*🤲🏻ಇಸ್ತಿಗಾಸ.....🤲🏻*
*_🌱ಪ್ರವಾದಿವರ್ಯರ ಜೀವಿತಾವಧಿಯಲ್ಲಿ ನಡೆದ ಸಹಾಯಾಚನೆ_🌱*
*ಹದೀಸ್ 👇🏻*
_ಜಾಬಿರ್(ರ) ರವರಿಂದ ನಿವೇದನೆ: ಅವರು ಹೇಳುತ್ತಾರೆ; ಹುದೈಬಿಯಾದ ಜನರು ಬಾಯಾರಿಕೆಯಿಂದ ಬಳಲಿ ಬೆಂಡಾದರು. ಪ್ರವಾದಿ(ಸ)ಯವರ ಸನಿಹ ಒಂದು ಪಾತ್ರೆ ನೀರಿತ್ತು. ಅವರು ಅದರಿಂದ ವುಳೂ ನಿರ್ವಹಿಸಿದರು. ಜನರೆಲ್ಲರೂ ನೋವಿನೊಂದಿಗೆ ಪ್ರವಾದಿ(ಸ)ಯವರು ಕೂತಿದ್ದ ಜಾಗದೆಡೆಗೆ ಬಂದರು._
_ಪ್ರವಾದಿ(ಸ)ಯವರು ಅವರೊಂದಿಗೆ ನಿಮ್ಮ ಸಮಸ್ಯೆಯೇನು?' ಎಂದು ಕೇಳಿದರು.ಅವರು ಹೇಳುತ್ತಾರೆ. “ನಮಗೆ ವುಳೂ ಮಾಡಲು ಮತ್ತು ಕುಡಿಯಲು ನಿಮ್ಮ ಮುಂದಿರುವ ನೀರು ಮಾತ್ರವಿದೆ” ಆಗ ಪ್ರವಾದಿ(ಸ)ಯವರು ಪಾತ್ರೆಗೆ ಕೈ ಹಾಕಿದರು.ಅವರ ಬೆರಳುಗಳಿಂದ ಒರತೆಯಲ್ಲಿ ನೀರು ಪುಟಿಯಲಾರಂಭಿಸಿತು. ನಾವು ಅದರಿಂದ ಕುಡಿದು ವುಳೂ ನಿರ್ವಹಿಸಿದೆವು. “ನೀವೆಷ್ಟು ಮಂದಿ ಇದ್ದೀರಿ? ಎಂಬ ಪ್ರಶ್ನೆಗೆ ಜಾಬಿರ್(ರ) ಉತ್ತರಿಸುತ್ತಾರೆ. ಒಂದು ಲಕ್ಷ ಜನರಿರುತ್ತಿದ್ದರೂ ನಮಗೆ ಆ ನೀರು_
_ಸಾಕಾಗುತ್ತಿತ್ತು. ನಾವು *"ಸಾವಿರದ ಐನೂರು"* ಜನರಿದ್ದೆವು._
Scan page..👇🏻
*📚(ಬುಖಾರಿ 8/471)*
*‼Note‼*
_ನೀರಿಲ್ಲದೆ ಬಾಯಾರಿಕೆಯಿಂದ ತತ್ತರಿಸಿದ ಸಹಾಬಿಗಳು ಪ್ರವಾದಿ(ಸ)ಯವರ ಸನಿಹ ಸಾಕಷ್ಟು ನೀರಿಲ್ಲವೆಂದು ಅರಿತಿದ್ದರೂ ಅವರನ್ನು ಸಮೀಪಿಸುತ್ತಾರೆ.ಮಾನವ_
_ಸಾಮರ್ಥ್ಯದ ಆಚೆಗಿರುವ ಮಾರ್ಗದ ಮೂಲಕ ನೀರು ಲಭಿಸಬೇಕೆಂಬ ಆಗ್ರಹದಿಂದಲೇ ಅವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಭೇಟಿಯಾಗಿದ್ದರೆನ್ನುವುದು ಶತಃಸಿದ್ದ.ಅಲ್ಲಾಹನು ದಯಪಾಲಿಸಿದ ಮುಅ್'ಜಿಝತ್ ಮೂಲಕ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ವಹಾಬಿಗಳ ಬೇಡಿಕೆಯನ್ನು ಈಡೇರಿಸಿಕೊಡುತ್ತಾರೆ.ಬೆರಳುಗಲ್ಲಿ_
_ನೀರಿನ ಬುಗ್ಗೆ ಪುಟಿದು *ಮಾನವ ಸಾಮರ್ಥ್ಯದ ಆಚೆಗಿರುವ ಮಾರ್ಗದ ಮೂಲಕ ಸಮಸ್ಯೆ* ಬಗೆಹರಿಸಲ್ಪಡುತ್ತದೆ.ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಬೇಡಿಕೆಗಳನ್ನು ಈಡೇರಿಸಿಕೊಡುವ_
_ಸ್ವಯಂಶಕ್ತಿಯಾಗಲೀ,ಸ್ವಮದಿತ್ತಾಗಲೀ ಇತ್ತೆಂಬ ವಿಶ್ವಾಸ ಸಹಾಬಿಗಳಿಗಿರಲಿಲ್ಲ.ಮೇಲಿನ ಹದೀಸ್‌ಗಳಿಂದ ಅಲ್ಲಾಹನು ದಯಪಾಲಿಸಿದ ಸಾಮರ್ಥ್ಯದಿಂದ ಸಹಾಯಯಾಚಿಸಬಹುದು,ಕೊಡಬಹುದೆಂದು ಸಷ್ಟವಾಗುತ್ತದೆ..!_
*_🖋Straight Path Ahlu Sunnah_*
🌹🌷🌹🌷🌹🌷🌹🌷🌹
No comments:
Post a Comment