*ಝಿಯಾರತ್ತ್ ಕೇಂದ್ರ*
ಸಮಸ್ತ ನಾಯಕರು = 09
👉6⃣1⃣
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
*********************
ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ರೂಪೀಕರಣದಿಂದ ಆರಂಭಿಸಿ ಅದರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿ ಸುನ್ನೀ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯ ಇಸ್ಲಾಮಿಕ್ ಪಂಡಿತರಲ್ಲೊಬ್ಬರಾದ ಮರ್ಹೂಮ್ ಅಬೂ ಸಾದಾತ್ತ್ ಶಿಹಾಬುದ್ದೀನ್ ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ) ಕೂಡ ಒಬ್ಬರು.
ಹಿಜರಿ 1302 ಜಮಾದಿಲ್ ಆಖಿರ್ 22 ರಂದು ಜನಿಸಿದ ಮಹಾನರು ದೀನೀ ವಿಧ್ವಾಂಸರಾಗಿದ್ದ ತಮ್ಮ ತಂದೆ ಮತ್ತು ಇತರ ಹಲವಾರು ವಿಧ್ವಾಂಸರಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಮೌಲಾನಾ ಮುಫ್ತಿ ಮಹ್ಮೂದ್ (ರ), ಮತ್ತು ಅಹ್ಮದ್ ರಿಳಾ ಖಾನ್ ಬರೇಲ್ವಿ (ರ) ರಂತಹ ವಿಶ್ವ ಪ್ರಸಿದ್ಧ ವಿಧ್ವಾಂಸರ ಶಿಷ್ಯತ್ವ ಸ್ವೀಕರಿಸಿ ವಿವಿಧ ಶಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಣ ಪಡೆದು ಅತ್ಯುನ್ನತ ಪದವಿ ಗಳಿಸಿದರು. ನಂತರ ಕೆಲಕಾಲ ಹೈದರಾಬಾದ್ ನಿಜಾಮರ ಅಧೀನದಲ್ಲಿ ಮುಫ್ತಿಯಾಗಿ ಸೇವೆ ಸಲ್ಲಿಸಿದರು.
ನಾಗೂರ್, ಭಟ್ಕಳ್, ತಿರೂರಂಗಾಡಿ ಮೊದಲಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಮಹಾನರು 1329ರಲ್ಲಿ ವೆಲ್ಲೂರ್ ಲತ್ವಿಫಿಯ್ಯ ಕಾಲೇಜಿನಲ್ಲಿ ಮುದರಿಸ್ಸರಾಗಿ ನಂತರ ಫತ್ವ ಬೋರ್ಡ್ ಸದಸ್ಯರಾಗಿಯೂ ಆಯ್ಕೆಯಾದರು. ತಮಿಳುನಾಡಿನ ತಿರುನಲ್ವೇಲಿಯಲ್ಲಿ ರಿಯಾಳುಲ್ ಜಿನಾಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ದರ್ಸ್ ನಡೆಸಿದ ನಂತರ ವೆಲ್ಲೂರ್ ಲತ್ವೀಫಿಯ್ಯಾದಲ್ಲಿ ಪ್ರಾಂಶುಪಾಲರಾದರು.
1933ರಲ್ಲಿ ಖಿಲಾಫತ್ತ್ ನಾಯಕರಾಗಿದ್ದ ಆಲಿ ಮುಸ್ಲಿಯಾರ್ (ಖ:ಸಿ) ಹಜ್ಜ್'ಗೆ ತೆರಳಿದಾಗ ಆಲಿ ಮುಸ್ಲಿಯಾರ್ (ಖ.ಸಿ) ರವರ ನೇತೃತ್ವದ ತಿರೂರಂಗಾಡಿ ದರ್ಸ್'ನ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗೆ ದೇಶದ ವಿವಿದೆಡೆ ದೀನೀ ಸೇವೆ ಸಲ್ಲಿಸುತ್ತಾ ಪಂಡಿತ ವಲಯದಲ್ಲಿ ಆಧುನಿಕ ಇಮಾಂ ನವವಿ (ರ) ಯೆಂದೂ, ಮತ್ತು ಆಧುನಿಕ ಇಮಾಂ ಗಝ್ಝಾಲಿ (ರ)ಯೆಂದೂ ಗುರುತಿಸಿಕೊಂಡಿದ್ದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಲ್ಲಿ ಸಂಘಟನಾತ್ಮಕವಾಗಿ ಪ್ರಮುಖ ಪಾತ್ರವಹಿಸಿದ ಮಹಾನರು 1933 ಮಾರ್ಚ್ ಐದಕ್ಕೆ ಕಲ್ಲಿಕೋಟೆ ಜಿಲ್ಲೆಯ ಫರೋಕ್'ನಲ್ಲಿ ನಡೆದ ಸಮಸ್ತದ 6ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನಕ್ಕೆ ಸಮಸ್ತ ನೇೂಂದಾಯಿಸಿದ ನೋಂದಣಿಯಲ್ಲಿ ಮಹಾನರು 10ನೇ ಸದಸ್ಯರಾಗಿದ್ದರು.
ಸುನ್ನತ್ ಜಮಾಅತಿನ ಏಳಿಗೆಯನ್ನು ಸಹಿಸದೆ ಸದಾ ಉಲಮಾಗಳನ್ನು ನಿಂದಿಸುತ್ತಾ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಹರಿಕಾರರಂತೆ ಸೇೂಗು ಹಾಕಿ ಸಮಾಜಘಾತುಕ ಶಕ್ತಿಗಳೊಂದಿಗೆ ಮೃದು ಧೇೂರಣೆ ತಳೆಯುವ ನೂತನವಾದಿಗಳ ಕುಟಿಲ ತಂತ್ರಗಳನ್ನು ಮನಗಂಡ ಮಹಾನರು ಅಂತಹ ಸೇೂಗಲಾಡಿಗಳೊಂದಿಗೆ ಸುನ್ನೀ ಸಮೂಹ ಯಾವ ರೀತಿಯ ಸಂಬಂಧವನ್ನೂ ಹೊಂದಬಾರದೆಂಬ ದಿಟ್ಟತನದ ಫತ್ವಾ ಮಂಡಿಸಿದ್ದರು.
ಅಂದು ಆ ಮಹಾನರು ದೂರಾಲೇೂಚನೆಯಿಂದ ಹೊರಡಿಸಿದ ಫತ್ವಾದ ಮಹತ್ವವು ಇಂದು ಜಾಗತಿಕ ಮುಸ್ಲಿಂ ಸಮೂಹಕ್ಕೆ ಮನವರಿಕೆಯಾಗುತ್ತಿದೆ.
ಸುನ್ನೀ ಉಲಮಾಗಳನ್ನು ಕಂಡರಾಗದ ನೂತನವಾದಿಗಳು ಫರೇೂಕ್'ನಲ್ಲಿ ನಡೆಯಬೇಕಿದ್ದ ಸಮಸ್ತದ ಸಮ್ಮೇಳನವನ್ನು ಮೊಟಕುಗೊಳಿಸಲಿಕ್ಕಾಗಿ ಕೆ.ಎಂ. ಸೀತಿ ಹಾಜಿಯವರ ನೇತೃತ್ವದಲ್ಲಿ ಅಡ್ವೋಕೇಟ್ ಕೆ.ಕೆ. ಪೊಕರ್ ಮುಖಾಂತರ ಕೇರಳ ಜಂಇಯತ್ತುಲ್ ಉಲಮಾದ ಸಮ್ಮೇಳನ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ನೂತನವಾದಿಗಳ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿದ ಮರ್ಹೂಂ ಶಾಲಿಯಾತ್ತಿ (ರ) ರವರು ಸಮರ್ಥವಾಗಿ ಆಧಾರ ಸಮೇತ ಉತ್ತರಿಸಿದ್ದರಿಂದ ನೂತನವಾದಿಗಳ ಕುತಂತ್ರ ಫಲಿಸದೆ ಫರೇೂಕ್ ಸಮ್ಮೇಳನ ಬಹು ವಿಜೃಂಭಣೆಯಿಂದ ನಡೆಯಿತು.
☪ಮುಂದುವರಿಯುವುದು
💢💢💢💢💢💢💢💢💢
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)


No comments:
Post a Comment