್ಲಾ ಎಂದು ಕೇಳಿದಾಗ ಇಬ್ನ್ ಉಮರ್ (ರ) ಹೇಳಿದರು, ಸ್ವಹಾಬಿಗಳಾರೂ ಖುನೂತ್ ಓದಿದ್ದಾಗಿ ನನಗೆ ನೆನಪಿಲ್ಲ.
(ಸುನನುಲ್ ಕುಬ್ರಾ 3/58)
   ---------------------

          *ಉತ್ತರ*

ಈ ಹದೀಸಿಗೆ ಇಮಾಮ್ ಬೈಹಖಿ ಯವರೇ ಉತ್ತರಿಸುವುದನ್ನು ನೋಡಿ,
نسيان  بعض الصحابة او غفلته عن بعض السنن لا يقدح في رواية من حفظه واثبته.
(سنن الكبري 3/58)

  ಕೆಲವು ಸುನ್ನತ್ ಗಳನ್ನು ಕೆಲವು ಸ್ವಹಾಬಿಗಳು ನೆನಪಲ್ಲಿಡದಿದ್ದರಿಂದ ಅಥವಾ ಅದರಲ್ಲಿ ಗಮನವಿಲ್ಲದಿರುವುದರಿಂದ ನೆನಪಲ್ಲಿಟ್ಟು ಅದನ್ನು ಸಾಬೀತು ಪಡಿಸಿದವರ ವರದಿಗೆ ಅದರಿಂದ ಯಾವುದೇ ಕೊರತೆಯುಂಟಾಗಲಾರದು.
(ಸುನನುಲ್ ಬೈಹಖೀ 3/58)
     -------------------

ಇಮಾಮ್ ನವವೀ (ರ) ಹೇಳುತ್ತಾರೆ;
"وحديث ابن عمر انه لم يحفظه او نسيه وقد حفظه انس والبراء بن عازب وغيرهما فقدم من حفظ.
(شرح المهذب 3/505)

ಖುನೂತ್ ನೆನಪಿಲ್ಲ ಎಂದು ಹೇಳಿದ ಇಬ್ನ್ ಉಮರ್ (ರ) ಗಿಂತ
ಖುನೂತ್ ನೆನಪಿನಲ್ಲಿಟ್ಟ ಅನಸ್ (ರ),ಬರ್ರಾಅ ಬಿನ್ ಆಝಿಬ್ (ರ) ಹಾಗೂ ಇನ್ನಿತರರನ್ನು ಪರಿಗಣಿಸಬೇಕಾಗಿದೆ.
(ಶರಹುಲ್ ಮುಹದ್ದಬ್ 3/505)
  -------------------

ಇಮಾಮ್ ಇಬ್ನ್ ಅಲ್ಲಾನ್(ರ) ಹೇಳುತ್ತಾರೆ;
"وقول ابن عمر ما احفظه عن من الصحابة معارض بمن حفظه وهو اسن منه واكثر عددا فقدم عليه
(فتوحات الربانية 2287)

ಸ್ವಹಾಬಿಗಳು  ಖುನೂತ್ ಓದಿದ ಬಗ್ಗೆ ನೆನಪಿಲ್ಲ ಎಂದು ಇಬ್ನ್ ಉಮರ್ (ರ) ಹೇಳಿದ ಮಾತು, ಖುನೂತ್ ಓದಿದ್ದಾರೆಂದು ಹೇಳಿದ ಇನ್ನಿತರ ಸ್ವಹಾಬಿಗಳ ಮಾತಿಗೆ ವಿರುದ್ಧವಾಗಿದೆ.ಆದುದರಿಂದ ಆ ಸ್ವಹಾಬಿಗಳನ್ನು ಇವರಿಗಿಂತ ಪರಿಗಣಿಸಬೇಕಾಗಿದೆ.
(ಫುತೂಹಾತುರ್ರಬ್ಬಾನಿಯ್ಯ 2/287)
  -------------------------------
*ಹದೀಸ್* *ನಂ* *8* 

ಇಮಾಮ್ ಅಬ್ನ್ ಅಬೀ ಶೈಬಾ ವರದಿ ಮಾಡುತ್ತಾರೆ;

عن ابي ماك عن ابيه قال قلت له صليت خلف رسول الله صلي الله عليه وسلم وابي بكر وعمر  وعثمان افكانوا يقنتون فقال لا يا بني هي محدثة.
(مصنف ابن ابي شيبة)

ಅಬೂ ಮಾಲಿಕ್ (ರ) ಹೇಳುತ್ತಾರೆ;
"ನನ್ನ ತಂದೆಯೊಂದಿಗೆ ನಾನು ಕೇಳಿದೆ, ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಮತ್ತು ಅಬೂ ಬಕರ್ , ಉಮರ್ , ಉಸ್ಮಾನ್ (ರ) ರೊಂದಿಗೆ ನಮಾಝ್ ಮಾಡಿದ್ದೀರಲ್ಲವೇ? ಅವರು ಯಾರದರೂ ಖುನೂತ್ ಓದಿದ್ದಾರಾ?"
ಆವಾಗ ಅವರಿ ಹೇಳಿದರು; ' ಇಲ್ಲ, ಅದು ಹೊಸತಾಗಿ ನಿರ್ಮಿಸಲ್ಪಟ್ಟದ್ದಾಗಿದೆ'
(ಮುಸನ್ನಫ್ ಇಬ್ನ್ ಅಬೀ ಶೈಬಾ)

     *ಉತ್ತರ*

ಈ ಹದೀಸಿನ ಉತ್ತರ ಮತ್ತು 5 ನೇ ಯ ಹದೀಸಿನ ಉತ್ತರವೂ ಒಂದೇ ಆಗಿದೆ.ಆ ಉತ್ತರವನ್ನು ಓದಿ ತಿಳಿದು ಕೊಳ್ಳಬೇಕಾಗಿ ವಿನಂತಿ.
  *----------------------------------*

*ಹದೀಸ್* *ನಂ* *9*   

 ಇಮಾಮ್ ಅಬ್ನ್ ಅಬೀ ಶೈಬ ವರದಿ ಮಾಡುತ್ತಾರೆ;

 عن عمرو بن ميمون ان عمر بن الخطاب لم يقنت في الفجر.
(مصنف ابن ابي شيبة 2/207)

ಉಮರ್ ಬಿನ್ ಖತ್ತಾಬ್ (ರ) ಸುಬಹಿ ನಮಾಝಿನಲ್ಲಿ ಖುನೂತ್ ಓದಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬಾ 2/207)
*-----------------------------------*
*ಹದೀಸ್* *ನಂ* *10*   

ان الاسود وعمرو بن ميمون انهما صليا خلف عمر الفجر فلم يقنت
(مصنف )

ಅಸ್ವದ್ (ರ) ಮತ್ತು ಅಮ್ರ್ (ರ) , ಖಲೀಫಾ ಉಮರ್(ರ) ಹಿಂದೆ ನಮಾಜ್ ಮಾಡಿದರು.ಅವರು ಖುನೂತ್ ಓದಿಲ್ಲ.
(ಮುಸನ್ನಫ್ )
*-----------------------------------*
*ಹದೀಸ್* *ನಂ* *11*   
 عن عرفجة ان ابن مسعود كان لا يقنت في الفجر
 (مصنف ابن ابي شيبة)

ಅರ್ಫಜತ್  (ರ) ಹೇಳುತ್ತಾರೆ;
"ಇಬ್ನ್ ಮಸ್ ಊದ್ (ರ) ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿರಲಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬಾ)

*-----------------------------------*

*ಹದೀಸ್* *ನಂ* *12*   

عن بن عباس وابن عمر انهما كانا لا يقنتان في الفجر
(مصنف )

ಇಬ್ನ್ ಅಬ್ಬಾಸ್ (ರ)ಮತ್ತು ಇಬ್ನ್ ಉಮರ್ (ರ)ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿರಲಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬಾ )
  *-----------------------------------*

*ಹದೀಸ್ ನಂ : 13*

عن عمرو بن دينار ان ابن الزبير صلي بهم الصبح فلم يقنت.
(مصنف )

ಅಮ್ರ್ ಬಿನ್ ದೀನಾರ್ (ರ) ಹೇಳುತ್ತಾರೆ;
ಅಬ್ದುಲ್ಲಾಹಿ ಇಬ್ನ್ ಝುಬೈರ್ (ರ) ಇಮಾಮ್ ಆಗಿ ಸುಬಹಿ ನಮಾಝ್ ನಿರ್ವಹಿಸಿದಾಗ ಖುನೂತ್ ಓದಿಲ್ಲ.
(ಮುಸನ್ನಫ್ )
*-----------------------------------*

*ಹದೀಸ್ ನಂ: 14

عن طلحة ان ابا بكر لم يقنت في الفجر
(مصنف )

ತ್ವಲ್ ಹತ್ (ರ) ಹೇಳುತ್ತಾರೆ;
ಅಬೂಬಕರ್ ಸಿದ್ದೀಖ್ (ರ) ಸುಬಹಿ ನಮಾಝಿನಲ್ಲಿ ಖುನೂತ್ ಓದಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬಾ)

ಇದೂ ಅಲ್ಲದೇ ಇನ್ನೂ ಕೂಡಾ ಇದೇ ರೀತಿಯ ಹಲವಾರು ಹದೀಸ್ ಗಳು ಇವೆ.
*-----------------------------------

    *ಉತ್ತರ

ಈ ಹದೀಸುಗಳಲ್ಲಿ ಹೇಳಿದ ಖುನೂತ್ ಎಂಬುವುದರ ಉದ್ದೇಶ ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಯಾಗಿದೆ.ಶತ್ರುಗಳ ಕಾಟ ಹೆಚ್ಚಾದಾಗ ಅವರ ವಿರುದ್ಧ ನಮಾಝಿನಲ್ಲಿ ಪ್ರಾರ್ಥಿಸುತ್ತಿದ್ದರು.ಅವರ ಉಪದ್ರ ಕಡಿಮೆಯಾದಾಗ ಅದನ್ನು ನಿಲ್ಲಿಸಿದರು.
ಈ ರೀತಿ ಈ ಹದೀಸುಗಳಿಗೆ ವ್ಯಾಖ್ಯಾನ ನೀಡುವುದು ಅನಿವಾರ್ಯತೆಯಾಗಿದೆ.
ಕಾರಣ,
ಈ ಮೇಲೆ ಹೇಳಿದ ಸ್ವಹಾಬಿಗಳು ಖುನೂತ್ ಓದಿದಾಗಿ ಸ್ವಹೀಹ್ ಆದ ಹದೀಸುಗಳ ಮೂಲಕ ಸಾಬೀತಾಗಿದೆ.ಹದೀಸುಗಳ ನಡುವೆ ವೈರುಧ್ಯತೆಯಿಲ್ಲದಿರಲು ಈ ರೀತಿ ವ್ಯಾಖ್ಯಾನಿಸಬೇಕು.

ಸ್ವಹಾಬಿಗಳು ಖುನೂತ್ ಓದಿದ್ದನ್ನು ಮುಂಚೆ ವಿವರಿಸಲಾಗಿದೆ.ಓದುಗರು ಆ ಭಾಗವನ್ನು ಇನ್ನೊಮ್ಮೆ ಓದಬೇಕಾಗಿ ವಿನಂತಿ.
-----------------------------------
*ಹದೀಸ್ ನಂ : 15

  ಇಮಾಮ್ ಬೈಹಖೀ ( ರ) ವರದಿ;
" اخبرني ابو عبد الرحمن السلمي انبأ علي بن عمر ثنا الحسين بن اسماعيل ثنا محمد  بن منصور الطوسي ثنا شبابة ثنا عبد الله بن ميسرة ابو ليلي عن ابراهيم بن ابي
حرة عن سعيد بن جبير عن ابن عباس ان القنوت في صلاة الصبح بدعة.
(سنن الكبري 3/58)

ಇಬ್ನ್ ಅಬ್ಬಾಸ್ ( ರ) ಹೇಳುತ್ತಾರೆ;ಖಂಡಿತವಾಗಿಯೂ ಸುಬಹಿ ನಮಾಝಿನಲ್ಲಿ ಖುನೂತ್ ಬಿದ್ ಅತಾಗಿದೆ.
(ಸುನನುಲ್ ಕುಬ್ರಾ 3/58)

*ಉತ್ತರ

     ಈ ಹದೀಸ್ ದುರ್ಬಲವಾಗಿದೆ.
ಇಮಾಮ್ ನವವೀ ( ರ) ಹೇಳುತ್ತಾರೆ,
حديث ابن عباس انه ضعيف جدا وقد رواه البيهقي من رواية ابي ليلة الكوفي.
وقال هذا لا يصح وابو ليلي  متروك وقد روينا عن ابن عباس انه قنت في الصبح.
(شرح المهذب 3/505)

ಇಮಾಮ್ ಬೈಹಖೀ (ರ) ಅಬೂ ಲೈಲ ಅಲ್ ಕೂಫಿ ಯ ಪರಂಪರೆಯ ಮೂಲಕ ವರದಿ ಮಾಡಿದ ಹದೀಸ್ ಸಹೀಹ ಅಲ್ಲ.
ಅಬೂ ಲೈಲ ರವರ ಹದೀಸ್ ಸ್ವೀಕಾರ್ಯವಲ್ಲ.
ಇಬ್ನ್ ಅಬ್ಬಾಸ್ (ರ) ಸುಬಹಿ ನಮಾಝಿನಲ್ಲಿ ಖುನೂತ್ ಓದಿದ್ದಾಗಿ ನಾವು ವರದಿ ಮಾಡಿದ್ದೇವೆ.
(ಶರಹುಲ್ ಮುಹದ್ದಬ್ 3/505)

ಇಬ್ನ್ ಅಬ್ಬಾಸ್ (ರ)ರವರ ಖುನೂತ್ ನ ಹದೀಸ್ ಮುಂಚೆ ವಿವರಿಸಿದ್ಲೇನೆ.
-------------------------------

*ಹದೀಸ್ ನಂ : 16

عن ام سلمة قالت نهي رسول الله صلي الله عليه وسلم عن القنوت في الفجر.
(دارقطني 2/38)
ಉಮ್ಮು ಸಲಮ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿಯಲ್ಲಿ ಖುನೂತನ್ನು ವಿರೋಧಿಸಿದರು.
(ದಾರಖು ತ್ ನಿ 2/38)

*ಉತ್ತರ

ಇಮಾಮ್ ದಾರಖುತ್ ನಿ ಯೇ ಈ ಹದೀಸಿನ ಕುರಿತು ಹೇಳುತ್ತಾರೆ,

محمد بن يعلي، وعنبسة ،وعبد الله بن نافع كلهم ضعفاء ولا يصح لنافع سماع من ام سلمة
(دار قطني 2/38)

ಈ ಹದೀಸಿನ ಪರಂಪರೆಯಲ್ಲಿರುವ ಮುಹಮ್ಮದ್ ಬಿನ್ ಯ ಅಲಾ , ಆಂಬಸತ್ , ಅಬ್ದುಲ್ಲಾಹಿಬಿನ್ ನಾಫಿಅ ಎಂಬ 3 ಜನರೂ ದುರ್ಬಲರಾಗಿದ್ದಾರೆ.ಮಾತ್ರವಲ್ಲ ನಾಫಿಅ (ರ) ಉಮ್ಮು ಸಲಮ(ರ)ರಿಂದ ಹದೀಸ್ ಕೇಳಿಲ್ಲ.
(ದಾರಖುತ್ನಿ 2/38)

ಇದನ್ನು ಇಮಾಮ್ ನವವೀ (ರ) ತನ್ನ ಶರಹುಲ್ ಮುಹದ್ದಬ್(3/505) ನಲ್ಲೂ ಹೇಳಿದ್ದಾರೆ
-------------------------------

*ಹದೀಸ್ ನಂ 17

عن ابي سعيد عن رسول الله صلي الله عليه وسلم انه قال كل حرف من القران يذكر فيه القنوت فهو الطاعة.
(مسند احمد )

ಅಬೂ ಸಈದುಲ್ ಖುದ್ರೀ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು.ಖುರ್ ಆನಿನಲ್ಲಿ ಖುನೂತ್ ಎಂದು ಹೇಳಿದರ ಉದ್ದೇಶ ಅಲ್ಲಾಹನನ್ನು ಅನುಸರಿಸಿ ಎಂದಾಗಿದೆ.
(ಮುಸ್ನದ್ ಅಹ್ಮದ್ ) 

ಉತ್ತರ

ಈ ಹದೀಸ್ ಇಮಾಮ್ ಅಹ್ಮದ್ ವರದಿ ಮಾಡಿದ್ದು  ಅಬ್ದುಲ್ಲಾಹಿ ಬಿನ್ ಲಹೀಅತ್ ಎಂಬವರ ಮೂಲಕವಾಗಿದೆ.ಅವರ ಕುರಿತು ಇಮಾಮರುಗಳ ಮಾತು ನೋಡಿ,

ಹಾಫಿಲು ದ್ಸಹಬೀ ಹೇಳುತ್ತಾರೆ,
قال ابن معين ضعيف لا يحتج به
وقال احمد بن محمد الحضرمي سالت ابن معين عن ابن لهيعة فقال ليس بالقوي
وقال النسائي ضعيف
وقال احمد بن زهير عن يحي ليس حديثه بذاك القوي.
(ميزان الاعتدال 2/475)

ಇಬ್ನ್ ಮಯೀನ್ ಹೇಳುತ್ತಾರೆ, ಅವರು ದುರ್ಬಲರಾಗಿದ್ದಾರೆ. ಸ್ವೀಕಾರ್ಯ ಯೋಗ್ಯರಲ್ಲ.
ಅಹ್ಮದು ಬಿನ್ ಮುಹಮ್ಮದುಲ್ ಹಲ್ರಮೀ ಹೇಳುತ್ತಾರೆ,
ನಾನು ಇನ್ನ್ ಮಯೀನ್ ರೊಂದಿಗೆ ಇಬ್ನ್ ಲಹೀಅತ್ ರ ಕುರಿತು ಕೇಳಿದೆ.ಆಗ ಅವರು ಹೇಳಿದರು,
ಅವರು ಯೋಗ್ಯರಲ್ಲ.
ಇಮಾಮ್ ನಸಾಈ (ರ) ಹೇಳುತ್ತಾರೆ,
ಅವರು ದುರ್ಬಲರು.
ಅಹ್ಮದು ಬಿನ್ ಝುಹೈರ್ (ರ) ಹೇಳುತ್ತಾರೆ,
ನಾನು ಯಹ್ಯ ಬಿನ್ ಮುಯೀನ್ ರೊಂದಿಗೆ ಇವರ ಕುರಿತು ಕೇಳಿದಾಗ ಅವರು ಯೋಗ್ಯರಲ್ಲವೆಂದು ಹೇಳಿದರು.
(ಮೀಝಾನುಲ್ ಇಅತಿದಾಲ್ 2/475)
-------------------------------
ಕೊನೆಯದಾಗಿ....

ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದು ಪವಿತ್ರ ಖುರ್ ಆನಿನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನು,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಸ್ವಹಾಬಿಗಳು ಖುನೂತ್ ಓದಿದ ಬಗ್ಗೆ  ಹದೀಸುಗಳಿಂದ ಓದುಗರು ಓದಿದ್ದೀರಿ.
ಖುನೂತ್ ಸುನ್ನತ್ತಿದೆಯೆಂದು ಶಾಫಿಈ ಮದ್ಸ್ ಹಬಿನ ಎಲ್ಲಾ ವಿಧ್ವಾಂಸರು ಹೇಳಿದ್ದನ್ನು ಈಗಾಗಗಲೇ ವಿವರಿಸಿಯಾಗಿದೆ.ಖುನೂತ್ ಓದುವುದಕ್ಕೆ ವಿರುದ್ಧವಾದವೆಂದು ಪ್ರತ್ಯಕ್ಷದಲ್ಲಿ ತೋಚುತ್ತಿರುವ ಹದೀಸುಗಳಿಗೆ ಇಮಾಮರುಗಳು ಹೇಳಿದ ವ್ಯಾಖ್ಯಾನವನ್ನು ಗ್ರಂಥಗಳ ಉದ್ಧರಣೆ ಸಹಿತ ವಿವರಿಸಿದ್ದೇನೆ.
ಇದೆಲ್ಲವನ್ನೂ ಕಲಿತರೆ ಒಮ್ಮೆಯೂ ಕೂಡಾ ಆತನಿಗೆ ಖುನೂತ್ ನಿಷೇಧಿಸಲು ಸಾಧ್ಯವಿಲ್ಲ.

 *ವಹ್ಹಾಬಿಗಳೊಂದಿಗೆ ವಿನಯಪೂರ್ವಕ...

" ಸುಬಹಿ ನಮಾಝಿನಲ್ಲಿ ಖುನೂತ್ ಓದುವುದು ಬಿದ್ ಅತ್ ಎಂದು, ಅದು ವ್ಯಭಿಚಾರಕ್ಕಿಂತಲೂ ಮಹಾಪಾಪವೆಂದೂ ನಿಮ್ಮ ಬಡಾ ಮೌಲವಿಗಳು ಹೇಳಿದ ಕ್ಲಿಪ್ ಗಳು ನಮ್ಮ ಕೈಯ್ಯಲ್ಲಿದೆ.ಇದನ್ನು ಪ್ರಮಾಣಗಳ ಆಧಾರದಲ್ಲಿ ನಿಮಗೆ ಸಾಬೀತುಪಡಿಸಲು ಸಾಧ್ಯವೇ?"
ಇದು ವರೆಗೂ ಆ ಧೈರ್ಯವನ್ನು ವಹ್ಹಾಬಿಗಳು ತೋರ್ಪಡಿಸಲಿಲ್ಲ.
ಮುಂದೆಯೂ ಅದು ಅವರಿಂದ ಸಾಧ್ಯವಿಲ್ಲ.
ಖುನೂತ್ ಬಗ್ಗೆ ಇನ್ನೂ ಕೂಡಾ ಬರೆಯಲು ಬಾಕಿ ಇದೆ.ವಹ್ಹಾಬಿಗಳು ಇದಕ್ಕೆ ಉತ್ತರಿಸಿದ ನಂತರ ಬಾಕಿ ಭಾಗಗಳನ್ನು ಬರೆಯುವೆನು ಎಂಬ   ಆಶ್ವಾಸನೆಯೊಂದಿಗೆ ಇಲ್ಲಿಗೆ ಕೊನೆಗೊಳಿಸುತ್ತೇನೆ.

ಎಲ್ಲರ ದುಆ ನಿರೀಕ್ಷೆಯೊಂದಿಗೆ ....

ಮುಕ್ತಾಯ..

--------------------------------

Tuesday, October 1, 2019

ಪುತ್ತೂರಿನ ಕರ್ನಾಟಕ ಮುಸ್ಲಿಂ ಜಮಾಆತ್ತ್ ಸಭೆಯಲ್ಲಿ ಶಾಫಿ ಸಅದಿ ಮಂಡಿಸಿದ ಅನಸಿಕೆಗಳು

*#ಪುತ್ತೂರಿನ ಕರ್ನಾಟಕ ಮುಸ್ಲಿಂ ಜಮಾ‌ಅತ್ ಸಭೆಯಲ್ಲಿ ಶಾಫಿ ಸ‌ಅದಿ ಮಂಡಿಸಿದ  ಅಧ್ಬುತ ಅನಿಸಿಕೆಗಳು....!*

ಎಲ್ಲರೂ ಒಂದಾವರ್ತಿ ಓದಿರಿ...

✍ ಅಬೂಶಝ

ಕರ್ನಾಟಕ ಮುಸ್ಲಿಂ ಜಮಾ‌ಅತ್ ಎಂಬುದು ರಾಜಕೀಯ ಲಾಭಕ್ಕಾಗಿ ಅಥವಾ ರಾಜಕೀಯ ಪಕ್ಷವಾಗಿ ಮೂಡಿಬರಲಿರುವ ಸಂಘಟನೆ ಅಲ್ಲ.
ಇಲ್ಲಿ ಸೇರಿದ ನೀವೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಚರಿಸಿ ಅನುಭವವಿರುವ ಪ್ರಮುಖರು. ಪುತ್ತೂರಿನ ಮುಸ್ಲಿಂ ಸಮುದಾಯ ಆರ್ಥಿಕ ಶೈಕ್ಷಣಿಕ ಧಾರ್ಮಿಕ ರಂಗಗಳಲ್ಲಿ ಸಬಲೀಕರಣವಾಗುವಂತೆ ಒಟ್ಟಾಗಿ ಕಾರ್ಯಚರಿಸಲು ಮುಸ್ಲಿಂ ಜಮಾ‌ಅತ್ ವೇದಿಕೆಯೊಂದನ್ನು ನಿಮಗೆ ಒದಗಿಸಿದೆ.
ಈ ಕಾರ್ಯಚರಣೆಯಲ್ಲಿ ಯಾವುದೇ ಐಹಿಕ ಉದ್ದೇಶ ಇರಬಾರದು. ಅದೇ ರೀತಿ ಸಮರ್ಪಣಾ ಮನೋಭಾವ ಇರಬೇಕು. ಪರಲೋಕದಲ್ಲಿ ತನ್ನ ಜವಾಬ್ದಾರಿ ಪೂರ್ತಿಗೊಳಿಸಿದ ಧನ್ಯತೆಯಿಂದ ಹೋಗುವ ಇರಾದೆ ಇರಬೇಕು.
ಸಮುದಾಯದ ಕಷ್ಟ ಕಾರ್ಪಣ್ಯ ನಮ್ಮ ಕಷ್ಟವಾಗಿ ಕಾಣಬೇಕು.
ಸಮುದಾಯದ ನೋವು ನಮ್ಮ ನೋವಾಗಿರಬೇಕು.
ಸಮುದಾಯದ ಸಮಸ್ಯೆ ನಮ್ಮ ಸಮಸ್ಯೆಯಾಗಿರಬೇಕು.
ಗ್ರೂಪಿಸಂ ನಿಮಿತ್ತ ಬೇಸತ್ತ ನಾವು ಕನಿಷ್ಠ ಕರ್ನಾಟಕದಲ್ಲಾದರೂ ಸಮುದಾಯ ವಿಷಯದಲ್ಲಿ ಒಟ್ಟಾಗೋಣ.ಸಮುದಾಯಕ್ಕೆ ಶಕ್ತಿ ತುಂಬೋಣ.
ನೀವು ಮುಸ್ಲಿಂ ಸಮುದಾಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಜನಸಂಖ್ಯೆ ಸರ್ವೆಯನ್ನು ನೆಟ್ ಮೂಲಕ ಪರಿಶೀಲಿಸಿ ನೋಡಿ. ಆವಾಗ ನಿಮಗೆ ಮುಸ್ಲಿಮರ ದಯನೀಯ ಸರ್ವೆ ಸಿಗುತ್ತದೆ.
ಸರಕಾರಿ ಇಲಾಖೆಯಲ್ಲಿ ಬರೇ 4 ಶೇಖಡಾ ಮಾತ್ರ ಸಾನಿಧ್ಯವಿದೆ!
ಆದರೆ ಇನ್ನಿತರ ಹಿಂದುಳಿದ ಕುರುಬ ಸಮುದಾಯ, ಪೂಜಾರಿ ಸಮುದಾಯದವರು 22 ಶೇಖಡಾ ಕರ್ನಾಟಕ ರಾಜ್ಯ ಸರಕಾರಿ ಇಲಾಖೆಯಲ್ಲಿ ನೌಕರಿಗಿಟ್ಟಿಸಿಕೊಂಡಿದ್ದಾರೆ!
(ಅವರು ಅವರ ಸಾಮರ್ಥ್ಯವನ್ನು ತೋರಿಸಿದ್ದಾರೆ ಸಂತೋಷವಿದೆ)
ಆದರೆ ನಮ್ಮ ಅವಸ್ಥೆಯೇನು?
IAS IPS ಬೆರಳೆಣಿಕೆಯಷ್ಟು ಮಾತ್ರ, ಪೋಲಿಸ್ ಇಲಾಖೆಯಲ್ಲೂ ನಮ್ಮ ಸಾನಿಧ್ಯ ಅತೀ ವಿರಳ!
ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲೂ ಜಿಲ್ಲಾ ಕಮೀಷನರ್ (ಡಿಸಿ) ಮುಸಲ್ಮಾನರನ್ನು ನೇಮಕ ಮಾಡಿಲ್ಲ. ನಾವು ಕುಮಾರ ಸ್ವಾಮಿಯವರಿಗೆ ಒತ್ತಡ ತಂದುದರ ನಿಮಿತ್ತ ಹಾಸನ ಜಿಲ್ಲೆಗೆ ಅಕ್ರಂ ಪಾಷಾರನ್ನು ನೇಮಕ ಮಾಡಲಾಯಿತು. ಖೇದದೊಂದಿಗೆ ಹೇಳುತ್ತಿದ್ದೇನೆ ನೇಮಕ ಮಾಡಿದ ಅದೇ ಸ್ಪೀಡಲ್ಲಿ ಈಗ ವಜಾಗೊಳಿಸಿ ಬೇರೆ ತಸ್ತಿಗೆಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾಡಳಿತ ಎಂಬುದು ಒಬ್ಬ 'ಡಿಸಿ' ಯ ಕೈಯಲ್ಲಿರುತ್ತದೆ.MP, MLA ಗೆ ಆ ಅಧಿಕಾರ ಇಲ್ಲ. ಅಷ್ಟೊಂದು ಮಹತ್ವದ ಹುದ್ದೆಯಲ್ಲಿ 80 ಲಕ್ಷ ಮುಸ್ಲಿಮರಲ್ಲಿ ಯಾರೂ ಇಲ್ಲ ಎಂಬುದನ್ನು ನಾವು ಮನಗಾಣಬೇಕು.
ರಾಜಕೀಯ ಸ್ವಾವಲಂಬನೆ ನಮಗಿಲ್ಲ. ಮುಸ್ಲಿಮರ ಜನಸಂಖ್ಯೆ ಅನುಸಾರ ನಮಗೆ 34 MLA ಬೇಕು ಆದರೆ  ನಮಗಿರುವುದು ಕೇವಲ 7 MLA!
ಅದೇ ಸಮಯ ಲಿಂಗಾಯುತರ ಜನಸಂಖ್ಯೆ ಹತ್ತು ಶೇಖಡಾ ಮಾತ್ರ ಅಂದರೆ ಕೇವಲ 60 ಲಕ್ಷ  ಪೋಪಿಲೇಷನ್ ಇರುವ ಲಿಂಗಾಯುತ ಸಮುದಾಯಕ್ಕೆ 58 MLA ಗಳಿದ್ದಾರೆ! (38 ಬಿಜೆಪಿ,16 ಕಾಂಗ್ರೆಸ್ ಬಾಕಿ ಇತರ ಪಕ್ಷ)
48 ಲಕ್ಷವಿರುವ ಒಕ್ಕಲಿಗ ಸಮುದಾಯಕ್ಕೆ 42 MLA ಗಳಿದ್ದಾರೆ! ಒಂದೊಂದು ಲಕ್ಷಕ್ಕೆ ಒಂದೊಂದು ಪ್ರತಿನಿಧಿಗಳಂತೆ.
(JDS 23 BJP 8 ಕಾಂಗ್ರೆಸ್ 11)
ಶೇಖಡಾ 14 ಇರುವ ಬ್ರಾಹ್ಮಣ ಸಮುದಾಯದಲ್ಲಿ 14 MLA ಗಳಿದ್ದಾರೆ.ಅವರಲ್ಲಿ ಮುಖ್ಯಮಂತ್ರಿಗಳ ಪಟ್ಟಿ ಕೂಡಾ ಇದೆ.
ಆದರೆ 80 ಲಕ್ಷವಿರುವ ಮುಸ್ಲಿಂ ಸಮುದಾಯದಲ್ಲಿ ಕೇವಲ 7 mla ಗಳು ಮಾತ್ರ!
ಒಬ್ಬನೇ ಒಬ್ಬ ಮುಖ್ಯಮಂತ್ರಿ ಈವರೆಗೆ ನೇಮಕ ಮಾಡಲು ಸಾದ್ಯವಾಗಲಿಲ್ಲ.
ನಮ್ಮ ಉಚ್ಚ ನ್ಯಾಯಾಲಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮುಖ್ಯ ನ್ಯಾಯಾಧೀಶನು ಇಲ್ಲ.
ಹದಿನೇಳು ವರ್ಷಗಳ ಮುಂಚೆ ಒಬ್ಬ ಮುಖ್ಯ ನ್ಯಾಯಮೂರ್ತಿ ಮುಸ್ಲಿಂ ಇದ್ದುದನ್ನು ಬಿಟ್ಟರೆ ಈ ತನಕ ಒಬ್ಬನೇ ಒಬ್ಭನನ್ನು ನೇಮಕ ಮಾಡಲಿಲ್ಲ.
ನಮ್ಮ ಪುತ್ತೂರಿನ ನವಾಝ್'ರವರು ಹುಬ್ಬಳ್ಳಿ ನ್ಯಾಪೀ‌ಠದಲ್ಲಿ ನ್ಯಾಯಾಧೀಶರಾಗಿದ್ದಾರೆಯೇ ಹೊರತು ಮುಖ್ಯ ನ್ಯಾಯಾಧೀಶರಲ್ಲ.
ಕರ್ನಾಟಕದಲ್ಲಿ ಎರಡು ಲಕ್ಷಕ್ಕಿಂತಲೂ ಮಿಕ್ಕ ವಕೀಲರಿದ್ದು ಅದರಲ್ಲಿ ಮುಸ್ಲಿಂ ವಕೀಲರ ಸಂಖ್ಯೆ ಬರೇ ಏಳು ಸಾವಿರ ಮಾತ್ರ!
ಪುತ್ತೂರಿನಲ್ಲಿರುವ ವಕೀಲರಲ್ಲಿ ನೀವು ಕೇಳಿ ನೋಡಿ ಅಕ್ರಮ್ ಪಾಷರನ್ನು ಹೊರತು ಪಡಿಸಿ ಹೈಕೋರ್ಟ್'ನ ಸೀನಿಯರ್ ಕೌನ್ಸಿಲ್'ನಲ್ಲಿ ವಾದಿಸಲು ನೇಮಕ ಗೊಂಡಿರುವ ಒಬ್ಬನೇ ಒಬ್ಬ ವಕೀಲ ನಮ್ಮ ಮುಸ್ಲಿಮರಿಲ್ಲ.
ಇನ್ಸ್ಪೆಕ್ಟರ್, ಹೆಡ್ 'ಕಾನ್'ಸ್ಟೇಬಲ್ ಸಹಿತ ಪೋಲಿಸ್ ಇಲಾಖೆಯಲ್ಲೂ ಮುಸ್ಲಿಮರ ಪ್ರಾತಿನಿಧ್ಯ ವಿರಳವಾಗಿದೆ.
ಅವಕಾಶಗಳಿದ್ದು ನಮ್ಮ ಜನಪ್ರತಿನಿಧಿಗಳು ಅದಕ್ಕಾಗಿ ಶ್ರಮಿಸಲಿಲ್ಲವೆಂಬುದು ಸಮುದಾಯದ ದುರಂತವೇ ಸರಿ.

ಕರ್ನಾಟಕ ಮುಸ್ಲಿಂ ಜಮಾ‌ಅತ್ 10 ಲಕ್ಷ ಸದಸ್ಯರನ್ನು ಒಳಗೊಂಡು ಬಲಿಷ್ಠವಾಗಿಸಿ, ಯಾವುದೇ ಸರ್ಕಾರ ಬಂದರೂ ಅದರ ಗಟ್ಟಿ ಧ್ವನಿ ತಲುಪಿಸಿ ಸಮುದಾಯ ಸಬಲೀಕರಣ ಮಾಡುವ ಉದ್ದೇಶವಿದೆ.

ವಾಲ್ಮೀಕಿ ಸ್ವಾಮಿ ನೇತೃತ್ವದಲ್ಲಿ ಏಳುವರೆ ಶೇಖಡ ಅನುದಾನವನ್ನು ಹದಿನಾಲ್ಕು ಶೇಖಡಾ ಮಾಡಬೇಕೆಂಬ ಕೂಗಿನೊಂದಿಗೆ ಪ್ರತಿಭಟನೆ ಮಾಡಲು ಹೊರಟಾಗ ರಾಜ್ಯದ ಮುಖ್ಯಮಂತ್ರಿಯೇ ಸ್ವಾಮೀಜಿಯ ಆಶ್ರಮಕ್ಕೆ ತೆರಳಿ ಅನುದಾನ ನೀಡುವ ಭರವಸೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಬೇಡಿಕೊಂಡದ್ದು ನಾವು ಕಂಡಿದ್ದೇವೆ.
ನಮಗೆ ಯಾಕೆ ಅದು ಸಾದ್ಯವಾಗುವುದಿಲ್ಲ.
ನಮ್ಮಲ್ಲಿ ಗ್ರೂಪಿಸಂ ಅಧಿಕವಾದುದರಿಂದ ಪರಸ್ಪರ ನಾಯಕತ್ವವನ್ನು ಅಂಗೀಕರಿಸಲು ಯಾರೂ ಒಪ್ಪುವುದಿಲ್ಲ. ಜತೆಯಾಗಿ ವೇದಿಕೆ ಹಂಚಲು ಹಿಂಜರಿಯುವುದನ್ನು ನಾವು ಕಾಣುತ್ತೇವೆ.
ಇನ್ಶಾಅಲ್ಲಾ ಮುಂದಿನ ದಿನಗಳಲ್ಲಿ ಅದೆಲ್ಲಾ ಸರಿಯಾಗಬಹುದೆಂದು ಆಶಿಸೋಣ. ಅಹ್ಲುಸ್ಸುನ್ನದ ತತ್ವಾದರ್ಶದಲ್ಲಿ ಕಾರ್ಯಚರಿಸುವ ಉಭಯ ಬಣಗಳು ಒಟ್ಟಾಗುವ. ಒಂದು ಬಣ ಮಾತ್ರ ಮನಸ್ಸು ಮಾಡಿದರೆ ಇದೆಲ್ಲಾ ಸಾದ್ಯವಾಗುವುದಿಲ್ಲ. ಸಮುದಾಯ ಸಬಲೀಕರಣದ ಈ ವಿಷಯದಲ್ಲಿ ಗ್ರೂಪಿಸಂಗೆ ಅತೀತವಾಗಿ  ನಾವು ಒಗ್ಗಟ್ಟಾಗುವ.
ಸರಕಾರ ಮಂಡಿಸಿದ 2 ಲಕ್ಷ ಕೋಟಿ ಬಜೆಟ್'ನಲ್ಲಿ ಮುಸ್ಲಿಮರ ಜನಸಂಖ್ಯೆ ಅನುಪಾತದಲ್ಲಿ ಸರಾಸರಿ 28 ಸಾವಿರ ಕೋಟಿ ಸಿಗಬೇಕು. ಆದರೆ ಸಿದ್ದರಾಮಯ್ಯ ಸರಕಾರ ಕಾಲದಲ್ಲಿ ನೀಡಿದ ಅತೀ ಹೆಚ್ಚು ಅನುದಾನವೆಂದರೆ 2000 ಸಾವಿರ ಕೋಟಿ! ಅದಕ್ಕಿಂತ ಮುಂಚೆ ಅದು ಕೂಡಾ ಮುಸ್ಲಿಂ ಸಮುದಾಯದ ಪಾಲಿಗೆ ದಕ್ಕಿರಲಿಲ್ಲ.
ಅರ್ಹವಾಗಿ 28 ಸಾವಿರ ಕೋಟಿ ಅನುದಾನ ಸಿಗಬೇಕಾದ ಮುಸ್ಲಿಂ ಸಮುದಾಯಕ್ಕೆ ಸಿಕ್ಕಿದ್ದು ಅತೀ ಹೆಚ್ಚೆಂದರೆ 2 ಸಾವಿರ ಕೋಟಿ ಮಾತ್ರ!
4 ಲಕ್ಷ ಮತದಾರರು ದ.ಕ. ಜಿಲ್ಲೆಯಲ್ಲಿ ಇದ್ದಾರೆ ಆದರೆ ಅದರಲ್ಲಿ ಒಂದು ಲಕ್ಷ ವಿದೇಶಗಳಲ್ಲಿದ್ದಾರೆ. 50 ಸಾವಿರ ಮಂದಿ ವ್ಯಾಪಾರ ನಿಮಿತ್ತ ವಿವಿಧ ರಾಜ್ಯಗಳಲ್ಲಿರುತ್ತಾರೆ. ಕೆಲವರ ಹೆಸರು ಮತದಾನ ಪಟ್ಟಿಗೆಯಲ್ಲಿ ಇರುವುದಿಲ್ಲ ಅಂತೂ ಇಂತೂ ಕೇವಲ ಮಂದಿಯಿಂದ ಮಾತ್ರ ಮತದಾನ ನಡೆಯುತ್ತದೆ ಇದಕ್ಕೆಲ್ಲ ಪರಿಹಾರ ಕಾಣುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಈಗಾಗಲೇ ಟೀಂ ವರ್ಕ್ ಆರಂಭಿಸಿಯಾಗಿದೆ.
ಉತ್ತರ ಕರ್ನಾಟಕದ ದಾವಣಗೆರೆಯ ಮುಸ್ಲಿಂ ಜಮಾ‌ಅತ್ ಸಮಿತಿ ಲಾ ಕಾಲೇಜೊಂದನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ.
ಇನ್ನೊಂದು ಹತ್ತು ವರ್ಷದಲ್ಲಿ ಸಮುದಾಯದಲ್ಲಿ IPS IAS ಸಹಿತ ಉನ್ನತ ಶ್ರೇಷ್ಠ ದರ್ಜೆಯ ಹುದ್ದೆಗಾರರನ್ನು ಸ್ರಷ್ಟಿಸುವ ದೊಡ್ಡ ಗುರಿಯೊಂದಿಗೆ ಮತ್ತು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಕ್ಕಿ ಸಬಲೀಕರಣವಾಗುವಂತೆ ಮಾಡಲು *#ಕರ್ನಾಟಕ_ಮುಸ್ಲಿಂ_ಜಮಾತ್* ಕಟ್ಟಿಬದ್ದವಾಗಿದೆ.
ಇದಕ್ಕಾಗಿ ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕಾಗಿದೆ.
ನಾವು ಒಗ್ಗಟ್ಟಾಗೋಣ. ಗ್ರೂಪಿಸಂಗೆ ಅಂಕಿತ ಹಾಕೋಣ ಆ ಮುಲಕ ಸಮುದಾಯ ಸಬಲೀಕರಣಕ್ಕೆ ಪ್ರಯತ್ನಿಸೋಣ.

ಅಲ್ಲಾಹು ತೌಫೀಕ್ ನೀಡಲಿ ಆಮೀನ್.
1/10/2019

Sunday, September 29, 2019

*ವಹಾಬಿ ಉಗ್ರವಾದ ಎಂದು ಕೇಳುವಾಗ ಸಲಫಿಗಳು ಬೆಚ್ಚಿ ಬೀಳುವುದೇಕೇ ?*

              *ಎಂ.ಎಂ.ಸಖಾಫಿ*

ಇತ್ತೀಚೆಗೆ ಹಿಂದುತ್ವವಾದಿ ಮುಖಂಡ ಸೂಲಿಬೆಲೆಯ ವೀಡಿಯೋ ತುಣುಕ್ಕೊಂದು ವೈರಲಾಯಿತು.ಸೂಲಿಬೆಲೆ ಏನೇ ಹೇಳಲಿ ಆತನನ್ನು ಎಲ್ಲಿ ಇಡಬೇಕೋ ಅಲ್ಲಿಯೇ  ಈ ಸಮುದಾಯ ಇಟ್ಟಿದೆ. ಆತನಿಗೆ ವಿಷೇಷ ಮಹತ್ವ ನೀಡಬೇಕಾದ ಅಗತ್ಯವಿಲ್ಲ.
ಆದರೆ ಸೂಲಿಬೆಲೆ ಮಾತಿನಿಂದ ತನ್ನ ಬುಡಕ್ಕೆ ಪೆಟ್ಟು ಬೀಳುತ್ತದೆಯೆಂದು ಅರಿತ ಕೆಲವು ಮರಿ ಸಲಫಿಗಳು ,ಆತನ ಮಾತಿನ ವರಸೆ ಬದಲಾಯಿಸಿ ಸುನ್ನೀಗಳ ತಲೆಗೆ ಕಟ್ಟಿದ್ದಾರೆ.ಸುನ್ನೀಗಳನ್ನು ಅಪಮಾನಿಸಲು ಸೂಲಿಬೆಲೆಯ ವೀಡಿಯೋ ಪ್ರಚಾರ ಮಾಡುವ ಗತಿಕೇಡು ಸಲಫಿಗಳಿಗೆ ಬಂದಿದೆ.

ಅಷ್ಟಕ್ಕೂ ವಿಷಯವೇನು ? ವಹಾಬಿ ಭಯೋತ್ಪಾದನೆಯ ಬಗ್ಗೆ ಸೂಲಿಬೆಲೆ ಮಾತ್ರ ಹೇಳಿದ್ದಾ ?

*ವಹಾಬಿ ಭಯೋತ್ಪಾದನೆ ಎಂಬುದು ಐತಿಹಾಸಿಕ ಸತ್ಯ.ಚಾರಿತ್ರಿಕ ದಾಖಲೆಗಳು ಅದನ್ನು ಸ್ಪಷ್ಟಪಡಿಸುತ್ತವೆ.ವಹಾಬಿಸಂನ ಹುಟ್ಟು,ಬೆಳವಣಿಗೆ ರಕ್ತಸಿಕ್ತವಾಗಿತ್ತೆಂದು ಸರ್ವ ಇತಿಹಾಸಕಾರರು ಸಮ್ಮತಿಸಿದ್ದಾರೆ.ಇಸ್ಲಾಮೀ ಉಗ್ರವಾದಕ್ಕೆ ಚಾಲನೆ ನೀಡಿದ್ದೇ ಸಲಫಿಸಂ ನ ಆಶಯಗಳು*.

*2009 ,ನವೆಂಬರ್* .
*ನ್ಯೂಡೆಲ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ಭಯೋತ್ಪಾದನ ವಿರುದ್ಧ ಸಮಾವೇಶದಲ್ಲಿ ಮಾಜಿ ಕೇಂದ್ರ ಸಚಿವ, ಪ್ರಖ್ಯಾತ ವಕೀಲ ರಾಮ್ ಜೆಠ್ಮಲಾನಿ ವಹಾಬಿ ಭಯೋತ್ಪದಾನೆಯ ಬಗ್ಗೆ ಮಾತನಾಡಿದರು.ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕೆಂಡ್ ಕಾಡ್ಜು ಕೂಡ ವಹಾಬಿ ಭಯೋತ್ಪಾದನೆಯ ಬಗ್ಗೆ ಜನರನ್ನು ಎಚ್ಚರಿಸಿದ್ದರು*.

ಕಳೆದ ದಶಕ ಕಂಡ ಭೀಕರ ಭಯೋತ್ಪಾದನೆ ಯ ರೂವಾರಿಗಳಾದ ಐಸಿಸ್ ಕೂಡಾ ವಹಾಬಿಸಂನ ಕೂಸೆಂದು ಸೌದಿಯ ವಹಾಬಿ ಮುಫ್ತಿಗಳೇ ಸಮ್ಮತಿಸಿದ್ದಾರೆ

https://youtu.be/0z3XwAABBq8

*ಇನ್ನೂ ಐಸಿಸ್‌ನ ಚರಿತ್ರೆ ನೋಡಿ.*
*ಐ‌ಸಿಸ್ ಹೆಚ್ಚಾಗಿ ಹಿಂಸೆ ತಾಂಡವಾಡಿದ್ದು ಸುನ್ನೀ ಮುಸ್ಲಿಮರ ವಿರುದ್ಧ. ನೂರಾರು ಸುನ್ನಿಗಳ ಕೊಲೆ, ಸೂಫಿ ಸಂತರ ಹತ್ಯೆ, ಹೆಣ್ಮಕ್ಕಳ ಮಾನಭಂಗದಂತಹ  ಕ್ರೂರ ಕೃತ್ಯ ನಡೆಸಿತು. ಸುನ್ನೀ ಸ್ಮಾರಕಗಳನ್ನು, ಮಹಾತ್ಮರ ಸನ್ನಿಧಿಗಳನ್ನು, ಸುನ್ನಿ ಮಸ್ಜಿದ್‌ಗಳನ್ನು ಧ್ವಂಸ ಮಾಡಿತು. ಸಮುದಾಯದ ಹೆಸರಲ್ಲಿ ಐಸಿಸ್ ಮಾಡಿದ ರಕ್ತ ಸಿಕ್ತ ದಾಂಧಲೆಯನ್ನು ನೋಡಿ ವಹ್ಹಾಬಿಯ ಹುಟ್ಟುರಾದ ಸೌದಿ ಅರೇಬಿಯ ಕೂಡ ವಹ್ಹಾಬಿಸಂ ನಿಂದ ದೂರ ನಿಂತಿತು. ಕೆಲವೆಡೆ ಅವರ ಪುಸ್ತಕಗಳು ಬ್ಯಾನ್ ಆದವು*. 

*ಕೇರಳದಿಂದ ಕೆಲವರು ಕಣ್ಮರೆಯಾಗಿ ಸಿರಿಯಕ್ಕೆ ಹೋಗಿ ಐಸಿಸ್ ಸೇರಿದ್ದು ಇದೇ ಸಲಫಿ ಕಾರ್ಯಕರ್ತರು. ಇದನ್ನು ತಿರಸ್ಕರಿಸಲು ಸಾಧ್ಯನಾ ? ದಾಯಿಷ್ ಎಂಬ ಉಗ್ರ ಗುಂಪಿಗೆ ಕೇರಳದಿಂದ ಸಲಫಿ ಯುವಕರು ಹೋಗಿ ಸೇರಿದ್ದನ್ನು ನಿಷೇಧಿಸಲು ಸಾಧ್ಯನಾ ? ಇಂತಹ ಉಗ್ರ ಚಿಂತನೆ ಮಂಗಳೂರಲ್ಲೂ ನಡೆಯುತ್ತದೆಯೆಂಬುದನ್ನು ಕರ್ನಾಟಕದ ಸಲಫಿ ಮುಖಂಡ ಇಸ್ಮಾಯಿಲ್ ಶಾಫಿಯೇ ಬಹಿರಂಗಪಡಿಸಿದ್ದಾರೆ*.

https://youtu.be/kvdEh7rHX-o

*ಇನ್ನು ಇವರಿಗೂ ನಮಗೂ ಸಂಬಂಧವಿಲ್ಲವೆಂದು ಸಲಫಿಗಳು ಹೇಳಬಹುದು. ಸಂಬಂಧ ರಕ್ತದಲ್ಲಿ ಇದೆ. ಜಾಗತಿಕ ಮುಸಲ್ಮಾನರು ಗೌರವಿಸುವ ಪವಿತ್ರ ರೌಳಾ ಶರೀಫ ನ್ನು ಧ್ವಂಸ ಮಾಡುವುದಾಗಿ ಹೇಳಿದ್ದು ಝಕರಿಯಾ   ಎಂಬ ಉಗ್ರ ಸಲಫಿ*
https://youtu.be/52oWKR7SMU0

*ಸುನ್ನೀ ಮದರಸಗಳಲ್ಲಿ ಕಲಿಯುವ ಮಕ್ಕಳನ್ನು ಕತ್ತು ಹಿಸುಕಿ ಕೊಳ್ಳಬೇಕೆಂದು ಹೇಳಿದು ಬಾಳುಶ್ಶೇರಿ ಎಂಬ ಮತ್ತೊಬ್ಬ ಉಗ್ರವಾದಿ*
https://youtu.be/4xh0o3XLFzA

*ದೇಶಾದ್ಯಂತ ವಿರುವ ಮಹಾತ್ಮರ ದರ್ಗಾಗಳನ್ನು ನಾಶ ಮಾಡಬೇಕೆಂದು ಕರೆ ನೀಡಿದ್ದು ಉಮರ್ ಮೌಲವಿ ಎಂಬ ಮತ್ತೊಬ್ಬ ಸಲಫಿ ನೇತಾರ*.

 ಹೀಗೆ ಸಲಫಿ ಪುಸ್ತಕಗಳು, ಭಾಷಣಗಳು, ಬರಹಗಳು ಉಗ್ರವಾದಕ್ಕೆ ಪ್ರೇರಣೆ ನೀಡಿವೆ. ಸುನ್ನಿಗಳು ಮುಶ್ರಿಕರು, ಮಕ್ಕಾ ಮುಶ್ರಿಕರಿಗಿಂತ ಕಡೆ, ಎಂಬ ವಾದ ಸರಣಿಗಳೇ ಅವರನ್ನು ಭೀಕರತೆಗೆ ಕೊಂಡೊಯ್ಯುತ್ತವೆ.
ಬಾಬಾ ಬುಡನ್‌ಗಿರಿ ವಿಷಯದಲ್ಲೂ ಆರ್‌ಎಸ್‌ಎಸ್ ಪರ ನಿಲುವು ತಾಳಿದ್ದು ಇದೇ ಸಲಫಿಗಳು. ಕೇರಳದಾದ್ಯಂತ ಅನೇಕ ಭಾಗಗಳಲ್ಲಿ ಮಖ್‌ಬರ ಧ್ವಂಸ ಮಾಡಿದ ಕುಖ್ಯಾತಿ ಇದೇ ಸಲಫಿಗಳಿಗಿದೆ

*ಒಟ್ಟಿನಲ್ಲಿ ಸಲಫಿ ಚಿಂತನೆಗಳು, ಆಶಯಗಳು ಜನರನ್ನು ಉಗ್ರವಾದಕ್ಕೆ ಪ್ರೇರೇಪಿಸಿವೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಈ ಆರೋಪ ಕೇಳುವಾಗ ಸಲಫಿಗಳಿಗೆ ಮುಜುಗರವಾಗುವುದಾದರೆ ಅವರು ಸಲಫಿಸಂ ನಿಂದ ಹೊರ ಬರುವುದಲ್ಲದೇ ಬೇರೆ ಮಾರ್ಗವಿಲ್ಲ*  .
ಇಲ್ಲೊಬ್ಬನ ಪ್ರಶ್ನೆ...
*ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಗ್ರಾಂಡ್ ಮುಫ್ತಿ ಎಂದು ಘೋಷಿಸಬೇಕಾದರೆ, ಎಲ್ಲಾ ಉಲಮಾಗಳ ಅನುಮತಿ ಪಡೆಯಬೇಕಾಗಿಲ್ಲವೇ?*

ಉತ್ತರ..👇🏽

ಮಂಗಳೂರಿನ ಕೆಲವೊಂದು ಮೊಹಲ್ಲಾಗಳಿಗೆ *ತ್ವಾಖಾ ಅಹ್ಮದ್ ಮುಸ್ಲಿಯಾರ್* ರವರನ್ನು ಖಾಝಿಯಾಗಿ ನೇಮಿಸಲಾಗಿದೆ.
*ತ್ವಾಖಾ ಉಸ್ತಾದ್*  ರವರನ್ನು ಖಾಝಿಯಾಗಿ ನೇಮಿಸುವಾಗ ಆ ಮೊಹಲ್ಲಾದ ಎಲ್ಲಾ ಜನರ ಅನುಮತಿ ಪಡೆಯಲಾಗಿದೆಯಾ?
ಅಲ್ಲಿ *ತ್ವಾಖಾ ಉಸ್ತಾದ್* ರವರನ್ನು ವಿರೋಧಿಸುವ ಎಪಿ ವಿಭಾಗದವರು ಮತ್ತು ಇನ್ನಿತರ ಪಂಗಡದವರೂ ಇದ್ದಾರೆ ತಾನೇ. 
ಅಂದರೆ, ಇವರ್ಯಾರ ವಿರೋಧವನ್ನೂ ಪರಿಗಣಿಸದೆ, ಬಹುಸಂಖ್ಯಾತರ ಅಂಗೀಕಾರದೊಂದಿಗೆ *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ನೇಮಿಸಲಾಗಿದೆ ಎಂಬುದಂತೂ ಸತ್ಯ.
ಅಂದರೆ, ಸಣ್ಣ ಸಂಖ್ಯೆಯ ಜನರ ವಿರೋಧವನ್ನು ಪರಿಗಣಿಸಬೇಕಾಗಿಲ್ಲ ಎಂಬುದು *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ನೇಮಿಸಿದ ಕಾರಣದಿಂದ ನಮಗೆ ತಿಳಿದುಕೊಳ್ಳಬಹುದು.

ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು "ನಾವು ಭಾರತದ ಗ್ರಾಂಡ್ ಮುಫ್ತಿಯಾಗಿ ಅಂಗೀಕರಿಸುವುದಿಲ್ಲ" ಎಂದು ವಿರೋಧಿಗಳು ಹೇಳುತ್ತಾರೆ.
*ಹಾಗಾದರೆ,  ಇದುವರೆಗೂ ಭಾರತದ ಗ್ರಾಂಡ್ ಮುಫ್ತಿ ಯಾಗಿದ್ದ ಬಹುಮಾನ್ಯ ತಾಜುಶ್ಯರೀಅ ಮುಫ್ತಿ ಮುಹಮ್ಮದ್ ಅಖ್ತರ್ ರಝಾ ಖಾನ್ ಖಾದಿರಿ, ಅಲ್ ಅಝ್'ಹರಿ ಎಂಬ ವಿದ್ವಾಂಸರನ್ನು ಈ ವಿರೋಧಿಗಳು ಗ್ರಾಂಡ್ ಮುಫ್ತಿ ಯಾಗಿ ಅಂಗೀಕರಿಸಿದ್ದರಾ?*
 ಅಥವಾ, ಇವರ ಅಂಗೀಕಾರ ಅಥವಾ ತಿರಸ್ಕಾರವನ್ನು ಹನಫಿಗಳು ಪರಿಗಣಿಸಿದ್ದರಾ? ಇಲ್ಲವಲ್ಲ.
ಅಂದಮೇಲೆ, ಎಪಿ ಉಸ್ತಾದರನ್ನು "ನಾವು ಗ್ರಾಂಡ್ ಮುಫ್ತಿಯಾಗಿ ಅಂಗೀಕರಿಸುವುದಿಲ್ಲ" ಎಂಬ ತಿರಸ್ಕಾರಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ..

ಭಾರತ ದೇಶದ ಮುಸ್ಲಿಮರ ಜನಸಂಖ್ಯೆಯ 90% ಜನರೂ ಸುನ್ನಿಗಳು. ಅದರಲ್ಲಿ 99% ಜನರು ಹನಫಿಗಳು. ಅಂದರೆ, ಇಲ್ಲಿ ಯಾವುದೇ ನಿರ್ಣಯಕ್ಕೆ ಹನಫಿಗಳ ಅಂಗೀಕಾರವೇ ಪ್ರಧಾನ.
ಭಾರತ ದೇಶದ ಪ್ರಗಲ್ಘರಾದ ಸುನ್ನೀ ಉಲಮಾಗಳು ಒಟ್ಟು ಸೇರಿ,  *ತಾಜುಶ್ಯರೀಅ* ರವರ ಉತ್ತರಾಧಿಕಾರಿಯಾಗಿ  ಶಾಫಿ ಹನಫೀ ವಲಯದಲ್ಲಿ ಮಾತ್ರವಲ್ಲದೆ, ವಿಶ್ವ ಉಲಮಾ ಒಕ್ಕೂಟದಲ್ಲೇ ಹೆಚ್ಚು ಅಂಗೀಕಾರವಿರುವ ಪ್ರಗಲ್ಭ ವಿದ್ವಾಂಸ ಬಹುಮಾನ್ಯ ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು, ಭಾರತದ ಉಲಮಾ ಒಕ್ಕೂಟ ಗ್ರಾಂಡ್ ಮುಫ್ತಿ ಯಾಗಿ ಅವಿರೋಧವಾಗಿ ಆಯ್ಕೆಮಾಡಿದ್ದಾರೆ.

*ಗ್ರಾಂಡ್ ಮುಫ್ತಿ ವಿರೋಧಿಗಳು ಯಾರ್ಯಾರು?*
ಭಾರತದ ಮುಸ್ಲಿಮರ ಜನಸಂಖ್ಯೆಯ 5-10 ಶೇಕಡಾ ಮಾತ್ರ ನೂತನವಾದಿಗಳಿರುವುದು. ಅವರ ಮತ್ತು SK ಸಮಸ್ತದ ವಿರೋಧವನ್ನು ಬಿಟ್ಟರೆ, ಭಾರತ ದೇಶದ 90 ಶೇಕಡದಷ್ಟು ಬರುವ ಶಾಫೀ ಹನಫೀ ಸುನ್ನೀ ಪಂಗಡದವರು ಎಪಿ ಉಸ್ತಾದರನ್ನು ಅಂಗೀಕರಿಸುತ್ತಾರೆ. ಅಂದಮೇಲೆ, ಒಂದತ್ತು ಶೇಕಡಾ ಜನರ ವಿರೋಧವನ್ನು ಪರಿಗಣಿಸಬೇಕಾಗಿಲ್ಲ ತಾನೇ.
90% ಜನರ ಅಂಗೀಕಾರವನ್ನು ಪರಿಗಣಿಸಿ, ಕೇವಲ 10%  ಜನರ ಅನುಮತಿಯ ಅವಶ್ಯಕತೆ ಇಲ್ಲದೆ ಭಾರತದ ಗ್ರಾಂಡ್ ಮುಫ್ತಿ ಯಾಗಿ ಸುಲ್ತಾನುಲ್ ಉಲಮಾ ರನ್ನು  ಆಯ್ಕೆ ಮಾಡಲು ಸಾದ್ಯವಿದೆ ಎಂಬುದನ್ನು, ಮೊಹಲ್ಲಾದ ಬಹುಸಂಖ್ಯಾತರ ಅಭಿಪ್ರಾಯವನ್ನು ಪರಿಗಣಿಸಿ *ತ್ವಾಖಾ ಉಸ್ತಾದ್* ರವರನ್ನು ಖಾಝಿಯಾಗಿ ಆಯ್ಕೆಮಾಡಿದ ಮಾನ್ಯ SK ಯ ಕಾರ್ಯಕರ್ತರು ತಿಳಿದುಕೊಂಡರೆ ಒಳ್ಳೆಯದು.

*ಘೋಷಣೆ ನಡೆದದ್ದು ಗ್ರೌಂಡ್ ನಲ್ಲಿಯೇ?*
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ *SSF ನ ನವ ರಾಷ್ಟ್ರೀಯ ಸಮಿತಿ* ಯನ್ನು ಕೂಡಾ ಘೋಷಿಸಲಾಯಿತು. ಇದೇನು ಗ್ರೌಂಡ್ ನಲ್ಲಿ ಮಾಡಿದ ಆಯ್ಕೆಯೇ?. ಅಲ್ಲ. ಆಯ್ಕೆ ನಡೆಸಲು ಬೇರಯದೇ ಪ್ರಕ್ರಿಯೆ ಇದೆ. ಅಲ್ಲಿ ನಡೆದ ಆಯ್ಕೆಯನ್ನು ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದುದೆಂದು ಮಾತ್ರ.
ಅದೇರೀತಿ, ಸುಲ್ತಾನುಲ್ ಉಲಮಾ ಎಪಿ ಉಸ್ತಾದರನ್ನು ಗ್ರಾಂಡ್ ಮುಫ್ತಿ ಯಾಗಿ ಆಯ್ಕೆ ಮಾಡಿದ ಪ್ರಕ್ರಿಯೆ ಬೇರೆಯದೇ ಇದೆ. ಅದನ್ನು ಭಾರತದ ಪ್ರಮುಖ ಉಲಮಾಗಳು ಸೇರಿ ನಡೆಸಿರುವುದಾಗಿದೆ. ಅದನ್ನು ಘೋಷಿಸಿದ್ದು ಮಾತ್ರ ಒಂದು ಕಾರ್ಯಕ್ರಮದಲ್ಲಿ..

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಮಕ್ಕಾ ಖುರೈಶಿ ಸುಹೈಲ್ ಹಾಗೂ ಪುತ್ರ ಅಬೂಜಂದಲ್ (ರ) ಸಂತತಿಗಳಲ್ಲಿ ನಾವು ಯಾವ ಸಂತತಿಯಲ್ಲಿ ಸೇರಬೇಕು?*
*ಡಿಸೈಡ್ ಮಾಡಿ...‌*

ಅಂದು ಅಖಿಲಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಜನರಲ್ ಸಕ್ರೇಟರಿಯಾಗಿ ಕಾಂತಪುರಂ ಎಪಿ ಉಸ್ತಾದರನ್ನು ಆಯ್ಕೆ ಮಾಡಿದಾಗ ವಿರೋಧಿಗಳು ಶೈಖುನಾರವರನ್ನು *'ಆಳಿಲ್ಲ(ಅಖಿಲ) ಜಂಇಯ್ಯತುಲ್ ಉಲಮಾ ಸಕ್ರೇಟರಿ'* ಎಂದು ವ್ಯಂಗವಾಡಿದ್ದರು!
ಆದರೆ ವ್ಯಂಗವಾಡಿದವರು ಕೇರಳ ಹಾಗೂ ಕರಾವಳಿಯಲ್ಲೇ ವ್ಯಂಗಿಗಳಾಗಿ ಬಾಕಿಯಾದರು!
ಉಸ್ತಾದ್ ಭಾರತಾದ್ಯಂತ ಸಂಚರಿಸಿ ಇಂಡಿಯಾದ ಬಾಷೆಯಲ್ಲೇ ಸಂವಹನ ನಡೆಸಿ ಭಾರತದ ಮುಸ್ಲಿಮರಿಗೆ ಧೀರ ನಾಯಕತ್ವ ಕೊಟ್ಟರು.
ಪರಿಣಾಮ,
ದೇಶದ
ಗ್ರಾಂಡ್ ಮುಫ್ತಿ ಯಾಗಿ ದೆಹಲಿಯಲ್ಲಿ ಪ್ರಖ್ಯಾತ ಉಲಮಾಗಳು ಸಯ್ಯದರುಗಳ ಘನಸಾನಿಧ್ಯದಲ್ಲಿ  ಘೋಷಿಸಲ್ಪಟ್ಟರು!
ಆವಾಗಲೇ ವ್ಯಂಗವಾಡುವವರಿಗೆ ತಿಳಿದದ್ದು, ಎಪಿ,ಭಾರತಾದ್ಯಂತ ಸಂಚರಿಸಿ ತನ್ನ ಅಖಿಲ ಭಾರತ ಸಕ್ರೇಟರಿ ಸ್ಥಾನಕ್ಕೆ ತಕ್ಕ ಕಾರ್ಯಚರಿಸಿ ಸದ್ದಿಲ್ಲದೆ ಸುದ್ದಿ ಮಾಡಿದ್ದಾರೆ!
ಹೌದು ಉಸ್ತಾದ್ ಇದೀಗ
ಭಾರತ ಮುಸಲ್ಮಾನರ ಅಭಿಮಾನವಾಗಿ ಶೈಖುನಾ ಮಾರ್ಪಟ್ಟಿದ್ದಾರೆ!

ಪುನಃ ಅವರು
ಎಪಿ ಉಸ್ತಾದರಿಗೆ ಗ್ರಾಂಡ್ ಮುಫ್ತಿಯಾಗಲು ಇರುವ ಅರ್ಹತೆ ಯಾವುದೆಂಬ ಹುಡುಕಾಟದಲ್ಲಿ  ತೊಡಗಿಕೊಂಡಿದ್ದಾರೆ.
ಅವರ ಹುಡುಕಾಟ ವಿಧ್ವೇಷ,ಅಸೂಯೆಯ ಬಾಷೆಯಿಂದ ಮಾತ್ರವಾಗುವಾಗ ಸಹಜವಾಗಿಯೇ ವಿದೇಶಕ್ಕೆ ಹೋಗಿ ಗ್ರಾಂಡ್ ಮುಫ್ತಿ ಅಂತ ಹೇಳಿ ಹಣಮಾಡುವ ಧಂಧೆಯೆಂಬ ನಿರೂಪಣೆ ಬಂದಿದೆ!
ಪಾಪ,ಜಗತ್ತಿನಲ್ಲೇ ಟೋಪ್ & ಟೋಪ್ ನಾಯಕರ ಪಟ್ಟಿಯಲ್ಲಿ ಗುರುತಿಸಲ್ಪಟ್ಟ ಎಪಿ ಉಸ್ತಾದರಿಗೆ ಗ್ರಾಂಡ್ ಮುಫ್ತಿ ಪಟ್ಟ ಸಿಕ್ಕಿದರೆ ಮಾತ್ರ ಬದುಕಲು ಸಾದ್ಯ ಅಂಥ ತಿಳಿದುಕೊಂಡ ಅವಿವೇಕಿಗಳಿಗೆ ಕೊರತೆ ಇಲ್ಲ ಎಂದು ಸಮಾಜ ತಿಳಿಯುವಂತಾಯಿತು ಅಷ್ಟೆ.

ನಿಮಗೆ ತಿಳಿದಿರಬಹುದು ಹುದೈಬಿಯಾ ಕರಾರು ಬರೆಯುವಾಗ ಸುಹೈಲ್ ಬಿನ್ ಅಮ್ರ್ ಎಂಬಾತ ಕರಾರಿನಲ್ಲಿ *ಮುಹಮ್ಮದ್ ರ್ರಸೂಲುಲ್ಲಾಹ್* ಎಂದು ಬರೆಯಲು ಸುತರಾಂ ಒಪ್ಪಲಿಲ್ಲ.ಕಾರಣ *ರಸೂಲುಲ್ಲಾಹ್* ಎಂಬ ಟೈಟಲ್ ಗೌರವದ ಸಂಕೇತ!
ಅಂತಹ ಗೌರವಕ್ಕೆ ಪ್ರವಾದಿ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಅರ್ಹರು ಎಂದು ಮಕ್ಕಾ ಖುರೈಶಿಗಳ ನೇತಾರನಾದ ಸುಹೈಲ್ ನಿಗೆ ಗೊತ್ತು.ಆದರೂ ಅವನ ಅಹಂಕಾರ ಅಸೂಯೆ ಆ ನಾಮದಿಂದ ರಸೂಲರನ್ನು ಕರೆಯಲು ಇಷ್ಟಪಡಲಿಲ್ಲ.
ಅವನು ಹೇಳಿದ ಬೇಕಾದರೆ *ಅಬ್ದುಲ್ಲಾನ ಪುತ್ರ ಮುಹಮ್ಮದ್* ಅಂತ ಬರೆ *ರಸೂಲುಲ್ಲಾಹ್* ಎಂಬ ಗೌರವ ನಾಮದಿಂದ ಬರೆಯಬಾರದು!

ಆವಾಗ ಸಹಾಬಿಗಳ ರಕ್ತ ಕುದಿಯಲಾರಂಭಿಸಿತು. ನೆಬಿಯವರ ಆಜ್ಞೆಯೊಂದೇ ಬಾಕಿ ಅವರು ಎಲ್ಲದಕ್ಕೂ ತಯ್ಯಾರಾಗಿದ್ದರು.
ಆದರೆ ರಟ್ಟೆಬಲದ ಆವೇಶಕ್ಕೆ ಆಸ್ಪದಕೊಡದ ಮುಹಮ್ಮದ್ ನೆಬಿಯವರು *ಮುಹಮ್ಮದ್ ಬಿನ್ ಅಬ್ದಿಲ್ಲಾ* ಎಂದು ಬರೆಯಲು ಆಜ್ಞಾಪಿಸಿದರು.

ಗೌರವದ ಸಂಕೇತವಾದ *ರಸೂಲುಲ್ಲಾಹ್* ಎಂಬ ನಾಮವನ್ನು ಅಂಗೀಕರಿಸಲು ಸುಹೈಲ್ ಸಹಿತ ಮಕ್ಕಾ ಮುಶ್ರಿಕರು ತಯ್ಯಾರಾಗಿರಲಿಲ್ಲ. ಕಾರಣ ಅಸೂಯೆ ಅವರ ತಲೆಗೆ ಅಷ್ಟೊಂದು ಅಡರಿತ್ತು!

ಅದೇ ರೀತಿ ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳಿಗೆ *ಗ್ರಾಂಡ್ ಮುಫ್ತಿ* ಮುಂತಾದ ಗೌರವ ನಾಮಗಳಿಗೆ ಬೆಲೆಕೊಡದ ಸುಹೈಲ್ ನ ಸಂತತಿಗಳು ಈಗಲೂ ಇದ್ದಾರೆ.ಅಂತ್ಯದಿನದವರೆಗೂ ಅವರಿರುವರು.ಅದು ಚರಿತ್ರೆಯ ಪುನರ್ಜನ್ಮ!

ನಿಜವಾಗಿಯೂ ಎಪಿ ಉಸ್ತಾದರಿಗೆ ಜಾಗತಿಕ ಮಟ್ಟದಲ್ಲಿ ಸಿಗುವ ಮನ್ನಣೆ'ಅದರಲ್ಲೂ ವಿಶೇಷವಾಗಿ ಭಾರತಾದ್ಯಂತ ಲಭಿಸುವ ಅಂಗೀಕಾರ ತಮ್ಮ ನಾಯಕರಿಗೆ ದಕ್ಕುವುದಿಲ್ಲ ಎಂಬ ಕೊರಗು ಸಹಜವಾಗಿಯೇ ಎಪಿ ಉಸ್ತಾದರ ವಿರೋಧಿಗಳನ್ನು ಕಾಡುತ್ತಿದೆ.
ಅದಕ್ಕೆ ನಮಗೇನು ಮಾಡಲಿಕ್ಕೆ ಸಾದ್ಯ?
ಉಸ್ತಾದರೊಬ್ಬರು ಹೇಳಿದಂತೆ ನಿಮ್ಮ ಉಲಮಾಗಳು ಅಥವಾ ನಾಯಕರು ಎಪಿ ಉಸ್ತಾದರಿಗಿಂತ ದೊಡ್ಡದಾದ ಸಾಧನೆ ಮಾಡಲಿ ಆಗ ಅವರನ್ನೂ ಗ್ರಾಂಡ್ ಮುಫ್ತಿ ಪಟ್ಟ ಹುಡುಕಿ ಬರುತ್ತದೆ.ನಿಮ್ಮ ಆಗ್ರಹದಂತೆ ಎಪಿ ಉಸ್ತಾದ್ ಸಣ್ಣವರಾಗುತ್ತಾರೆ.

ದಿನಬೆಳಗಾಗುವುದರಲ್ಲಿ ಎಪಿ ಉಸ್ತಾದರಿಗೆ ಈ ಗೌರವ ಸಿಕ್ಕಿದ್ದಲ್ಲ ಎಂಬುವುದು ವಿರೋಧಿಗಳಿಗೂ ಗೊತ್ತಿರುವ ಸಂಗತಿ.
ಕಠಿಣ ಅಧ್ವಾನ,ಸಾಧನೆ, ಸಮುದಾಯ ಕಟ್ಟಕಡೆಯವನನ್ನು ಮೇಲೆತ್ತಲು ಬೇಕಾಗಿ ನಿರಂತರ ಪರಿಶ್ರಮ,ಅದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಹೆಜ್ಜೆ ಹಾಕಿದ್ದು,ಅಂತರಾಷ್ಟ್ರೀಯ ನಾಯಕರೊಂದಿಗೆ ಸಂಬಂಧ, ಭಾರತಾದ್ಯಂತ ಪ್ರವಾಸಮಾಡಿ ಅಲ್ಲೆಲ್ಲಾ ಶಿಕ್ಷಣ ಸಮುಚ್ಚಯ ಕಟ್ಟಿ ಅಲ್ಲಿಯ ಶಿಕ್ಷಣ ವಂಚಿತರನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದು,ಕಾಶ್ಮೀರದ ಗುಂಡಿನ ಶಬ್ದದೊಂದಿಗೆ ಎದ್ದೇಳುವ ಮಕ್ಕಳನ್ನು ತನ್ನ ಮರ್ಕಝ್ ಗೆ ತಂದು ಅವರಿಗೆ ಬಾಳುಕೊಟ್ಟದ್ದು.ತನ್ನ ಅಗಾದವಾದ ವಿಜ್ಞಾನವನ್ನು ಯಥೇಚ್ಛವಾಗಿ ಧಾರೆಯೆರದು ಲಕ್ಷಾಂತರ ಉಲಮಾಗಳನ್ನು ಸ್ರಷ್ಟಿಸಿ ಉಲಮಾಗಳ ಸುಲ್ತಾನರಾಗಿ ಪ್ರಸಿಧ್ಧಿಪಡೆದದ್ದು.ಉತ್ತರ ಭಾರತದ ಮುಸಲ್ಮಾನರು ನಾಯಕತ್ವದ ಕೊರತೆ ಅನುಭವಿಸಿದಾಗ ಅಲ್ಲಿನ ಉಲಮಾಗಳನ್ನು ತನ್ನ ಮರ್ಕಝ್ ಗೆ ಕರೆಸಿ ನಾಯಕತ್ವದ ಪಾಠ ಕಲಿಸಿಕೊಟ್ಟು ಅವರಿಗೂ ಶೈಖ್ ಆದಾಗ,
ಅವರೆಲ್ಲರೂ ಒಕ್ಕೂರಲಿನಿಂದ ಘೋಷಿಸಿದರು ನಮ್ಮ ಶೈಖ್ ಖಬೀರ್ *ಗ್ರಾಂಡ್ ಮುಫ್ತಿ* ಶೈಖ್ ಅಬೂಬಕರ್ ಕಿಬ್ಲ ಆಗಿದ್ದಾರೆ!
ಅವರು ಅಭಿಮಾನದಿಂದ ಘೋಷಿಸಿದರು!

ಪದವಿಗಳು ಬಿರುದುಗಳು,ಸನ್ಮಾನ, ಅಭಿನಂದನೆಗಳು ಆಲಿಂ ಆಗಿರುವುದರ ಮಾನದಂಡನೆಯಲ್ಲ.ಎಂದು ಜಕ್ರಿಬೆಟ್ಟು ಹೇಳುವಾಗಲೂ ಇದೆಲ್ಲವೂ ಒಬ್ಬ ಆಲಿಂ ಸಮಾಜದಲ್ಲಿ ಸುಧಾರಣೆ ಮಾಡಿದಾಗ ಅವರನ್ನು ಹುಡುಕಿ ಬಂದಿದೆ ಎಂಬ ಅಲ್ಪ ಜ್ಞಾನ ಕೂಡ ಜಕ್ರಿಗೆ ಇಲ್ಲದೆ ಹೋದದ್ದು  ದುರಂತ.

ಅಸೂಯೆ ಮನುಷ್ಯನನ್ನು ಯಾವ ರೀತಿ ಕ್ರೂರಿಯನ್ನಾಗಿ ಮಾರ್ಪಡಿಸುತ್ತದೆಯೆಂಬುದು ಇಂದಿನ ಕೆಲವರ ಹತಾಶೆ ಬರಹಗಳ ಮೂಲಕ ತಿಳಿಯಲು ಸಾದ್ಯವಾಯಿತು.

ಚರಿತ್ರೆಯಿಂದ ನಾವು ಪಾಠ ಕಲಿಯಬೇಕು.ಪುಣ್ಯ ಹಬೀಬರಿಗೆ ಇರುವ *ರಸೂಲುಲ್ಲಾಹ್* ಎಂಬ ಗೌರವಕ್ಕೆ ಅಸೂಯೆ ನಿಮಿತ್ತ ಸುಹೈಲ್ ಬೆಲೆ ಕೊಡಲಿಲ್ಲ ಅವನ ಸಂತತಿಗಳು ಅಂತ್ಯದಿನದ ತನಕ ಬಾಕಿಯಾಗಲಿದೆ.
ಅದೇ ಸಮಯ ಸುಹೈಲ್ ನ ಪುತ್ರ ಅಬೂ ಜಂದಲ್ ಇಸ್ಲಾಂ ಸ್ವೀಕರಿಸಿ ನೆಬಿಯವರನ್ನು *ರಸೂಲುಲ್ಲಾಹ್* ಎಂದು ಎದೆಗಪ್ಪಿ ಘೋಷಿಸಿಯೇ ಬಿಟ್ಟರು!
ಉತ್ತರಾಧಿಕಾರಿಗಳಾದ ಉಲಮಾಗಳನ್ನು ಗೌರವದಿಂದ ಕರೆಯುವ ಅಬೂಜಂದಲ್ (ರ) ರವರ ಸಂತತಿಯೂ ಅಂತ್ಯದಿನದವರೆಗೆ ಬಾಕಿಯಾಗಲಿದೆ.ಅವರು ಸತ್ಯದ ಹಾದಿಯಲ್ಲಿ ಅಜಮರಾಗಿರುವರು.

ಕೊನೆಯದಾಗಿ...;

*ಸಕರಾತ್ಮವಾಗಿ ಚಿಂತಿಸಿ ಕಾರ್ಯಚರಿಸುವವನನ್ನು ಯಾವ ವಿಷದಿಂದಲೂ ಕೊಲ್ಲಲು ಸಾದ್ಯವಿಲ್ಲ.*
*ಅದೇ ರೀತಿ ನಕರಾತ್ಮವಾಗಿ ಚಿಂತಿಸುವವನನ್ನು ಯಾವ ಔಷದಿಯಿಂದಲೂ ಗುಣಪಡಿಸಲು ಸಾದ್ಯವಿಲ್ಲ....*

ಅಬೂಶಝ
ಭಾರತದಲ್ಲಿ ಗ್ರ್ಯಾಂಡ್ ಮುಫ್ತಿ ಯಾಕಿರಬಾರದು

ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಉಸ್ತಾದ್ ರವರನ್ನು ದೆಹಲಿಯಲ್ಲಿ ನಡೆದ ಗರೀಬ್ ನವಾಜ್ ಶಾಂತಿ ಸಮ್ಮೇಳನದಲ್ಲಿ ಗ್ರ್ಯಾಂಡ್ ಮುಫ್ತಿ ಪದ ಅಲಂಕರಿಸಿದ ನಂತರ ,ಗ್ರ್ಯಾಂಡ್ ಮುಫ್ತಿಯ ಬಗ್ಗೆ ಚರ್ಚೆಗಳು ಶುರುವಾಗಿವೆ. ದಕ್ಷಿಣ ಭಾರತದಲ್ಲಿ ಈ ಪದ ಬಳಕೆ ಕಡಿಮೆಯಾಗಿರುವುದರಿಂದ,ಹಾಗೂ ಈ ಬಗ್ಗೆ ಮಾಹಿತಿಯ ಕೊರತೆಯಿಂದ ಇಂತಹ ಚರ್ಚೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿವೆ.

ಗ್ರ್ಯಾಂಡ್ ಮುಫ್ತಿ ಅಂದರೆ..
ತುರ್ಕಿ ಕೇಂದ್ರವಾಗಿಟ್ಟು ಉಸ್ಮಾನಿಯ ಖಿಲಾಫತ್ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಗ್ರ್ಯಾಂಡ್ ಮುಫ್ತಿ ಎಂಬ ಪದ ಚಾಲ್ತಿಗೆ ಬಂತು.
ಇಸ್ಲಾಮಿನ ಬಗ್ಗೆ ಆಳವಾದ ಜ್ಞಾನ ಹೊಂದಿ,ಸಮಕಾಲೀನ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದು ,ಅದರ ಪರಿಹಾರಕ್ಕೆ ಪ್ರಾಯೋಗಿಕವಾದ ವಿಧಿ ನೀಡಲು ಅರ್ಹತೆಯಿರುವವರನ್ನು ಮುಫ್ತಿ ಎನ್ನಲಾಗುತ್ತದೆ. ಈ ಮುಫ್ತಿಗಳ ಮುಖಂಡರಿಗೆ ಗ್ರ್ಯಾಂಡ್ ಮುಫ್ತಿ ಎಂದು ಕರೆಯಲಾಗುತ್ತದೆ ಭಿನ್ನಾಭಿಪ್ರಾಯಗಳಿರುವ ವಿಷಯದಲ್ಲಿ ಅಂತಿಮ ತೀರ್ಮಾನ ನೀಡುವುದು, ಶರೀಹತ್‌ನ ಸಂರಕ್ಷಣೆಗೆ ಯುಕ್ತಿ ಪೂರ್ಣವಾದ ಮಾರ್ಗ ಅನುಸರಿಸುವುದು ಈ ಗ್ರಾಂಡ್ ಮುಫ್ತಿಯ ಮುಖ್ಯ ಜವಾಬ್ದಾರಿ

ಇಸ್ಲಾಮೀ ಇತಿಹಾಸದಲ್ಲಿ ಇದನ್ನು ವಿವಿಧ ರೂಪದಲ್ಲಿ ಉಪಯೋಗಿಸಲಾಗಿತ್ತು.
ಮುಸ್ಲಿಂ ರಾಷ್ಟ್ರಗಳಲ್ಲಿ ಸರಕಾರವೇ ಇಂತಹ ಪದವಿ ಸೃಷ್ಟಿಸಿ, ತಾನೇ ಆ ಪದವಿಗೆ ಯೋಗ್ಯ ವಿದ್ವಾಂಸರನ್ನು ನಿಯಮಿಸುತ್ತದೆ. ಉದಾಹರಣೆಗೆ ಸೌದಿ.
ಇನ್ನು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಅಥವಾ ಮುಸ್ಲಿಂ ಅಲ್ಪ ಸಂಖ್ಯಾತ ದೇಶಗಳಲ್ಲಿ ಅಲ್ಲಿನ ಅಧಿಕೃತ ಇಸ್ಲಾಮಿಕ್ ಒಕ್ಕೂಟಗಳು, ಸಮಿತಿಗಳು, ಉಲಮಾಗಳು ಈ ಪದವಿಗೆ ಅರ್ಹ ವಿದ್ವಾಂಸನನ್ನು ನೇಮಕ ಮಾಡುತ್ತದೆ. ಉಸ್ಮಾನಿಯಾ ಖಿಲಾಫತ್‌ನ ಅದೇ ಅನುಕರಣೆಯನ್ನು ಈಜಿಪ್ತ್ ಮಾಡಿದೆ. ಆಸ್ರೇಲಿಯಾ, ಬಾಂಗ್ಲಾದೇಶ, ಬೋಸ್ನಿಯಾ, ಹಂಗೇರಿ,ಅಲ್ಬೇನಿಯ ದಂತಹ ರಾಷ್ಟ್ರಗಳಲ್ಲಿರುವ ಗ್ರ್ಯಾಂಡ್ ಮುಫ್ತಿಗಳು ಇದಕ್ಕೆ ಉದಾಹರಣೆ.
ಇನ್ನು ಇವರನ್ನು ಅಂಗೀಕರಿಸದ ಮುಸ್ಲಿಂ ಗುಂಪುಗಳು ಆ ರಾಷ್ಟ್ರದಲ್ಲಿ ಇರಬಹುದು. ಹಾಗೆಂದು ಗ್ರ್ಯಾಂಡ್ ಮುಫ್ತಿ ಪದ ಅಪ್ರಸ್ತುತವಾಗುವುದಿಲ್ಲ.

ಇನ್ನು ಭಾರತದಲ್ಲಿ ಈ ಪದವಿ ಹಿಂದೆಯೂ ಚಾಲ್ತಿಯಲ್ಲಿತ್ತು.* *2018 ಜುಲಾ 20ರಂದು ವಫಾತಾದ ಶೈಖ್ ಮುಹಮ್ಮದ್ ಅಖ್ತಾರ್ ರಝಾ ಖಾನ್ ಅಲ್ ಅಝ್ಹರಿಯವರು ಹಿಂದಿನ ಗ್ರ್ಯಾಂಡ್ ಮುಫ್ತಿಯಾಗಿದ್ದರು.
ಇಮಾಂ ಅಹ್ಮದ್ ರಝಾಖಾನ್‌ರವರ ಪೌತ್ರರಾಗಿರುವ ಅಖ್ತಾರ್ ರಝಾಖಾನ್‌ರವರನ್ನು ಕೂಡಾ ಇದೇ ರೀತಿ ನೇಮಿಸಲಾಗಿತ್ತು.
ನಿನ್ನೆ ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಉತ್ತರ ಭಾರತದ ಸುನ್ನೀ ಉಲಮಾ ಒಕ್ಕೂಟದ ಪ್ರತಿನಿಧಿಗಳು, ಇಸ್ಲಾಮಿಕ್ ಸಂಘ ಸಂಸ್ಥೆಗಳ ಮುಖಂಡರು, ಸೂಫಿ ಸಂತರ ಪ್ರತಿನಿಧಿಗಳು ಒಟ್ಟು ಸೇರಿ ಶೈಖುನಾ ಎ.ಪಿ. ಉಸ್ತಾದರನ್ನು ಈ ಪದವಿಗೆ ಆರಿಸಿದ್ದಾರೆ.
ಇನ್ನು ಇವರನ್ನು ಅಂಗೀಕರಿಸದವರು ಈ ದೇಶದಲ್ಲಿರಬಹುದು. ಹಾಗೆಂದು ಈ ಪದವಿ ನೀಡುವುದು ಸರಿಯಲ್ಲವೆಂದು ಹೇಳುವುದು ಬಾಲಿಶತನ.

ಕಾರಣ ದೇಶದ ಮುಸಲ್ಮಾನರಲ್ಲಿ ಬಹು ಸಂಖ್ಯಾತರಾಗಿರುವ ಸುನ್ನಿಗಳಿಗೆ ಎ.ಪಿ. ಉಸ್ತಾದ್ ಅಂಗೀಕೃತ, ಪ್ರಬಲ ನಾಯಕ.

ಇನ್ನು ಎ.ಪಿ. ಉಸ್ತಾದ್‌ರೊಂದಿಗೆ ಸಂಘಟನಾ, ಸಿದ್ಧಾಂತಗಳ ಭಿನ್ನತೆಯನ್ನು ಬದಿಗಿಟ್ಟು ಎಲ್ಲರೂ ಚಿಂತಿಸಿದರೆ ಇಂತಹ ನೇಮಕದ ಅನಿವಾರ್ಯತೆ ಇದೆಯೆನ್ನಬಹುದು. ವಿಶೇಷವಾಗಿ ಮುಸ್ಲಿಂ ಸಮುದಾಯ ಶಿಕ್ಷಣ ಆರೋಗ್ಯ, ಉದ್ಯೋಗ, ಆರ್ಥಿಕ ರಂಗದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು ಇವರ ಉನ್ನತಿಗೆ ಶ್ರಮಿಸುವ ವಿದ್ವಾಂಸರ ಅನಿವಾರ್ಯತೆ ಖಂಡಿತ ಇದೆ. ನೇತೃತ್ವ ಕೊರತೆ ಅನುಭವಿಸುತ್ತಿರುವ ಈ ಸಮುದಾಯಕ್ಕೆ ಸರಿಯಾದ ದಿಕ್ಕು, ಸ್ಪಷ್ಟವಾದ ದಾರಿ ತೋರಿಸುವ ನಾಯಕನ ಅಗತ್ಯವಿದೆ.

ಎ.ಪಿ. ಉಸ್ತಾದ್ ಯೋಗ್ಯ ವ್ಯಕ್ತಿಯಾ?
ಎ.ಪಿ. ಉಸ್ತಾದರ ಆಯ್ಕೆಯನ್ನು ವಿಮರ್ಶಿಸುವವರು, ಟೀಕಿಸುವವರು ಇರಬಹುದು. ಅದು ಅವರ ಸ್ವಾತಂತ್ರ್ಯ. ಆದರೆ ಪೂರ್ವಗ್ರಹ ಮೆರೆತು ಚಿಂತಿಸಿದರೆ ಸತ್ಯ ಮನದಟ್ಟಾಗಬಹುದು. ದೇಶದ 22ಕ್ಕೂ ಮಿಕ್ಕ ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಕೇಂದ್ರಗಳನ್ನು ಸ್ಥಾಪಿಸಿ, ಮಸ್ಜಿದ್ ,ಮದರಸಗಳನ್ನು ನಿರ್ಮಿಸಿ, ಅಲ್ಲೆಲ್ಲಾ ಮುಸ್ಲಿಮರನ್ನು ಒಗ್ಗೂಡಿಸಿ, ದೇಶದ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸುವಲ್ಲಿ , ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಲ್ಲಿ  ಎ.ಪಿ ಉಸ್ತಾದರ ಪಾತ್ರ ಅವಿಸ್ಮರಣೀಯ.

ತಾನು ಮಾಡಬೇಕಾದ್ದನೆಲ್ಲಾ ಮಾಡಲು ತಾಖತ್ತಿರುವ, ಹೇಳಬೇಕಾದ್ದನ್ನು ಯಾರ ಮುಲಾಜಿಲ್ಲದೆ ಹೇಳುವ, ಯಾರೇ ಅಧಿಕಾರಕ್ಕೆ ಬಂದರೂ ಅವರೊಂದಿಗೆ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವ, ಸವಾಲುಗಳನ್ನು, ಸಮಸ್ಯೆಗಳನ್ನು ದೃಢವಾಗಿ ನಿಂತು ಎದುರಿಸಿ ಪರಿಹಾರ ಕೈಗೊಳ್ಳಲು ಸಮರ್ಥರಾಗಿರುವ ಎ.ಪಿ. ಉಸ್ತಾದ್ ಈ ಹುದ್ದೆಗೆ ಅರ್ಹವ್ಯಕ್ತಿಯೆಂದರೆ ತಪ್ಪಗಲಾರದು. ಇನ್ನು ಅವರು ಅರ್ಹರಲ್ಲದಿದ್ದರೆ ಅದಕ್ಕಿಂತಲೂ ಮಿಗಿಲಾದ ಬೇರಾರು ಇದ್ದಾರಾ?

ಎ.ಪಿ. ಉಸ್ತಾದರೊಂದಿಗೆ ವಿರೋಧ ಬದಿಗಿಟ್ಟು ಅವರ ಚಟುವಟಿಕೆ, ಸಾಮಾಜಿಕ ಕಳಕಳಿಯನ್ನು ಗಮನಿಸುವವರಿಗೆ ಈ ಸತ್ಯ ಮನದಟ್ಟಾದೀತು.
ಏನಂತೀರಾ?
*ಗ್ರಾಂಡ್ ಮುಫ್ತಿ ಮತ್ತು ವಿವಾದಗಳು*

ಎಪಿ ಉಸ್ತಾದ್ ರನ್ನು ಗ್ರಾಂಡ್ ಮುಫ್ತಿ ಯಾಗಿ ನೇಮಿಸಿದ್ದನ್ನು ವಿರೋಧಿ ಸುವವರು ಯಾರು ?

ಕೆಳಗೆ ನೋಡಿ.
👇👇👇👇

👉 *ಖಾದಿಯಾನಿ ಯಾನೆ ಸಲಪಿ*
👉 *ಶಿಯಾ ಯಾನೆ ವಹ್ಹಾಬಿ*
👉 *ಅಸೂಯೆ ಕೋರರು*
👉 *ಕಳ್ಳ ತ್ವರೀಖ ತ್ ನವರು*


ಇವರು ಎಪಿ ಉಸ್ತಾದ್ ರನ್ನು ಬದ್ದ ಶತ್ರುವಾಗಿ ಕಾಣುವವರು.

ಏಕೆಂದರೆ, ಈ ಬಿದ'ಈ ಗಳನ್ನು ಎಡ್ರಸ್ ಇಲ್ಲದಂತೆ ಮಾಡಿದವರೇ ಎಪಿ ಉಸ್ತಾದರವರು ಮತ್ತು ಅವರ  ಅನುಯಾಯಿಗಳು.

ಗ್ರಾಂಡ್ ಮುಪ್ತಿಯಾದ ಬಳಿಕ ಇವರ ವಿರೋಧ ಜಾಸ್ತಿಯಾಗಿದೆ.

ಅಳಿದುಳಿದ  ತಮ್ಮ ಅಡಿಪಾಯ ಎಲ್ಲಿ ಸರ್ವ ನಾಶ ವಾಗುತ್ತದೆ ಎಂಬ ಹೆದರಿಕೆ  ಗ್ರಾಂಡ್ ಮುಫ್ತಿ ಯ ಬಗ್ಗೆ ಅಪಸ್ವರ ಎತ್ತುವಂತೆ ಮಾಡಿದೆಯಷ್ಟೇ.

ಭಾರತದ ಅತೀ ಹೆಚ್ಚು ಮುಸ್ಲಿಮರು ಹನಫಿ ಬಾಂದವರು. ಅವರ ಅಂತಿಮ ತೀರ್ಪು ಗ್ರಾಂಡ್ ಮುಫ್ತಿ ಯದ್ದೇ. ಗ್ರಾಂಡ್ ಮುಫ್ತಿ ಯಾಗಿದ್ದ ತಾಜುಶ್ಶರೀಅ ವಫಾತಾದಾಗ ಅದೇ ಹನಫಿ ವಿದ್ವಾಂಸರ ಒಕ್ಕೂಟ ಚರ್ಚೆ ನಡೆಸಿ ಎಪಿ ಉಸ್ತಾದ್ ರನ್ನು ಆ ಜಾಗಕ್ಕೆ ನೇಮಿಸಿದೆ.

*ಇಪ್ಪತ್ತು ಕೋಟಿ ಮುಸ್ಲಿಮರಲ್ಲಿ ಹತ್ತೊಂಬತ್ತು ಕೋಟಿ ಮುಸ್ಲಿಮರು ಹನಫಿ ಬಾಂಧವರೂ ಮತ್ತು ಅವರು ಗ್ರಾಂಡ್ ಮುಫ್ತಿಯನ್ನು  ಅಂಗೀಕರಿಸುವವರಾಗಿದ್ದಾರೆ.*
ಇನ್ನು ಈ ಅಲವಲಾದಿ ಗಳನ್ನು ಒಟ್ಟು ಸೇರಿಸಿದರೆ ಒಂದು ಲಕ್ಷವೂ ಮೀರಲ್ಲ. ಇವರು ಇರುವುದು ಮಂಗಳೂರಿನ ಕೆಲವು ಕಡೆ ಮತ್ತು ಕೇರಳದ ಕೆಲವು ಕಡೆ . ಇವರ ಅಂಗೀಕಾರ ಯಾರಿಗೆ ಬೇಕು.?

ಇನ್ನು ವಫಾತಾದ ಗ್ರಾಂಡ್ ಮುಫ್ತಿ ತಾಜುಶ್ಶರೀಯ್ಯ ರನ್ನು ಈ ಅಲವಲಾದಿ ವಿಭಾಗ ಅಂಗೀಕರಿಸಿವೆಯೇ ?

ಇಲ್ಲ ಎಂದಾದರೆ ಅವರು ಎಪಿ ಉಸ್ತಾದ್ ರನ್ನು ಅಂಗೀಕರಿಸುವುದಿಲ್ಲ ಎಂಬುದಕ್ಕೆ ಅರ್ಥವೆ ಇಲ್ಲ.

*ವಾಟ್ಸಫ್ ನಲ್ಲಿ ಗ್ರಾಂಡ್ ಮುಫ್ತಿ ಗೆ ಪ್ರಶ್ನೆಗಳೆಂದು ಮೆಸೇಜ್ ಬಿಡುವವರು ಖಾದಿಯಾನಿ ಯಾನೆ ವಹ್ಹಾಬಿ ಯ ಚಾರರು.* ರಸ್ತೆ ಬದಿಯಲ್ಲಿ ಹೋಗುವ ಹುಚ್ಚನ ಮಾತಿಗೆ ಬೆಲೆ ಕಲ್ಪಿಸದಂತೆ ಈ ವಹ್ಹಾಬಿ ಗಳ, ಕಳ್ಳತ್ವರೀಖತ್ ನವರ ಮೆಸೇಜ್ ಅನ್ನೂ ಪರಿಗಣಿಸಬೇಕಾಗಿಲ್ಲ.

ಖಾದರ್ ಉಳ್ಳಾಲ           ಫಾರ್ಮ್ ಅಲ್ ಜುಬೈಲ್ ಸೌದಿ ಅರೇಬಿಯಾ
ಎಸ್ಕೆಎಸ್ಸೆಸ್ಸೆಫ್ ನಾಯಕ ಲತೀಫ್ ನೆಲ್ಲಿಚ್ಚೋಡ್ ಬರೆಯುತ್ತಾರೆ..

*ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ!*

ಜೋರ್ಡಾನ್ ರಾಜ ಎರಡನೆಯ ಕಿಂಗ್ ಅಬ್ದುಲ್ಲಾರ ಭಾರತ ಸಂದರ್ಶನದ ಭಾಗವಾಗಿ ಆಥಿತ್ಯ ಸಮಾರಂಭದಲ್ಲಿ ಸರಕಾರದ ಆಹ್ವಾನಿತರಾಗಿಯಾಗಿದೆ ಕಾಂತಪುರಂ ಉಸ್ತಾದ್ ದೆಹಲಿಗೆ ತಲುಪಿದ್ದು.

ಭಯಾನಕವಾದ ಸನ್ನಿವೇಶವೊಂದು ಅಲ್ಲಿ ಸಂಭವಿಸಿದೆ ಎಂಬ ರೀತಿಯಲ್ಲಾಗಿತ್ತು ಈ ಒಂದು ಸಮ್ಮಿಲವನ್ನು ಹಲವಾರು ಜನರು ಸಾಮಾಜಿಕ ತಾಣಗಳಲ್ಲಿ ಇಲ್ಲ ಸಲ್ಲದ ಅಪವಾದದೊಂದಿಗೆ ಪ್ರಚಾರಪಡಿಸುತ್ತಿದ್ದರು.
ಅಲ್ಲದಿದ್ದರೂ ಯಾವುದೇ ಒಂದು ವಿಷಯವನ್ನು ಸ್ಪಷ್ಟವಾಗಿ ಕಲಿಯದೆ, ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಬರೆಯುವ ಅಥವಾ ಹೇಳುವ ಒಂದು ಪ್ರಹಸನವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹೆಚ್ಚಾಗಿ ಕಂಡುಬರುವಂತದ್ದು‌..

ಇಲ್ಲಿನ ವಿಷಯಕ್ಕೆ ಬರುವ ಮೊದಲಾಗಿ ಚರಿತ್ರೆಯ ಕಡೆ ಒಮ್ಮೆ ಹಿಂತಿರುಗಿ ಹೋಗಿ ಅವಲೋಕನ ನಡೆಸೋಣ.
ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಂಧರ್ಭ  ಜಂರದಲ್ಲಿ ಕಲ್ಲೆಸೆಯುವ ವೇಳೆಯಲ್ಲಿ ಪ್ರವಾದಿಯ ಬಳಿ ಒಬ್ಬರು ಬಂದು ಕೇಳುತ್ತಾರೆ.
ಓ ಹಬೀಬರೇ, ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು? ಅದಕ್ಕೆ ಹಬೀಬರು ಯಾವುದೇ ಉತ್ತರ ನೀಡಲಿಲ್ಲ.
ಆ ವ್ಯಕ್ತಿಯು ಅದೇ ಪ್ರಶ್ನೆಯನ್ನು ನಾಲ್ಕು ಬಾರಿ ಆವರ್ತಿಸಿ ಕೇಳಿದರೂ  ಮೌನವಾಗಿತ್ತು ಹಬೀಬರ ಉತ್ತರ.
ಹಜ್ಜ್ ಕರ್ಮವು ಪೂರ್ತಿಗೊಳಿಸಿ ಒಂಟೆಯ ಮೇಲೇರಿ ಮರಳುವ ಸಂಧರ್ಭದಲ್ಲಿ ಹಬೀಬರು ಸ್ವಹಾಬಿವರ್ಯರಲ್ಲಿ ಅನ್ವೇಷಿಸುತ್ತಾರೆ. " ಎಲ್ಲಿ, ನನ್ನಲ್ಲಿ ಪ್ರಶ್ನಿಸಿದ ವ್ಯಕ್ತಿ ಎಲ್ಲಿ?
ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು ಎಂಬುವುದು ತಾನೇ ತಮ್ಮ ಸಂಶಯ. *ಕ್ರೂರನಾದ ಆಡಳಿತಗಾರನ ಮುಂದೆ ಧೈರ್ಯದಿಂದ ಸತ್ಯವನ್ನು ತೆರೆದು ಹೇಳುವುದಾಗಿದೆ ಅತ್ಯಂತ ಶ್ರೇಷ್ಟವಾದ ಧರ್ಮ ಸಮರ.* ಎಂದಾಗಿತ್ತು ಹಬೀಬರ ಉತ್ತರ.

ಈ ಒಂದು ಕಾರ್ಯವೇ ಮೋದಿ ಜೊತೆ ವೇದಿಕೆ ಹಂಚಿದಾಗ ಕಾಂತಪುರಂ ಉಸ್ತಾದ್ ನಿರ್ವಹಿಸಿದ್ದು!? ಅಥವಾ ಇಲ್ಲಿನ ಮುಸ್ಲಿಮರನ್ನು ವಂಚಿಸುವ ಕಾರ್ಯವಾಗಿತ್ತೇ ಅಲ್ಲಿ ನಡೆದದ್ದು?

ಚರಿತ್ರೆಪರವಾದ ಕಾರ್ಯವಾಗಿತ್ತು ಅಲ್ಲಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ವಹಿಸಿದ್ದು ಎಂದು ಅನ್ವೇಷಿಸುವಾಗ ಅರ್ಥವ್ಯತ್ಯಾಸವಿಲ್ಲದೆ ಯಾರಿಗೂ ಕೂಡಾ ಮನವರಿಕೆಯಾಗಬಹುದು.

*ಸಿರಿಯಾ ವಿಷಯದಲ್ಲಿ ವಿಶ್ವಸಂಸ್ಥೆಯ ಮೌನ, ಹಸುವಿನ ಹೆಸರಿನಲ್ಲಿ ಉತ್ತರ ಭಾರತದಲ್ಲಿ ತಾಂಡವವಾಡುತ್ತಿರುವ ಹಲ್ಲೆ-ಕೊಲೆಗಳು,  ಒಂದು ಹೊತ್ತಿನ ಊಟಕ್ಕಾಗಿ ಒಂದಷ್ಟು ಧಾನ್ಯಗಳು ಕದ್ದಿದ್ದಕ್ಕಾಗಿ ಕೊಲ್ಲಲ್ಪಟ್ಟ ಅಟ್ಟಪಾಡಿಯ ಮಧು, ಬಾಬರೀ ಮಸೀದಿಯ ಜಾಗ ವಿಂಗಡಿಸುವ ತರ್ಕಗಳು, ನ್ಯಾಯಾಲಯದ ಹೊರಗಿನ ಚರ್ಚೆಗಳು, ಯುವ ತಲೆಮಾರಿಗೆ ಉನ್ನತ ವಿದ್ಯಾಭ್ಯಾಸ ನೀಡುವ ಸಲುವಾಗಿ ಕೇಂದ್ರ ಸರಕಾರವು ನೀಡಬೇಕಾದ ಅನಿವಾರ್ಯ ಸವಲತ್ತುಗಳ ಪದ್ದತಿ, ಇನ್ನಿತರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ  ವಿಷಯಗಳ ಕುರಿತಾಗಿಯೂ, ಶರೀಅತ್ ಸಂರಕ್ಷಣೆಯ ಪರವಾಗಿಯೂ ಅಧಿಕಾರಿಗಳ ಅರಮನೆಯಲ್ಲಿ ಹೋಗಿ ಧೈರ್ಯದಿಂದ ಹೇಳಿ ಬರುವವರಾಗಿದ್ದಾರೆ ಎಪಿ ಅಬೂಬಕ್ಕರ್ ಮುಸ್ಲಿಯಾರ್.*

ಕಾಂತಪುರಂ ಉಸ್ತಾದ್ ನೇತೃತ್ವ ನೀಡುವ ಸಂಘಟನೆಯ ಜೊತೆ ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಪ್ರಕಟಿಸುತ್ತಲೇ ನನ್ನ ಮನದಾಳದಿಂದ ನಾನು ಹೇಳಲು ಬಯಸುವುದೇನೆಂದರೆ,
ಸತ್ಯದ ಹಾಗೂ ಒಳಿತಿನ ಪ್ರಕಾಶವನ್ನು ಬಿತ್ತರಿಸುವವರು ನಮ್ಮ ವಿರುದ್ದ ಪಕ್ಷದಲ್ಲಿದ್ದರೂ ಕೂಡಾ ಅದನ್ನು ಅಂಗೀಕರಿಸಸುವುದರ ಜೊತೆಗೆ ಪ್ರಶಂಸಿಸಲು ನನಗಿಷ್ಟ.

ಮೂಲ: ಮಲಯಾಳಂ.
ಕನ್ನಡಕ್ಕೆ: ಇಮ್ತಿ ಬೈರಿಕಟ್ಟೆ.
*ಉಲಮಾಗಳು ಲಾಭಕ್ಕಾಗಿ ಮಾತನಾಡಿದ್ದಾರಾ ? ಉಲಮಾಗಳು ಮುಸ್ಲಿಂ ಸಮುದಾಯವನ್ನು ಗುಲಾಮರನ್ನಾಗಿಸಿದ್ದಾರಾ ?*

*ಉಲಮಾಗಳು.., العلماء ورثة الانبياء, ಪ್ರವಾದಿಗಳ ವಾರಿಸುದಾರರಾಗಿದ್ದಾರೆ*. ಉಲಮಾಗಳು. ಅಲ್ಲಾಹನ ಪವಿತ್ರವಾದ ದೀನುಲ್ ಇಸ್ಲಾಂ ನ ಪ್ರಚಾರ ಕಾರ್ಯಚಟುವಟಿಕೆಗಳೊಂದಿಗೆ ಮನುಷ್ಯರ ಹಿದಾಯತ್ ಗೆ ಬೇಕಾಗಿ, ಅವರನ್ನು ಒಳಿತಿನ ಪಥದತ್ತ ಕೊಂಡೊಯ್ಯಲು ಅಲ್ಲಾಹನು ನಿಯೋಗಿಸಿದವರಾಗಿದ್ದಾರೆ ಪ್ರವಾದಿಗಳು. ಒಂದು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ಜಗತ್ತಿನ ನಾನಾ ಕಡೆಗಳಲ್ಲಿ ಅವನ ಇಸ್ಲಾಮಿನ ಪ್ರಚಾರಕ್ಕೆ ಅಲ್ಲಾಹನು ನಿಯೋಗಿಸಿದ್ದು, ಸಾಧ್ಯವಾದಷ್ಟು ಜನರಿಗೆ ಹಿದಾಯತ್ ನ ದಾರಿಯನ್ನು ಪ್ರವಾದಿಗಳು ತೋರಿಸಿಕೊಟ್ಟಿದ್ದಾರೆ.

ಪ್ರವಾದಿಗಳ ಪೈಕಿ ಅಂತ್ಯ ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಂ. ಅವರ ನಂತರ ಮತ್ತೊಬ್ಬರು ಪ್ರವಾದಿ ಇಲ್ಲ. ಅವರ ಕಾಲದ ನಂತರ ಸ್ವಹಾಬಿಗಳು, ತಾಬಿಉಗಳು ಹೀಗೆ ದೀನಿನ ವಿಷಯ, ವಿಚಾರಗಳಲ್ಲಿ ನೇತೃತ್ವ ನೀಡುತ್ತಾ ಬಂದರು. ಸಮಕಾಲೀನ ಜಗತ್ತಿನಲ್ಲಿ ಪ್ರವಾದಿಗಳ ಸೇವೆಗಳನ್ನು ಇಲ್ಲಿ ಚಾಚು ತಪ್ಪದೇ ನಿರ್ವಹಿಸುತ್ತುತ್ತಿರುವವರು ಉಲಮಾಗಳು. ಅದಾಗಿದೆ العلماء ورثة الانبياء, ಪ್ರವಾದಿಗಳ ವಾರಿಸುದಾರರಾಗಿದ್ದಾರೆ ಉಲಮಾಗಳು ಎಂಬುದರ ತಾತ್ಪರ್ಯ.

ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಏನೆಲ್ಲಾ ಮಾಡಲು ಸಾಧ್ಯವೋ, ಪ್ರವಾದಿಗಳು ನಿರ್ವಹಿಸಿದಂತೆ ಅವೆಲ್ಲವನ್ನೂ ಉಲಮಾಗಳು ನಿರ್ವಹಿಸುತ್ತಾ ಬಂದಿದ್ದಾರೆ. ಸ್ವಂತ ಲಾಭಕ್ಕಾಗಿ ಯಾವ ಉಲಮಾಗಳು ಕೂಡಾ ಯಾವ ವಿಷಯವನ್ನೂ ಪ್ರಸ್ತಾಪಿಸಿಲ್ಲ. ಯಾವ ಮಾತುಗಳನ್ನೂ ಆಡಿಲ್ಲ. ಸ್ವಂತ ಲಾಭಕ್ಕಾಗಿ ಈ ಸಮೂಹ, ಸಮುದಾಯವನ್ನು ಗುಲಾಮರನ್ನಾಗಿಸಿಯೂ ಇಲ್ಲ. ಅದು ಎಲ್ಲರಿಗೂ ತಿಳಿದ ವಿಚಾರ. ಉಲಮಾಗಳ ಉದ್ದೇಶ ಏನಿದ್ದರೂ ಅಲ್ಲಾಹನ ಬಳಿ ಖಬೂಲಿಯತ್ ಮಾತ್ರ. ಸಮುದಾಯ ಎಂದು ಬಾಯಿ ಮಾತುಗಳಲ್ಲಿ ಹೇಳಿದ ಮಾತ್ರಕ್ಕೆ ಯಾರೂ ಸಮುದಾಯ ಪ್ರೇಮಿಗಳು ಆಗುವುದಿಲ್ಲ. ಅದನ್ನು ಮಾಡಿ ತೋರಿಸಬೇಕು. ಆ ಕಾರ್ಯಚಟುವಟಿಕೆಗಳನ್ನು ಇಲ್ಲಿ ನಿರ್ವಹಿಸುತ್ತಿರುವವರು ಉಲಮಾಗಳಾಗಿದ್ದಾರೆ. ಉಲಮಾಗಳು ಮಾತ್ರವಾಗಿದ್ದಾರೆ.

ರಾಷ್ಟ್ರದ ಉದ್ದಗಲಕ್ಕೂ ಸಾಂತ್ವನ ಕೇಂದ್ರಗಳನ್ನು ನಿರ್ಮಿಸಿ, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವವರು ಉಲಮಾಗಳು. ಅಲ್ಲಾಹನಿಗೆ ಸುಜೂದ್ ನಿರ್ವಹಿಸಲು ಸ್ಥಳಗಳು ಇಲ್ಲದವರಿಗೆ ಬೇಕಾದ ಮಸೀದಿಗಳನ್ನು ನಿರ್ಮಿಸಿ, ಧಾರ್ಮಿಕ, ಲೌಕಿಕ ವಿದ್ಯಾಭ್ಯಾಸ ಕರಗತ ಮಾಡಲು ವ್ಯವಸ್ಥೆಗಳು ಇಲ್ಲದವರಿಗೆ ಬೇಕಾದ ಮದರಸಾ, ಶಾಲೆಗಳನ್ನು ನಿರ್ಮಿಸಿ, ವಾಸಿಸಲು ಜಾಗ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿ, ಕುಡಿಯಲು ನೀರಿಲ್ಲದವರಿಗೆ ಬೋರ್ ವೆಲ್, ಬಾವಿಗಳನ್ನು ನಿರ್ಮಿಸಿ ಕೊಟ್ಟವರು, ಕೊಡುತ್ತಿರುವವರು ಯಾರು ? ಸಾಂತ್ವನ ಸೇವೆಗಳು ಇಲ್ಲಿಗೆ ಮುಗಿಯುತ್ತಿಲ್ಲ. ಉಲಮಾಗಳು ನೇತೃತ್ವ ನೀಡುತ್ತಿರುವ ಒಂದೊಂದು ಸಂಸ್ಥೆಗಳಲ್ಲೂ ಹತ್ತು ಸಾವಿರ, ಇಪ್ಪತ್ತು ಸಾವಿರಕ್ಕೂ ಮಿಕ್ಕ ಅನಾಥ ಬಡ ನಿರ್ಗತಿಕ ಮಕ್ಕಳ, ವಿದ್ಯಾರ್ಥಿಗಳ ಏಳಿಗೆಗೆ ಬೇಕಾಗಿ ಆಹೋ ರಾತ್ರಿ ದುಡಿಯುತ್ತಿರುವವರು, ಶ್ರಮ ಪಡುತ್ತಿರುವವರು ಯಾರು ? ಉಲಮಾಗಳು ಮಾತ್ರ. ಅದು ಉಲಮಾಗಳಿಂದ ಮಾತ್ರ ಸಾಧ್ಯ. ಕಳೆದ ದಿನ ಕೇರಳದ ಹೈ ಕೋರ್ಟ್ ನಿಂದ ಅಡ್ವಕೇಟ್ ಗಳಾಗಿ ಎನ್ ರೋಲ್ ಆದ ವಿದ್ವಾಂಸರು. ಅದು ಉಲಮಾಗಳು ಈ ಸಮುದಾಯಕ್ಕೆ ನೀಡಿದ ಕೊಡುಗೆಗಳು. ಹೀಗೆ ಹತ್ತಾರು, ನೂರಾರು, ಸಾವಿರಾರು ಕೊಡುಗೆಗಳು ಇದೆ.

ರಾಜಕೀಯ ಲಾಭಕ್ಕಾಗಿ ಉಲಮಾಗಳನ್ನು ಕೀಳು ಮಟ್ಟದ ಮಾತುಗಳಿಂದ ನಿಂದನೆ ಮಾಡುವ ರಾಜಕಾರಣಿಗಳು, ನಾಚಿಕೆಯಾಗಬೇಕು ನಿಮಗೆ. ಇವರ ಗತಿಕೇಡು ಎಂದರೆ ಬೆಂಬಲ ಯಾಚಿಸಲು ಬೇಕಾಗಿ ಮೊದಲು ಬರುವುದು ಉಲಮಾಗಳ ಬಳಿ. ರಾಜಕೀಯದವರು ರಾಜಕೀಯ ಮಾಡಿ. ಉಲಮಾಗಳ, ಧಾರ್ಮಿಕ ವಿಷಯಗಳಲ್ಲಿ ನೀವು ಕೈ ಹಾಕಬೇಡಿ. ಇಲ್ಲಿ ಈ ಸಮುದಾಯಕ್ಕೆ ನೇತೃತ್ವ ನೀಡಲು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರಂತಹ ಉಲಮಾ ದಿಗ್ಗಜ ಶಿರೋಮಣಿಗಳು ಇದ್ದಾರೆ. ಈ ಸಮುದಾಯಕ್ಕೆ ಬೇಕಾದ ಎಲ್ಲ ನೇತೃತ್ವ ಅವರು ನೀಡುತ್ತಾರೆ, ನೀಡುತ್ತಿದ್ದಾರೆ. ನಿಮ್ಮದು ರಾಜಕೀಯ, ನೀವು ಅತ್ತ ಗಮನಹರಿಸಿದರೆ ಸಾಕು. ಅಲ್ಲಾಹು ನಮ್ಮೆಲ್ಲಾ ಉಲಮಾಗಳಿಗೆ ಆಫಿಯತ್ ನೊಂದಿಗೆ ಧೀರ್ಘಾಯುಸ್ಸು ಕರುಣಿಸಲಿ, ಆಮೀನ್.

*-ವೀಕ್ಷಕ
*ಸಲಫಿ ಮಸ್ಜಿದುಗಳನ್ನು ಮುಚ್ಚಬೇಕು.*
👉 ಜರ್ಮನ್ ವೈಸ್ ಚಾನ್ಸಲರ್ ಸಿಗ್ಮಾರ್ ಗೆಬ್ರಿಯೆನ್.

*ಮುಜಾಹಿದುಗಳಿಗೆ ಸಲಾಂ ಹೇಳಬಾರದು*
👉ಸಮಸ್ತ ಪಾಠ ಪುಸ್ತಕ

*ಮಸೀದಿಗಳಲ್ಲಿ ಸಲಫಿಗಳನ್ನು ಇಮಾಂ ಮಾಡಬಾರದು.*
👉ತೂನೇಷ್ಯಾ ಸರಕಾರ

*ವಹ್ಹಾಬಿಸಂ ಡೇಂಜರ್ಸ್.*
*ಅವರ ವಿರುದ್ಧ ಆದರ್ಶ ಹೋರಾಟಕ್ಕೆ ಮುಸ್ಲಿಂಗಳೇ ನೇತೃತ್ವ ಕೊಡಬೇಕು.*
👉ಮಾನ್ವಲ್ ವಾಲ್'ಸ್
 (ಮಾಜಿ ಫ್ರಾನ್ಸ್ ಪ್ರಾಧಾನ ಮಂತ್ರಿ)

*ವಹ್ಹಾಬಿ ಪುಸ್ತಕಗಳು ಹುಡುಕಿ ನಾಶ ಮಾಡಬೇಕು.*
👉ಈಜಿಪ್ಟ್ ಸರಕಾರ

Note: ಚರಿತ್ರೆಯಲ್ಲಿ ವಹಾಬಿಸಂ, ವಿಶ್ವದಲ್ಲೆಡೆ ಕೊಂದು ಹಾಕಿದವರ ಲೆಕ್ಕವನ್ನು ಯಾರಾದರೂ ಶೇಖರಿಸಿದ್ದಾರಾ?
ಅವರು ಹೊಡೆದು *ಉರುಳಿಸಿದ* ಮಕ್ಬರಗಳ ಚರಿತ್ರೆಯನ್ನು ನಾವು ಓದಿರಬಹುದಾ?
ಇತ್ತೀಚಿಗೆ ತೊಂಬತ್ತು ಪ್ರಾಯ ಕಳೆದ ಈಜಿಪ್ಟ್'ನ ಸುನ್ನಿ ಪಂಡಿತರಾದ *ಶೈಖ್ ಸುಲೈಮಾನ್ ಅಬು ಹಾರಿಸ್ (ನ:ಮ)* ರವರ ತಲೆಯನ್ನು ಕೊಯ್ದದ್ದು ನೀವು ಕೇಳಿದ್ದೀರಾ?
ಇದೆಲ್ಲ ಕೇಳಿದರೆ ನೀವು ಕೂಡ ಹೇಳುವಿರಿ, ಚರಿತ್ರೆಯಲ್ಲಿ ವಹ್ಹಾಬಿಗಳು ಮಾಡದ ಯಾವುದೇ ಭೀಕರವಾದವಿಲ್ಲ ಎಂದು!!

ವಿಶ್ವದೆಲ್ಲೆಡೆ ಇಸ್ಲಾಮಿಗೆ ಭಯೋತ್ಪಾದನೆ, ಹಾಗೂ ಎಲ್ಲಾ ರೀತಿಯ ಕೆಟ್ಟ ಹೆಸರುಗಳನ್ನು ತಂದು ಕೊಟ್ಟವರಾಗಿದ್ದಾರೆ ಈ ವಹ್ಹಾಬಿಗಳು.
ಸಲಫಿಗಳ ಕೇರಳದ Copyಯಾಗಿದ್ದಾರೆ ಮುಜಾಹಿದುಗಳು.?

*ವಹ್ಹಾಬಿ, ತಕ್'ಫಿರಿ, ಇಸ್ಲಾಹಿ, ಮುಜಾಹಿದ್, ಜಿನ್ನ್, ವಿಸ್ಡಂ, ಆಡು, ಅಹ್ಲ್ ಹದೀಸ್ ಎಂಬಿ ಹೆಸರುಗಳಿಂದೆಲ್ಲಾ ತಿಳಿಯಲ್ಪಡುವರು ಇವರಾಗಿದ್ದಾರೆ.*

 ನಮ್ಮ ಸಮೂಹದ ಜನರು ಒಂದು ತಿಳಿಯಬೇಕು,
*ಪಾರಂಪರ್ಯ ಇಸ್ಲಾಂನೊಂದಿಗೆ ಈ ವಹ್ಹಾಬಿಗಳಿಗೆ ಯಾವುದೇ ಸಂಬಂಧವಿಲ್ಲ. ಅವರ ಪ್ರವರ್ತನೆಗಳನ್ನು ನೀವು ಇಸ್ಲಾಮಿನ ಹೆಸರಿನಲ್ಲಿ ಕಟ್ಟಿ ಹಾಕಬಾರದು.*
*ಕೆಲವು ಕಾಲೇಜುಗಳು ನಡೆಸುತ್ತಾರೆ. ಸ್ತ್ರಿಗಳನ್ನು ಮಸೀದಿಗೆ ಹಿಡಿದು ಎಳೆಯುತ್ತಾರೆ. ಒಂದು ಪಾರ್ಟಿಗೆ ಓಟು ಹಾಕುತ್ತಾರೆ ಎಂದು ಹೇಳಿ ಇವರನ್ನು ಮುಸ್ಲಿಂಗಳ ಹಿತೈಷಿಗಳು ಎಂದು ಹೇಳಲಾಗದು.*

✍GB
*ಸೈದ್ಧಾಂತಿಕವಾಗಿ ರಾಜಿ ಇಲ್ಲವೇ ಇಲ್ಲ!*

ಹೌದು...
ಸೈದ್ಧಾಂತಿಕ ವಾಗಿ ರಾಜಿ ಇಲ್ಲದೆ ...
ಆ ಒಂದು ವಿಷಯದಲ್ಲಿ ಕಟ್ಟುನಿಟ್ಟಾದ ನಿಲುವು ಸ್ವೀಕರಿಸುವ ಎಸ್ಸೆಸ್ಸೆಫ್ ಎಂಬ ಸಂಘಟನೆ ಯ
ನಿಲುವು ನನ್ನನ್ನು ತುಂಬಾ ಆಕರ್ಷಿಸಿದೆ...
 ಡಾ: ಎ ಪಿ ಜೆ  ಕಲಾಂ ರವರು ಯಾವಾಗಲೂ ಹೇಳುವ ಒಂದು  ವಿಷಯ
"ನೀವು ಕನಸು ಕಾಣಿರಿ"
ಮುಸಲ್ಮಾನನ ಕನಸು ಏನಿದ್ದರೂ ಅದು ಸ್ವರ್ಗ ಪ್ರವೇಶ ಮಾತ್ರ ತಾನೆ...
ಆ ಕನಸು ನನಸಾಗ ಬೇಕಾದರೆ ಸೈದ್ಧಾಂತಿಕವಾಗಿ ನಾವು ಅಚಲರಾಗಿರಬೇಕು.
ಸುನ್ನಿ ಸಲಪಿ ಬೇಡ ನಾವು ಮುಸ್ಲಿಮರಾಗೋಣ ಎಂದು ಹೇಳುವ ಮಂದಿ
ನಿಜವಾಗಿಯೂ ಅವರು ಸೈದ್ಧಾಂತಿಕವಾಗಿ ಚಂಚಲರು.
ಇಂತಹ ಚಂಚಲ ವಿಶ್ವಾಸ ವಿಟ್ಟು ಸ್ವರ್ಗದ
ಕನಸು ಕಾಣುವುದು ಮೂರ್ಖತನ.
ಸೈಧ್ದಾಂತಿಕ ಬದ್ಧತೆ ಇಲ್ಲದೆ ಖಾಲಿ ಮಸೀದಿ ಕಟ್ಟಿಸಿದರೆ ಸ್ವರ್ಗ ಸಿಗುತ್ತದೆ ಎಂಬ ಕನಸು ಯಾರಾದರು ಕಂಡರೆ ಅದು ಅವನ ಹೆಡ್ಡತನದ ಪರಮಾವಧಿ ಮಾತ್ರ ...!

ಸೈಧ್ದಾಂತವಾಗಿ ರಾಜಿ ಮಾಡಿ ಕೊಂಡು
ಮುಸ್ಲಿಮ್ ಸಬಲೀಕರಣ ಮಾಡಿದರೆ ಸ್ವರ್ಗ ಖಂಡಿತ ಎಂದು ಕನಸು ಕಂಡರೆ ಆ ಕನಸು
ಸೂಜಿಯ ರಂಧ್ರ ದೊಳಗೆ ಆನೆ ಪ್ರವೇಶಿಸುವ ತನಕ ನನಸಾಗದು ಅದು ಖಂಡಿತ.

ಅಂದರೆ ಯಾವನೇ ಒಬ್ಬ ಮುಸ್ಲಿಮ್
ಅವನು ತನ್ನ ಆದರ್ಶ ಸಿದ್ಧಾಂತಗಳನ್ನು ಮೊದಲು ಭದ್ರ ಪಡಿಸಿಕೊಳ್ಳಬೇಕು
ಅದು ಪೌಂಡೇಶನ್ ...
ನಂತರದ್ದು ಬಿಲ್ಡಿಂಗ್....
ಇಲ್ಲಿ ಪೌಂಡೇಶನ್ ಅದು ಸುನ್ನಿಸಂ.
ಮುಸ್ಲಿಮ್ ಸಬಲೀಕರಣ ದಂತಹ ಒಳ್ಳೆಳ್ಳೆಯ ಕಾರ್ಯಗಳು ಬಿಲ್ಡಿಂಗ್ ಅಥವಾ ಕಟ್ಟಡಗಳು.
ಆದರೆ ಇಲ್ಲಿ ಸುನ್ನಿಸಂ ಎಂಬ ಪೌಂಡೇಶನ್ ಸರಿ ಇಲ್ಲದಿದ್ದರೆ ..
ಆ ದುರ್ಬಲ ಪೌಂಡೇಶನ್ ಮೇಲೆ ಕಟ್ಟುವ
ಕಟ್ಟಡಗಳು ಕೂಡಾ ದುರ್ಬಲ ತಾನೇ?
ನಾವು ಯಾವುದೇ ಗುರಿ ಇಟ್ಟುಕೊಂಡು
ಕೆಲಸ ಮಾಡುವಾಗ ಅದರ ಹಿಂದೆ ಪರಲೋಕ ಮೋಕ್ಷ ಇರಬೇಕು
ಕಾರಣ ನಾವು ಮುಸ್ಲಿಮರು ತಾನೇ?
ಪರಲೋಕ ಮೋಕ್ಷ ಸಿಗಬೇಕಾದರೆ
ನಮ್ಮ ಆದರ್ಶ ಸಿದ್ಧಾಂತಗಳಲ್ಲಿ ಬಧ್ದತೆ ನಮಗೆ ಬೇಕೇ ಬೇಕು.

ಇಲ್ಲಿಯೇ ಎಸ್ಸೆಸ್ಸೆಫ್ ನ ಪಾತ್ರ ತುಂಬಾ ಗಮನಾರ್ಹ ವಾಗಿ ಕಾಣುವುದು..
ನಾನು ಗಮನಿಸಿದ್ದೇನೆ ..
ಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆ ಯಾದರೂ ..
ಇತರ ಸಾಮಾಜಿಕ ಸಂಘಟನೆಗಳು ಕೂಡಾ
ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಡುವಂತಹ ಸಾಮಾಜಿಕ ಶೈಕ್ಷಣಿಕ ಕ್ರಾಂತಿಗಳಿಂದ ಜನಮನಸ್ಸುಗಳಲ್ಲಿ ಅಚ್ಚೊತ್ತಿ ನಿಂತಿದೆ.
ಇಸ್ಲಾಮಿನ ನೈಜ ಆಶಯಗಳನ್ನು ಕಲಿಸಿ ಕೊಡುವ ಸಂದರ್ಭಗಳಲ್ಲಿಯೂ ಕೂಡಾ
ಎಲ್ಲಿಯೂ ಸೈದ್ಧಾಂತಿಕವಾಗಿ ರಾಜಿ ಮಾಡಲು
ಎಸ್ಸೆಸ್ಸೆಫ್ ತಯಾರಿರಲಿಲ್ಲ.

ಅದುವೇ ಎಸ್ಸೆಸ್ಸೆಫ್ ನ್ನು ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಮಾಡುವುದು.
ಕಾರಣ ಎಸ್ಸೆಸ್ಸೆಫ್ ನವರು ಯಾವುದೇ
ಕಾರ್ಯಗಳನ್ನು ಕೈ ಗೊಂಡರು ಅದರ ಹಿಂದೆ
ಅವರು ಕನಸು ಕಾಣುವುದು ಅಲ್ಲಾಹನ ಸ್ವರ್ಗ ಮತ್ತು ತ್ರಪ್ತಿ ಮಾತ್ರ.
ಬದಲಾಗಿ ಈ ದುನಿಯಾದ ರಟ್ಟೆ ಬಲ, ತಾತ್ಕಾಲಿಕ ಆವೇಶ,ಕೋಮುವಾದ ಅಲ್ಲ.

ನಾನೊಬ್ಬ ಸುನ್ನಿ..
ಅದೇ ರೀತಿ ಸುನ್ನಿಗಳಾದ ಅನೇಕ ಯುವಕರಲ್ಲಿ ನನಗೆ ಹೇಳಲಿಕ್ಕೆ ಇರುವುದು
ತಾತ್ಕಾಲಿಕ ಆವೇಶದ ಹಿಂದೆ ಹೋಗಿ ನಮ್ಮ ಸಿದ್ದಾಂತ ವನ್ನು ಬಲಿ ಕೊಟ್ಟರೆ
ನಮ್ಮ ಯಾವುದೇ ಕಾರ್ಯಗಳಲ್ಲಿ ಅಲ್ಲಾಹನ ಸಹಾಯ ಇರಲ್ಲ ಅದು ಗ್ಯಾರಂಟಿ.
ಸೈಧ್ದಾಂತಿಕವಾಗಿ ಅಚಲರಾಗಿರಿ.
ಯಾವುದೇ ಕಾರ್ಯ ಮಾಡುವಾಗಲೂ ಅದರ ಹಿಂದೆ ಸ್ವರ್ಗ ಮತ್ತು ಅಲ್ಲಾಹನ ತ್ರಪ್ತಿ ಕನಸು ಕಾಣಿರಿ.
ಬೇರೆ ದುನಿಯಾದ ಕ್ಷಣಿಕ ರಟ್ಟೆಬಲ, ಹಣಬಲ,
ವ್ಯರ್ಥ ಆವೇಶದಿಂದ ದೂರವಿರಿ...
ಅಚಲವಾದ ಸುನ್ನಿ ವಿಶ್ವಾಸದೊಂದಿಗೆ ಅಲ್ಲಾಹನ ತ್ರಪ್ತಿಗಾಗಿ ಕೆಲಸ ಮಾಡಿ..
ಆವಾಗ ನೀವು ಅಲ್ಪ ಸಂಖ್ಯಾತರಾದರೂ ಕೂಡಾ ಅಲ್ಲಾಹು ಅವನ ಮಲಕ್ ಗಳ ಮೂಲಕ ನಿಮಗೆ ಸಹಾಯ ದೊರಕಿಸುವನು.
ಎಸ್ಸೆಸ್ಸೆಫ್ ನ ವಿಜಯದ ರಹಸ್ಯ ಕೂಡಾ ಅದುವೆ ಎಂಬುವುದು ನನ್ನ ಅಚಲ ವಿಶ್ವಾಸ .

ಹೌದು....
ಇಡೀ ಲೋಕವೇ ಎದುರು ನಿಂತರು ತಾನು ನಂಬಿದ ಆಶಯ ಆದರ್ಶ ವನ್ನು ತಬ್ಬಿಹಿಡಿದು
ಸಧೈರ್ಯದಿಂದ ಸೆಟೆದೆದ್ದು ನಿಂತು ಕಾರ್ಯಚರಣೆ ನಡೆಸಲು ಅದು ಎಸ್ಸೆಸ್ಸೆಫ್ ಗೆ ಮಾತ್ರ ಸಾಧ್ಯ .

ನಮಗೆ ಯಾವುದು ಬೇಡ ಅಂತ ಯಾರೂ ಒಬ್ಬಂಟಿಗರಾಗಬೇಡಿ .
"ಅಲೈಕುಮ್ ಬಿಲ್ ಜಮಾಅ:"
ನೀವು ಸಂಘಟಿತರಾಗಿ
"ಮನ್ ಶಝ್ಝ ಶುಝ್ಝ ಫಿ ನ್ನಾರ್"
ಯಾರಾದರೂ ಒಂಟಿಯಾದರೆ ಅವನು ನರಕದಲ್ಲಿಯೂ ಒಂಟಿ,
ಎಂಬ ನೆಬಿ ವಚನ ನೆನಪಿಸುತ್ತಾ.

ನೀವು ಸೈದ್ಧಾಂತಿಕ ಭದ್ರತೆ ಇರುವ ಎಸ್ಸೆಸ್ಸೆಫ್ ನೊಂದಿಗೆ ಸಂಘ ಸೇರಿರಿ.

ಇನ್ಶಾಅಲ್ಲಾ ಇದೇ ನವೆಂಬರ್ 1ರಿಂದ15ರ ತನಕ ಹದಿನೈದು ದಿವಸ ಎಸ್ಸೆಸ್ಸೆಫ್ ನ ಮೆಂಬರ್ ಶಿಫ್ ಅಭಿಯಾನ ನಡೆಯುತ್ತದೆ.
ಅದೇ ಕ್ಯಾಂಪಯ್ನಲ್ಲಿ 34 ವರ್ಷದಿಂದ ಮೇಲ್ಪಟ್ಟವರಿಗೆ SYS ನ ಮದ್ಯಾಂತರ ಸದಸ್ಯತನವಾಗುವ ಸುವರ್ಣಾವಕಾಶ ಇದೆ.

ತಡಮಾಡಬೇಡಿ,
ಅಲ್ಲಾಹನ ತ್ರಪ್ತಿ ಮತ್ತು
ಪರಲೋಕ ಮೋಕ್ಷ ಹಾಗೂ ಸ್ವರ್ಗದ ಕನಸಿನೊಂದಿಗೆ ಸದಸ್ಯರಾಗಿ.

ಇನ್ಶಾಅಲ್ಲಾ,
ನಾನು ಈ ಸಂಘ ಶಕ್ತಿಯೊಂದಿಗೆ
ಸೇರಲು ತೀರ್ಮಾನ ಮಾಡಿದ್ದೇನೆಂಬ ಶಪಥ ನಿಮ್ಮದಾಗಿರಲಿ.

ನೀವೂ ರೆಡಿ ತಾನೇ..
ನೀವು ನನಗಾಗಿ ದುಆ ಮಾಡಿ...
ನಿಮಗಾಗಿ ನಾನು ಸದಾ ದುಆ ಮಾಡುತ್ತಲಿರುವೆ.

 ಅಬೂಶಝ

Saturday, September 28, 2019

ಇಸ್ತಿಗಾಸ, ಅಂತ್ಯದಿನದಾವಧಿಯಲ್ಲಿ ಹದೀಸ್

*🤲🏻ಇಸ್ತಿಗಾಸ...🤲🏻*

*_ಅಂತ್ಯದಿನದಾವಧಿಯಲ್ಲಿ......_*
*ಹದೀಸ್👇🏻*

*عَبْدَ اللَّهِ بْنَ عُمَرَ ـ رضى الله عنه ـ قَالَ النَّبِيُّ صلى الله عليه وسلم"‏ 👈وَقَالَ إِنَّ الشَّمْسَ تَدْنُو يَوْمَ الْقِيَامَةِ حَتَّى يَبْلُغَ الْعَرَقُ نِصْفَ الأُذُنِ، فَبَيْنَا هُمْ كَذَلِكَ 👈اسْتَغَاثُوا بِآدَمَ، ثُمَّ بِمُوسَى، ثُمَّ بِمُحَمَّدٍ صلى الله عليه وسلم ‏"‏‏.‏👉*

_🌹ಅಬ್ದುಲ್ಲಾಹಿ ಇಬ್ನ್ ಉಮರ್(ರಳಿಯಲ್ಲಾಹು ಅನ್ಹು) ರವರಿಂದ ನಿವೇದನೆ: ಪ್ರವಾದಿ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ಹೇಳುತ್ತಾರೆ.ಅಂತ್ಯದಿನದಲ್ಲಿ ಸೂರ್ಯ ನಿಕಟವಾಗುತ್ತದೆ. ಕಠಿಣ ಸೆಖೆಯಿಂದಾಗಿ ಬೆವರು ಕಿವಿಯ ಅರ್ಧಭಾಗದ ತನಕ ತಲುಪುವಂತಿರುತ್ತದೆ.ಆ ಸಂದರ್ಭದಲ್ಲಿ ಜನರು ಪ್ರವಾದಿ ಆದಮ್(ಅಲೈಹಿಸ್ಸಲಾಂ)ರೊಂದಿಗೆ *ಇಸ್ತಿಗಾಸ(ಸಹಾಯಾಚನೆ)* ಮಾಡುವರು.ಅನಂತರ ಅವರು *ಇಸ್ತಿಗಾಸಕ್ಕಾಗಿ(ಸಹಾಯಭ್ಯರ್ಥನೆಗಾಗಿ)* ಪ್ರವಾದಿ ಮೂಸ(ಅಲೈಹಿಸ್ಸಲಾಂ) ಬಳಿಕ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ)ರ ಬಳಿಗೆ ತೆರಳುವರು._
*_📚Scan page👇🏻_*
*(ಸಹಿಹ್ ಬುಖಾರಿ)*

*‼Note‼*
*_ಈ ಹದೀಸನ್ನು ಇಸ್ತಿಗಾಸದ ವಿರೋಧಿಗಳು ಅಂತ್ಯದಿನವಾದ ನಂತರ ಶಿರ್ಕ್ ಮಾಡುವುದರಲ್ಲಿ ವಿರೋಧವಿಲ್ಲವೆಂದು ವ್ಯಾಖ್ಯಾನಿಸುತ್ತಾರೆಯೇ?ಆಶ್ಚರ್ಯವೇ ಸರಿ.❗_*
_ಅಂತ್ಯದಿನವಾದರೂ ಇಲ್ಲದಿದ್ದರೂ ಬಹುದೇವಾರಾಧನೆ.ವರ್ಜಿಸಲ್ಪಡಬೇಕೆನ್ನುವುದು ಮುಸ್ಲಿಮರ ವಿಶ್ವಾಸವಾಗಿದೆ._

*✍🏻Straight Path Ahlu Sunnah*

🌺🌹🌺🌹🌺🌹🌺🌹🌺🌹
*🤲🏻ಇಸ್ತಿಗಾಸ.....🤲🏻*

*_🌱ಪ್ರವಾದಿವರ್ಯರ ಜೀವಿತಾವಧಿಯಲ್ಲಿ ನಡೆದ ಸಹಾಯಾಚನೆ_🌱*

*ಹದೀಸ್ 👇🏻*
_ಜಾಬಿ‌ರ್(ರ) ರವರಿಂದ ನಿವೇದನೆ: ಅವರು ಹೇಳುತ್ತಾರೆ; ಹುದೈಬಿಯಾದ ಜನರು ಬಾಯಾರಿಕೆಯಿಂದ ಬಳಲಿ ಬೆಂಡಾದರು. ಪ್ರವಾದಿ(ಸ)ಯವರ ಸನಿಹ ಒಂದು ಪಾತ್ರೆ ನೀರಿತ್ತು. ಅವರು ಅದರಿಂದ ವುಳೂ ನಿರ್ವಹಿಸಿದರು. ಜನರೆಲ್ಲರೂ ನೋವಿನೊಂದಿಗೆ ಪ್ರವಾದಿ(ಸ)ಯವರು ಕೂತಿದ್ದ ಜಾಗದೆಡೆಗೆ ಬಂದರು._
_ಪ್ರವಾದಿ(ಸ)ಯವರು ಅವರೊಂದಿಗೆ ನಿಮ್ಮ ಸಮಸ್ಯೆಯೇನು?' ಎಂದು ಕೇಳಿದರು.ಅವರು ಹೇಳುತ್ತಾರೆ. “ನಮಗೆ ವುಳೂ ಮಾಡಲು ಮತ್ತು ಕುಡಿಯಲು ನಿಮ್ಮ ಮುಂದಿರುವ ನೀರು ಮಾತ್ರವಿದೆ” ಆಗ ಪ್ರವಾದಿ(ಸ)ಯವರು ಪಾತ್ರೆಗೆ ಕೈ ಹಾಕಿದರು.ಅವರ ಬೆರಳುಗಳಿಂದ ಒರತೆಯಲ್ಲಿ ನೀರು ಪುಟಿಯಲಾರಂಭಿಸಿತು. ನಾವು ಅದರಿಂದ ಕುಡಿದು ವುಳೂ ನಿರ್ವಹಿಸಿದೆವು. “ನೀವೆಷ್ಟು ಮಂದಿ ಇದ್ದೀರಿ? ಎಂಬ ಪ್ರಶ್ನೆಗೆ ಜಾಬಿ‌ರ್(ರ) ಉತ್ತರಿಸುತ್ತಾರೆ. ಒಂದು ಲಕ್ಷ ಜನರಿರುತ್ತಿದ್ದರೂ ನಮಗೆ ಆ ನೀರು_
_ಸಾಕಾಗುತ್ತಿತ್ತು. ನಾವು *"ಸಾವಿರದ ಐನೂರು"* ಜನರಿದ್ದೆವು._
Scan page..👇🏻
*📚(ಬುಖಾರಿ 8/471)*

*‼Note‼*
_ನೀರಿಲ್ಲದೆ ಬಾಯಾರಿಕೆಯಿಂದ ತತ್ತರಿಸಿದ ಸಹಾಬಿಗಳು ಪ್ರವಾದಿ(ಸ)ಯವರ ಸನಿಹ ಸಾಕಷ್ಟು ನೀರಿಲ್ಲವೆಂದು ಅರಿತಿದ್ದರೂ ಅವರನ್ನು ಸಮೀಪಿಸುತ್ತಾರೆ.ಮಾನವ_
_ಸಾಮರ್ಥ್ಯದ ಆಚೆಗಿರುವ ಮಾರ್ಗದ ಮೂಲಕ ನೀರು ಲಭಿಸಬೇಕೆಂಬ ಆಗ್ರಹದಿಂದಲೇ ಅವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಭೇಟಿಯಾಗಿದ್ದರೆನ್ನುವುದು ಶತಃಸಿದ್ದ.ಅಲ್ಲಾಹನು ದಯಪಾಲಿಸಿದ ಮುಅ್'ಜಿಝತ್ ಮೂಲಕ ಪ್ರವಾದಿ‌ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ವಹಾಬಿಗಳ ಬೇಡಿಕೆಯನ್ನು ಈಡೇರಿಸಿಕೊಡುತ್ತಾರೆ.ಬೆರಳುಗಲ್ಲಿ_
_ನೀರಿನ ಬುಗ್ಗೆ ಪುಟಿದು *ಮಾನವ ಸಾಮರ್ಥ್ಯದ ಆಚೆಗಿರುವ ಮಾರ್ಗದ ಮೂಲ‌ಕ ಸಮಸ್ಯೆ* ಬಗೆಹರಿಸಲ್ಪಡುತ್ತದೆ.ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಬೇಡಿಕೆಗಳನ್ನು ಈಡೇರಿಸಿಕೊಡುವ_
_ಸ್ವಯಂಶಕ್ತಿಯಾಗಲೀ,ಸ್ವಮದಿತ್ತಾಗಲೀ ಇತ್ತೆಂಬ ವಿಶ್ವಾಸ ಸಹಾಬಿಗಳಿಗಿರಲಿಲ್ಲ.ಮೇಲಿನ ಹದೀಸ್‌ಗಳಿಂದ ಅಲ್ಲಾಹನು ದಯಪಾಲಿಸಿದ ಸಾಮರ್ಥ್ಯದಿಂದ ಸಹಾಯ‌ಯಾಚಿಸಬಹುದು,ಕೊಡಬಹುದೆಂದು ಸಷ್ಟವಾಗುತ್ತದೆ..!_

*_🖋Straight Path Ahlu Sunnah_*

🌹🌷🌹🌷🌹🌷🌹🌷🌹
*ತವಸ್ಸುಲ್ - ಇಸ್ತಿಗಾಸ* (ಸಹಾಯಭ್ಯರ್ಥನೆ)
ಭಾಗ-13
➖➖➖➖➖

*ಅಭೌತಿಕವಾದ ಮಾರ್ಗದ ಮೂಲಕ ಮಹಾನುಭಾವ ರುಗಳೊಂದಿಗೆ ಸಹಾಯಭ್ಯರ್ಥನೆ ಗೈಯ್ಯಲು ಹದೀಸ್ ನಿಂದ ಪುರಾವೆ ಇದೆಯೇ...❓*

*ಉತ್ತರ* : ಇದೆ. ಇಮಾಮ್ ತ್ವಬ್ರಾನಿ ರಳಿಯಲ್ಲಾಹು ಅನ್ಹು ತನ್ನ ಅಲ್ ಮುಅಜಮುಲ್ ಕಬೀರ್ (13737) ನಿವೇದನೆ ಮಾಡುತ್ತಾರೆ. ನೆಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಹೇಳಿದರು:

( "إذَا أَضَلَّ أَحَدُكُمْ شَيْئًا ، أَوْ أَرَادَ أَحَدُكُمْ عَوْنًا ، وَهُوَ بِأَرْضٍ لَيْسَ بِهَا أَنِيسٌ ،

*ನೀವು ಮನುಷ್ಯರಿಲ್ಲದ ನಿರ್ಜನ ಸ್ಥಳದಲ್ಲಿದ್ದಾಗ ಏನಾದರೂ ಕಳೆದುಹೋದರೆ ಅಥವಾ ನಿಮ್ಮಲ್ಲಿ ಯಾರಾದರೂ ಸಹಾಯವನ್ನು ಉದ್ದೇಶಿಸಿದ್ದೇ ಆದರೆ*

فَلْيَقُلْ : يَا عِبَادَ اللَّهِ أَغِيثُونِي ،

*"ಅಲ್ಲಾಹನ ದಾಸರೇ, ನನಗೆ ಸಹಾಯ ಮಾಡಿ"*

 يَا عِبَادَ اللَّهِ أَغِيثُونِي

 *"ಅಲ್ಲಾಹನ ದಾಸರೇ, ನನಗೆ ಸಹಾಯ ಮಾಡಿ" ಎಂದು ಅವರು ಹೇಳಲಿ.*

فَإِنَّ لِلَّهِ عِبَادًا لا نَرَاهُمْ"

*ಖಂಡಿತವಾಗಿಯೂ ಅಲ್ಲಾಹನಿಗೆ  ನಾವು ಕಾಣದ ದಾಸರಿದ್ದಾರೆ.*

وقد جرب ذلك‏ ).

*ಇದು ಪರೀಕ್ಷಿಸಿ ನೋಡಲ್ಪಟ್ಟಿದೆ.*

 (ತ್ವಬ್ರಾನಿ : 13737)
➖➖➖➖➖

🔭 *ನಿಸಾರ್ ಸಖಾಫಿ ಉಳ್ಳಾಲ*

Friday, September 27, 2019

ಏನಿದು ಮುಸ್ಲಿಂ ಜಮಾಅತ್ತ್..!!??

*ಅವರು ಬುಧ್ಧಿವಂತರು ಪ್ರಗತಿಪರರು ಅದರಲ್ಲಿ ಸಂಶಯವಿಲ್ಲ.....*

*ಏನಿದು ಮುಸ್ಲಿಂ ಜಮಾ‌ಅತ್!!?*

ಸಮಸ್ತ ವಿಭಜನೆಯಾದ ನಂತರ  ಸುನ್ನಿಗಳು ಎರಡು ತಕ್ಕಡಿಯಲ್ಲಾಗುತ್ತಾರೆ. ಒಗ್ಗಟ್ಟಿನಲ್ಲಿ ಕಾರ್ಯಚರಿಸುತ್ತಿದ್ದ ಸುನ್ನಿಗಳ ಅಭಿವೃದ್ಧಿಗೆ ಈ ವಿಭಜನೆ ಕಂಟಕವಾಗಿದೆಯಾ?
ಎಂಬ ಪ್ರಶ್ನೆಯನ್ನು ಸಮಾನಮನಸ್ಕರಾದ ಹಲವರಲ್ಲಿ ನಾನು ಕೇಳಿದಾಗ ಬಂದ ಉತ್ತರ 'ಇಲ್ಲ' ಎಂದಾಗಿತ್ತು.ಮಾತ್ರವಲ್ಲ ವಿಭಜನೆಯೊಂದು ಸಮುದಾಯವನ್ನು ಕ್ಷೀಣಿಸುತ್ತಿದೆಯೆಂಬ ಕೂಗಿಗೆ ವಿರುಧ್ಧವಾಗಿ ಸುನ್ನಿಗಳ ಈ ವಿಭಜನೆ ಸಮುದಾಯವನ್ನು ಅದರಲ್ಲಿ ವಿಶೇಷವಾಗಿ ಸುನ್ನಿಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಿತು!
ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಮುದಾಯ ಮುಂದೆನಿಂತಿತು.
ಸಮಸ್ತ ವಿಭಜನೆಯಾದ ನಂತರ  ಎಪಿ ವಿಭಾಗ ದೊಡ್ಡ ಮಟ್ಟಿನ ಕ್ರಾಂತಿ ಮಾಡಿತೆಂದು ಹೇಳದೆ ನಿರ್ವಾಹವಿಲ್ಲ. ಅದರ ಅರ್ಥ ಇ.ಕೆ ವಿಭಾಗ ಸುಮ್ಮನೆ ಕೂರಿತೆಂದು ಅಲ್ಲ.ಅವರು ಕಾರ್ಯಚರಿಸಿದ್ದಾರೆ.ಆದರೆ ಸಾಕಷ್ಟು ಮಹಲ್ಲ್'ಗಳ ಸ್ವಾಧೀನ ವಿಲ್ಲದೆಯೂ,ಶ್ರೀಮಂತ ಉಮರಾ ದಿಗ್ಗಜರ ಬೆಂಬಲದ ಕೊರತೆಯ ನಡುವಯೂ,ರಾಜಕೀಯ ಪಕ್ಷಗಳ ಸ್ಪಷ್ಟ ಸಹಾಯದಿಂದ ವಂಚಿತರಾಗಿಯೂ ಎಪಿ ವಿಭಾಗ ಕೇರಳ ಕರ್ನಾಟಕ ಸಹಿತ ಭಾರತದ 27 ರಾಜ್ಯಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವ್ಯಾಪಿಸಿ ಇತಿಹಾಸ ಸ್ರಷ್ಟಿಸಿದೆ.
ಭಾರತದ ಕಾಶ್ಮೀರದಲ್ಲಿ ಕೂಡಾ ಶೈಕ್ಷಣಿಕವಾಗಿ ಮತ್ತು ಧಾರ್ಮಿಕ ವಾಗಿ ಎಪಿ ವಿಭಾಗ ಸಂಚಲನ ಸ್ರಷ್ಟಿಸಿದೆ. ಅದೊಂದು ಉದಾಹರಣೆ ಮಾತ್ರ.
ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳಿಗೆ ಅಲ್ಲಿಗೆ ತಲುಪಲು ಸಾದ್ಯವಾಗಿಲ್ಲ.
ನಮ್ಮ ಉತ್ತರ ಕರ್ನಾಟಕದಲ್ಲಿ ಎಪಿ ವಿಭಾಗ ಮಾಡುತ್ತಿರುವ ಕ್ರಾಂತಿ ನೋಡಿ ಅಲ್ಲಿನ ನ್ಯಾಯವಾದಿಯೊಬ್ಬರು ಕಮಂಟ್ ಮಾಡಿದ್ದರು "ನಿಮ್ಮ ಎಸ್ಸೆಸ್ಸೆಫ್ ನವರು ಬಂದ ನಂತರ ನಮ್ಮ ನಾಡು ಬದಲಾಗಿದೆ"
ಇತ್ತೀಚೆಗಿನ ಪ್ರಳಯ ಬಂದಾಗಲೂ ಅತ್ತ ಕೊಡಗು ಮತ್ತು ಉತ್ತರಕರ್ನಾಟಕದ ಪ್ರಳಯಭಾದಿತ ಪ್ರದೇಶಗಳಿಗಳಿಗೆ ನಿರಂತರ ಸಂಪರ್ಕವಿಟ್ಟು ಸೇವೆ ಮಾಡಿದ್ದು ಕೂಡಾ ಎಪಿ ವಿಭಾಗದವರಾಗಿದ್ದಾರೆ.ಬೇರೆ ಯಾವ ಧಾರ್ಮಿಕ ಸಂಘಟನೆಗಳಿಗೆ ಅತ್ತಕಡೆ ದೊಡ್ಡ ಮಟ್ಟದ ಸೇವೆಗೆಯ್ಯಲು ಸಾದ್ಯವಾಗಲಿಲ್ಲ.
ಎರಡನೇಯದಾಗಿ ಸಮುದಾಯ ಸಬಲೀಕರಣದ ಹೊಸ ಹೊಸ ಮಜಲುಗಳನ್ನು ಮೊತ್ತಮೊದಲು ತೋರಿಸಿಕೊಡುವುದು ಎಪಿ ವಿಭಾಗವಾಗಿದೆ.
ನಂತರ ಹಲವರು ಅದನ್ನು ಅನುಕರಣೆ ಮಾಡುತ್ತಾರೆ ಆವಾಗ ಸಮುದಾಯ ಇನ್ನಷ್ಟು ಗಟ್ಟಿಯಾಗುತ್ತದೆ.
ಉದಾಹರಣೆಗೆ ನಮ್ಮ ಹೆಣ್ಮಕ್ಕಳು ಸಾಮಾನ್ಯವಾಗಿ ಆರು,ಏಳು ತರಗತಿ ಕಲಿತು ಮನೆಯಲ್ಲಿರುವುದು ರೂಡಿಯಾಗಿತ್ತು.ನಂತರ ಉನ್ನತಮಟ್ಟದ ವಿದ್ಯಾಭ್ಯಾಸ ಹೆಣ್ಣು ಮಕ್ಕಳಿಗೂ ಬೇಕೆಂಬ ಬೇಡಿಕೆ ವ್ಯಾಪಕವಾಗಿ ಕಾಲೇಜು ಮೆಟ್ಟಿಲುಗಳನ್ನು ಏರಲು ಆರಂಭಿಸಿದಾಗ ಧಾರ್ಮಿಕತೆ ಅವರಿಂದ ಮಾಯವಾಗ ತೊಡಗಿತು.ಇದಕ್ಕೆ ಪರಿಹಾರವಾಗಿ ನಮ್ಮ ದ.ಕ ದಲ್ಲಿ ಮೊತ್ತಮೊದಲ ಮಹಿಳಾ ಕಾಲೇಜು ಪುತ್ತೂರು ಕುಂಬ್ರದಲ್ಲಿ ಆರಂಭಿಸಿ ಎಪಿ ವಿಭಾಗ ಕ್ರಾಂತಿಮಾಡಿತು. ಅಂತಹ ಧಾರ್ಮಿಕ ಮತ್ತು ಲೌಕಿಕ ಮಹಿಳಾ ಕಾಲೇಜು ನಮಗೂ ಬೇಕೆಂದು ತಿಳಿಯಲು ಇತರರಿಗೆ ಬರೋಬ್ಬರಿ 20 ವರ್ಷ ಬೇಕಾಯಿತು!
ಅದೇ ನಾನು ಹೇಳಿದ್ದು ಎಪಿ ವಿಭಾಗದಲ್ಲಿರುವವರು ಬುಧ್ಧಿವಂತರು.ಅವರ ಚಿಂತನೆ ಏನೇ ಇದ್ದರೂ 100 ವರ್ಷದ ಆಚೆಗಿನ ಜನರೇಶನ್ ಕುರಿತಾಗಿರುತ್ತದೆ.
ನೀವೆ ನೋಡಿ ಮಹಲ್ಲ್ ಸ್ವಾಧೀನ, ರಾಜಕೀಯ ಪಕ್ಷದ ಬೆಂಬಲ, ಶ್ರೀಮಂತ ಉಮರಾಗಳ ಸಾಥ್ ಇದ್ಯಾವುದೂ ನಿರೀಕ್ಷಿಸಿದಷ್ಟು ಸಿಗದ ಎಪಿ ವಿಭಾಗ 'ಮರ್ಕಝ್ ನಾಲೆಡ್ಜ್ ಸಿಟಿ' ನಿರ್ಮಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು.
ಎಲ್ಲಾ ಸ್ವಾಧೀನವಿರುವ ಬೇರೆ ಯಾವುದೇ ಸಂಘಟನೆಗಳಿಗೆ ಇದು ಸಾದ್ಯವಾಗಿಲ್ಲ.
ಇನ್ನು ಇಪ್ಪತ್ತು ವರ್ಷದ ನಂತರ ಅವರು ಕೂಡಾ ಪ್ರಯತ್ನಿಸಬಹುದು.ಆವಾಗ ಎಪಿ ವಿಭಾಗ ಇನ್ನೊಂದು ಮಹಾ ಅಧ್ಬುತಕ್ಕೆ ಕೈ ಹಾಕಿರುತ್ತದೆ!
ಎಪಿ ವಿಭಾಗದ ಸಂಘಟನೆ ಸಟ್ಟಪ್ ಕೂಡಾ ಅಧ್ಬುತ!
ಕೇವಲ ಕೇರಳ ಕರ್ನಾಟಕ ಮಾತ್ರವಲ್ಲ ದೇಶದ 27 ರಾಜ್ಯಗಳಲ್ಲಿಯೂ ಅವರಿಗೆ ಸಂಘಟನೆ ಸಟ್ಟಪ್ ಇದೆ.ಅದರ ಕೊನೆಯ ಉದಾಹರಣೆಯಾಗಿದೆ ಇತ್ತೀಚೆಗೆ ನಡೆದ ಎಸ್ಸೆಸ್ಸೆಫ್ ನ ಭಾರತ ಯಾತ್ರೆ!
ಆ ಯಾತ್ರೆ ಹೋದ ಎಲ್ಲಾ ಕಡೆಗಳಲ್ಲಿ ವಿಜ್ರಂಭಣೆಯ ಸ್ವಾಗತ ಲಭಿಸಿತು.ಅಷ್ಟೇ ಜನಸಂದಣಿ ನೆರೆದಿತ್ತು.
ಇಂತಹ ಒಂದು ಶೈಕ್ಷಣಿಕ ಪ್ರಗತಿ ಭಾರತಯಾತ್ರೆಯನ್ನು ಎಪಿ ವಿಭಾಗದವರಿಗಲ್ಲದೆ ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳಿಗೆ ಮಾಡಲು ಸಾದ್ಯವಾಗಿಲ್ಲ.
ಎಲ್ಲಾ ಹೋಗಿ ಕೇರಳದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಮಾಡಿದ ಒಂದು ಯಾತ್ರೆ ಇತಿಹಾಸ ವಾಗಿತ್ತು.
ಅದು ಕೂಡಾ ಮಾಡಲು ಇತರರಿಗೆ ಸಾದ್ಯವಾಗಿಲ್ಲ ಕಾರಣ ಎಪಿ ವಿಭಾಗದ ಸಂಘಟನೆ ಸಟ್ಟಪ್ ಆ ರೀತಿ ಇದೆ.ಇನ್ನು ಇದನ್ನು ಅನುಕರಿಸಲು ಇತರರಿಗೆ ಹಲವಾರು ವರ್ಷಗಳೇ ಬೇಕಾಗ ಬಹುದು.ಆವಾಗ ಎಪಿ ವಿಭಾಗ ವಿಶ್ವ ಪರ್ಯಟನೆ ಮಾಡುತ್ತಿರಬಹುದು.
ಅದೇ ನಾನು ಹೇಳಿದ್ದು ಎಪಿ ವಿಭಾಗ ತುಂಬಾ ಫಾಸ್ಟ್' ಉಲಮಾಗಳ ಅವುಲಿಯಾಗಳ ಆಶೀರ್ವಾದದ ಬರಕತ್.
ಆಧುನಿಕತೆಯ ತುತ್ತತುದಿಗೇರಿ ಕಾರ್ಯಚರಿಸುತ್ತಿದ್ದರೂ ಆಧ್ಯಾತ್ಮಿಕತೆ ಅವರು ಕೈ ಬಿಟ್ಟಿಲ್ಲ!
ಇಷ್ಟೆಲ್ಲಾ ಅಧ್ಬುತ ಸ್ರಷ್ಟಿಸುವಾಗಲೂ ಧಾರ್ಮಿಕತೆ ಯ ಕಟ್ಟುಪಾಡು ಬಿಟ್ಟುಕೊಟ್ಟಿಲ್ಲ!
ಹಾಗಾಗಿ ಅವರನ್ನು 'ಆಧುನಿಕ ಪ‌ಝಂಜನ್ ಮೈಲಾರ್' ಎಂಬ ಹೆಸರಿನಲ್ಲಿ ಮೀಡಿಯಾಗಳು ಮೆನ್ಶನ್ ಮಾಡುತ್ತಿದೆ.
ಪಕ್ಷ ನೋಡದೆ ರಾಜಕೀಯ ನೇತಾರರನ್ನು ಯಾವ ರೀತಿ ಸಮುದಾಯ ಸಬಲೀಕರಣಕ್ಕೆ ಬಳಸಬೇಕೆಂದು ಕಲಿಸಿಕೊಟ್ಟದ್ದು ಎಪಿ ವಿಭಾಗವಾಗಿದೆ.ಅಂದು ಅದನ್ನು ವಿರೋಧಿಸಿದವರು ಇಂದು ಸಾಲು ಸಾಲಾಗಿ ಶಾಲು ಹಾಕಲು ಕ್ಯೂ ನಿಲ್ಲಬೇಕಾಯಿತು!
ಸೋಜಿಗವೇನಂದರೆ ನಕ್ವಿ,ನಳಿನ್ ಸಹಿತ ನಮಗಾಗದವರು ಅಧಿಕಾರಕ್ಕೆ ಬಂದರೆ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕೆಂಬ ಬುಧ್ಧಿ ಹೊಳೆಯಲು ಇತರರಿಗೆ 30 ವರ್ಷ ಬೇಕಾಯಿತು!
ನಾಲೆಡ್ಜ್ ಸಿಟಿಗೆ ಐದು ಸೆಂಟ್ ಜಾಗ ಕೂಡಾ ಇಲ್ಲವೆಂದು ಪರಿಹಾಸ್ಯ ಮಾಡಿದವರು ಅದನ್ನೊಮ್ಮೆ ನೋಡಲು ಕಾತರದಿಂದ ಕಾಯುವಂತಾಯಿತು!
ಶಹರೇ ಮುಬಾರಕ್ ಮಸೀದಿ ಯ ಹೆಸರಲ್ಲಿ ಎಪಿ ವಿಭಾಗ 40 ಕೋಟಿ ಗುಳುಂ ಮಾಡಿತೆಂದು ಸಾರಿ ಪಾಣಕ್ಕಾಡ್ ಸಯ್ಯದ್ ನೀಡಿದ ಸಾವಿರ ರೂಪಾಯಿ ಮರಳಿಸಬೇಕೆಂದು ಪಟ್ಟು ಹಿಡಿದವರು ಆ ಮಸೀದಿ ಕಾಮಗಾರಿಗೆ ನೋಡಿ ಮೂಗಿಗೆ ಬೆರಳಿಟ್ಟರು!
ಹೌದು ಎಪಿ ವಿಭಾಗದಲ್ಲಿರುವವರು ಬುಧ್ಧವಂತರು ಪ್ರಗತಪರರು,ಉಲಮಾಗಳ ಅವುಲಿಯಾಗಳ ‌ಆಶೀರ್ವಾದ ದೊಂದಿಗೆ ಮುನ್ನಡೆಯುವವರು.ಅವರು ನಿಮಗೆ ಬಾಯಲ್ಲಿ ಉತ್ತರಿಸಲ್ಲ. ಮಾಡಿತೋರಿಸುವರು.ಅವರು ನಿಂತ ನೀರಲ್ಲ ಮತ್ತೂ ಮುಂದುವರೆಯುವರು.
ಅಪಹಾಸ್ಯ,ನಿಂದನೆಗಳಿಗೆ ಉತ್ತರಿಸಲು ಅವರಿಗೆ ಸಮಯವಾದರೂ ಎಲ್ಲಿ?

ಇದೀಗ ಕರ್ನಾಟಕ ಮುಸ್ಲಿಂ ಜಮಾತ್ ರಚನೆಯಾಗಿದೆ. ಉತ್ತರ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಅದು ಬೇರೂರಿಯಾಗಿದೆ.
ದ.ಕ ಸಮಿತಿ ಕೂಡಾ ಯಾನೆಪೋಯ ಸರ್,ರಶೀದ್ ಹಾಜಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇನ್ನು ಬಂಟ್ವಾಳ, ಪುತ್ತೂರು ಸಹಿತ ಅಲ್ಲಲ್ಲಿ ತಾಲೂಕ್ ಸಮಿತಿ ರಚನೆಯಾಗಲಿದೆ.
ಮುಸ್ಲಿಂ ಜಮಾ‌ಅತ್ ಪುತ್ತೂರು ತಾಲೂಕು ಸಮಿತಿ ಇನ್ಶಾಅಲ್ಲಾ ನಾಳೆ (ಶನಿವಾರ) ಬೆಳಿಗ್ಗೆ 10 ಗಂಟೆಗೆ ರಚನೆಯಾಗಲಿದೆ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ.
ಸಮುದಾಯ ಸಬಲೀಕರಣಕ್ಕಾಗಿ ದೊಡ್ಠಮಟ್ಟದ ಕ್ರಾಂತಿ ಈ ಮೂಲಕ ನಡೆಯಲಿದೆ.
ನಡೆಯಬಹುದಾ? ಎಂದು ಸಂಶಯ ಯಾರಿಗೂ ಬೇಡ.
ಎಪಿ ವಿಭಾಗ ಮುಟ್ಟಿದೆಲ್ಲವೂ ಚಿನ್ನವಾಗಿದೆ.ಕಾರಣ ಅವರು ಈಗಿನ ಜನರೇಶನ್ ಸಹಿತ ಮುಂದಿನ ಹಲವಾರು ವರ್ಷಗಳ ಜನರೇಶನ್ ಮನದಲ್ಲಿಟ್ಟು ಕಾರ್ಯಚರಿಸುತ್ತಾರೆ.
ಇದರಲ್ಲಿ ಯಾರೂ ಗ್ರೂಪಿಸಂ ತರಬೇಡಿ.ಸಮುದಾಯಕ್ಕಾಗಿ ಪಕ್ವತೆಯೊಂದಿಗೆ ಕಾರ್ಯಚರಿಸುವ ಇರಾದೆ ಇರುವವರು ಸಾಥ್ ಕೊಡಬಹುದು.ಅದಲ್ಲ ಇನ್ನೂ ಕೂಡಾ ಗ್ರೂಪಿಸಂ ಅಮಲಿನಲ್ಲೇ ಇದ್ದೂ ಪರಿಹಾಸ್ಯ, ಸುಳ್ಳು ಹೇಳುತ್ತಾ ಇದ್ದರೆ ನಿಮಗೆ ಉತ್ತರಿಸಲು ಎಪಿ ವಿಭಾಗಕ್ಕೆ ಸಮಯ ಇಲ್ಲ.
ನಿಮಗೆ ನಿಮ್ಮ ಪಾಡು,ನಮಗೆ ನಮ್ಮದು,
ನಾಲೆಡ್ಜ್ ಸಿಟಿ, ಶ‌ಅರೇ ಮುಬಾರಕ್ ಮಸೀದಿ ತಲೆ ಎತ್ತುವಾಗ ಯಾರದೋ ಚಾಡಿ ಕೇಳಿ ಅದರ ವಿರುಧ್ಧ ಮಾತನಾಡಿದವರು ಇಂದು ಖೇದಿಸುವ ಹಾಗೆ ಮುಂದೊಂದು ದಿನ 'ಕರ್ನಾಟಕ ಮುಸ್ಲಿಂ ಜಮಾ‌ಅತ್' ಸ್ಪಷ್ಟ ಗುರಿಯೊಂದಿಗೆ ಬೆಳಕು ಚೆಲ್ಲಿ ನಿಲ್ಲುವಾಗ 'ನಾನು ಅವಕಾಶ ವಂಚಿತನಾದೆ' ಎಂದು ಗೋಗೆರದು ಫಲವಿಲ್ಲ.
ಚಿಂತಿಸಿ ಕಾರ್ಯಚರಿಸಿರಿ......
ಅಬೂಶಝ
27/9/2019

Thursday, September 26, 2019

ಝಿಯಾರತ್ತ್ ಕೇಂದ್ರ 6⃣1⃣ ಭಾಗ 01. ಶಿಯಾಬುದ್ದೀನ್ ಅಹ್ಮದ್ ಕೋಯ ಶಾಲಿಯಾತ್ತಿ (ಖ:ಸಿ ಚಾಲಿಯಂ)

*​ಝಿಯಾರತ್ತ್ ಕೇಂದ್ರ​​*
ಸಮಸ್ತ ನಾಯಕರು = 09
      ​👉6⃣1⃣
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
*********************
ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ರೂಪೀಕರಣದಿಂದ ಆರಂಭಿಸಿ ಅದರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿ ಸುನ್ನೀ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯ ಇಸ್ಲಾಮಿಕ್ ಪಂಡಿತರಲ್ಲೊಬ್ಬರಾದ ಮರ್ಹೂಮ್ ಅಬೂ ಸಾದಾತ್ತ್ ಶಿಹಾಬುದ್ದೀನ್ ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ) ಕೂಡ ಒಬ್ಬರು.

ಹಿಜರಿ 1302 ಜಮಾದಿಲ್ ಆಖಿರ್ 22 ರಂದು ಜನಿಸಿದ ಮಹಾನರು ದೀನೀ ವಿಧ್ವಾಂಸರಾಗಿದ್ದ ತಮ್ಮ ತಂದೆ ಮತ್ತು ಇತರ ಹಲವಾರು ವಿಧ್ವಾಂಸರಿಂದ ಪ್ರಾಥಮಿಕ ಹಾಗೂ ಪ್ರೌಢ  ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಮೌಲಾನಾ ಮುಫ್ತಿ ಮಹ್ಮೂದ್ (ರ), ಮತ್ತು ಅಹ್ಮದ್ ರಿಳಾ ಖಾನ್ ಬರೇಲ್ವಿ (ರ) ರಂತಹ ವಿಶ್ವ ಪ್ರಸಿದ್ಧ ವಿಧ್ವಾಂಸರ ಶಿಷ್ಯತ್ವ ಸ್ವೀಕರಿಸಿ ವಿವಿಧ ಶಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಣ ಪಡೆದು ಅತ್ಯುನ್ನತ ಪದವಿ ಗಳಿಸಿದರು. ನಂತರ ಕೆಲಕಾಲ ಹೈದರಾಬಾದ್ ನಿಜಾಮರ ಅಧೀನದಲ್ಲಿ ಮುಫ್ತಿಯಾಗಿ ಸೇವೆ ಸಲ್ಲಿಸಿದರು.

ನಾಗೂರ್, ಭಟ್ಕಳ್, ತಿರೂರಂಗಾಡಿ ಮೊದಲಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಮಹಾನರು 1329ರಲ್ಲಿ ವೆಲ್ಲೂರ್ ಲತ್ವಿಫಿಯ್ಯ ಕಾಲೇಜಿನಲ್ಲಿ ಮುದರಿಸ್ಸರಾಗಿ ನಂತರ ಫತ್ವ ಬೋರ್ಡ್ ಸದಸ್ಯರಾಗಿಯೂ ಆಯ್ಕೆಯಾದರು. ತಮಿಳುನಾಡಿನ ತಿರುನಲ್ವೇಲಿಯಲ್ಲಿ ರಿಯಾಳುಲ್ ಜಿನಾಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ದರ್ಸ್ ನಡೆಸಿದ ನಂತರ ವೆಲ್ಲೂರ್ ಲತ್ವೀಫಿಯ್ಯಾದಲ್ಲಿ ಪ್ರಾಂಶುಪಾಲರಾದರು.

1933ರಲ್ಲಿ ಖಿಲಾಫತ್ತ್ ನಾಯಕರಾಗಿದ್ದ ಆಲಿ ಮುಸ್ಲಿಯಾರ್ (ಖ:ಸಿ) ಹಜ್ಜ್'ಗೆ ತೆರಳಿದಾಗ ಆಲಿ ಮುಸ್ಲಿಯಾರ್ (ಖ.ಸಿ) ರವರ ನೇತೃತ್ವದ ತಿರೂರಂಗಾಡಿ ದರ್ಸ್'ನ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗೆ ದೇಶದ ವಿವಿದೆಡೆ ದೀನೀ ಸೇವೆ ಸಲ್ಲಿಸುತ್ತಾ ಪಂಡಿತ ವಲಯದಲ್ಲಿ ಆಧುನಿಕ ಇಮಾಂ ನವವಿ (ರ) ಯೆಂದೂ, ಮತ್ತು ಆಧುನಿಕ ಇಮಾಂ ಗಝ್ಝಾಲಿ (ರ)ಯೆಂದೂ ಗುರುತಿಸಿಕೊಂಡಿದ್ದರು.

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಲ್ಲಿ ಸಂಘಟನಾತ್ಮಕವಾಗಿ ಪ್ರಮುಖ ಪಾತ್ರವಹಿಸಿದ ಮಹಾನರು 1933 ಮಾರ್ಚ್ ಐದಕ್ಕೆ ಕಲ್ಲಿಕೋಟೆ ಜಿಲ್ಲೆಯ ಫರೋಕ್'ನಲ್ಲಿ ನಡೆದ ಸಮಸ್ತದ 6ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನಕ್ಕೆ ಸಮಸ್ತ ನೇೂಂದಾಯಿಸಿದ ನೋಂದಣಿಯಲ್ಲಿ ಮಹಾನರು 10ನೇ ಸದಸ್ಯರಾಗಿದ್ದರು.

ಸುನ್ನತ್ ಜಮಾಅತಿನ ಏಳಿಗೆಯನ್ನು ಸಹಿಸದೆ ಸದಾ ಉಲಮಾಗಳನ್ನು ನಿಂದಿಸುತ್ತಾ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಹರಿಕಾರರಂತೆ ಸೇೂಗು ಹಾಕಿ ಸಮಾಜಘಾತುಕ ಶಕ್ತಿಗಳೊಂದಿಗೆ ಮೃದು ಧೇೂರಣೆ ತಳೆಯುವ ನೂತನವಾದಿಗಳ ಕುಟಿಲ ತಂತ್ರಗಳನ್ನು ಮನಗಂಡ ಮಹಾನರು ಅಂತಹ ಸೇೂಗಲಾಡಿಗಳೊಂದಿಗೆ ಸುನ್ನೀ ಸಮೂಹ ಯಾವ ರೀತಿಯ ಸಂಬಂಧವನ್ನೂ ಹೊಂದಬಾರದೆಂಬ ದಿಟ್ಟತನದ ಫತ್ವಾ ಮಂಡಿಸಿದ್ದರು.
ಅಂದು ಆ ಮಹಾನರು ದೂರಾಲೇೂಚನೆಯಿಂದ ಹೊರಡಿಸಿದ ಫತ್ವಾದ ಮಹತ್ವವು ಇಂದು ಜಾಗತಿಕ ಮುಸ್ಲಿಂ ಸಮೂಹಕ್ಕೆ ಮನವರಿಕೆಯಾಗುತ್ತಿದೆ.

ಸುನ್ನೀ ಉಲಮಾಗಳನ್ನು ಕಂಡರಾಗದ ನೂತನವಾದಿಗಳು ಫರೇೂಕ್'ನಲ್ಲಿ ನಡೆಯಬೇಕಿದ್ದ ಸಮಸ್ತದ ಸಮ್ಮೇಳನವನ್ನು ಮೊಟಕುಗೊಳಿಸಲಿಕ್ಕಾಗಿ ಕೆ.ಎಂ. ಸೀತಿ ಹಾಜಿಯವರ ನೇತೃತ್ವದಲ್ಲಿ ಅಡ್ವೋಕೇಟ್ ಕೆ.ಕೆ. ಪೊಕರ್ ಮುಖಾಂತರ ಕೇರಳ ಜಂಇಯತ್ತುಲ್ ಉಲಮಾದ ಸಮ್ಮೇಳನ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ನೂತನವಾದಿಗಳ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿದ ಮರ್ಹೂಂ ಶಾಲಿಯಾತ್ತಿ (ರ) ರವರು ಸಮರ್ಥವಾಗಿ ಆಧಾರ ಸಮೇತ ಉತ್ತರಿಸಿದ್ದರಿಂದ ನೂತನವಾದಿಗಳ ಕುತಂತ್ರ ಫಲಿಸದೆ ಫರೇೂಕ್ ಸಮ್ಮೇಳನ ಬಹು ವಿಜೃಂಭಣೆಯಿಂದ ನಡೆಯಿತು.

☪ಮುಂದುವರಿಯುವುದು
💢💢💢💢💢💢💢💢💢

Wednesday, September 25, 2019

ಕುತ್ತ್ ರಾತ್ತಿಬ್ ಇಸ್ಲಾಮಿಕವೇ..? ಭಾಗ 03

*ಕುತ್ತ್ ರಾತೀಬ್ ಇಸ್ಲಾಮಿಕವೇ?*

ಭಾಗ--3


📝 _ಮುನೀರ್ ಸಖಾಫಿ ಸಾಲೆತ್ತೂರು_

----------------------------------------------------
ಪವಾಡಗಳು ಅವರವರ ಕರಾಮತ್ತಾಗಿ ಸಂಭವಿಸಬೇಕಾದರೆ  ಪ್ರಸ್ತುತ ನಿಯಮಗಳು ಅಡಗಿರಬೇಕು ಎಂದಾಗಿದೆ ಮೇಲಿನ ಇಬಾರತ್ತಿನಲ್ಲಿ ಹೇಳಿದ್ದು.ಅದೇ ವೇಳೆ ಒಂದು ಪ್ರವಾದಿಯ ಅಥವಾ ವಲಿಯ್ಯ್ ನ ಕರಾಮತ್ ಇನ್ನೊಬ್ಬರಲ್ಲಿ ಪ್ರಕಟವಾಗಲು ಪ್ರಸ್ತುತ ನಿಬಂಧನೆ ಬಾಧಕವಲ್ಲ.ಅದು ದುಷ್ಕರ್ಮಿಯಲ್ಲೂ ,ಕಾಫಿರಾದ ವ್ಯಕ್ತಿಯಲ್ಲೂ ಪ್ರಕಟವಾಗಬಹುದಾಗಿದೆ.
ಔಲಿಯಾಗಳನ್ನು ನಿಂದಿಸಿದ ಎಷ್ಟೋ ದುಷ್ಕರ್ಮಿಗಳಿಗೆ ಔಲಿಯಾಗಳ ಕರಾಮತ್'ನ ಮೂಲಕ ನಾಶ ನಷ್ಟ ಸಂಭವಿಸಿದ್ದು ಚರಿತ್ರೆಗಳಲ್ಲಿದೆ.

ಇಮಾಮ್ ಇಬ್ನ್ ಹಜರ್ (ರ) ಹೇಳುತ್ತಾರೆ,

وقد تظهر الكرامة علي يد فاسق بل كافر كالسامري فانه رأى فرس جبريل حتي اخذ من تراب حافرها وجعله في
 العجل فخار.(فتاوي الكبري للهيتمي 4/352)
ಕೆಲವೊಮ್ಮೆ ಔಲಿಯಾಗಳ ಕರಾಮತ್ ಸತ್ಯ ನಿಷೇಧಿ ಅಥವಾ ದುಷ್ಕರ್ಮಿಯ ಮೂಲಕ ಪ್ರಕಟವಾಗಬಹುದು.ಜಿಬ್ರೀಲ್ ಅಲೈಹಿಸ್ಸಲಾಮ್ ರ ಕುದುರೆಯ ಕಾಲು ತಾಗಿದ ಮಣ್ಣು ತೆಗೆದು"ಸಾಮಿರಿ" ಎಂಬಾತನು ಆತ ನಿರ್ಮಿಸಿದ ಹಸುವಿನ ಕರು ವಿಗೆ ಹಾಕಿದಾಗ  ಅದು ಶಬ್ಧವುಂಟು ಮಾಡಿತು.
(ಫತಾವಲ್ ಕುಬ್ರಾ 4/352)
----------------------------------------------------
ಇಲ್ಲಿ ಜಿಬ್ರೀಲ್ (ಅ) ರ ಕರಾಮತ್ ಸಾಮಿರಿಯಲ್ಲಿ ಪ್ರಕಟವಾಯಿತು.ಆತ ಕಾಫಿರನಾಗಿದ್ದ.

ಇಮಾ ಗಝ್ಝಾಲೀ(ರ)ಹೇಳುತ್ತಾರೆ,

يجوز ظهور ذلك علي يد فاسق لانه مقدور في نفسه
(الاقتصاد في الاعتقاد 1/63)
ದುಷ್ಕರ್ಮಿಯಲ್ಲೂ ಔಲಿಯಾಗಳ ಕರಾಮತ್ ಪ್ರಕಟವಾಗಬಹುದು.ಕಾರಣ ಅದು ಅಸಂಭವ್ಯವಾದ ಸಂಗತಿಯಲ್ಲ.
(ಅಲ್ ಇಖ್ತಿಸ್ವಾದ್ ಫಿಲ್ ಇಹ್'ತಿಖಾದ್ 1/63)

----------------------------------------------------

ಒಟ್ಟಿನಲ್ಲಿಒಬ್ಬ ವ್ಯಕ್ತಿ ಶರೀಅತ್ ನ ನಿಯಮಗಳನ್ನು ಪಾಲಿಸಿ ಅವನಿಂದ ಪವಾಡಗಳು ಪ್ರಕಟವಾದಲ್ಲಿ ಅದು ಆತನ ಕರಾಮತ್ ಎಂದೂ  ಶರೀಅತ್ ನಿಯಮ ಪಾಲಿಸದವನಾಗಿದ್ದರೆ, ಪವಾಡ ಶಕ್ತಿ ಕಲಿತು ಪ್ರಕಟ ಮಾಡಿದ್ದಲ್ಲಿ ಅದು ಸಿಹ್ರ್ ಎಂದೂ ಹೇಳಬಹುದಾಗಿದೆ.ಇದ್ಯಾವುದೂ ಇಲ್ಲದ ಕೇವಲ ಒಬ್ಬ ಸಾಧಾರಣ ವ್ಯಕ್ತಿಯಿಂದ ಅಧ್ಬುತ ಪವಾಡಗಳು ಪ್ರಕಟವಾದಲ್ಲಿ ಆತ ಯಾವ ಪ್ರವಾದಿಗೆ ಅಥವಾ ವಲಿಯ್ಯ್ ಗೆ ಸೇರಿಸಿ ಅದನ್ನು ಹೇಳುತ್ತಾನೋ ಅದು ಅವರ ಮುಹ್'ಜಿಝತ್ ಅಥವಾ ಕರಾಮತ್ ಆಗಿ ಪರಿಗಣಿಸಲ್ಪಡಲಾಗುತ್ತದೆ.

ಕುತ್ತ್ ರಾತೀಬ್ ಎಂಬುವುದು ರಿಫಾಈ ರಾತೀಬ್ ನಲ್ಲಿ ನಡೆಸುವ ಒಂದು ಕ್ರಿಯೆ ಆಗಿರುವುದರಿಂದ ಅದು ರಿಫಾಯೀ ಶೈಖ್ (ರ)ರಿಗೆ ಸೇರಿದ ಕರಾಮತ್ ಎಂದು ಹೇಳಬಹುದು.

ಕುತ್ತು ರಾತೀಬ್ ನಡೆಸುವವರು ಸುನ್ನತ್ ಗಳನ್ನು ಪಾಲಿಸದವರು.ಅವರಲ್ಲಿ ಹೇಗೆ ಪವಾಡ  ನಡೆಯಬಹುದು ಎಂಬ ಸಂಶಯ ಕೆಲವರಿಗಾದರೂ ಇದೆ.
ಅದರ ಉತ್ತರವನ್ನಾಗಿದೆ ಮೇಲೆ ಓದಿದ್ದು.

ಯಾವುದೇ ಕಾರಣವಿಲ್ಲದೆ ಶರೀರಕ್ಕೆ ಗಾಯ ಮಾಡಬಾರದು.ಚಿಕಿತ್ಸೆಯ ಭಾಗವಾಗಿ ಶರೀರಗಳನ್ನು ಗಾಯ ಮಾಡುವುದು/ಭಾಗಗಳನ್ನು ಕೊಯ್ಯುವುದು ಸ್ವಾಭಾವಿಕವಾಗಿದೆ.
ಕರಾಮತ್ ಎಂಬ ಪವಾಡವನ್ನು ನಿಷೇಧಿಸುವವರ ಮುಂದೆ  ಔಲಿಯಾಗಳಿಗೆ ಕರಾಮತ್ ಇದೆ ಎಂದು ತೋರಿಸಲು ಆತ್ಮೀಯ ಚಿಕಿತ್ಸೆಯ ಭಾಗವಾಗಿ ರಾತೀಬ್ ನಲ್ಲಿ ಆಯುಧಗಳಿಂದ ಚುಚ್ಚಿದರೆ ಅದನ್ನು ತಪ್ಪು ಎಂದು ಹೇಗೆ ತಾನೇ ಹೇಳುವುದು?

ಪುರಾವೆಗಳು ಇನ್ನೂ ಇವೆ.
ಬೇಕಾದಲ್ಲಿ ಇನ್ನೊಮ್ಮೆ ಬರೆಯುವೆ.ಇಂಶಾ ಅಲ್ಲಾಹ್.


*ಮುಗಿಯಿತು.....*
----------------------------------------------------

ಕುತ್ತ್ ರಾತ್ತಿಬ್ ಇಸ್ಲಾಮಿಕವೇ.. ಭಾಗ 02

*ಕುತ್ತ್ ರಾತೀಬ್ ಇಸ್ಲಾಮಿಕವೇ?*

📝 _ಮುನೀರ್ ಸಖಾಫಿ ಸಾಲೆತ್ತೂರು_

ಭಾಗ--2
----------------------------------------------------

*ರಿಫಾಯಿ ರಾತೀಬ್'ನಲ್ಲಿ ಆಯುಧಗಳಿಂದ ಚುಚ್ಚಿ ನಡೆಸುವ ರಾತೀಬ್ ಗೆ ಕುತ್ತು ರಾತೀಬ್ ಎಂದು ಅದು ಅಪಾಯವಿಲ್ಲವೆಂದು ದೃಢವಿರುವವರು ನಡೆಸಬಹುದೆಂಬುವುದಕ್ಕೆ ಕೆಲವು ಪ್ರಮಾಣಗಳನ್ನು ಒಂದನೇ ಭಾಗದಲ್ಲಿ ವಿವರಿಸಿದ್ದೇನೆ.*

ಶೈಖ್ ರಿಫಾಈ (ರ) ರವರ ಶಿಷ್ಯಂದಿರು ಹಲವಾರು ಅಧ್ಬುತಗಳನ್ನು ತೋರಿಸುತ್ತಿದ್ದರು.ಅಗ್ನಿಯಲ್ಲಿ ನಡೆಯುವುದು,ಹಾವುಗಳನ್ನು ನುಂಗುವುದು,ಸಿಂಹಗಳನ್ನು ವಾಹನವಾಗಿಸಿ ಯಾತ್ರೆ ಹೋಗುವುದು ಅದಲ್ಲಿ ಕೆಲವೊಂದು.

ಇಮಾಮ್ ಇಬ್ನ್ ಖಲ್ಲಿಕಾನ್ ಹೇಳುವುದು ನೋಡಿ,

 ولأتباعه أحوال عجيبة من أكل الحيات وهي حية ، والنزول في التنانير وهي تضطرم ، فيطفئونها ،ويلعبون بها وهي تشتغل، ويقال : إنهم في بلادهم يركبون الأسود.
(وفيات الاعيان 1/190)

ಹೊತ್ತಿ ಉರಿಯುತ್ತಿರುವ ಬೆಂಕಿಯ ಒಳ ಪ್ರವೇಶಿಸಿ ಬೆಂಕಿ ಆರಿಸುವುದು,ಉರಿಯುತ್ತಿರುವ ಬೆಂಕಿಯೊಂದಿಗೆ ಆಟವಾಡುವುದು,ಜೀವಂತ ಹಾವುಗಳನ್ನು ನುಂಗುವುದು ಮುಂತಾದ ಅಧ್ಭುತಗಳನ್ನು ಶೈಖ್ ರಿಫಾಯಿವರ ಅನುಯಾಯಿಗಳು ಪ್ರಕಟಿಸುತ್ತಿದ್ದರು.
ಅವರು ಸಿಂಹಗಳ ಮೇಲೇರಿ ಯಾತ್ರೆ ಹೋಗುತ್ತಿದ್ದರು.
(ವಫಯಾತುಲ್ ಅಹ್'ಯಾನ್ 1/190)

ಇದನ್ನು ಇಮಾಮ್ ಇಬ್ನುಲ್ ಇಮಾದ್ (ರ) ತನ್ನ ಶದ್ಸರಾತುಝ್ಝಹಬ್ ನ 4/258 ರಲ್ಲೂ ಉಲ್ಲೇಖಿಸಿದ್ದಾರೆ.
-----------------------------------------------------

*ಇದು ಮಾಯಾಜಾಲವೇ?*

ಕುತ್ತು ರಾತೀಬ್ ನ ಕೆಲವೊಂದು ವೀಡಿಯೋಗಳು ಅಂತರ್ಜಾಲದಲ್ಲಿ ಶೇರ್ ಆಗುವಾಗ ತಿಳುವಳಿಕೆಯಿಲ್ಲದ ಕೆಲವು ಜನರು ಸುನ್ನಿಗಳನ್ನು ಮತ್ತು ರಾತೀಬನ್ನು ಹಿಯಾಳಿಸುವವರಿದ್ದಾರೆ.
ಕೆಲವರು ಇದನ್ನು ಕ್ರಿಮಿನಲ್ ರಾತೀಬ್ ಎಂದು ಹೇಳಿದರೆ ಇನ್ನು ಕೆಲವರು ಮಾಯಾಜಾಲ ಎಂದು ಹೇಳುವವರಿದ್ದಾರೆ.
ವಾಸ್ತವಿಕತೆ ಕಲಿಯದೆ ನಾವು ಯಾವ ಮಾತನ್ನು ಕೂಡಾ ಹೇಳಲೇಬಾರದು.

ಔಲಿಯಾಗಳ ಇಂತಹಾ ಪವಾಡಗಳು ಚರಿತ್ರೆಯ ಗ್ರಂಥಗಳಲ್ಲಿ ದಾಖಲಿಸಲಾಗಿದೆ.

ಪವಾಡಗಳು ಹಲವು ರೀತಿಯಲ್ಲಿದೆ.ಕೆಲವು ನಿಷಿದ್ಧವಾದವು ಇದೆ.ಇನ್ನು ಕೆಲವು ಅಂಗೀಕರಿಸಲ್ಪಡುವಂತದ್ದೂ ಇದೆ.
ಅದನ್ನು ಬೇರ್ಪಡಿಸಿ ಇಮಾಮರು ವಿವರಿಸಿದ್ದಾರೆ.

ಇಮಾಮ್ ಅಬ್ದುರ್ರಹ್'ಮಾನ್  ಬಾಅಲವೀ ಅಲ್ ಹಲ್ರಮೀ(ರ)ಹೇಳುವುದು ನೋಡಿ,

(مسألة:): خوارق العادة على أربعة أقسام:
ಪವಾಡಗಳು 4 ವಿಧವಿದೆ.

 المعجزة المقرونة بدعوى النبوة المعجوز عن معارضتها، الحاصلة بغير اكتساب وتعلم،
1.ಪ್ರವಾದಿಗಳ  ನುಬುವ್ವತ್ ಗೆ ಸಂಬಂಧಪಟ್ಟ ಮುಹ್'ಜಿಝತ್.
ಅದನ್ನು ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ.
ಕಲಿಕೆಯಿಂದ ಅಥವಾ ಸಂಪಾದನೆಯ  ಮೂಲಕ ಅದನ್ನು ಗಳಿಸಲು ಸಾಧ್ಯವಿಲ್ಲ.

والكرامة وهي ما تظهر على يد كامل المتابعة لنبيه من غير تعلم ومباشرة أعمال مخصوصة، وتنقسم إلى ما هو إرهاص وهو ما يظهر على يد النبي قبل دعوى النبوّة، وما هو معونة وهو ما يظهر على يد المؤمن الذي لم يفسق ولم يغتر به،

ಕಲಿಕೆಯಿಂದ ಅಥವಾ ಇನ್ನಿತರ ಯಾವುದೇ ಚಟುವಟಿಕೆಗಳ ಮೂಲಕವಲ್ಲದೆ ಪೂರ್ಣವಾಗಿ ಪ್ರವಾದಿಗಳನ್ನು ಅನುಸರಿಸಿ  ಜೀವಿಸುವರಿಂದ ಪ್ರಕಟವಾಗುವ ಪವಾಡವಾಗಿದೆ ಕರಾಮತ್.
ಇದು 2 ವಿಧವಿದೆ.
1.ಪ್ರವಾದಿತ್ವದ ಮುಂಚಿತವಾಗಿ ಪ್ರವಾದಿಗಳಿಂದ ಪ್ರಕಟವಾದ ಪವಾಡ.ಇದಕ್ಕೆ "ಇರ್'ಹಾಸ್ವ್" ಎಂಬ ಹೆಸರಿದೆ.
2.ದುಷ್ಕರ್ಮಿಯಲ್ಲದ ಒಬ್ಬ ಸತ್ಯವಿಶ್ವಾಸಿಯಿಂದ ಪ್ರಕಟವಾಗುವ ಪವಾಡ.ಅಧ್ಭುತ ಪವಾಡ ಪ್ರಕಟವಾದುದರಿಂದ ಆತ ವಂಚಿಸಲ್ಪಡುವವನಲ್ಲ.ಇದಕ್ಕೆ "ಮಊನತ್" ಎಂಬ ಹೆಸರಿದೆ.

والاستدراج وهو ما يظهر على يد الفاسق المغترّ،
3.ಇಸ್ತಿದ್'ರಾಜ್.
ಅಧ್ಬುತ ಪವಾಡ ಪ್ರಕಟಗೊಂಡ ಕಾರಣಕ್ಕೆ ವಂಚಿಸಲ್ಪಟ್ಟ ದುಷ್ಕರ್ಮಿಯಾದ ಮನುಷ್ಯನಲ್ಲಿ ಪ್ರಕಟವಾದ ಪವಾಡ.

والسحر وهو ما يحصل بتعلم ومباشرة سبب على يد فاسق أو كافر كالشعوذة،وهي خفة اليد بالأعمال، وحمل الحيات ولدغها له، واللعب بالنار من غير تأثير، والطلاسم والتعزيمات المحرمة واستخدام الجان وغير ذلك،

4.ಸಿಹ್ರ್.
ಕೆಲವು ಕೆಲಸಗಳ ಮೂಲಕ ದುಷ್ಕರ್ಮಿ ಮತ್ತು ಸತ್ಯ ನಿಷೇಧಿಗಳಲ್ಲಿ ಕಾಣುವ ಪವಾಡ.ಇದು ಕಲಿಕೆಯಿಂದ ಗಳಿಸುವ ಪವಾಡವಾಗಿದೆ.
ವಾಮಾಚಾರ ಇದಕ್ಕೆ ಉದಾಹರಿಸಬಹುದಾಗಿದೆ.ಒಂದು ಚಟುವಟಿಕೆಯೊಂದಿಗಿರುವ ಕೈಚಳಕವಾಗಿದೆ ಅದು.ಸರ್ಪಗಳನ್ನು ಹೊತ್ತೊಯ್ಯುವುದು,ಅದನ್ನು ಕಚ್ಚಿಸುವುದು,ತೊಂದರೆಯಾಗದ ರೂಪದಲ್ಲಿ ಬೆಂಕಿಯಲ್ಲಿ ಆಟವಾಡುವುದು ನಿಷಿಧ್ದವಾದ ಮಂತ್ರಗಳಿಗೆ  ಬೇಕಾಗಿ ಬರೆಯುವುದು ಮತ್ತು ಅದಕ್ಕಾಗಿ ಗೆರೆ ಹಾಕುವುದು ಮುಂತಾದವು ಇದರಲ್ಲಿ ಒಳಪಡುತ್ತದೆ.

 إذا عرفت ذلك علمت أن ما يتعاطاه الذين يضربون صدورهم بدبوس أو سكين، أو يطعنون أعينهم، أو يحملون النار أو يأكلونها، وينتمون إلى سيدي أحمد الرفاعي، أو سيدي أحمد بن علوان أو غيرهما من الأولياء، أنهم إن كانوا مستقيمين على الشريعة، فائمين بالأوامر، تاركين للمناهي، عالمين بالفرض العيني من العلم عاملين به، لم يتعلموا السبب المحصل لهذا العمل، فهو من حيز الكرامة وإلا فهو من حيز السحر، إذ الإجماع منعقد على أن الكرامة لا تظهر على يد فاسق، وأنها لا تحصل بتعلم أقوال وأعمال،
ಹೀಗಿರುವಾಗ ಶೈಖ್ ರಿಫಾಯೀ(ರ) ರವರ ಮತ್ತು ಶೈಖ್ ಅಹ್ಮದು ಬಿನ್ ಅಲ್'ವಾನೀ(ರ) ರಂತಹಾ ಔಲಿಯಾಗಳ  ಜನರೆಂದು ಹೇಳುವ ಕೆಲವು ಜನರು ಆಯುಧಗಳಿಂದ ಹೃದಯಕ್ಕೆ ಮತ್ತು ಕಣ್ಣಿಗೆ ಚುಚ್ಚುವುದು ಹಾಗೂ ಬೆಂಕಿಯನ್ನು ಹೊತ್ತುಯ್ಯುವುದು,ಬೆಂಕಿಯನ್ನು ನುಂಗುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ.ಅವರು ಶರೀಅತ್ ನ ನಿಯಮಗಳನ್ನು ಅಕ್ಷರಸ ಪಾಲಿಸಿ ಜೀವಿಸಿ,ವೈಯುಕ್ತಿಕ ಭಾಧ್ಯತೆಗಳನ್ನು ತಿಳಿದು  ಅವರ ಜೀವನದಲ್ಲಿ ಅಳವಡಿಸಿ ,ಈ ಪವಾಡಗಳನ್ನು ಪ್ರಕಟಿಸಲು ಕಲಿಯದೆ ಪವಾಡಗಳು ದರ್ಶಿಸಲು ಸಾಧ್ಯವಾದರೆ ಅದನ್ನು ಕರಾಮತ್ ನ ಲಿಸ್ಟ್'ನಲ್ಲಿ ಒಳಪಡಿಸಬಹುದಾಗಿದೆ.
ಪವಾಡಗಳು ಕಲಿತು ಪ್ರಕಟಿಸಿದಲ್ಲಿ ಸಿಹ್ರ್ ನ ಲಿಸ್ಟ್ ನಲ್ಲೂ ಒಳಪಡಿಸಬಹುದಾಗಿದೆ.
ಕಾರಣ ಕರಾಮತ್ ದುರ್ಷರ್ಮಿಯಲ್ಲಿ ಪ್ರಕಟವಾಗಲಾರದು.ಕಲಿಕೆಯಿಂದ ಕರಾಮತ್ ದರ್ಶಿಸಲಸಾಧ್ಯವೆಂದು ವಿಧ್ವಾಂಸರು ಒಮ್ಮತಾಭಿಪ್ರಾಯ ತಾಳಿದ್ದಾರೆ.
(ಬಿಗ್'ಯ 299)


ಬಾಕಿ ಮುಂದಿನ ಭಾಗದಲ್ಲಿ....